ಬಿಜೆಪಿ ಸರ್ಕಾರದಿಂದ ಸುಳ್ಳು ಹೇಳಿ ಜನತೆಯ ದಿಕ್ಕು ತಪ್ಪಿಸುವ ಯತ್ನ: ಡಿಕೆಶಿ

Published : Feb 08, 2023, 10:01 AM IST
ಬಿಜೆಪಿ ಸರ್ಕಾರದಿಂದ ಸುಳ್ಳು ಹೇಳಿ ಜನತೆಯ ದಿಕ್ಕು ತಪ್ಪಿಸುವ ಯತ್ನ: ಡಿಕೆಶಿ

ಸಾರಾಂಶ

ಅಚ್ಛೇದಿನ್‌ ಹೆಸರಲ್ಲಿ ಜನತೆಯನ್ನು ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಡಬಲ್‌ ಇಂಜಿನ್‌ ಸರ್ಕಾರ, ರಾಜ್ಯದ ಅಭಿವೃದ್ಧಿ ಕಡೆಗಣಿಸಿ ಭ್ರಷ್ಟಾಚಾರ ನಡೆಸಿದ್ದೇ ಬಹುದೊಡ್ಡ

ಮೊಳಕಾಲ್ಮುರು (ಫೆ.8) : ಅಚ್ಛೇದಿನ್‌ ಹೆಸರಲ್ಲಿ ಜನತೆಯನ್ನು ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಡಬಲ್‌ ಇಂಜಿನ್‌ ಸರ್ಕಾರ, ರಾಜ್ಯದ ಅಭಿವೃದ್ಧಿ ಕಡೆಗಣಿಸಿ ಭ್ರಷ್ಟಾಚಾರ ನಡೆಸಿದ್ದೇ ಬಹುದೊಡ್ಡ

ಸಾಧನೆಯಾಗಿದೆ. ಉತ್ತಮ ಆಡಳಿತಕ್ಕಾಗಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿ, ಭ್ರಷ್ಟಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Prajadhwani yatre: ಡಬಲ್ ಇಂಜಿನ್ ಸರ್ಕಾರದಿಂದ ಅಚ್ಛೇದಿನ್ ಇಲ್ಲ: ಡಿಕೆಶಿ ವಾಗ್ದಾಳಿ

ಪಟ್ಟಣದ ಬಸ್‌ ನಿಲ್ದಾಣದ ಆವರಣದಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಜಾಧ್ವನಿ ಯಾತ್ರೆಯ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದರು. ಪ್ರಧಾನಿ ಮೋದಿ ಕಪ್ಪು ಹಣವನ್ನು ದೇಶಕ್ಕೆ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರು. ಹಾಕುತ್ತೇವೆ. ಜನರ ಆದಾಯ ಜಾಸ್ತಿ ಮಾಡುತ್ತೇವೆ, 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆಂದು ಹೇಳಿದ್ದರು. ಆದರೆ ರಾಜ್ಯ ಮತ್ತು ಕೇಂದ್ರದ ಡಬಲ್‌ ಇಂಜಿನ್‌ ಸರ್ಕಾರ ನರೇಗಾ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ಅನುದಾನ ಕಡಿತಗೊಳಿಸಿ ಮಕ್ಕಳ ಶೂ ಮತ್ತು ಸ್ಕಾಲರ್‌ ಶಿಪ್‌ಗೂ ಕಡಿವಾಣ ಹಾಕಿದ್ದಾರೆ. ರಾಜ್ಯದಲ್ಲಿ 2 ಲಕ್ಷ ಕೋಟಿ ಭ್ರಷ್ಟಚಾರ ನಡೆದಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಪ್ರತಿ ಬಡ ಕುಟುಂಬದ ಮನೆಗೆ 200 ಯುನಿಟ್‌ ವಿದ್ಯುತ್‌ ಮತ್ತು ಪ್ರತಿ ಗೃಹಿಣಿಯರ ಖಾತೆಗೆ ಎರಡು ಸಾವಿರ ರು. ಹಾಕುವ ಭರವಸೆ ನೀಡಿದ್ದೇವೆ.ಆದರೆ ಬಿಜೆಪಿಯವರು ನಮ್ಮನ್ನು ಹಾಸ್ಯ ಮಾಡುತ್ತಿದ್ದಾರೆ. ಕೊಟ್ಟಮಾತಿನಂತೆ ನಡೆದುಕೊಳ್ಳುತ್ತೇವೆ. ಪ್ರತಿ ಕುಟುಂಬದ ಮಹಿಳೆಗೆ 2 ಸಾವಿರ ಹಾಕುವುದರಿಂದ ವರ್ಷಕ್ಕೆ 42 ಸಾವಿರ ಕೋಟಿ ಬೇಕಾಗ್ತುತದೆ. ಬಿಜೆಪಿಯವರ ನಡೆಸುತ್ತಿರುವ ಪರ್ಸೆಂಟೇಜ್‌ ಹಾವಳಿಗೆ ಕಡಿವಾಣ ಹಾಕಿ, ಹಣ ಹೊಂದಿಸಿ ರಾಜ್ಯದ ಅಭಿವೃದ್ಧಿ ಮಾಡಿ ತೋರಿಸುತ್ತೇವೆಂದು ಹೇಳಿದರು.

ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಮಾತನಾಡಿ, ಕಾಂಗ್ರೆಸ್‌ ಪಕ್ಷದಿಂದ ಹಮ್ಮಿಕೊಂಡಿರುವ ಪ್ರಜಾಧ್ವನಿ ಯಾತ್ರೆ ಕೇವಲ ಯಾತ್ರೆಯಲ್ಲ. ಜನರ ಕಷ್ಟಗಳನ್ನು ಆಲಿಸುವಂತ ಯಾತ್ರೆಯಾಗಿದೆ. ಬಿಜೆಪಿ ಸರ್ಕಾರ ಪರಿಶಿಷ್ಟಜಾತಿ ಮತ್ತು ಪಂಗಡ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ಮಾಡಿದ್ದೇವೆಂದು ಸುಳ್ಳು ಹೇಳುತ್ತಿದೆ.ಹೆಚ್ಚಳ ಮಾಡಿದ್ದೇವೆಂದು ಜನತೆಯನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಜಾರಿಯಾಗಬೇಕಾದರೆ ಸಂವಿಧಾನದ 9 ಶೆಡ್ಯೂಲ್‌ಗೆ ಸೇರಿಸಬೇಕು. ಅದು ಆಗಿಯೇ ಇಲ್ಲ ಎಂದರು.

ಶ್ರೀರಾಮುಲು ಅವರಿಂದ ಮೊಳಕಾಲ್ಮುರು ಅಭಿವೃದ್ಧಿ ಶೂನ್ಯ:

ಮೀಸಲಾತಿ ಮತ್ತು ಉಪಮುಖ್ಯಮಂತ್ರಿ ದಾಳ ಉರುಳಿಸಿ ಗೆದ್ದು ಮಂತ್ರಿಯಾದ ಬಿ.ಶ್ರೀರಾಮುಲು ಕ್ಷೇತ್ರದ ಅಭಿವೃದ್ಧಿಗಾಗಿ ವಿಧಾನಸೌಧದಲ್ಲಿ ಮಲಗದೆ ತವರು ಜಿಲ್ಲೆಯ ಅಭಿವೃದ್ಧಿಗಾಗಿ ಕೆನಾಲ್‌ ಪಕ್ಕದಲ್ಲಿ ಮಲಗಿದ್ದು ಹಾಸ್ಯಾಸ್ಪದ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಡಿದರು. ಅವರ ಅಧಿಕಾರಾವಧಿಯಲ್ಲಿ ಮೊಳಕಾಲ್ಮುರು ಕ್ಷೇತ್ರದ ಅಭಿವೃದ್ಧಿ ಶೂನ್ಯವಾಗಿದೆ. ಸರ್ಕಾರಿ ಬಸ್‌ಗಳು,ಆಸ್ಪತ್ರೆಯಲ್ಲಿ ಸೂಕ್ತ ಸೌಲಭ್ಯ ಕಲ್ಪಿಸಲಿಲ್ಲ. ಸರ್ಕಾರದ ಸಚಿವರಾಗಿ ಬಳ್ಳಾರಿಯ ಕೆನಾಲ್‌ ದುರಸ್ಥಿಗಾಗಿ ಧರಣಿ ಮಾಡಿದ್ದು ಬಹುದೊಡ್ಡ ಸಾಧನೆ. ಕೊಟ್ಟಕುದುರೆಯನು ಏರದವನು ದೀರನು ಅಲ್ಲ ಶೂರನೂ ಅಲ್ಲ ಎಂದರು.

ತುರುವನೂರು ಜೆಡಿಎಸ್‌ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ದೌರ್ಜನ್ಯ

ಸಂದರ್ಭದಲ್ಲಿ ಪಕ್ಷದ ಕಾರ್ಯಧ್ಯಕ್ಷ ಸಲೀಂ ಅಹಮದ್‌, ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ, ಮಾಜಿ ಸಚಿವ ಟಿ.ಬಿ.ಜಯಂಚಂದ್ರ, ಮಾಜಿ ಸಂಸದ ಉಗ್ರಪ್ಪ,ಶಾಸಕ ಟಿ.ರಘುಮೂರ್ತಿ, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್‌, ಮಾಜಿ ಶಾಸಕರಾದ ಡಿ.ಸುಧಾಕರ್‌, ಎಸ್‌.ತಿಪ್ಪೇಸ್ವಾಮಿ, ವಿಧಾನ ಪರಿಷತ್‌ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್‌, ಮುಖಂಡ ಡಾ.ಬಿ.ಯೋಗೇಶ ಬಾಬು, ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಕಲೀಂ ಉಲ್ಲಾ, ನಾಗೇಶ್‌ ರೆಡ್ಡಿ, ಭಕ್ತರಾಮೇಗೌಡ, ಓ.ಶಂಕರ್‌, ಎಸ್‌.ಜಯಣ್ಣ, ಕಾರೇಹಳ್ಳಿ ಶ್ರೀನಿವಾಸ್‌, ಗೀತಾನಂದಿನಿ ಗೌಡ, ಬಿ.ಟಿ.ನಾಗಭೂಷಣ, ಮುಂಡ್ರಿಗಿ ನಾಗರಾಜ, ಹಿರೇಹಳ್ಳಿ ಮಲ್ಲೇಶ,ಬಿ.ಟಿ.ನಾಗಭೂಷಣ,ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