ಒಂದೇ ಒಂದು ಚುನಾವಣೆ ನೋಡದ ಜಾರ್ಖಂಡ್‌ನ ಕೆಲ ಪ್ರದೇಶಗಳಲ್ಲಿ ಇದೇ ಮೊದಲ ಸಲ ಚುನಾವಣೆ

Published : Apr 08, 2024, 08:29 AM ISTUpdated : Apr 08, 2024, 08:30 AM IST
ಒಂದೇ ಒಂದು  ಚುನಾವಣೆ ನೋಡದ ಜಾರ್ಖಂಡ್‌ನ ಕೆಲ ಪ್ರದೇಶಗಳಲ್ಲಿ ಇದೇ ಮೊದಲ ಸಲ ಚುನಾವಣೆ

ಸಾರಾಂಶ

ಜಾರ್ಖಂಡ್‌ನಲ್ಲಿ ಅತಿ ಹೆಚ್ಚು ನಕ್ಸಲ್‌ ಪೀಡಿತ ಜಿಲ್ಲೆಗಳಲ್ಲಿ ಒಂದಾಗಿರುವ ಸಿಂಗ್‌ಭೂಮ್‌ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಇದೇ ಮೊದಲ ಬಾರಿಗೆ ಚುನಾವಣೆ ನಡೆಸಲು ಆಯೋಗ ಸಿದ್ಧತೆ ಕೈಗೊಂಡಿದೆ. 


ರಾಂಚಿ: ಜಾರ್ಖಂಡ್‌ನಲ್ಲಿ ಅತಿ ಹೆಚ್ಚು ನಕ್ಸಲ್‌ ಪೀಡಿತ ಜಿಲ್ಲೆಗಳಲ್ಲಿ ಒಂದಾಗಿರುವ ಸಿಂಗ್‌ಭೂಮ್‌ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಇದೇ ಮೊದಲ ಬಾರಿಗೆ ಚುನಾವಣೆ ನಡೆಸಲು ಆಯೋಗ ಸಿದ್ಧತೆ ಕೈಗೊಂಡಿದೆ. ಇದಕ್ಕಾಗಿ ಹೆಲಿಕಾಪ್ಟರ್‌ ಮೂಲಕ ಚುನಾವಣಾ ಸಿಬ್ಬಂದಿ, ಮತಯಂತ್ರ ಹಾಗೂ ಸಲಕರಣೆಗಳನ್ನು ಮತಕೇಂದ್ರಗಳಿಗೆ ಕಳಿಸಲು ಆಯೋಗ ತೀರ್ಮಾನಿಸಿದೆ.

ಸಿಂಗ್‌ಭೂಮ್‌ ಜಿಲ್ಲೆಯು ಅತಿ ಹೆಚ್ಚು ನಕ್ಸಲರನ್ನು ಹೊಂದಿರುವ ಜಿಲ್ಲೆಯಾಗಿದ್ದು, ಕಳೆದ ಒಂದು ವರ್ಷದಲ್ಲಿ 46 ಉಗ್ರ ಘಟನೆಗಳು ನಡೆದಿವೆ. ಇದರಿಂದಾಗಿ ಒಂದೇ ವರ್ಷದಲ್ಲಿ 22 ಮಂದಿ ಸಾವನ್ನಪ್ಪಿದ್ದರು. ಹೀಗಾಗಿ ಜಿಲ್ಲೆಯ ಕೆಲವು ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಕನಿಷ್ಠ ಎರಡು ದಶಕಗಳಿಂದ ಮತದಾನವೇ ನಡೆದಿಲ್ಲ. ಈ ಕಾರಣವಾಗಿ ಈ ಬಾರಿ ಯಾವುದೇ ವ್ಯಕ್ತಿಯೂ ಮತದಾನದಿಂದ ವಂಚಿತನಾಗಬಾರದೆಂಬ ಕಾರಣಕ್ಕೆ ಚುನಾವಣಾ ಆಯೋಗ ಈ ಕ್ರಮ ತೆಗೆದುಕೊಂಡಿದೆ.

ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಕುಲ್ದೀಪ್‌ ಚೌಧರಿ,‘ಸಿಂಗ್‌ಭೂಮ್‌ ಜಿಲ್ಲೆಯ ರೋಬೋಕೆರಾ, ಬಿಂಜ್‌, ತಲ್ಕೋಬಾದ್‌, ಜರೈಕೆಲಾ, ರೋಂ, ರೆಂಗ್ರಾಹಟು ಮುಂತಾದ ಸ್ಥಳಗಳ 118 ಮತಗಟ್ಟೆ ತೆರೆಯಲಿದ್ದೇವೆ. ಈ ಪ್ರದೇಶದಲ್ಲಿ 100ಕ್ಕೂ ಹೆಚ್ಚು ವಯಸ್ಸಿನ 62 ಮತದಾರರಿದ್ದು, 3909 ಮತದಾರರು 85 ವಯಸ್ಸು ದಾಟಿದ್ದಾರೆ. 13,703 ಅಂಗವಿಕಲರಿದ್ದಾರೆ. ಇವರೆಲ್ಲರಿಗೂ ಮತದಾನ ಅವಕಾಶ ಕಲ್ಪಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ: ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಸಶಸ್ತ್ತ ಮೀಸಲು ಪಡೆಗಳ ನಿಯೋಜನೆ!

ಕೊಡಗು: ಕೂಜಿಮಲೆಗೆ ಬಂದಿದ್ದವರು ನಕ್ಸಲರು ತನಿಖೆಯಲ್ಲಿ ದೃಢ!

Film Review: ಮೈನವಿರೇಳಿಸುವ ದಿ ನಕ್ಸಲ್ ಸ್ಟೋರಿ 'ಬಸ್ತರ್': ಐಪಿಎಸ್ ಅಧಿಕಾರಿ ನಿರ್ಜಾ ಮಾಧವನ್ ರಿಯಲ್ ಸ್ಟೋರಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!
Karnataka News Live: ಮಂತ್ರಾಲಯದ ರಾಯರ ಪವಾಡದಿಂದಲೇ ಮದುವೆಯಾಯ್ತು - Suhana Syed ಎಂದೂ ಹೇಳಿರದ ರಿಯಲ್ ಕಥೆ