ರಾಜ್ಯದಲ್ಲಿ ಕಾಂಗ್ರೆಸ್ಸಿಗರು ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ, ಈ ಮಧ್ಯೆ ಆರಂಭವಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವಿನ ಮುಖ್ಯಮಂತ್ರಿ ಹುದ್ದೆಗಾಗಿನ ಪೈಪೋಟಿ ಅದು ಅವರ ಪಕ್ಷದ ಆಂತರಿಕ ವಿಚಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಫೆ.26): ರಾಜ್ಯದಲ್ಲಿ ಕಾಂಗ್ರೆಸ್ಸಿಗರು ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ, ಈ ಮಧ್ಯೆ ಆರಂಭವಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವಿನ ಮುಖ್ಯಮಂತ್ರಿ ಹುದ್ದೆಗಾಗಿನ ಪೈಪೋಟಿ ಅದು ಅವರ ಪಕ್ಷದ ಆಂತರಿಕ ವಿಚಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಬನಹಟ್ಟಿಯಲ್ಲಿ ಇಂದು ಮಾದ್ಯಮಗಳ ಜೊತೆ ಮಾತನಾಡಿ, ರಾಜ್ಯದ ಜನತೆ ಈಗಾಗಲೇ ಎಲ್ಲ ಕಾಂಗ್ರೆಸ್ ನಾಯಕರನ್ನು ಪರೀಕ್ಷೆ ಮಾಡಿ ಕೈ ಬಿಟ್ಟಿದ್ದಾರೆ.
undefined
ಸಿದ್ದರಾಮಯ್ಯ, ಡಿಕೆಶಿ ಹೀಗೆ ಎಲ್ಲ ನಾಯಕರನ್ನು ಪರೀಕ್ಷೆ ಮಾಡಿದ್ದಾರೆ. ಅವರ ಆಡಳಿತದಲ್ಲಿ ಏನೆಲ್ಲಾ ನಡೆಯಿತು ಅನ್ನೋದನ್ನು ಯಾರೂ ಸಹ ಮರೆತಿಲ್ಲ. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ ಎಂದರು. ಅಧಿಕಾರಕ್ಕೆ ಬರದೇ ಇರುವ ಪಕ್ಷದಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ಇರುವಂತಹದ್ದು, ಇದರಲ್ಲಿ ಎಷ್ಟರ ಮಟ್ಟಿಗೆ ಮಹತ್ವ ಕೊಡಬೇಕು ಅನ್ನೋದನ್ನು ಜನ ತೀರ್ಮಾನ ಮಾಡುತ್ತಾರೆ ಎಂದರು.
ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ: ಎಚ್.ಡಿ.ಕುಮಾರಸ್ವಾಮಿ
ರಾಜ್ಯದಲ್ಲಿ ನಡೆಯುತ್ತಿರೋದು ಬಿಜೆಪಿ ಅಭಿವೃದ್ಧಿ ಪರ್ವ: ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಪ್ರತಿ ಸಾರಿ ರಾಜ್ಯಕ್ಕೆ ಭೇಟಿ ನೀಡಿದಾಗ ಸಾವಿರಾರು ಕೋಟಿ ಅನುದಾನ ಅಭಿವೃದ್ಧಿ ಕಾರ್ಯ ಉದ್ಘಾಟನೆ ಮಾಡಿದ್ದಾರೆ. ಶಿವಮೊಗ್ಗ ಏರಪೋರ್ಟ್ ಸಹ ನಮ್ಮ ಕಾಲದಲ್ಲಿ ಪೂರ್ಣಗೊಂಡಿದ್ದು, ಅದು ಅಭಿವೃದ್ಧಿ ಅಲ್ವಾ. ಬೆಳಗಾವಿಯಲ್ಲಿ ರೈಲ್ವೆ ಸ್ಟೇಷನ್ ಮತ್ತು ರೈಲ್ವೆ ಲೈನ್ ಉದ್ಘಾಟನೆಗೆ ಬರ್ತಾ ಇದ್ದಾರೆ ಎಂದರು. ಕಳೆದ ಬಾರಿ ನಾರಾಯಣಪೂರ ನೀರಾವರಿ ಯೋಜನೆ ಉದ್ಘಾಟನೆಗೆ ಬಂದಿದ್ದರು. ಲಂಬಾಣಿ ಬಂಜಾರ ಜನಾಂಗಕ್ಕೆ ಹಕ್ಕುಪತ್ರ ಕೊಡಲು ಬಂದಿದ್ದರು.
ಹೆಲಿಕಾಪ್ಟರ್ ಕಾರ್ಖಾನೆ ಉದ್ಘಾಟನೆಗೆ ಬಂದಿದ್ದರು.ಜಲಜೀವನ್ ಮಷಿನ್ ಉದ್ಘಾಟನೆ ಮಾಡಿದ್ದಾರೆ. ಪ್ರತಿಸಲ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗೆ ಬಂದಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ಸಿಗರ ಹೇಳಿಕೆಗೆ ತಿರುಗೇಟು ನೀಡಿದರು. ಈ ಬಾರಿಯ ಬಜೆಟ್‌ನಲ್ಲಿ ಅತಿ ಹೆಚ್ಚು ಕೇಂದ್ರದ ನೆರವು ಬಂದಿದೆ. ಅದಕ್ಕೆ ಸರಿಸಮಾನವಾದ ರಾಜ್ಯದ ಬಜೆಟ್‌ನಲ್ಲಿ ಅನುದಾನ ಇರಿಸಿದ್ದೇವೆ. ಈಗ ರಾಜ್ಯದಲ್ಲಿ ನಡೆಯುತ್ತಿರೋದು ಬಿಜೆಪಿ ಅಭಿವೃದ್ಧಿ ಪರ್ವ ಎಂದರು.
ಶಿವಾಜಿ ಪ್ರತಿಮೆಗೆ ಅಡ್ಡಿಪಡಿಸಿಲ್ಲ, ಕೀಳು ರಾಜಕೀಯ ಮಾಡಲ್ಲ: ರಮೇಶ್ ಜಾರಕಿಹೊಳಿ
ಸೋನಿಯಾ ನಿವೃತ್ತಿ, ಅವರ ಆಂತರಿಕ ವಿಚಾರ, ನೋ ಕಮೆಂಟ್: ಸೋನಿಯಾ ಗಾಂಧಿ ನಿವೃತ್ತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಅದು ಅವರ ಪಕ್ಷದ ಆಂತರಿಕ ವಿಚಾರ. ಅವರ ನಿವೃತ್ತಿ ಬಗ್ಗೆ ನಾನೇನು ಮಾತನಾಡಲ್ಲ. ಅದರ ಬಗ್ಗೆ ನಾನೇನು ಕಮೆಂಟ್ ಮಾಡಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.