ಸಂಘಟನೆಗಳ ಬ್ಯಾನ್ ಅಂದರೆ ಇದ್ದಕ್ಕಿದ್ದಂತೆ, ಸುಮ್ಮಸುಮ್ಮನೆ ಬ್ಯಾನ್ ಮಾಡಲು ಆಗಲ್ಲ ಅಥವಾ ನಾಳೆ ಬೆಳಗ್ಗೆಯೇ ಬ್ಯಾನ್ ಮಾಡ್ತೀವಿ ಎಂದೂ ಅಲ್ಲ ಎಂದು ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರು (ಮೇ.29): ಸಂಘಟನೆಗಳ ಬ್ಯಾನ್ ಅಂದರೆ ಇದ್ದಕ್ಕಿದ್ದಂತೆ, ಸುಮ್ಮಸುಮ್ಮನೆ ಬ್ಯಾನ್ ಮಾಡಲು ಆಗಲ್ಲ ಅಥವಾ ನಾಳೆ ಬೆಳಗ್ಗೆಯೇ ಬ್ಯಾನ್ ಮಾಡ್ತೀವಿ ಎಂದೂ ಅಲ್ಲ. ರಾಜ್ಯದಲ್ಲಿ ಯಾವುದೇ ವ್ಯಕ್ತಿ, ಸಂಘಟನೆಗಳು ಶಾಂತಿ, ಸುವ್ಯವಸ್ಥೆ ಹಾಳು ಮಾಡಿದರೆ ಅಂತಹವರ ನಿಯಂತ್ರಣಕ್ಕೆ ಕ್ರಮ ವಹಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ. ಅದರಂತೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿ ಶಾಂತಿ ಕದಡುವ ಸಂಘ-ಸಂಸ್ಥೆಗಳನ್ನು ನಿಯಂತ್ರಣ ಮಾಡುವ ಕುರಿತು ಹೇಳಿದ್ದೇವೆ.
ಧರ್ಮ ಮತ್ತು ಜಾತಿ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ ಬಿತ್ತಿ ವಿಭಜನೆಗೆ ಕಾರಣವಾಗುವ ವ್ಯಕ್ತಿಗಳು ಹಾಗೂ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಬದ್ಧವಾಗಿದೆ. ಬಜರಂಗದಳ ಮತ್ತು ಪಿಎಫ್‌ಐ ಅಂತ ಅಲ್ಲ ಸಮಾಜದ ಸ್ವಾಸ್ಥ್ಯ ಕದಡುವ ಯಾವ ಸಂಘಟನೆಗಳೇ ಆಗಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುತ್ತೇವೆ. ಅಗತ್ಯಬಿದ್ದರೆ ಅಂತಹ ಸಂಘಟನೆಗಳ ನಿಷೇಧವನ್ನೂ ಮಾಡಲಾಗುವುದು. ಒಟ್ಟಿನಲ್ಲಿ ರಾಜ್ಯದ ವಾತಾವರಣ ಶಾಂತಿ ಹಾಗೂ ಅಭಿವೃದ್ಧಿಗೆ ಪೂರಕವಾಗಿರಬೇಕು. ಸರ್ವಜನಾಂಗದ ಶಾಂತಿಯ ತೋಟ ನಿರ್ಮಾಣದ ಭರವಸೆ ನೀಡಿದ್ದೇವೆ. ಅದಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದರು.
ಗ್ಯಾರಂಟಿ ಯೋಜನೆ ಜಾರಿಗೆ ಜೂ.1ಕ್ಕೆ ಸಂಪುಟ ಸಭೆ: ಡಿ.ಕೆ.ಶಿವಕುಮಾರ್
ಬಿಜೆಪಿ-ಜೆಡಿಎಸ್‌ಗೆ ಇನ್ನೂ ಬುದ್ಧಿ ಬಂದಿಲ್ಲ: ಕಾಂಗ್ರೆಸ್‌ನ ಐದು ಗ್ಯಾರಂಟಿಗಳ ಜಾರಿಗೆ ಇನ್ನೂ ದಿನಾಂಕ ಘೋಷಿಸದ ಬಗ್ಗೆ ಪ್ರತಿಕ್ರಿಯಿಸಿದ ಅವರು ಜೂನ್ 1ಕ್ಕೆ ಮುಖ್ಯಮಂತ್ರಿ ಅವರು ಮತ್ತೆ ಸಚಿವ ಸಂಪುಟ ಸಭೆ ಕರೆದಿದ್ದಾರೆ ಎಂದರು. ಅಂದು ಐದೂ ಗ್ಯಾರಂಟಿಗಳು ಜಾರಿಯಾಗುತ್ತವಾ ಎಂಬ ಪ್ರಶ್ನೆಗೆ, ಕಾದು ನೋಡಿ. ಸಂಪುಟದಲ್ಲಿ ಏನು ತೀರ್ಮಾನವಾಗುತ್ತದೋ ಅದರಂತೆ ಆದೇಶಗಳು ಹೊರಬರುತ್ತವೆ ಎಂದು ಹೇಳಿದರು.
ಸತೀಶ್ ಡಿಸಿಎಂ ಅಲ್ಲ, ಸಿಎಂ ಆಗಿಯೇ ಆಗ್ತಾರೆ: ಲಕ್ಷ್ಮೀ ಹೆಬ್ಬಾಳಕರ್
ಯಾವ ಖಾತೆ ಕೊಟ್ಟರೂ ಸೈ: ತಮಗೆ ಗೃಹ ಖಾತೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆಯಲ್ಲಾ ಎಂಬ ಪ್ರಶ್ನೆಗೆ, ನನಗೆ ಗೊತ್ತಿಲ್ಲ. ಎಲ್ಲಾ ಮಾಧ್ಯಮಗಳಲ್ಲಿ ನೀವೇ ವರದಿ ಮಾಡುತ್ತಿದ್ದೀರಿ. ನೀವೇ ನನಗೆ ಯಾವ ಖಾತೆ ಎಂದು ನಿರ್ಧರಿಸಿದಂತಿದೆ. ಯಾವ ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ. ಒಳ್ಳೆಯ ಆಡಳಿತ ನೀಡುವುದು ನನ್ನ ಜವಾಬ್ದಾರಿ. ಬಹಳ ಎಚ್ಚರಿಕೆಯಿಂದ ಆಡಳಿತ ನಡೆಸಬೇಕು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಅದರಂತೆ ನಡೆಯುತ್ತೇವೆ ಎಂದರು.