ಮಹಾರಾಷ್ಟ್ರ ಸರ್ಕಾರ ಅಪವಿತ್ರ ಮೈತ್ರಿ
ಸರ್ಕಾರದ ಬಗ್ಗೆ ಶಾಸಕರು ಭ್ರಮನಿರಸರಾಗಿದ್ದಾರೆ
ಮಹಾರಾಷ್ಟ್ರದ ಬಿಜೆಪಿ ಪಕ್ಷದ ಉಸ್ತುವಾರಿ ಸಿ.ಟಿ ರವಿ ಹೇಳಿಕೆ
ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಜೂನ್ 21): ಮಹಾರಾಷ್ಟ್ರದಲ್ಲಿ ಇರುವ ಸರ್ಕಾರ ಯಾವ ತಾಳಮೇಳವೂ ಇಲ್ಲದ ಅಪವಿತ್ರ ಮೈತ್ರಿ ಸರ್ಕಾರವಾಗಿದೆ ಎಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (National General Secretary of Bharatiya Janata Party) ಮಹಾರಾಷ್ಟ್ರ (Maharashtra ) ಬಿಜೆಪಿ ಪಕ್ಷದ ರಾಜ್ಯ ಉಸ್ತುವಾರಿ (BJP State In Charge) ಸಿ ಟಿ ರವಿ ( CT Ravi) ತಿಳಿಸಿದ್ದಾರೆ.
ಚಿಕ್ಕಮಗಳೂರು ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಅಂತರ್ ರಾಷ್ಟ್ರೀಯ ಯೋಗ ದಿನದಲ್ಲಿ ಭಾಗಿಯಾಗಿ ತದನಂತರ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಮಹಾರಾಷ್ಟ್ರದಲ್ಲಿ ಉಂಟಾಗಿರುವ ರಾಜಕೀಯ ಗೊಂದಲದ ಶಾಸಕರುಗಳೇ ಹತಾಶರಾಗಿ ಸರ್ಕಾರ ತೊಲಗಿಲಿ ಎಂದು ಶಾಸಕರು ಬಯಸಿದ್ದಾರೆ, ಸೈದ್ಧಾಂತಿಕವಾಗಿಯೂ ಮಿಸ್ ಮ್ಯಾಚ್ ಡಿ.ಎನ್.ಎ.ಸರ್ಕಾರವೆಂದು ಟೀಕಿಸಿದ್ದಾರೆ.
ಸರ್ಕಾರ ಬಗ್ಗೆ ಜನ ಮಾತ್ರವಲ್ಲ, ಮಹಾರಾಷ್ಟ್ರ ಸರ್ಕಾರದ ಬಗ್ಗೆ 3 ಪಕ್ಷದ ಶಾಸಕರು (MLSA) ಭ್ರಮನಿರಸರಾಗಿದ್ದಾರೆ ಇದು ಯಾವ ತಾಳಮೇಳವೂ ಇಲ್ಲದ ಅಪವಿತ್ರ ಮೈತ್ರಿ ಸರ್ಕಾರವಾಗಿದೆ ಎಂದರು .ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಸರ್ಕಾರ ಬರಬೇಕೆಂದು ಚುನಾವಣೆ ಸಂದರ್ಭದಲ್ಲೇ ಜನರ ಅಪೇಕ್ಷೆ ಇತ್ತು, 2019ರಲ್ಲಿ ಜನ ಮತ ಹಾಕಿದ್ದು ಮೋದಿ, ಫಡ್ನವಿಸ್ ನೇತೃತ್ವದ ಸರ್ಕಾರಕ್ಕೆ , ರಾಜ್ಯದಲ್ಲಿ ಬಿಜೆಪಿ ಮೈತ್ರಿಕೂಟದ ಸರ್ಕಾರ ಬರಲಿ ಅಂತಾ ಆದ್ರೆ ಮೂರು ಪಕ್ಷದವರು ಅಪವಿತ್ರ ಮೈತ್ರಿಯಿಂದ ಸರ್ಕಾರ ರಚನೆ ಆಯಿತು ಎಂದರು.
