ನಮ್ಮ ಪಕ್ಷದ ಬೆಂಬಲವಿಲ್ಲದೇ ಯಾವುದೇ ಪಕ್ಷ ಸರ್ಕಾರ ರಚನೆ ಅಸಾಧ್ಯ ಜನಾರ್ದನ ರೆಡ್ಡಿ

By Ravi JanekalFirst Published Apr 4, 2023, 9:13 AM IST
Highlights

ರಾಜ್ಯದಲ್ಲಿ ಬಹುಮತದಿಂದ ಯಾವುದೇ ಸರ್ಕಾರ ರಚನೆ ಆಗುವುದಿಲ್ಲ. ನಮ್ಮ ಸಹಕಾರವಿಲ್ಲದೆ ಯಾವುದೇ ಪಕ್ಷ ಸರ್ಕಾರ ರಚನೆ ಮಾಡಲು ಆಗುವುದಿಲ್ಲ ಎಂದು ಗಾಲಿ ಜನಾರ್ದನರೆಡ್ಡಿ ಹೇಳಿದರು.

ಅಥಣಿ (ಏ.4) : ಬಹುಮತದಿಂದ ಯಾವುದೇ ಸರ್ಕಾರ ರಚನೆ ಆಗುವುದಿಲ್ಲ ಎಂಬ ಸಿ ವೋಟರ್ಸ್ ಸಮೀಕ್ಷೆ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಆ ರೀತಿ ಆದರೆ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ನಾವು ಯಾವುದೇ ಪಕ್ಷಕ್ಕೆ ಬೆಂಬಲ ನೀಡುತ್ತೇವೆ ಎಂದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಸಹಕಾರವಿಲ್ಲದೆ ಯಾವುದೇ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ನಮ್ಮ ಬೆಂಬಲವನ್ನು ಯಾರು ಬೇಕು ಅನ್ನುತ್ತಾರೋ, ಅವರಿಗೆ ಅವರಿಗೆ ನಮ್ಮ ಪಕ್ಷ ಬೆಂಬಲ ನೀಡುತ್ತೇವೆ ಎಂದರು.

ಕುಡುಕರಿಗಿದು ಸುಗ್ಗಿ ಕಾಲವಾದರೆ ಕಾರವಾರದಲ್ಲಿ ಉಲ್ಟಾ: ಹುಬ್ಬಳ್ಳಿಯಲ್ಲಿ ಮನೇಲಿ ಕುಕ್ಕರಿದ್ರೂ ರೇಡ್ ಆಗ್ತಾವು!

ರಾಜ್ಯದಲ್ಲಿ ಕಾಂಗ್ರೆಸ್ ಕುಂದಿಸುವ ನಿಟ್ಟಿನಲ್ಲಿ ನಿಮ್ಮ ಪಕ್ಷ ಸ್ಥಾಪಿಸಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮದು ಯಾವುದೇ ಪಕ್ಷ ಕುಂದಿಸುವ ಪಕ್ಷವಲ್ಲ.‌‌ ನಮ್ಮದು ರೈತಪರ ಪಕ್ಷ. ಬಿಜೆಪಿ ಬೆಂಬಲ ನೀಡುವ ಪಕ್ಷ ಎಂದರೆ ಅಥಣಿ ಕುಡಚಿಯಲ್ಲಿ ಯಾರು ಶಾಸಕರಾಗಿದ್ದಾರೆ? ನಾವು ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡಲು ಈ ಪಕ್ಷ ನಿರ್ಮಾಣ ಮಾಡಿದ್ದೇವೆ. ರಾಜ್ಯದಲ್ಲಿ ನಮ್ಮ ಪಕ್ಷದಿಂದ ೨೫ ರಿಂದ ೩೦ ಸೀಟ್ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಭದ್ರಕೋಟೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಬ್ಬರದ ಪ್ರಚಾರ ನಡೆಸಲಾಯಿತು. KRPP ಅಭ್ಯರ್ಥಿ ಬಸವರಾಜ ಬಿಸನಕೊಪ್ಪ ಪ್ರಚಾರ ಸಭೆಯಲ್ಲಿ ಜನಾರ್ದನರೆಡ್ಡಿ ಮಾತನಾಡಿ, ಒಬ್ಬ ನಾಯಕನಾದವನು ಯಾವತ್ತೂ ಎದೆ ಗುದ್ದಬಾರದು.
ಸಿಬಿಐ ಬಂದಾಗ ನಾನು ಕಾನೂನಿಗೇ ಗೌರವ ನೀಡಿ ಹೋದೆ. ವಿಜಯ ಮಲ್ಯನ ರೀತಿಯಲ್ಲಿ ನಾನು ಬೆನ್ನು ತೋರಿಸಿ ಓಡಿ ಹೋಗಲಿಲ್ಲ. ನಾನೊಮ್ಮೆ ಲಂಡನ್ನಲ್ಲಿ  ಲಕ್ಷ್ಮಿ ಮೀಟಲ್ ಜೊತೆ ಸಭೆ ಮಾಡುತಿದ್ದೆ. ಆಗ  ನನ್ನ ಮೊಬೈಲ್ ನಲ್ಲಿ ಮೆಸೇಜ್ ಬರ್ತಾ ಇತ್ತು.  ನಾನು ಯಾವಾಗ್ ಬೇಕಾದ್ರೂ ಬಂಧನ ಆಗಬಹುದು ಅಂದುಕೊಂಡೆ. ಆಗ ನಾನು ಲಕ್ಷ್ಮಿ ಮೀಟಲ್ ಅವರಿಗೆ ನಾನು ಹೇಳಿದ್ದೇನೆಂದರೆ, ನಾನು ಬೆಂಗಳೂರಿಗೆ ಹೋಗುತ್ತೆನೆ ಎಂದು. ಆದರೆ ಲಕ್ಷ್ಮಿ ಮಿಟಲ್, ನೀವು ಇಲ್ಲೇ ಇರುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ನಾನು ಯಾವುದೇ ತಪ್ಪು ಮಾಡಿಲ್ಲ ನಾನು ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿ ಬಂದೆ. ಐದು ವರ್ಷ ಅಧಿಕಾರ ನಡೆಸಿ ನನ್ನನ್ನು ಮೋಸದಿಂದ ಜೈಲಿಗೆ ಕಳುಹಿಸಿದರು. ನಾನು ಜೈಲಿಗೆ ಹೋದರೂ ನಾನು ದುಡಿದ ಹಣವನ್ನು ಅವರಿಂದ ಮರಳಿ ಪಡೆಯುದಕ್ಕೆ ಆಗಿಲ್ಲ. ಕುತಂತ್ರದಿಂದ ನನ್ನ ಜೈಲಿಗೆ ಕಳುಹಿಸಿದರು. ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದ ಜನಾರ್ದನರೆಡ್ಡಿ.

