ನಮ್ಮ ವಿರೋಧಿಗಳು ಏನೇ ಮಾತನಾಡಲಿ, ಕಾಂಗ್ರೆಸ್‌ಗೆ ಹೆಚ್ಚಿನ ಮತದಾನ ಮಾಡುವ ಮೂಲಕ ಮತದಾರರು ಅವರಿಗೆ ಉತ್ತರ ನೀಡಲಿದ್ದಾರೆ ಎಂದು ಅಥಣಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ಹೇಳಿದರು.
ಅಥಣಿ (ಏ.29) : ನಮ್ಮ ವಿರೋಧಿಗಳು ಏನೇ ಮಾತನಾಡಲಿ, ಕಾಂಗ್ರೆಸ್‌ಗೆ ಹೆಚ್ಚಿನ ಮತದಾನ ಮಾಡುವ ಮೂಲಕ ಮತದಾರರು ಅವರಿಗೆ ಉತ್ತರ ನೀಡಲಿದ್ದಾರೆ ಎಂದು ಅಥಣಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ಹೇಳಿದರು.
ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿ, ನಾನು 20 ವರ್ಷಗಳ ಹಿಂದೆ ಅಥಣಿಯಲ್ಲಿ ಭಾಜಪ ಪಕ್ಷದ ಯಾವುದೇ ಅಧಿಕಾರವಿದ್ದ ವ್ಯಕ್ತಿ ಇಲ್ಲದ ಸಮಯದಲ್ಲಿ ಪಕ್ಷವನ್ನು ಸಂಘಟನೆ ಮಾಡಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಅಧಿಕಾರಕ್ಕಿಂತ ಹೆಚ್ಚು ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಲವಾರು ಶಾಸಕರನ್ನು ಗೆಲ್ಲಿಸಿದ್ದೇನೆ. ಇಂದು 2023ರ ಚುನಾವಣೆಯಲ್ಲಿ ಪಕ್ಷ ಟಿಕೆಟ್ ಕೊಡದೇ ನನಗೆ ಮೋಸ ಮಾಡಿದೆ. ಪಕ್ಷಕ್ಕೆ ನಾನು ಯಾವುದೇ ಮೋಸ ಮಾಡಿಲ್ಲ. ಪಕ್ಷದಲ್ಲಿರುವವರೇ ನನಗೆ ಮೋಸ ಮಾಡಿದ್ದ ಕಾರಣ ಇಂದು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ. ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ವಿರೋಧಿಗಳಿಗೆ ಉತ್ತರ ನೀಡಬೇಕು ಎಂದರು.
Karnataka election 2023: ಮತಬೇಟೆಗೆ ಸ್ಟಾರ್ ನಾಯಕರ ವಾರ್!
ತೆಲಸಂಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ ಪೂಜಾರಿ ಮಾತನಾಡಿ, ರಮೇಶ ಜಾರಕಿಹೋಳಿಯವರು ಲಕ್ಷ್ಮಣ ಸವದಿಯವರು ಗಂಡಸ್ತನ ಇದ್ದರೇ, ಆರಿಸಿ ಬಾ ಎಂದು ಸವಾಲು ಹಾಕುತ್ತಿದ್ದು, ನಿಮ್ಮ ಗಂಡಸ್ತನ ಬಗ್ಗೆ ಇಡೀ ದೇಶದ ಜನರು ನೋಡಿದ್ದಾರೆ. ಗಂಡಸ್ತನದಿಂದಲ್ಲೇ ನಿಮ್ಮ ಮಂತ್ರಿ ಸ್ಥಾನ ಹೊಯಿತು. ಚುನಾವಣೆಯಲ್ಲಿ ಮತದಾನ ಮಾಡುವವರು ಮತದಾರರು, ಇದರಲ್ಲಿ ಗಂಡಸ್ತನದ ಮಾತಿಗೆ ಅಥಣಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಗಂಡಸ್ತನವನ್ನು ತೋರಿಸಲಿದ್ದಾರೆ ಎಂದರು.
ಈ ವೇಳೆ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಸದಾಶಿವ ಬುಟಾಳೆ, ಅಥಣಿ ಬ್ಲಾಕ್ ಅಧ್ಯಕ್ಷ ಸಿದ್ದಾರ್ಥ ಸಿಂಗೆ, ಶಾಮ ಪೂಜಾರಿ, ಬಸವರಾಜ ಬುಟಾಳೆ ಮಾತನಾಡಿದರು. ರಮೇಶ ಸಿಂದಗಿ, ಡಿ.ಬಿ.ಠಕ್ಕಣ್ಣವರ, ಮಲ್ಲೇಶ ಸವದಿ, ಸುಶೀಲಕುಮಾರ ಪತ್ತಾರ, ಸಂಗಯ್ಯ ಪೂಜಾರಿ, ನೂರಅಹ್ಮದ್ ಡೊಂಗರಗಾಂವ, ಸದಾಶಿವ ಹರಪಾಳೆ, ಚಿದಾನಂದ ತಳಕೇರಿ, ತುಕಾರಾಮ ದೇವಕಾತೆ, ಅಶೋಕ ಕೊಡಗ, ಶ್ರೀಕಾಂತ ಆಲಗೂರ, ಮೈನುದ್ದೀನ್ ಡೊಂಗರಗಾಂವ, ಕೇದಾರಿ ವಳಸಂಗ, ನಿಜಲಿಂಗ ಬಡಕೆ ಸೇರಿದಂತೆ ಅನೇಕರು ಇದ್ದರು.
