ಪಂಚರತ್ನ ಯಾತ್ರೆಯಲ್ಲಿ ಒಮ್ಮೆಯಾದರೂ ಭಾಗವಹಿಸಲು ಅವಕಾಶ ಮಾಡಿಕೊಡುವಂತೆ ಭಗವಂತನಲ್ಲಿ ನಾನು ಬೇಡಿಕೊಂಡಿದ್ದೆನು. ಈಗ ಆ ಮಹದಾಸೆ ಈಡೇರಿದೆ ಎಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಹೇಳಿದರು.
ಮೈಸೂರು (ಮಾ.26): ಕುಮಾರಸ್ವಾಮಿ ಹಮ್ಮಿಕೊಂಡಿದ್ದ ಪಂಚರತ್ನ ಯಾತ್ರೆಯಲ್ಲಿ ಒಮ್ಮೆಯಾದರೂ ಭಾಗವಹಿಸಲು ಅವಕಾಶ ಮಾಡಿಕೊಡುವಂತೆ ಭಗವಂತನಲ್ಲಿ ನಾನು ಬೇಡಿಕೊಂಡಿದ್ದೆನು. ಈಗ ಆ ಮಹದಾಸೆ ಈಡೇರಿದೆ ಎಂದು ಮಾಜಿ ಪ್ರಧಾನಮಂತ್ರಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.
ಮೈಸೂರಿನಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭವನ್ನು ನೀವು ರೂಪಿಸಿದ್ದೀರಿ. ಕುಮಾರಸ್ವಾಮಿ ತಮ್ಮ ಆರೋಗ್ಯ ಲೆಕ್ಕಿಸದೇ ರಾಜ್ಯ ಸಂಚಾರ ಮಾಡಿದ್ದಾರೆ. ಅವರು ರಾಜ್ಯ ಸುತ್ತಾಡಿದ್ದನ್ನು ನೊಡಿ ಕಣ್ಣು ತುಂಬಿಕೊಂಡಿದ್ದೇನೆ. ನನ್ನ ಆರೋಗ್ಯ ಸರಿಯಾಗಿದ್ದರೆ ಪಂಚರತ್ನ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದೆನು. ಭಗವಂತನು ಈ ಕಾರ್ಯಕ್ರಮದಲ್ಲಿ ಒಮ್ಮೆಯಾದರೂ ಭಾಗಿಯಾಗುವಂತೆ ಮಾಡಪ್ಪಾ ಎಂದು ಬೇಡಿಕೊಂಡಿದ್ದೆನು ಎಂದರು.
ನನ್ನನ್ನು ಕಟ್ಟಿಹಾಕಲು ಯಾರಿಂದಲೂ ಆಗುವುದಿಲ್ಲ: ಎಚ್.ಡಿ.ಕುಮಾರಸ್ವಾಮಿ
ಭಗವಂತ ನನ್ನ ಆಸೆ ಈಡೇರಿಸಿದ್ದಾನೆ: ಇನ್ನು ನನ್ನ ಆಸೆಯನ್ನು ಕೇಳಿಕೊಂಡ ಭಗವಂತ ನನ್ನನ್ನು ನಿಮ್ಮಮುಂದೆ ನಿಲ್ಲಿಸಿದ್ದಾನೆ. ನಾನು ಭಗವಂತನ ಆಶೀರ್ವಾದದ ಭಾಗವಾಗಿದ್ದೇನೆ. ಆದರೆ, ನನ್ನ ಶಕ್ತಿ ನೀವು ಆಗಿದ್ದೀರಿ. ಚುನಾವಣೆಯಲ್ಲಿ ಮತ್ತೆ ಜನಸೇವೆಯ ಮಾಡುವ ಅವ ಕಾಶ ಸಿಗುತ್ತದೆ ಎಂಬುದು ನಿರೀಕ್ಷೆಯಿದೆ. ನಾವು ದುಡಿದು ತಿನ್ನುವ ಜನ. ಈ ಪಂಚರತ್ನ ಯಾತ್ರೆ ನಾವು ಮುಂದೆ ಯಾವ ರೀತಿ ದುಡಿಯುತ್ತೇವೆ ಎಂದು ತಿಳಿಸುವುದಕ್ಕೆ ವೇದಿಕೆಯಾಗಿದೆ. ಕುಮಾರಸ್ವಾಮಿ ಅಧಿಕಾರಕ್ಕೂ ಬರುವ ಮುನ್ನ ಯಾವ ಭರವಸೆಯನ್ನು ಕೊಟ್ಟಿದ್ದಾರೋ ಅದನ್ನು ಈಡೇರಿಸಿದ್ದಾರೆ. ರೈತರ ಸಾಲವನ್ನು ಮನ್ನಾ ಮಾಡಿದ್ದಾರೆ ಎಂದರು.