ಮಹಾರಾಷ್ಟ್ರ ದಲ್ಲಿ ಇರುವ ಸರ್ಕಾರ ತತ್ವಹೀನ ಸರ್ಕಾರ ,ಸಿದ್ಧಾಂತ, ಅಭಿವೃದ್ಧಿ ಯೋಜನೆಗಳು ಇಲ್ಲವೇ ಇಲ್ಲ ಹೀಗಾಗಿ ಈ ಸರ್ಕಾರ ಬೀಳಲಿ ಅಂತ ಜನ, ಶಾಸಕರು ಬಯಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಮಹಾರಾಷ್ಟ್ರದ ಪ್ರಭಾರಿಯಾಗಿ ನಮ್ಮ ಪಕ್ಷದ ನಾಯಕರ ಜೊತೆ ಸಂಪರ್ಕದಲ್ಲಿದ್ದೇನೆ ಎಂದು ತಿಳಿಸಿ ಇತ್ತೀಚೆಗೆ ನಡೆದ ಮಹಾರಾಷ್ಟ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಸಹಕರಿಸಿದ ಎಲ್ಲಾ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸಿದ್ದರಾಮಯ್ಯ ವಿರುದ್ದ ಸಿ.ಟಿ ರವಿ ಕಿಡಿ: ಸತ್ಯ ಮತ್ತು ಸಿದ್ದರಾಮಯ್ಯನವರಿಗೂ (siddaramaiah) ಎಣ್ಣೆ, ಸೀಗೆಕಾಯಿ ಸಂಬಂಧ, ಸುಳ್ಳು ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು, ಸುಳ್ಳಿಗೆ ಯಾವುದಾದರೂ ಪ್ರಶಸ್ತಿ ನೀಡುವುದಾದರೆ ಸಿದ್ದರಾಮಯ್ಯನವರನ್ನು ಬಿಟ್ಟು ಬೇರಾರಿಗೂ ಸಿಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದರು. ಸುಳ್ಳು ಹೇಳುವುದರಲ್ಲಿ ಅವರಷ್ಟು ನಿಷ್ಣಾತರು ಇನ್ಯಾರು ಇಲ್ಲ, ಇಷ್ಟು ಸುಳ್ಳನ್ನು ದಿನ ನಿತ್ಯ ಹೇಳುತ್ತಾರೆ. ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿಯಾಗಿದ್ದರು. ಅವರ ಅವಧಿಯಲ್ಲೆ ಆಕ್ಸಿಜನ್ ಪ್ಲಾಂಟ್ ಹಾಕಿದ್ದರೆ ಕೊರೋನಾ ಸಂದರ್ಭದಲ್ಲಿ ಆಕ್ಸಿಜನ್ ಇಲ್ಲದೆ ಜನ ಒದ್ದಾಡುವ ಪ್ರಶ್ನೆ ಬರುತ್ತಿತ್ತಾ? ನಮ್ಮ ಪ್ರಧಾನಿ ಮೋದಿ ಜಗತ್ತಿನ ಯಾವುದೇ ರಾಷ್ಟ್ರಗಳು ಸ್ಪಂದಿಸಲಾರದಷ್ಟು ವೇಗವಾಗಿ ಪ್ರತಿ ಆಸ್ಪತ್ರೆಗೂ ಪ್ಲಾಂಟ್ ಹಾಕಿ ತ್ವರಿತಗತಿಯಲ್ಲಿ ಆಕ್ಸಿಜನ್ ಸರಬರಾಜು ಮಾಡುವ ಕ್ರಮ ಕೈಗೊಂಡರು ಇಲ್ಲದಿದ್ದರೆ ಈ ಸಾವಿನ ಪ್ರಮಾಣ ಹತ್ತುಪಟ್ಟು ಹೆಚ್ಚಾಗುತ್ತಿತ್ತು.
ನಾವೆಲ್ಲರೂ ಬೀದಿಲಿ ನಿಂತು ಆಕ್ಸಿಜನ್‌ಗಾಗಿ ಪರದಾಡುತ್ತಿದ್ದ ಸಂದರ್ಭ ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯನವರು ಏನು ಮಾಡುತ್ತಿದ್ದರು ಎಂಬುದನ್ನು ರಾಜ್ಯದ ಜನ ನೋಡಿದ್ದಾರೆ. ಅವರು ಕೇವಲ ರಾಜಕಾರಣ, ಟೀಕೆ ಮಾಡುತ್ತಿದ್ದರು. ಅವರೆ ಪ್ರತಿನಿಧಿಸುವ ಬಾದಾಮಿ ಸೇರಿದಂತೆ ಬಹುತೇಕ ಆಸ್ಪತ್ರೆಗಳಿಗೆ ಆಕ್ಸಿಜನ್ ಪ್ಲಾಂಟ್ ಆಗಿದೆ ಯಾರೂ ಹಾಕಿದ್ದು ? ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ತಯಾರಾಗಿರುವ ಪಿಎಂ ಕೇರ್ಸ್‌ನಲ್ಲಿಯೇ ಹಾಕಿದ್ದು. ಈ ಸತ್ಯ ಹೇಳೋಕೆ ಕಾಂಗ್ರೆಸ್ಸಿಗರಿಗೆ ಹಿಂಜರಿಕೆ ಕಾರಣ ಸತ್ಯ ಮತ್ತು ಸಿದ್ದರಾಮಯ್ಯನವರಿಗೂ ಎಣ್ಣೆ, ಸೀಗೆಕಾಯಿ ಸಂಬಂಧ, ಸುಳ್ಳು ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು ಎಂದು ವ್ಯಂಗ್ಯವಾಡಿದರು.
