ಕಾಂಗ್ರೆಸ್‌ನಲ್ಲಿ ನಾಯಕರೇ ಇಲ್ಲ: ಯಾರೋ ಯಂಕಾ, ನಾಣಿ, ಸೀನಾ ಒಂದಿಬ್ಬರಿದ್ದಾರೆ: ಯಡಿಯೂರಪ್ಪ ವ್ಯಂಗ್ಯ

By Sathish Kumar KH  |  First Published Mar 1, 2023, 6:58 PM IST

ಕಾಂಗ್ರೆಸ್ ಪಕ್ಷದಲ್ಲಿ ಯಾರು ನಾಯಕರು ಇಲ್ಲ. ಯಾರೋ ಯಂಕಾ, ನಾಣಿ, ಸೀನಾ ಎಂಬ ಇಬ್ಬರು ಕಾಂಗ್ರೆಸ್‌ನಲ್ಲಿ ಇದ್ದಾರೆ. ಈಗ ಕಾಂಗ್ರೆಸ್‌ನವರು ಹಣ, ಹೆಂಡ, ತೋಳಿನ ಬಲ, ಜಾತಿಯ ವಿಷ ಬೀಜ ಬಿತ್ತಲು ಮುಂದಾಗಿದ್ದಾರೆ.


ಚಾಮರಾಜನಗರ (ಮಾ.01): ಕಾಂಗ್ರೆಸ್ ಪಕ್ಷದಲ್ಲಿ ಯಾರು ನಾಯಕರು ಇಲ್ಲ. ಯಾರೋ ಯಂಕಾ, ನಾಣಿ, ಸೀನಾ ಎಂಬ ಇಬ್ಬರು ಕಾಂಗ್ರೆಸ್‌ನಲ್ಲಿ ಇದ್ದಾರೆ. ಈಗ ಕಾಂಗ್ರೆಸ್‌ನವರು ಹಣ, ಹೆಂಡ, ತೋಳಿನ ಬಲ, ಜಾತಿಯ ವಿಷ ಬೀಜ ಬಿತ್ತಲು ಮುಂದಾಗಿದ್ದಾರೆ. ಜನರು ಕಾಂಗ್ರೆಸ್‌ಗೆ ಅವಕಾಶ ನೀಡದೇ ಬಿಜೆಪಿಗೆ ಅವಕಾಶ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದರು.

ಮಲೈ ಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ವಿಜಯಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ನಂತರ ಹನೂರು ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಯಡಿಯೂರಪ್ಪ ಅವರು, ಆರಾಧ್ಯದೈವ ಮಲೆ ಮಹದೇಶ್ವರನ ಆಶೀರ್ವಾದದಿಂದ ವಿಜಯ ಸಂಕಲ್ಪ ಯಾತ್ರೆ ಆರಂಭವಾಗಿದೆ. ಬರುವ ಚುನಾವಣೆಯಲ್ಲಿ 100ಕ್ಕೆ 100 ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಪ್ರತಿಯೊಂದು ಮನೆಗೆ ಹೋಗಿ ಮೋದಿ‌ ಅವರು, ರಾಜ್ಯ ಸರ್ಕಾರ ಕೊಟ್ಟಿರುವ ಕಾರ್ಯಕ್ರಮವನ್ನು ಹೇಳಬೇಕು. ಜನರ ಪ್ರೀತಿ ವಿಶ್ವಾಸ ಗಳಿಸಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

Tap to resize

Latest Videos

undefined

'ನಮೋ' ಅಸ್ತ್ರಕ್ಕೆ ಕಾಂಗ್ರೆಸ್ ತತ್ತರ: ಚರಿತ್ರೆ ಕೇಳಿ ದಂಗಾದ 'ಕೈ' ಪಡೆ

ಬಿಜೆಪಿ ಗೆಲ್ಲಿಸಿ ಮತ್ತೆ ಹನೂರಿಗೆ ಬರುತ್ತೇವೆ:  ರಾಜ್ಯದಲ್ಲಿ ಕಾಂಗ್ರೆಸ್‌ನವರು ಹಣ, ಹೆಂಡ, ತೋಳಿನ ಬಲ, ಜಾತಿಯ ವಿಷ ಬೀಜ ಬಿತ್ತಲು ಮುಂದಾಗಿದ್ದಾರೆ. ಅವುಗಳನ್ನು ಇಟ್ಟುಕೊಂಡು ಚುನಾವಣೆ ಗೆಲ್ಲಲು ಕಾಂಗ್ರೆಸ್ ಹೊರಟಿದೆ. ಜನರು ಕಾಂಗ್ರೆಸ್‌ಗೆ ಅವಕಾಶ ನೀಡದೇ ಬಿಜೆಪಿಗೆ ಅವಕಾಶ ನೀಡಬೇಕು. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಮತ್ತೆ ನಾನು, ವಿಜಯೇಂದ್ರ, ಬೊಮ್ಮಾಯಿ ಹನೂರಿಗೆ ಬರುತ್ತೇವೆ. ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕೆಂದು ಕೃಷಿ ಬಜೆಟ್ ಮಂಡನೆ ಮಾಡಿದೆ. ಕೇಂದ್ರ ಸರ್ಕಾರವು ರೈತರಿಗೆ ಅನುಕೂಲ ಮಾಡಿದೆ. ಬೊಮ್ಮಾಯಿ ಅವರು ಸಹ ರೈತರಿಗೆ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು. 