ದೇಶವನ್ನು ಪಕ್ಷಗಳು ಒಡೆದು ಆಳುತ್ತಿವೆ: ನಮ್ಮ ಪಕ್ಷ ಶ್ರಮ ಮತ್ತು ದುಡಿಮೆ ಮೇಲೆ ನಿಂತಿದೆ. ನಾನು ರೈತನ ಮಗ ನೀವು ರೈತರ ಮಕ್ಕಳು. ನಾವು ಬೆವರು ಸುರಿಸಿ ಅನ್ನ ತಿನ್ನುತ್ತೇವೆ. ಬಣ್ಣ ಬಣ್ಣದ ಮಾತುಗಳಿಂದ ಮೇಲೆ ಬರುವುದಿಲ್ಲ. ಜಾತಿ ನಡುವೆ ವೈಷಮ್ಯ ಬಿತ್ತಿ ಆಡಳಿತ ಹಿಡಿಯುವುದಿಲ್ಲ. ಮೊದಲು ಬ್ರಿಟೀಷರು ಒಡೆದು ಆಳುತ್ತಿದ್ದರು. ಈಗ ಕೆಲವು ಪಕ್ಷಗಳು ಅಂತಹ ನೀತಿ ಅನುಸರಿಸುತ್ತಿವೆ. ಮಹಾನ್ ನಾಯಕರು ಆಳಿದ ನಮ್ಮ ದೇಶದಲ್ಲಿ ಸುಳ್ಳು ಕೆಲವು ದಿನ ಮಾತ್ರ ನಡೆಯಬಹುದು. ಮುಮದೊಂದು ದಿನ ಸತ್ಯದ ಅರಿವು ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಆರ್‌ಎಸ್ ಮಿತ್ರ ಪಕ್ಷ ಜೆಡಿಎಸ್‌ಗೆ ಬೆಂಬಲ ಘೋಷಿಸಿದ ತೆಲಂಗಾಣ ಸಿಎಂ ಕೆಸಿಆರ್!
ಮಕ್ಕಳು, ಮೊಮ್ಮಕ್ಕಳಿಗೆ ಜನರರಾಗಿ ದುಡಿಯುವಂತೆ ಸಲಹೆ: ನನ್ನ 70 ವರ್ಷಗಳ ಅಧಿಕಾರದಲ್ಲಿ ಎಂದಿಗೂ ಕೊಟ್ಟ ಭರವಸೆ ಈಡೇರಿಸಲು ವಿಫಲವಾಗಿಲ್ಲ. ಒಂದು ವೇಳೆ ನಾನು ಕೊಟ್ಟ ಭರವಸೆ ಈಡೇರಿಸಲಿದ್ದಾಗ ರಾಜಿನಾಮೆ ಕೊಟ್ಟಿದ್ದೇನೆ. ನಾನು ಎಲ್ಲ ಕಾಲಕ್ಕೂ ಅಭಿವೃದ್ಧಿ ಮಂತ್ರ ಜಪಿಸಿದ್ದೇನೆ. ನಾನು ಬೆರಳೆಣಿಕೆ ವರ್ಷಗಳಷ್ಟು ಮಾತ್ರ ಅಧಿಕಾರದಲ್ಲಿ ಇದ್ದು, ದೇವರಾಣೆಗೂ ನಾನು ಜನರ ಅಭಿವೃದ್ಧಿಗೆ ದುಡಿದಿದ್ದೇನೆ. ನನ್ನ ಮಕ್ಕಳು, ಮೊಮ್ಮಕ್ಕಳಿಗೂ ಇದನ್ನೇ ಹೇಳಿದ್ದೇನೆ. ಅವರೂ ಕೂಡ ರಾಜ್ಯ ಮತ್ತು ದೇಶದ ಮಟ್ಟದಲ್ಲಿ ದುಡಿಮೆ ಹಾದಿಯಲ್ಲಿಯೇ ನಡೆಯುತ್ತಿದ್ದಾರೆ ಎಂದರು.