ವಿಶ್ವದಲ್ಲಿಯೇ ಭಾರತದೇಶ ಶ್ರೇಷ್ಠ ದೇಶವಾಗಿದೆ. ದೇಶದ ಏಳಿಗೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ನಾವೆಲ್ಲರೂ ದೇಶದ ಏಳಿಗೆಗೆ ಅವರೊಟ್ಟಿಗೆ ನಿಲ್ಲಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಕರೆ ನೀಡಿದರು.
ಕಾರವಾರ (ಜ.22) : ವಿಶ್ವದಲ್ಲಿಯೇ ಭಾರತದೇಶ ಶ್ರೇಷ್ಠ ದೇಶವಾಗಿದೆ. ದೇಶದ ಏಳಿಗೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ನಾವೆಲ್ಲರೂ ದೇಶದ ಏಳಿಗೆಗೆ ಅವರೊಟ್ಟಿಗೆ ನಿಲ್ಲಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಕರೆ ನೀಡಿದರು. ಬಿಜೆಪಿ ಕಾರವಾರ ಗ್ರಾಮೀಣ, ನಗರ ಮಂಡಲದ ಆಯೋಜಿಸಿದ್ದ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿದರು.
ಕೇಂದ್ರ, ರಾಜ್ಯ ಸರ್ಕಾರದ ಸಾಧನೆಯ ಹಾಗೂ ತಮ್ಮ ಕ್ಷೇತ್ರದ ವಿವಿಧ ಕೆಲವು ಪ್ರಮುಖ ಕಾರ್ಯಕ್ರಮಗಳು, ಸಾಧನೆಗಳು ಹಾಗೂ ಅಭಿವೃದ್ಧಿ ಯೋಜನೆಗಳ ಕಿರು ಮಾಹಿತಿಯ ಕರಪತ್ರವನ್ನು ಬಿಡುಗಡೆ ಮಾಡಿ, ಬಿಜೆಪಿ ಸದಸತ್ವ ಹೊಂದುವ 80000890009 ಸಂಖ್ಯೆಗೆ ಮಿಲ್ಡ್‌ಕಾಲ್ ನೀಡುವ ಬಗ್ಗೆ ಮಾಹಿತಿ ತಿಳಿಸುವ ಮೂಲಕ ಚಾಲನೆ ನೀಡಿದರು.
undefined
ಬಿಜೆಪಿ, ಜೆಡಿಎಸ್‌ಗೆ ಸೈದ್ಧಾಂತಿಕ ನೆಲೆಗಟ್ಟಿಲ್ಲ : ಎಚ್.ಸಿ. ಮಹದೇವಪ್ಪ
ಕೋವಿಡ್ ಸಂದರ್ಭದಲ್ಲಿ ದೇಶದ ಜನತೆಗೆ ಉಚಿತ ಲಸಿಕೆ ನೀಡಿದರು. ಆಕ್ಸಿಜನ್ ಅವಶ್ಯಕತೆ ಇದ್ದಾಗ ಆಮ್ಲಜನಕ ಘಟಕ ನಿರ್ಮಿಸಿ ಜನರ ಆರೋಗ್ಯ ರಕ್ಷಣೆ ಮಾಡಿದರು. ನಾವೆಲ್ಲರೂ ಸಾಮಾಜಿಕ ಕಳಕಳಿಯಿಂದ ಸೇವೆ ಮಾಡಬೇಕು. ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಸ ಗುನಗಿ, ಪ್ರಧಾನ ಕಾರ್ಯದರ್ಶಿ ದತ್ತಾರಾಮ್ ಬಾಂದೇಕರ, ನಗರ ಮಂಡಳ ಅಧ್ಯಕ್ಷ ನಾಗೇಶ ಕುರ್ಡೇಕರ, ನಗರ ಪ್ರಭಾರಿ ಆರತಿ ಗೌಡ, ಸುನಿತಾ ಸಾರಂಗ, ಗ್ರಾಪಂ ಅಧ್ಯಕ್ಷೆ ಪ್ರಿಯಾ ಗೌಡ, ಸದಸ್ಯ ಗಣರಾಜ್ ನಾರ್ವೇಕರ್ ಮೊದಲಾದವರು ಇದ್ದರು.
