ಮಾತೆತ್ತಿದ್ದರೆ ಪಿಂಪ್‌, ವೇಶ್ಯೆ ಎನ್ನುವ ಬಿಜೆಪಿ ನಾಯಕರ ಪದಬಳಕೆ ಸರಿಯಿಲ್ಲ: ಎಸ್ ನಾರಾಯಣ್

By Kannadaprabha NewsFirst Published Jan 22, 2023, 7:30 AM IST
Highlights

ಬಿಜೆಪಿಯ ಕೆಲವು ನಾಯಕರು ನಾಲಿಗೆ ಹರಿಬಿಟ್ಟು ಪಿಂಪ್‌, ವೇಶ್ಯೆ ಎಂಬ ಪದ ಬಳಕೆ ಮಾಡುತ್ತಿರುವುದು ಶೋಚನೀಯ ಸಂಗತಿ. ಅವರು ನಾಲಿಗೆ ಮೇಲೆ ಹಿಡಿತದಲ್ಲಿಟ್ಟುಕೊಂಡು ಮಾತನಾಡಬೇಕು ಎಂದು ಚಿತ್ರನಟ ಹಾಗೂ ನಿರ್ಮಾಪಕ, ಕಾಂಗ್ರೆಸ್‌ ಪ್ರಚಾರ ಸಮಿತಿ ಮುಖ್ಯಸ್ಥ ಎಸ್‌. ನಾರಾಯಣ ಹೇಳಿದರು.

ಕುಷ್ಟಗಿ (ಜ.22) : ಬಿಜೆಪಿಯ ಕೆಲವು ನಾಯಕರು ನಾಲಿಗೆ ಹರಿಬಿಟ್ಟು ಪಿಂಪ್‌, ವೇಶ್ಯೆ ಎಂಬ ಪದ ಬಳಕೆ ಮಾಡುತ್ತಿರುವುದು ಶೋಚನೀಯ ಸಂಗತಿ. ಅವರು ನಾಲಿಗೆ ಮೇಲೆ ಹಿಡಿತದಲ್ಲಿಟ್ಟುಕೊಂಡು ಮಾತನಾಡಬೇಕು ಎಂದು ಚಿತ್ರನಟ ಹಾಗೂ ನಿರ್ಮಾಪಕ, ಕಾಂಗ್ರೆಸ್‌ ಪ್ರಚಾರ ಸಮಿತಿ ಮುಖ್ಯಸ್ಥ ಎಸ್‌. ನಾರಾಯಣ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಸಹ ಒಬ್ಬ ಜನಪ್ರತಿನಿಧಿ ಎಂದು ತಿಳಿದುಕೊಂಡು ಅವರು ಮಾತನಾಡಬೇಕು. ನಾಲಿಗೆಯನ್ನು ಹರಿಬಿಟ್ಟು ಮಾತನಾಡಿದರೆ ಅದರ ಪರಿಣಾಮ ಜನರ ಮೇಲು ಉಂಟಾಗುತ್ತದೆ ಎಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೀರೊ ಇದ್ದ ಹಾಗೆ. ಅವರು ಯಾವುದೇ ಕಾರಣಕ್ಕೂ ಸೋಲುವುದಿಲ್ಲ ಎಂದು ಹೇಳಿದರು.

ಕೋಲಾರದಲ್ಲಿ ಸಿದ್ದರಾಮಯ್ಯ ಸೋಲಿಸಲು ರಣತಂತ್ರ: ದಲಿತ ಮತದಾರರ ಕರಪತ್ರ ಅಭಿಯಾನ

 

ಮತದಾರರು ಸೋಲು-ಗೆಲುವನ್ನು ನಿರ್ಧಾರ ಮಾಡುತ್ತಾರೆ. ಆದರೆ ಕಳೆದ ಚುನಾವಣೆಯಲ್ಲಿ ಒಂದು ಪಕ್ಷಕ್ಕೆ ಬಹುಮತವನ್ನು ನೀಡದೆ ಎಲ್ಲ ಪಕ್ಷಕ್ಕೂ ಮತವನ್ನು ನೀಡಿ ತಪ್ಪು ಮಾಡಿದ್ದಾರೆ. ಈಗ ಅವರ ತಪ್ಪು ಅರಿವು ಆಗಿದೆ. ಬಿಜೆಪಿ ಆಡಳಿತಕ್ಕೆ ಜನರು ಬೇಸತ್ತು ಹೋಗಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತರುತ್ತಾರೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಅಲೆ:

ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್‌ ಅಲೆಯು ದೊಡ್ಡದಾಗುತ್ತಿದೆ. 2023 ವಿಧಾನಸಭೆ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಅದರಲ್ಲಿ ಯಾವುದೇ ಅನುಮಾನ ಬೇಡ ಎಂದರು. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕವಾಗಿ ಅಧಿಕಾರವನ್ನು ನಡೆಸಿದ್ದಾರೆ ಎಂದು ಹೇಳಿದರು. ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ ಎಂಬ ಪ್ರಶ್ನೆಗೆ ಉತ್ತರಿಸಿದ ನಾರಾಯಣ ಅವರು, ಮೊದಲು ಕೂಸು ಹುಟ್ಟಲಿ, ಆನಂತರ ಮುಖ್ಯಮಂತ್ರಿ ಯಾರು ಎಂಬ ಹೆಸರನ್ನು ಹೈಕಮಾಂಡ್‌ ನಿರ್ಧರಿಸಲಿದೆ ಎಂದರು.

Praja Dhwani Yatre: ಸಿದ್ದರಾಮಯ್ಯ ಹೊಗಳುವ ಹಾಡನ್ನು ಹಾಡದಂತೆ ತಡೆದ ಡಿಕೆ ಸುರೇಶ್!

ಕಾಂಗ್ರೆಸ್‌ ಯುವ ಮುಖಂಡ ದೊಡ್ಡಬಸನಗೌಡ ಪಾಟೀಲ ಭಯ್ಯಾಪುರ, ಲಾಡ್ಲೇಮಷಾಕ್‌ ಯಲಬುರ್ಗಿ, ಚಿರಂಜೀವಿ ಹಿರೇಮಠ, ಶಿವರಾಜ ಕಟ್ಟಿಮನಿ, ಉಮೇಶ ಮಂಗಳೂರು, ಮೈನುದ್ದೀನ್‌ ಮುಲ್ಲಾ ಇದ್ದರು.

click me!