ರಾಜಸ್ಥಾನದ ರಾಜಕಾರಣ ಎಲ್ಲಿಗೆ ಬಂದು ನಿಂತಿದೆ? ಇದಕ್ಕೆಲ್ಲ ಕಾರಣ ಪೈಲಟ್ ನಡೆಯಾ? ಅಲ್ಲಿಗೂ ಹೋಗಲಾರೆ, ಇಲ್ಲಿಯೂ ಇರಲಾರೆ ಸ್ಥಿತಿ/ ದೇಶದ ರಾಜಕೀಯದ ಮೇಲೂ ಪರಿಣಾಮ/ ಯುವಜನತೆಗೆ ಸಿಕ್ಕ ಸಂದೇಶ ಏನು?
ಡೆಲ್ಲಿ ಮಂಜು
ರಾಜಕಾರಣದಲ್ಲಿ ಅನುಭವ ದೊಡ್ಡದಾ? ಅಥವಾ ಬಿಸಿನೆತ್ತರು! ಚಾಣಾಕ್ಷತನ ದೊಡ್ಡದಾ? ಡೆಲ್ಲಿಯ ರಾಜಕೀಯ ಕಟ್ಟೆಯಲ್ಲಿ ಬಹುವಾಗಿ ಚರ್ಚೆಯಾಗುತ್ತಿರುವ ವಿಷಯ ಇದು.
ಟೊಂಕ್ ಕ್ಷೇತ್ರದಿಂದ ಶುರುವಾದ ಬಿರುಗಾಳಿ ಇದೀಗ ರಾಜಸ್ಥಾನದ ತುಂಬ ಹರಡಿ, ದೆಹಲಿಯ ಜನಪಥ್, ತುಘಲಕ್ ಮತ್ತು ಲೋದಿ ರೋಡ್ ಗಳಲ್ಲಿ ಸುಂಟರಗಾಳಿಯಾಗಿ ಮಾರ್ಪಡುತ್ತದೆ ಎಂಬ ಲೆಕ್ಕಚಾರ ಹಾಕುತ್ತಿರುವಾಗಲೇ ಜೈಪುರ್ ನಲ್ಲೇ ಈ ಕ್ಷಣಕ್ಕೆ ಕಟ್ಟಿಹಾಕಿದ್ದು ಮಾತ್ರ ಸುಳ್ಳಲ್ಲ.
ಆತ ಮತ್ತು ನನ್ನ ನಡುವೆ ಮಾತು ಇಲ್ಲದೇ ಒಂದೂವರೆ ವರ್ಷ ಆಯ್ತು. ಎಲ್ಲಿಯಾದ್ರೂ ಕೇಳಿದ್ದೀರಾ ಸಿಎಂ, ಡಿಸಿಎಂ ಒಂದೂವರೆ ವರ್ಷ ಮಾತಾಡದಿರುವುದು? ಈ ಪ್ರಶ್ನೆ ತೂರಿ ಬಂದಿದ್ದು ರಾಜಸ್ಥಾನ ದ ಸಿಎಂ ಅಶೋಕ್ ಗೆಹ್ಲೋಟ್ ಅವರಿಂದ.
ಅದರ ಜೊತೆಯಲ್ಲಿ ಇಂಗ್ಲಿಪ್ ನಲ್ಲಿ ಬೈಟ್ ಕೊಟ್ಟು, ಚಾಣಾಕ್ಷ ತನಮೆರೆದರೇ ಸಾಲದು. ಮನಸ್ಸಿನ ಒಳಗೆ ಯಾವ ಸಿದ್ಧಾಂತ ಇದೆ ಅಂಥ ಗೆಹ್ಲೋಟ್ ಗಟ್ಟಿ ಮಾತಿನಲ್ಲಿ ತಿವಿದಿದ್ದಾಗ ಎಲ್ಲರೂ ಮಾಜಿ ಡಿಸಿಎಂ ಸಚಿನ್ ಪೈಲಟ್ ಅವರ ಕಡೆ ತಿರುಗಿ ನೋಡುವಂತಾಯ್ತು.
