ಯತ್ನಾಳ್‌ ವಿರೋಧಿ ಬಣದಿಂದ ಪ್ರತ್ಯೇಕ ಯೋಗ, ಕಠಿಣ ಆಸನ ಮಾಡಲು ತಿಣುಕಾಡಿದ ಕತ್ತಿ

By Suvarna NewsFirst Published Jun 21, 2022, 6:03 PM IST
Highlights

ಗುಮ್ಮಟನಗರಿಯಲ್ಲಿ ವಿಶ್ವ ಯೋಗ ದಿನ ಆಚರಣೆ/ ಕಠಿಣ ಆಸನ ಮಾಡಲು ಸಚಿವ ಕತ್ತಿ ಪರದಾಟ!  ಹಿಜಾಬ್‌ ಹಾಕಿಕೊಂಡೆ ಯೋಗ ಮಾಡಿದ ಮುಸ್ಲಿಂ ವಿದ್ಯಾರ್ಥಿನಿಯರು..! ಯತ್ನಾಳ್ ವಿರೋಧಿ ಬಣದಿಂದ ಪ್ರತ್ಯೇಕ ಯೋಗ..!

ವಿಜಯಪುರ (ಜೂನ್‌ 21) : ವಿಶ್ವ ಯೋಗ ದಿನಾಚರಣೆಯಲ್ಲಿ ಜಿಲ್ಲೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ನಗರದ ಐತಿಹಾಸಿಕ ತಾಣ ಗೋಳಗುಮ್ಮಟ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆಗೆ ಕೇಂದ್ರ ಸಚಿವ ಭಗವಂತ ಖೂಬಾ ಚಾಲನೆ ನೀಡಿದರು. ವಿಶೇಷ ಅಂದ್ರೆ ಹಲವು ಇಂಟರೆಸ್ಟಿಂಗ್‌ ದೃಶ್ಯಾವಳಿಗಳು ವಿಶ್ವ ಯೋಗ ದಿನದಂದು ನೋಡೋಕೆ ಸಿಕ್ಕವು.. ಮುಸ್ಲಿಂ ವಿದ್ಯಾರ್ಥಿನಿಯರು ಸಹ ಯೋಗ ಮಾಡಿದ್ದು ವಿಶೇಷವಾಗಿತ್ತು.. ಕಠಿಣ ಆಸನ ಹಾಕಲು ಸಚಿವರೇ ಪರದಾಡಿದ ಘಟನೆ ನಡೆಯಿತು. ಇನ್ನು ಯತ್ನಾಳ್‌ ವಿರೋಧಿ ಬಣದಿಂದ ಪ್ರತ್ಯೇಕ ಯೋಗ ಮಾಡಲಾಗಿದೆ.

ಯತ್ನಾಳ್‌ ವಿರೋಧಿ ಬಣದಿಂದ ಪ್ರತ್ಯೇಕ ಯೋಗ..!

ಇತ್ತ ಶಾಸಕ ಯತ್ನಾಳ್‌ ವಿರೋಧಿ ಬಣದಿಂದ ಪ್ರತ್ಯೇಕವಾಗಿ ಯೋಗಾಭ್ಯಾಸ ನಡೆಯಿತು. ಕೇಂದ್ರ ಸಚಿವರು ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಬಂದಿದ್ದರು ಹಿರಿಯ ಸಂಸದ ರಮೇಶ ಜಿಗಜಿಣಗಿ ಮಾತ್ರ ಗೋಳಗುಮ್ಮಟದ ಕಡೆಗೆ ಸುಳಿಯಲೇ ಇಲ್ಲ. ತಾವು ಗಗನ ಮಹಲ್‌ ಉದ್ಯಾನವನದಲ್ಲಿ ಪ್ರತ್ಯೇಕವಾಗಿ ಯೋಗಾಸನ ಮಾಡಿದ್ರು. ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮಾಜಿ ಎಂ ಎಲ್‌ ಸಿ ಅರುಣ ಶಹಾಪೂರ ಸೇರಿ ಹಲವರಿದ್ದರು. ಈ ಮೂಲಕ ಯತ್ನಾಳ್‌ ಜೊತೆಗೆ ಸಂಸದ ಜಿಗಜಿಣಗಿ, ಅಪ್ಪು ಪಟ್ಟಣಶೆಟ್ಟಿ ಅಂತರ ಕಾಯ್ದುಕೊಂಡಿದ್ದು ಕಂಡು ಬಂತು..