ಚುನಾವಣೆಯಲ್ಲಿ ಬಿಜೆಪಿಗೆ ವಿಜಯ ಶತಸಿದ್ಧ: ಶಾಸಕ ದಿನಕರ ಶೆಟ್ಟಿ
ಕುಮಟಾ: ಭಾರತೀಯ ಜನತಾ ಪಕ್ಷವು ರಾಜ್ಯಾದ್ಯಂತ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆಗೆ ಕುಮಟಾ ಮಂಡಲದಿಂದ ತಾಲೂಕಿನ ಕೋಡ್ಕಣಿಯ ಶ್ರೀವಿಶ್ವಂಭರ ಸಭಾಭವನದಲ್ಲಿ ಶನಿವಾರ ಚಾಲನೆ ನೀಡಲಾಯಿತು.
ಅಭಿಯಾನ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ, ಪ್ರಧಾನಿ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇನ್ನಿತರ ನಾಯಕರ ನೇತೃತ್ವದಲ್ಲಿ ಯಾವುದೇ ಚುನಾವಣೆಯಲ್ಲಿ ಬಿಜೆಪಿ ವಿಜಯ ಶತಸಿದ್ಧ ಎಂದರು.
ಉತ್ತರ ಕನ್ನಡದಲ್ಲಿ 75 ವರ್ಷವಾದ್ರೂ ವಿದ್ಯುತ್ ಸೌಲಭ್ಯ ಕಾಣದ ಹಳ್ಳಿಗಳು
ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿದರು. ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಮಂಡಲದ ಪ್ರಭಾರಿ ಶಿವಾನಿ ಶಾಂತಾರಾಮ, ನಿಕಟಪೂರ್ವ ಮಂಡಲಾಧ್ಯಕ್ಷ ಕುಮಾರ ಮಾರ್ಕಾಂಡೆ, ವಿಸ್ತಾರಕ ಡಾ. ಜಿ.ಜಿ. ಹೆಗಡೆ, ಪ್ರಮುಖರಾದ ವಿನೋದ ಪ್ರಭು, ನಾಗರಾಜ ನಾಯಕ ತೊರ್ಕೆ, ಜಿಲ್ಲಾ ಯುವಮೋರ್ಚಾ ಪ್ರಭಾರಿ ಎಂ.ಜಿ. ಭಟ್ಟ, ಮಹಾಶಕ್ತಿಕೇಂದ್ರದ ಅಧ್ಯಕ್ಷ ಮಹೇಶ ನಾಯಕ, ಅಭಿಯಾನದ ಪ್ರಮುಖ ಚೇತೇಶ ಶಾನಭಾಗ, ಶ್ರೀಧರ ನಾಯ್ಕ, ಅಣ್ಣಪ್ಪ ನಾಯ್ಕ, ಸುಬ್ರಾಯ ಜಾಲಿಸತ್ಗಿ, ಮಂಡಲದ ಪ್ರಧಾನ ಕಾರ್ಯದರ್ಶಿ ವಿನಾಯಕ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಪ್ರಶಾಂತ ನಾಯ್ಕ, ದೀಪಾ ಹಿಣಿ, ಪಲ್ಲವಿ ಮಡಿವಾಳ, ಜಗದೀಶ ಭಟ್ಟ, ಸಂತೋಷ ನಾಯ್ಕ, ಪಕ್ಷದ ಜಿಲ್ಲಾ ಹಾಗೂ ಮಂಡಲದ ವಿವಿಧ ಸ್ಥರಗಳ ಪದಾಧಿಕಾರಿಗಳು, ವಿವಿಧ ಮೋರ್ಚಾ ಹಾಗೂ ಪ್ರಕೋಷ್ಠಗಳ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.