ನಾಲ್ಕು ದಶಕಗಳ ಕಾಲ ರಾಜಸ್ಥಾನದ ರಾಜಕಾರಣ ಅರೆದು ಕುಡಿದಿರುವ ಗೆಹ್ಲೋಟ್, ಪೈಲಟ್ ಆಟ ನಡೆಯೋಕೆ ಬಿಡಲೇ ಇಲ್ಲ ನೋಡಿ. ಅದು ಯಾವ ಮಟ್ಟಕ್ಕೆ ಅಂದ್ರೆ ಡಿಸಿಎಂ ಪೋಸ್ಟ್, ರಾಜ್ಯಾಧ್ಯಕ್ಷರ ಹುದ್ದೆ ಹೀಗೆ ಎಲ್ಲಾ ಹುದ್ದೆಗಳಿಗೂ ಸಂಚಕಾರ ತಂದ್ರು. ಜೊತೆಗೆ ಪೈಲಟ್ ಬಣದ ಮಂತ್ರಿಗಳಿಗೂ ಕೋಕ್, ಆ ಬಣದ 18 ಮಂದಿ ಶಾಸಕರಿಗೂ ನೋಟೀಸ್, ಇಡೀ ರಾಜಸ್ಥಾನ ಡಿಸಿಸಿಗಳ ಪದಾಧಿಕಾರಿಗಳ ವಿಸರ್ಜನೆ ಹೀಗೆ ಕಣ್ಣುಮುಚ್ಚಿ ಬಿಡುವುದರಲ್ಲಿ ಎಲ್ಲಾ ಮಾಡಿ ಬಿಟ್ಟರು. ಅಲ್ಲದೆ ಇದೀಗ ಪೈಲಟ್- ಬಿಜೆಪಿ ಸಖ್ಯವನ್ನು ಬಿಚ್ಚಿಟ್ಟಿದ್ದಾರೆ. ಈಗ ಪೈಲಟ್ ಮತ್ತು ಗೆಹ್ಲೋಟ್ ನಡುವೆ ಇದ್ದ ಫೈಟ್ ಫೋನ್ ಟ್ಯಾಪಿಂಗ್ ಹೆಸರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಫೈಟ್ ಆಗಿ ಮಾರ್ಪಟ್ಟಿದೆ. ಈ ಮೂಲಕ ಶಾಸಕರ ಖರೀದಿಯನ್ನು ಬಿಜೆಪಿ ಒಪ್ಪಿಕೊಂಡಂತೆ ಅಂಥ ಕಾಂಗ್ರೆಸ್ ಆರೋಪ ಮಾಡಿದೆ.
ಗುಜ್ಜಾರ ಹುಡುಗ : 26 ನೇ ವಯಸ್ಸಿಗೆ ಎಂಪಿ, 32ಕ್ಕೆ ಕೇಂದ್ರ ಮಂತ್ರಿ 40ಕ್ಕೆ ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹೀಗೆ 16 ವರ್ಷದ ರಾಜಕೀಯದ ದಾರಿಯಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಕಾಂಗ್ರೆಸ್ ಯಂಗ್ ಲೀಡರ್, ಇಡೀ ರಾಜಸ್ಥಾನ ಸುತ್ತಿ ಕಾಂಗ್ರೆಸ್ ಪಕ್ಷಕ್ಕೆ ಜೀವ ತುಂಬಿದ ಸಚಿನ್ ಪೈಲಟ್ ಗೆ ಡಿಸಿಎಂ ಪಟ್ಟವೂ ಅನಾಯಾಸವಾಗಿ ಒಲಿದು ಬಂತು.