ಯೋಗ ಮಾಡಲು ಪರದಾಡಿದ ಸಚಿವ ಕತ್ತಿ..!
ಇನ್ನು ಯೋಗ ದಿನ ಹಿನ್ನೆಲೆ ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ನಗರ ಶಾಸಕ ಸೇರಿದಂತೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್‌, ಎಸ್ಪಿ ಆನಂದಕುಮಾರ್‌ ಗೋಳಗುಮ್ಮಟ ಆವರಣದಲ್ಲಿ ಯೋಗಾಭ್ಯಾಸ ನಡೆಸಿದರು. ಈ ವೇಳೆ ಕೇಂದ್ರ ಸಚಿವ ಭಗವಂತ ಕೂಬಾ ಹಾಗೂ ನಗರ ಶಾಸಕ ಯತ್ನಾಳ್‌ ಭರ್ಜರಿಯಾಗಿ ಯೋಗಾಭ್ಯಾಸ ನಡೆಸಿದ್ರು. ಆದ್ರೆ ಉಸ್ತುವಾರಿ ಸಚಿವ ಉಮೇಶ ಕತ್ತಿ ಮಾತ್ರ, ಆರಂಭದಲ್ಲಿ ಯೋಗ ಮಾಡಿ ಬಳಿಕ ಕೈ ಚೆಲ್ಲಿದ್ರು. ಕೆಲ ಕಠಿಣ ಆಸನಗಳನ್ನ ಮಾಡಲಾರದೇ ಪರದಾಡಿದ್ರು. ಕೆಲ ಆಸನಗಳನ್ನ ಮಾಡಲಾಗದೇ ಸುಮ್ಮನೆ ಕುಳಿತರು. ಯೋಗಾಭ್ಯಾಸಕ್ಕೆ ಸೇರಿದ್ದ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಮಾದರಿಯಾಗಬೇಕಿದ್ದ ಸಚಿವರು ಹೀಗೆ ವರ್ತಿಸಿದ್ದು ಕೆಲವರಲ್ಲಿ ಅಸಮಧಾನ ಮೂಡಿಸಿತು.

ಮುಸ್ಲಿಂ ವಿದ್ಯಾರ್ಥಿನಿಯರಿಂದ ಯೋಗ..!

ವಿಶ್ವ ವಿಖ್ಯಾತ ಗೋಳಗುಮ್ಮಟದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಯೋಗ ಮಾಡಿದರು. ವಿಶ್ವ ದಿನದ ಹಿನ್ನೆಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಗೋಳಗುಮ್ಮಟ ಆವರಣದಲ್ಲಿ ಸೇರಿದ್ದರು. ಈ ವೇಳೆ ಮುಸ್ಲಿಂ ವಿದ್ಯಾರ್ಥಿನಿಯರು ಯೋಗ ಮಾಡಿದ್ದು ವಿಶೇಷವಾಗಿತ್ತು. ಈ ಮೂಲಕ ಯೋಗ ಭಾರತೀಯ ಸಂಸ್ಕೃತಿಯ ಪ್ರತೀಕ, ಯೋಗ ಅನ್ನೋದು ಭಾರತೀಯರು ಪ್ರಪಂಚಕ್ಕೆ ನೀಡಿದ ಕೊಡುಗೆ ಎಂದು ಸಾರಿದರು..

ಹಿಜಾಬ್‌ ಧರಿಸಿಯೇ ಯೋಗ..!
ವಿಜಯಪುರ ನಗರ ಸೇರಿದಂತೆ ಹಳ್ಳಿಗಳಿಂದ ಬಂದಿದ್ದ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿಯೇ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಗರದ ವಿವಿಧ ಕಾಲೇಜುಗಳ ೨೦೦ ಕ್ಕು ಅಧಿಕ ಮುಸ್ಲಿಂ ವಿದ್ಯಾರ್ಥಿನಿಯರು ಯೋಗಾಭ್ಯಾಸ ನಡೆಸಿದ್ದು ವಿಶೇಷವಾಗಿತ್ತು. ಈ ವೇಳೆ ಹಿಜಾಬ್‌ ಧರಿಸಿಕೊಂಡೆ ಮುಸ್ಲಿಂ ವಿದ್ಯಾರ್ಥಿನಿಯರು ಯೋಗಾಭ್ಯಾಸದಲ್ಲಿ ನಿರತರಾಗಿದ್ದು ಕಂಡು ಬಂತು..

click me!