ಅಥಣಿ ಹಾಲಿ ಶಾಸಕ ಮಹೇಶ ಕುಮಟಳ್ಳಿಗೆ ಟಿಕೆಟ್ ಕೊಡಿಸೋಕೆ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಸಿ ಎಂ ಬೊಮ್ಮಾಯಿ ಭೇಟಿ ಮಾಡಿ ಮಹೇಶ್ ಗೆ ಅಥಣಿ ಟಿಕೆಟ್ ಬುಕ್ ಮಾಡುವ ಪ್ರಯತ್ನ ಮಾಡಿದ್ದಾರೆ.
ಚಿಕ್ಕೋಡಿ (ಮಾ.26): ಅಥಣಿ ಹಾಲಿ ಶಾಸಕ ಮಹೇಶ ಕುಮಟಳ್ಳಿಗೆ ಟಿಕೆಟ್ ಕೊಡಿಸೋಕೆ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಈ ಸಂಬಂಧ ಅಮಿತ್ ಶಾ ಭೇಟಿ ಮಾಡಿದ್ದ ರಮೇಶ್ ಇಂದು ಹುಬ್ಬಳ್ಳಿಯಲ್ಲಿ ಸಿ ಎಂ ಬೊಮ್ಮಾಯಿ ಭೇಟಿ ಮಾಡಿ ಮಹೇಶ್ ಗೆ ಅಥಣಿ ಟಿಕೆಟ್ ಬುಕ್ ಮಾಡುವ ಪ್ರಯತ್ನ ಮಾಡಿದ್ದಾರೆ. ರಾಜ್ಯ ಸಾರ್ವತ್ರಿಕ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈಗಾಗಲೇ ಕಾಂಗ್ರೆಸ್ ಅರ್ಧದಷ್ಟು ಆಕಾಂಕ್ಷಿಗಳ ಟಿಕೆಟ್ ಫೈನಲ್ ಮಾಡಿದೆ. ಸದ್ಯ ಬಿಜೆಪಿಯಲ್ಲೂ ಸಹ ಟಿಕೆಟ್ ವಿಚಾರ ಸಾಕಷ್ಟು ಸದ್ದು ಮಾಡ್ತಿದೆ. ಅದರಲ್ಲೂ ಅಥಣಿ ಟಿಕೆಟ್ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಧ್ಯೆ ಬಿಗ್ ಫೈಟ್ ನಡೀತಿದೆ. ಇಷ್ಟು ದಿನ ಸೈಲೆಂಟ್ ಆಗಿದ್ದ ಸವದಿ ಸಮಾವೇಶವನ್ನು ಮಾಡಿ ಜನಾಭಿಪ್ರಾಯ ಪಡೆದು ನಾನು ಟಿಕೆಟ್ ಕೇಳಬೇಕೋ ಬೇಡವೋ ಎಂಬ ನಿರ್ಧಾರ ಮಾಡ್ತೆನೆ ಎಂದಿದ್ದರು.
ಸವದಿ ಈ ಹೇಳಿಕೆ ರಮೇಶ್ ಹಾಗೂ ಮಹೇಶ್ ಕುಮಟಳ್ಳಿಯವರನ್ನ ಕಂಗೆಡಿಸಿದೆ ಅಂತಾನೇ ಹೇಳಲಾಗ್ತಿದೆ. ಮಹೇಶ ಕುಮಟಳ್ಳಿಗೆ ಟಿಕೆಟ್ ಕೈ ತಪ್ಪಬಾರದು ಎಂದು ರಮೇಶ್ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಈಗಾಗಲೇ ಈ ಸಂಬಂಧ ಬಿಜೆಪಿ ವರಿಷ್ಠ ಅಮಿತ್ ಶಾ ಗೆ ಭೇಟಿ ಆಗಿ ಬಂದಿರುವ ರಮೇಶ್ ಇಂದು ಹುಬ್ಬಳ್ಳಿಯ ಆದರ್ಶ ನಗರದಲ್ಲಿರುವ ಸಿ ಎಂ ನಿವಾಸಕ್ಕೂ ಭೇಟಿ ನೀಡಿ ಸಿ ಎಂ ಜತೆಗೆ 1 ಗಂಟೆಗೂ ಹೆಚ್ಚಿನ ಕಾಲ ಚರ್ಚೆ ಮಾಡಿದ್ದಾರೆ.
ಸಂವಿಧಾನಕ್ಕೆ ವಿರುದ್ಧವಾಗಿ ಮುಸ್ಲಿಮರು 4% ಮೀಸಲಾತಿ ಪಡೆದುಕೊಂಡಿದ್ರು: ಪ್ರತಾಪ್
ಅಥಣಿ ಟಿಕೆಟ್ ಮಹೇಶಗೆ ಫೈನಲ್ ಮಾಡಬೇಕು ಅಂತ ಹಠ ಹಿಡಿದಿರುವ ರಮೇಶ್ ಗೆ ಟಿಕೆಟ್ ಘೋಷಣೆಯ ವಿಚಾರದ ಬಗ್ಗೆ ಯಾವುದೇ ಮಾತು ಮಾತನಾಡದಿದ್ದರೂ ಸಹ ಆಲ್ ರೆಡಿ ಮಹೇಶ್‌ಗೆ ಟಿಕೆಟ್ ಸಿಗೋದು ಫಿಕ್ಸ್ ಇದೆ ಆದರೆ ಕನ್ಪರ್ಮೇಷನ್ ಇರಲಿಲ್ಲ ಅದರ ಬಗ್ಗೆಯೇ ಮಾತನಾಡಿದ್ದೇನೆ ಅಂತ ಹೇಳಿದರು.
ವರುಣಾದಲ್ಲಿ ಸ್ಫರ್ಧೆ ಪಕ್ಷ ತೀರ್ಮಾನ ಮಾಡಿದ ಬಳಿಕ ಹೇಳುತ್ತೇನೆ: ವಿಜಯೇಂದ್ರ
ಒಟ್ಟಿನಲ್ಲಿ ಇಬ್ಬರೂ ನಾಯಕರ ಮಧ್ಯೆ ಟಿಕೆಟ್ ಫೈಟ್ ಜೋರಾಗಿಯೇ ನಡೆಯುತ್ತಿದ್ದು ಅಥಣಿಯಲ್ಲಿ ಜನಾಭಿಪ್ರಾಯ ಪಡೆದು ನಾನು ಟಿಕೆಟ್ ಕೇಳಬೇಕೋ ಬೇಡವೊ ಎಂದು ನಿರ್ಧಾರ ಮಾಡ್ತಿನಿ ಅಂತ ಸವದಿ ಹೇಳ್ತಿದ್ರೆ ಇತ್ತ ಮಹೇಶ್‌ಗೆ ಟಿಕೆಟ್ ಸಿಗದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಅಂತ ರಮೇಶ್ ಹೇಳ್ತಿದ್ದಾರೆ. ಈ ಆರದ ಗಾಯಕ್ಕೆ ಹೈ ಕಮಾಂಡ್ ಯಾವ ಮುಲಾಮು ಹುಚ್ಚುತ್ತೆ ಕಾದು ನೋಡಬೇಕು.