ನಮ್ಮ ಅಥಣಿ ಅಭ್ಯರ್ಥಿ ಬಸವರಾಜ ಬಿಸನಕೊಪ್ಪ(Basavaraj bisanakoppa) ಸಿಪಿಐ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ಕೆಲಸವನ್ನು ಬಿಟ್ಟು ಬರುವುದು ಅಷ್ಟು ಸುಲಭವಲ್ಲ. ನಾನು ಇವರನ್ನು ಯಾವತ್ತೂ ಕೈ ಬಿಡುವುದಿಲ್ಲ, ನೀವು ಇವರನ್ನು ಕೈ ಬಿಡಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ದಕ್ಷಿಣ ಭಾರತದಲ್ಲಿ ನನ್ನ ಜೊತೆ ಮಂತ್ರಿ ಆದವರು ಅಥಣಿ ಕ್ಷೇತ್ರವನ್ನು ಯಾಕೆ ಅಭಿವೃದ್ಧಿ ಮಾಡಿಲ್ಲ?
ಹೆಸರು ಹೇಳದೇ ಲಕ್ಷ್ಮಣ್ ಸವದಿ(laxman savadi) ಅವರಿಗೆ ಪ್ರಶ್ನಿಸಿದರು. ಇದೇ ವೇಳೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಹೇಗೆ ಅಭಿವೃದ್ಧಿಮಾಡುತ್ತೇವೆ  ಪಕ್ಷದ ಹಲವು ಯೋಜನೆ ಬಗ್ಗೆ ಜನರಿಗೆ ಭರವಸೆ ನೀಡಿದರು.

ಗೋಪಾಲಕೃಷ್ಣ ಕಾಂಗ್ರೆಸ್‌ ಸೇರ್ಪಡೆ ವೇಳೆ ಪ್ರತಿಭಟನೆ: ಆತ್ಮಹತ್ಯೆಗೆ ಯತ್ನ

ಸುಷ್ಮಾ ಸ್ವರಾಜ್ ಆಶೀರ್ವಾದಿಂದ ನಾನು ರಾಜಕೀಯಕ್ಕೆ ಬಂದೆ:

ಸುಷ್ಮಾ ಸ್ವರಾಜ್ ಆಶೀರ್ವಾದಿಂದ ನಾನು ರಾಜಕೀಯಕ್ಕೆ ಬಂದಿದ್ದೇನೆ. ಬಳ್ಳಾರಿ ಸಂಸತ್ ಚುನಾವಣೆಯಲ್ಲಿ ಸೋತರು ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷದ ಬೆಳೆಯಿತು. ನಾನು ಮಂತ್ರಿ ಆಗಿರುವ ಸಂದರ್ಭದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಹಂಪಿ, ಕೂಡಲಸಂಗಮ ಬಾದಾಮಿ, ಬೆಂಗಳೂರು, ಜೋಗಪಾಲ್ಸ , ಹಲವು ಪ್ರವಾಸಿ ಸ್ಥಳಗಳನ್ನು ಒಂದು ದಿನದಲ್ಲಿ ನೋಡಬೇಕು. ಮೂವತ್ತು ವಿಮಾನ ನಿಲ್ದಾಣ ಮಾಡಬೇಕು ಎಂದು ಕಾನಸು ಕಂಡಿದ್ದೆ. ಗುಲ್ಬರ್ಗಾ ವಿಜಯಪೂರ ಜಿಲ್ಲೆಯಲ್ಲಿ ನಾನೇ ವಿಮಾನ ನಿಲ್ದಾಣ ಕಾಮಗಾರಿ ಚಾಲನೆ ನೀಡಿದ್ದೆ. ಮೈಸೂರು ಭಾಗದಲ್ಲಿ ವಿಮಾನ ಆಶ್ರಯ ಮಾಡಿದ್ದು ನಾನೇ. ಹೆಲಿಕಾಪ್ಟರ್ ನಲ್ಲಿ ತಿರುಗುತ್ತಿದ್ದಾನೆ ಮುಂದೆ ಸಿಎಂ ಆಗುತ್ತಾನೆ ಎಂದು ನಮ್ಮವರು ಶತ್ರುಗಳು ಒಂದಾದರೂ ಜೈಲಿಗೆ ಕಳುಹಿಸಿದರು ಎಂದು ಹಳೆ ಕಹಿಘಟನೆಗಳನ್ನು ನೆನಪಿಸಿಕೊಂಡರು. 

click me!