ಕಾಂಗ್ರೆಸ್‌ ಚಿಹ್ನೆ ಹಸ್ತಕ್ಕೆ ಹೊಸ ರೇಖೆ ಜೋಡಣೆ: ಇದು ಇದ್ದರೆ ಪಕ್ಷ ಅಧಿಕಾರಕ್ಕೆ ಬರುತ್ತಂತೆ..!

By Kannadaprabha NewsFirst Published Feb 8, 2023, 9:47 AM IST
Highlights

ಅದೃಷ್ಟದ ರೇಖೆಯೆನಿಸಿದ ರಾಜರೇಖೆಯಂತೆ. ರಾಜರೇಖೆಯಿದ್ದವರು ಅಧಿಕಾರದ ಉನ್ನತ ಸ್ಥಾನದಲ್ಲಿರುತ್ತಾರೆ ಎಂಬುದು ಜ್ಯೋತಿಷಿಗಳ ನಂಬಿಕೆಯಂತೆ.
 

ಬೆಂಗಳೂರು(ಫೆ.08): ಕಾಂಗ್ರೆಸ್‌ ಪಕ್ಷದ ಅಭಯ ಹಸ್ತ ಚಿಹ್ನೆಗೆ ಈಗ ಹೊಸ ರೇಖೆ ಸೇರ್ಪಡೆಯಾಗಿದೆ. ಅದು ರಾಜರೇಖೆ!. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ದಕ್ಷಿಣ ಕರ್ನಾಟಕದಲ್ಲಿ ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆದ ವೇಳೆ ಅಭಯ ಹಸ್ತಕ್ಕೆ ಹೆಚ್ಚುವರಿಯಾಗಿ ಒಂದು ರೇಖೆಯನ್ನು ಸೇರ್ಪಡೆ ಮಾಡಲಾಗಿದ್ದು, ಇದು ಅದೃಷ್ಟದ ರೇಖೆಯೆನಿಸಿದ ರಾಜರೇಖೆಯಂತೆ. ರಾಜರೇಖೆಯಿದ್ದವರು ಅಧಿಕಾರದ ಉನ್ನತ ಸ್ಥಾನದಲ್ಲಿರುತ್ತಾರೆ ಎಂಬುದು ಜ್ಯೋತಿಷಿಗಳ ನಂಬಿಕೆಯಂತೆ. ಈ ನಂಬಿಕೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಚಿಹ್ನೆಯಾದ ಹಸ್ತಕ್ಕೆ ಹೊಸದಾಗಿ ಈ ರಾಜರೇಖೆಯನ್ನು ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ.

ಮೂಲ ಗೆರೆ ಜತೆ ಇನ್ನೊಂದು ಗೆರೆ:

ಪಕ್ಷದ ಮೂಲ ಚಿಹ್ನೆಯು ಮೂರು ಗೆರೆಗಳಿಂದ ಕೂಡಿದೆ. ಆದರೆ, ಪ್ರಜಾಧ್ವನಿ ಯಾತ್ರೆಗೆ ಸಿದ್ಧಪಡಿಸಲಾಗಿರುವ ಹಸ್ತದ ಚಿಹ್ನೆಯಲ್ಲಿ ಮೂರು ಗೆರೆಗಳ ಜತೆಗೆ ಲಂಬಾಕಾರದಲ್ಲಿ ಮತ್ತೊಂದು ರೇಖೆಯನ್ನು ಸೇರಿಸಲಾಗಿದೆ. ಈ ಗೆರೆ ತೋರು ಬೆರಳು ಮತ್ತು ಮಧ್ಯದ ಬೆರಳಿನ ಮಧ್ಯೆ ಕಂಡು ಬರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇದನ್ನು ‘ರಾಜರೇಖೆ’ ಎಂದು ಕರೆಯಲಾಗುತ್ತದೆ. ಈ ಗೆರೆ ಹಸ್ತದಲ್ಲಿದ್ದರೆ ಶ್ರೇಯಸ್ಸು ಎಂದು ಭಾವಿಸಲಾಗುತ್ತದೆ. ಹೀಗಾಗಿ, ಈ ರೇಖೆ ಅಳವಡಿಸಿದರೆ ಪಕ್ಷಕ್ಕೆ ಗೆಲುವು ನಿಶ್ಚಿತ ಎನ್ನುವ ಸಲಹೆ ಬಂದಿದೆಯಂತೆ.

Assembly election: ಅಭ್ಯರ್ಥಿ ಯಾರಾದರೂ ಕಾಂಗ್ರೆಸ್ ಗೆಲುವು ಮುಖ್ಯ: ಪ್ರಣತಿ ಶಿಂಧೆ

ಅಲ್ಲದೆ, ಸಂಖ್ಯಾಶಾಸ್ತ್ರದ ಪ್ರಕಾರವೂ 3 ಗೆರೆಯ ಬದಲು ನಾಲ್ಕು ಗೆರೆಗಳಿರಬೇಕೆಂಬ ಸಲಹೆ ಸಿಕ್ಕಿದೆಯಂತೆ. ಈ ಕಾರಣಕ್ಕೆ ಹೊಸ ರೇಖೆಯನ್ನು ಸೇರಿಸಲಾಗಿದೆ ಎನ್ನಲಾಗುತ್ತಿದೆ.

click me!