ಬಂಡೆದ್ದ ಪೈಲಟ್ ಬಗ್ಗೆ ರಾಹುಲ್ ಒಂದೇ ಮಾತು
ಕಾಂಗ್ರೆಸ್ ಅಧಿಕಾರ ಹಿಡಿಯಲು ಮುಖ್ಯಭೂಮಿಕೆ ಸಿದ್ದಪಡಿಸಿದ ಗುಜ್ಜರ್ ರ ಹುಡುಗ ಪೈಲಟ್, ರಾಜ್ಯದ ಗುಜ್ಜರ್ ಮತ್ತು ಮೀನಾ ಸಮುದಾಯಗಳನ್ನು ಸಂಘಟಿಸಿದ ರೀತಿಯೇ ಅಚ್ಚರಿ. ಕಾಂಗ್ರೆಸ್ ನ ಯಂಗ್ ಟಕ್೯ ಇಡೀ ರಾಜ್ಯ ಸುತ್ತಿದಾಗ ಎರಡೂ ಸಮುದಾಯಗಳು ಬೆಂಬಲಕ್ಕೆ ನಿಂತವು. ಅಶೋಕ್ ಗೆಹ್ಲೋಟ್, ಕಾಂಗ್ರೆಸ್ ಇವೆಲ್ಲಾ ಅಂಶಗಳು ಚುನಾವಣೆಯಲ್ಲಿ ಕೆಲಸ ಮಾಡಿದವು ಕಾಂಗ್ರೆಸ್ ಪಕ್ಷ ಅನಾಯಾಸವಾಗಿ ಗೆಲುವು ದಾಖಲಿಸಿತು.
ಪಕ್ಷ ಅಧಿಕಾರಕ್ಕೆ ಬರುತ್ತದೆ ಅಂದ ಕೂಡಲೇ ಈ ಗೆಲುವು ನನ್ನದು ಅನ್ನೋಕೆ ಶುರು ಮಾಡಿದರು ಸಚಿನ್ ಪೈಲಟ್. ಹಾಗಾಗಿ ನಾನು ಸಿಎಂ ಆಗಬೇಕು ಅಂಥ ತಗಾದೆ ತೆಗೆದರು. ಕೇವಲ ನನ್ನಿಂದಲೇ ಗೆಲವು ಅಂಥ ತಗಾದೆ ಮುಂದುವರೆಸಿದ್ದು. ಈ ಮುನಿಸು ಒಂದೂವರೆ ವರ್ಷವಾದರೂ ಕಡಿಮೆಯಾಗಲೇ ಇಲ್ಲ. ಸಿಎಂ ಪಟ್ಟ ಕೊಡುತ್ತೀರಾ ಇಲ್ಲವೇ ಪಕ್ಷವನ್ನು ಅಧಿಕಾರದಿಂದ ಇಳಿಸ್ಲಾ? ಅನ್ನೋ ತನಕ ಹೋಯ್ತು.
ಪಕ್ಷ ಬಿಡುವ ಬೆದರಿಕೆ ; ಸಚಿನ್ ಪೈಲಟ್ ಈ ನಡೆ ಅಥವಾ ಬೆದರಿಕೆಯೇ ಆತನಿಗೇ ಮುಳುವಾಯ್ತು ಅನ್ನಿಸುತ್ತೆ. ಗೆಹ್ಲೋಟ್ ಸಾಹೇಬರು ಹೇಳುವಂತೆ, ಕಳೆದ ಆರು ತಿಂಗಳಿಂದ ಬಿಜೆಪಿ ಸಂಪರ್ಕದಲ್ಲಿದ್ದರು ಅಂಥ ಕೆಲವೊಂದು ದಾಖಲೆ ಸಮೇತ ಹೊರ ಹಾಕಿದ್ದಾರೆ.
ಬೆದರಿಸಲು 18 ಶಾಸಕರನ್ನು ಕರೆದುಕೊಂಡು ಬಂದು ರೆಸಾಟ್೯ ಸೇರಿದ್ದು, ಮನವೊಲಿಸಲು ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಳಿದರು ಒಪ್ಪಲೇ ಇಲ್ಲ. ಈಗ ಬೇಕೆಂದರೂ ಕಾಂಗ್ರೆಸ್ ನಲ್ಲಿ ಇರೋಕೆ ಸಾಧ್ಯವಿಲ್ಲದಂತೆ ಮಾಡಿಕೊಂಡಿದ್ದಾರೆ ಪೈಲಟ್.
