ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಗೆಲವು ಸಾಧಿಸುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷ ಈಗಾಗಲೇ ಕಾಯೋನ್ಮುಖವಾಗಿದ್ದು, ವಿವಿಧ ಪಕ್ಷಗಳಿಂದ ಜೆಡಿಎಸ್‌ಗೆ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ತಿಳಿಸಿದರು.
ಚಳ್ಳಕೆರೆ (ಫೆ.8): ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಗೆಲವು ಸಾಧಿಸುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷ ಈಗಾಗಲೇ ಕಾಯೋನ್ಮುಖವಾಗಿದ್ದು, ವಿವಿಧ ಪಕ್ಷಗಳಿಂದ ಜೆಡಿಎಸ್‌ಗೆ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚುತ್ತಿದೆ. ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ನಿಂದಲೂ ಜನತೆ ಉತ್ತಮ ಆಡಳಿತವನ್ನು ಬಯಸುತ್ತಿದ್ದಾರೆಂಬುದಕ್ಕೆ ಇದು ಸಾಕ್ಷಿ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ತಿಳಿಸಿದರು. ಮಂಗಳವಾರ ನಗರದ 16ನೇ ವಾರ್ಡ್ ವ್ಯಾಪ್ತಿಯ ಜನತಾ ಕಾಲೋನಿಯ ಇಮ್ರಾನ್, ಶಾಕಾಲ್, ಹನೀಫ್, ಇಮಾಮ್, ಇರ್ಫಾನ್, ರೆಹಮಾನ್, ಲತೀಫ್, ಮೊಹಬೂಬ್, ಭಾಷ, ಖಾಜಾ, ಸುನಿ, ಜಲೀಲ್, ವೀರೇಶ್ ಲೋಕೇಶ್ ಮುಂತಾದವರು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದರು.
ನಿಯೋಜಿತ ಅಭ್ಯರ್ಥಿ ಎಂ.ರವೀಶ್‌ಕುಮಾರ್ ಮಾತನಾಡಿದರು. ಸೇರ್ಪಡೆ ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಸಿ.ಶ್ರೀನಿವಾಸ್, ವಿ.ವೈ.ಪ್ರಮೋದ್, ನಿರ್ಮಲಾ ಪ್ರಸನ್ನ, ತಿಪ್ಪಕ್ಕ, ಎಂ.ನಾಗವೇಣಿ ಹಾಗೂ ಪಕ್ಷದ ವಿವಿಧ ಮುಖಂಡರು ಪಾಲ್ಗೊಂಡಿದ್ದರು.
undefined
Assembly election: ಜೆಡಿಎಸ್ ಬಹುಮತದೊಡನೆ ಅಧಿಕಾರಕ್ಕೆ ಬರಲು ಸಹಕರಿಸಿ: ಶಾಸಕ ಕೆ. ಮಹದೇವ್ ಮನವಿ
ಮುಂದುವರಿದ ಎಚ್‌ಡಿಕೆ ‘ಹಾರ ದಾಖಲೆ’
ಪೀಣ್ಯ ದಾಸರಹಳ್ಳಿ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹಾರ ದಾಖಲೆ ಮುಂದುವರಿದಿದೆ. ಈವರೆಗೆ ಅವರು ಪ್ರತಿಷ್ಠಿತ ‘ಏಷ್ಯಾ ಬುಕ್ ಆಫ್ ರೆಕಾರ್ಡ್ಸ್’ ಹಾಗೂ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಗೌರವಕ್ಕೆ ಭಾಜನರಾಗಿದ್ದಾರೆ.
ಶಾಸಕ ಆರ್.ಮಂಜುನಾಥ್ ನೇತೃತ್ವದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪಂಚರತ್ನ ಯಾತ್ರೆಯಲ್ಲಿ 20ಕ್ಕೂ ಹೆಚ್ಚು ವಿಶಿಷ್ಟಹಾರಗಳನ್ನು ಕುಮಾರಸ್ವಾಮಿ ಅವರಿಗೆ ಹಾಕಲಾಯಿತು. ರಾಜ್ಯದಲ್ಲಿ ಸುಮಾರು 500 ವಿಶಿಷ್ಟಬಗೆಯ ಹಾರಗಳನ್ನು ಪಂಚರತ್ನ ರಥಯಾತ್ರೆಯಲ್ಲಿ ಕುಮಾರಸ್ವಾಮಿ ಅವರಿಗೆ ಅರ್ಪಿಸಿರುವುದು ವಿಶೇಷವಾಗಿದೆ.
ಬಾಗಲಗುಂಟೆಯಲ್ಲಿ ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಕಾಯಾಧ್ಯಕ್ಷ ಎಂ.ಮುನೇಗೌಡ ಅವರು ಬೆಳ್ಳಿ ಹಾರ ಹಾಕಲು ಮುಂದಾದಾಗ ಕುಮಾರಸ್ವಾಮಿ ಅವರು ಇಷ್ಟದ ದೇವರಿಗೆ ಸಮರ್ಪಿಸಲು ಸೂಚಿಸಿದರು. ದವಸ ಧಾನ್ಯ, ಹೊಲಿಗೆಯಂತ್ರ, ಅರಿಶಿನ ಕುಂಕುಮ, ಕ್ರಿಕೆಟ್ ಬಾಲ್, ಮೆಟ್ರೋ ರೈಲು ಮಾದರಿ, ಲೋಹ, ಕೈಗಾರಿಕಾ ಸಾಧನಗಳು ಸೇರಿ ಒಂದೇ ದಿನ 20ಕ್ಕೂ ಹೆಚ್ಚು ಹಾರಗಳನ್ನು ಕುಮಾರಸ್ವಾಮಿ ಅವರಿಗೆ ಹಾಕಿ ಜನತೆ ಸಂತಸ ಪಟ್ಟರು.
ರಾಜಕೀಯ ಜಿದ್ದಾಜಿದ್ದಿ: ಶುರುವಾದ ಪಕ್ಷಾಂತರ ಪರ್ವ..!
ದಾಸರಹಳ್ಳಿ ಕ್ಷೇತ್ರ ಜೆಡಿಎಸ್ ಕಾರ್ಯಧ್ಯಕ್ಷ ಮುನೇಗೌಡ, ಜೆಡಿಎಸ್ ಮುಖಂಡರಾದ ಅಂದಾನಪ್ಪ, ಮುನಿಸ್ವಾಮಿ, ದೇವೇಗೌಡ, ಗ್ಯಾಸ್ ರಾಜಣ್ಣ, ರುದ್ರೇಗೌಡ, ರಂಗಣ್ಣ ಇದ್ದರು.