ಪಠ್ಯ ಪರಿಷ್ಕರಣೆ ಸ್ವಾರ್ಥಕ್ಕೆ ವಿರೋಧ: ಸಿ.ಟಿ.ರವಿ ಕಿಡಿ
9 ತಿಂಗಳೊಳಗೆ ಎಲ್ಲರಿಗೂ ಎರಡು ಡೋಸ್ ಲಸಿಕೆ ಸಿಗುವ ಹಾಗೆ ಮಾಡಿದ್ದಾರೆ ಸಿದ್ದರಾಮಯ್ಯನವರು ಹಾಕಿಸಿಕೊಂಡಿಲ್ಲವಾ? ಅದು ಯಾವ ಸರ್ಕಾರ ಕೊಟ್ಟಿದ್ದು ಅಕಸ್ಮಾತ್ ಅವರಿಗೆ ಆ ಡೋಸ್ ಸಿಗದಿದ್ದಿದ್ದರೆ ಏನಾಗುತ್ತಿತ್ತು ಎಂಬುದನ್ನು ಊಹಿಸಲಿ ನಾನು ಹೇಳುವುದಿಲ್ಲ ಹೇಳಿದರೆ ಅದಕ್ಕೆ ತಪ್ಪು ಅರ್ಥ ಬಿಂಬಿಸುತ್ತಾರೆ ಎಂದರು.
ರಾಹುಲ್ ಪರ ಹೋರಾಡುವವರು ಉತ್ತರಿಸಿ: ಕಾಂಗ್ರೆಸ್‌ಗೆ ಸಿ.ಟಿ.ರವಿ ಪಂಚ ಪ್ರಶ್ನೆ
ಪ್ರಧಾನಿ ರಾಜ್ಯಕ್ಕೆ ಬರೀಗೈಲೇನು ಬರಲ್ಲ: ಪ್ರಧಾನಿನರೇಂದ್ರ ಮೋದಿ ರಾಜ್ಯಕ್ಕೆ ಬರಬೇಕಾದರೆ ಬರೀಗೈಲೇನು ಬಂದಿಲ್ಲ. 30 ಸಾವಿರ ಕೋಟಿ ರೂನ ವಿವಿಧ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ನಮ್ಮ ದೇಶದಲ್ಲಿ ಪ್ರತಿಸಾರಿ ಒಂದಲ್ಲಾ ಒಂದು ಕಡೆ ಚುನಾವಣೆ ಇದ್ದೇ ಇರುತ್ತದೆ. ಚುನಾವಣೆ ಬಂದು ಹೋಗುತ್ತಿರುತ್ತದೆ, ಫಲಿತಾಂಶದಲ್ಲೆ ಕೆಲವೊಮ್ಮೆ ಸೋಲು, ಗೆಲುವು ಸಹಜ, ಚುನಾವಣೆಗಾಗಿಯೇ ಕೆಲಸ ಮಾಡುವವರು ಬೇರೆ ಇದ್ದಾರೆ. ಚುನಾವಣೆಗಾಗಿಯೇ ಕೆಲಸ ಮಾಡುವ ರಾಜಕೀಯ ಪಕ್ಷವೂ ನಮ್ಮದಲ್ಲ, ಸರ್ಕಾರವೂ ನಮ್ಮದಲ್ಲ. ಅದು ಗುರಿ ಸಾಧನೆಗಿರುವ ಸಾಧನಾ ಎಂದು ಭಾವಿಸಿ ದೇಶದ ಹಿತದೃಷ್ಟಿಯಿಂದ ಕೆಲಸ ಮಾಡುವವರು ನಾವು ಎಂದರು. ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯೋಗದಲ್ಲಿ ಭಾಗಿಯಾಗಿದ್ದಾರೆ. ಆ ಮೂಲಕ ನಮ್ಮ ಸಾಂಸ್ಕೃತಿಕ ನಗರಿಯ ಮೇರು ಕಳಸವಿಟ್ಟಂತೆ ಪರಿಚಯಿಸಿದ್ದಾರೆ.