ಕಾಂಗ್ರೆಸ್‌ ರಾಜ್ಯವನ್ನು ದಿವಾಳಿ ಸ್ಥಿತಿಗೆ ತಂದಿದೆ: ಕಾಂಗ್ರೆಸ್ ಪಕ್ಷದಲ್ಲಿ ಯಾರು ನಾಯಕರು ಇಲ್ಲ. ಯಾರೋ ಯಂಕಾ, ನಾಣಿ, ಸೀನಾ ಎಂಬ ಇಬ್ಬರು ಕಾಂಗ್ರೆಸ್‌ನಲ್ಲಿ ಇದ್ದಾರೆ. ನಮ್ಮ ಪಕ್ಷದಲ್ಲಿ ಮೋದಿ, ಅಮೀತ್ ಷಾ ಸೇರಿ ಹಲವು ನಾಯಕರು ಇದ್ದಾರೆ. ನಮ್ಮ ನಾಯಕರು ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುತ್ತಾರೆ. ರಾಜ್ಯದಲ್ಲಿ ದಿವಾಳಿ ಸ್ಥಿತಿ ತಂದಿದ್ದು ಕಾಂಗ್ರೆಸ್‌ನವರು. ಇಂತವರು ಮತ್ತೆ ಅಧಿಕಾರಕ್ಕೆ ಬರಬೇಕು ಅಂತ ಮೀಸೆ ತಿರುವುತ್ತಾರೆ. ಹೆಣ್ಣು ಮಗುವನ್ನು ಭಾಗ್ಯಲಕ್ಷ್ಮಿ ಎಂದು ನಾವು ಕರೆದಿದ್ದೇವೆ. ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡಿದ್ದೇವೆ. ಹಾಲಿಗೆ ಬೆಂಬಲ ಬೆಲೆ ಕೊಟ್ಟಿದ್ದೇವೆ. ನಮ್ಮ ಅಭ್ಯರ್ಥಿ ಗೆಲ್ಲಿಸುವ ಮೂಲಕ ಬಿಜೆಪಿ ಬಲಪಡಿಸಬೇಕು ಎಂದರು. 

ಅಭಿವೃದ್ಧಿ ಕಾರ್ಯಕ್ಕೆ ಮೆಚ್ಚಿ ಜನರು ಕಾಯುತ್ತಾರೆ: ರಾಜ್ಯದಲ್ಲಿ ಸಮಾವೇಶ ಅಥವಾ ಕಾರ್ಯಕ್ರಮಗಳಿಗೆ ನಾವು ತಡವಾಗಿ ಬಂದರೂ ಕಾಯುತ್ತಾರೆ. ನಾವು ಮಾಡಿರುವ ಅಭಿವೃದ್ಧಿ ಕಾರ್ಯಕ್ಕೆ ಮೆಚ್ಚಿ ಕಾಯುತ್ತಾರೆ. ನಮ್ಮ ಗೆಲುವನ್ನು ಯಾವ ಶಕ್ತಿ ತಡೆಯಲು ಸಾಧ್ಯವಿಲ್ಲ. ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ, ಬಿಜೆಪಿ ಪೂರ್ಣ ಬಹುಮತ ಬರುವುದು ಅಷ್ಟೇ ಸತ್ಯ. ನಾವು ಜನರ ನಂಬಿಕೆಗೆ ಯಾವತ್ತೂ ಮೋಸ ಮಾಡಿಲ್ಲ. ಮುಂದೆಯೂ ಜನರ ಜೊತೆ ಇರುತ್ತೇವೆ. ಬಿಜೆಪಿಯನ್ನು ಎಲ್ಲರೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ನಾವು ಅಧಿಕಾರಕ್ಕೆ ಬಂದ್ರೆ 7ನೇ ವೇತನ ಆಯೋಗ ಜಾರಿ: ಸರ್ಕಾರಿ ನೌಕರರ ಪರ ಕಾಂಗ್ರೆಸ್‌ ಬ್ಯಾಟಿಂಗ್‌

8 ಸಾವಿರ ಕಿ.ಮೀ. ಉದ್ದದಲ್ಲಿ 150 ರೋಡ್ ಶೋ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮಾತನಾಡಿ, ವಿಜಯ ಸಂಕಲ್ಪ ಯಾತ್ರೆ 224 ಕ್ಷೇತ್ರದಲ್ಲಿ ನಡೆಯಲಿದೆ. 8 ಸಾವಿರ ಕಿ.ಮೀ ವ್ಯಾಪ್ತಿಯಲ್ಲಿ 150 ರೋಡ್ ಶೋ ನಡೆಯಲಿದೆ. 20 ದಿನದ ನಂತರ ದಾವಣಗೆರೆಯಲ್ಲಿ ಬೃಹತ್‌ ಸಮಾವೇಶ ನಡೆಯಲಿದ್ದು, ಇದಕ್ಕೆ ಪ್ರಧಾನಿ ಮೋದಿ ಅವರ ಆಶೀರ್ವಾದ ಸಿಗಲಿದೆ. ಮಲೈ ಮಹದೇಶ್ವರ ಆಶೀರ್ವಾದದಿಂದ ಆರಂಭವಾದ ಯಾತ್ರೆಗೆ ಯಾವುದೇ ವಿಘ್ನ ಬರುವುದಿಲ್ಲ. ಕರ್ನಾಟಕದ ಸಂಸ್ಕೃತಿ ರೀತಿ ನೀತಿ ಗೌರವಪೂರ್ಣ ಇತಿಹಾಸ ನೆನಪಾಗುತ್ತದೆ. ಹೊಸ ಯುಗದಲ್ಲಿ ತಾಂತ್ರಿಕವಾಗಿ ಮುಂದುವರಿಯುತ್ತಿದೆ ಎಂದು ಹೇಳಿದರು.

click me!