ಲಕ್ಷ್ಮಣ ಸವದಿಗೆ ಜೈನ ಸಮೂದಾಯ ಬೆಂಬಲ
ನೂರಕ್ಕೆ 95 ಪ್ರತಿಶತ ಜೈನ ಸಮುದಾಯ(Jain community) ಈ ಬಾರಿ ನನ್ನ ಕೈ ಬಲಪಡಿಸಲಿದೆ. ನಿಮ್ಮ ಸಮುದಾಯದ ಈ ಋುಣವನ್ನು ಸಂಫäರ್ಣವಾಗಿ ತೀರಿಸಲು ನನಗೆ ಸಾಧ್ಯವಿಲ್ಲ. ಆದರೆ, ಸ್ವಲ್ಪ ಭಾರವನ್ನು ಕಡಿಮೆ ಮಾಡಿಕೊಳ್ಳುವ ಪ್ರಮಾಣಿಕ ಪ್ರಯತ್ನವನ್ನು ನಾನು ಮಾಡುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ(Laxman savadi) ಹೇಳಿದರು.
ಪಟ್ಟಣದ ಸೊಸಿಯಲ್ ಕ್ಲಬ್‌ನಲ್ಲಿ ನಡೆದ ಜೈನ ಸಮುದಾಯದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಇಷ್ಟುಪ್ರಮಾಣದಲ್ಲಿ ನಿಮ್ಮ ಬೆಂಬಲವನ್ನು ನಿರೀಕ್ಷೆ ಮಾಡಿರಲಿಲ್ಲ. ನಿಮ್ಮ ಈ ಅಭಿಮಾನಕ್ಕೆ ನಾನು ಮನಸೋತಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ನನಗೆ ಕಷ್ಟದ ಕಾಲ ಇದೆ. ಈ ಸಂದರ್ಭದಲ್ಲಿ ನಿಮ್ಮ ಸಮುದಾಯದ ಬೆಂಬಲ ನನಗೆ ಇನ್ನಷ್ಟುಬಲವನ್ನು ತಂದಿದೆ ಎಂದರು.
ಜೈನ ಸಮುದಾಯದ ಮುಖಂಡ ಅರುಣ ಯಲಗುದ್ರಿ ಮಾತನಾಡಿ, ಅಥಣಿ ಮತಕ್ಷೇತ್ರದಲ್ಲಿ ಜೈನ ಸಮುದಾಯ ಚುನಾಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಹಸ್ತದ ಚಿಹ್ನೆಯನ್ನು ನೀಡಿದ್ದು ಜೈನ ಮುನಿಗಳು. ಮುನಿಗಳು ನೀಡಿರುವ ಈ ಹಸ್ತದ ಗುರುತಿಗೆ ಎಲ್ಲರೂ ಮತ ನೀಡುವುದಾಗಿ ಭರವಸೆ ನೀಡಿ ಸದಾ ನಮ್ಮ ಸಮುದಾಯ ಸವದಿ ಪರವಾಗಿ ಇರಬೇಕು ಎಂದು ಮನವಿ ಮಾಡಿದರು.
ಬೆಳಗಾವಿ: ಕುಡಚಿಯಲ್ಲಿಂದು ಪ್ರಧಾನಿ ಮೋದಿ ಪ್ರಚಾರ Rally
ಈ ವೇಳೆ ರಾಜೂ ನಾಡಗೌಡ, ಎ.ಸಿ.ಪಾಟೀಲ, ಶ್ರೀಕಾಂತ ಅಸ್ಕಿ, ಶಾಂತು ನಂದೇಶ್ವರ, ಅರುಣ ಯಲಗುದ್ರಿ, ನೇಮಿನಾಥ ಯಕ್ಷಂಬಿ, ಬಾಬಾಸಾಬ್ ಪಾಟೀಲ, ನೇಮಿನಾಥ ನಂದಗಾಅವ, ಸಿ.ಬಿ.ಪಡನಾಡ, ಅನಂತ ಬಸರಿಖೋಡಿ, ಅಮರ ದುರ್ಗಣ್ಣವರ, ನ್ಯಾಯವಾದಿ ಕಲ್ಲಪ್ಪ ವನಜೊಳ, ಮುತ್ತು ಹಿಡಕಲ…, ಎಸ್.ವಿ.ಯಂಡೊಳ್ಳಿ, ಕಾಂಗ್ರೆಸ್ ಬೆಂಬಲಿತ ಜೈನ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.