ದುರಾಸೆ, ಅನಾನುಭವಿ ನಿರ್ಧಾರ ; ಬಹುಶಃ ರಾಜಸ್ಥಾನದ ಈ ಬಿಕ್ಕಟ್ಟಿನಲ್ಲಿ ಅನುಭವಕ್ಕೆ ಮಣೆ ಅನ್ನಿಸುತ್ತೆ. ಸಚಿನ್ ಪೈಲೆಟ್ ಅವರ ಜರ್ನಲಿಸಂ ಕಲೆಗಳು, ಎಂಬಿಎ ತಂತ್ರಗಳಾವೂ ಕೆಲಸ ಮಾಡಲೇ ಇಲ್ಲ.
ಯಾರನ್ನೋ ನಂಬಿ, ಪರಿಣಾಮಗಳ ಬಗ್ಗೆ ಪೂರ್ವಲೋಚನೆ ಇಲ್ಲದೆ ರಾಜಕೀಯದ ಬೀದಿಯಲ್ಲಿ ನಿಂತು ಹುಡುಕಾಟವಾಡಿದ್ರೆ ಇಂಥದ್ದೇ ಸ್ಥಿತಿ ಅನುಭವಿಸಬೇಕಾಗುತ್ತದೆ. ಅತ್ತ ಬಿಜೆಪಿ ಸೇರಲ್ಲ ಅಂಥ ಪೈಲಟ್ ಹೇಳಿ ಆಯ್ತು. ಇತ್ತ ಕಾಂಗ್ರೆಸ್ ನಲ್ಲಿ ಇರೋಕೆ ಸಾಧ್ಯವೇ ಇಲ್ಲದ ಸ್ಥಿತಿ. ಇರ್ತೀನಿ ಅಂದ್ರೆ ಭಾರೀ ಮುಜುಗರ. ಈಗ ದಿಕ್ಕು ಯಾವುದು?
ಇಷ್ಟರ ನಡುವೆ ಮೂಡಿ ಬರುತ್ತಿರುವ ಪ್ರಶ್ನೆಗಳು ಅಂದರೆ, ಹೊಸ ತಲೆಮಾರಿನ ನಾಯಕ ಅನ್ನಿಸಿಕೊಂಡ ಪೈಲಟ್, ರಾಜಕೀಯದಲ್ಲಿ ಉರುಳಿಸಿದ ಹೊಸ ದಾಳವಾದ್ರೂ ಯಾವುದು? ಹೊಸ ತಲೆಮಾರಿಗೆ ತೋರಿಸಿದ ಪೊಲಿಟಿಕಲ್ ರಣತಂತ್ರವಾದರೂ ಏನು? ಅನ್ನುವಂಥದ್ದು.
ಇಂಥ ಹತ್ತಾರು ಪ್ರಶ್ನೆಗಳಿಗೆ ಸಚಿನ್ ಆಟದಲ್ಲಿ ಕಂಡು ಬಂದಿದ್ದು, ಅದೇ ಹಳೇ ರಾಜಕೀಯದ ಆಟ. ಅಧಿಕಾರಕ್ಕಾಗಿ ಏನು ಬೇಕಾದ್ರೂ ಮಾಡಬಹುದು ಅನ್ನೋದು. ಯೂತ್ ಹೆಸರಲ್ಲಿ ಎಲ್ಲಾವೂ ಪಡೆದು ಈಗ ಅಧಿಕಾರಕ್ಕಾಗಿ ತಮ್ಮ ಸಿದ್ಧಾಂತಗಳನ್ನು ಮಾರಿಕೊಂಡರು ಅನ್ನೋ ಕಾಂಗ್ರೆಸ್ ಆರೋಪಕ್ಕೆ ಇದೀಗ ಯಾಕೋ ಹೆಚ್ಚು ಅರ್ಥ ಬರುತ್ತಿದೆ ಜೊತೆಗೆ ಯುವಪೀಳಿಗೆಯೂ ಇಂಥವರಾ? ನಮ್ಮ ನಾಯಕರೂ ಅಂಥ ಮುಗಿಮುರಿಯುವಂತಾಯ್ತು.