ಡ್ರಗ್‌ ಮಾಫಿಯಾ ಮಟ್ಟಹಾಕಲು ಸರ್ಕಾರ ಮುಂದಾಗಲಿ: ಬಿ.ವೈ.ವಿಜಯೇಂದ್ರ

By Kannadaprabha News  |  First Published Dec 20, 2024, 11:59 PM IST

ಡ್ರಗ್ ಮಾಫಿಯಾದ ಹಿಂದಿರುವ ಬಲಾಢ್ಯರು, ದೇಶದ್ರೋಹಿಗಳನ್ನು ಮಟ್ಟಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು. 


ಬೆಳಗಾವಿ (ಡಿ.20): ಡ್ರಗ್ ಮಾಫಿಯಾದ ಹಿಂದಿರುವ ಬಲಾಢ್ಯರು, ದೇಶದ್ರೋಹಿಗಳನ್ನು ಮಟ್ಟಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು. ನಗರದಲ್ಲಿ ವಾಣಿಜ್ಯ ಮತ್ತು ವ್ಯಾಪಾರ ಪ್ರಕೋಷ್ಠದ ವತಿಯಿಂದ ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಸರ್ಕಾರವು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕು. ಕೇವಲ ಸಣ್ಣಪುಟ್ಟ ವ್ಯಕ್ತಿಗಳನ್ನು ಬಂಧಿಸಿದರೆ ಸಾಲದು ಎಂದು ಒತ್ತಾಯಿಸಿದರು.

ಅಲ್ಲಿ ಇಲ್ಲಿ ಸಣ್ಣಪುಟ್ಟ ಡ್ರಗ್, ಗಾಂಜಾ ಮಾರಾಟಗಾರರನ್ನು ಬಂಧಿಸಿ ಆಮೇಲೆ ಜಾಮೀನಿನಲ್ಲಿ ಬಿಡುತ್ತಿದ್ದಾರೆ. ಸಮಸ್ಯೆಗಳ ಮೂಲಕ್ಕೆ ಹೋಗುತ್ತಿಲ್ಲ. ಎಲ್ಲಿಂದ ಸರಬರಾಜಾಗುತ್ತಿದೆ ಎಂದು ವಿವರ ಪಡೆಯುವುದು ಪೊಲೀಸರಿಗೆ ಕಷ್ಟದ ಕೆಲಸವಲ್ಲ ಎಂದ ಅವರು, ರಾಜ್ಯದ ಪ್ರತಿ ಜಿಲ್ಲೆ ಮತ್ತು ತಾಲೂಕಿನಲ್ಲಿ ಮಾದಕವಸ್ತು ಕುರಿತಂತೆ ಜಾಗೃತಿ ಮೂಡಿಸುವ ಕೆಲಸವೂ ಆಗಬೇಕಿದೆ. ಆಗ ಮಾತ್ರ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತದೆ. ಇಲ್ಲವಾದರೆ ಕುಂಭಕರ್ಣ ನಿದ್ರೆಯಲ್ಲಿರುವ ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಬಿಗಿ ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದರು.

Tap to resize

Latest Videos

undefined

ನಮ್ಮ ಸರ್ಕಾರ ಬಂದಾಗ ಕಾಂಗ್ರೆಸ್‌ಗೆ ಸಿ.ಟಿ.ರವಿಯವರ ಲೆಕ್ಕವನ್ನು ಚುಪ್ತ ಮಾಡಲಾಗುತ್ತದೆ: ಕೆ.ಜಿ.ಬೋಪಯ್ಯ

ಈ ವೇಳೆ ಭಾ.ಜ.ಪಾ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ, ಶಾಸಕರಾದ ಧೀರಜ್ ಮುನಿರಾಜು, ಹರೀಶ್ ಪೂಂಜಾ, ರಾಜ್ಯ ವ್ಯಾಪಾರ ವಾಣಿಜ್ಯ ಪ್ರಕೋಷ್ಠ ಸಂಚಾಲಕ ವಿಜಯಕುಮಾರ ಕೊಡಗನೂರ, ಸಹ ಸಂಚಾಲಕರಾದ ಭವಾನಿ ಮೋರೆ, ರಾಜ್ಯ ಸಮಿತಿ ಸದಸ್ಯರಾದ ಜ್ಯೋತಿ ಶೆಟ್ಟಿ, ಪಿ.ಆರ್.ಸಂಜಯ್, ಚನ್ನಬಸಪ್ಪ ಹೊಸುರ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಈರಣ್ಣ ಅಂಗಡಿ, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಶರತ್, ಜಿಲ್ಲಾ ಮಾಧ್ಯಮ ಪ್ರಮುಖ್ ಸಚಿನ್ ಕಡಿ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಯಲ್ಲೇಶ್ ಕೊಲಕಾರ, ಚೇತನ್ ಕತ್ತಿ, ಭರತ ಕುಲಕರ್ಣಿ ಉಪಸ್ಥಿತರಿದ್ದರು.

ಮಾಣಿಪ್ಪಾಡಿ ವರದಿ ಒಪ್ಪಲ್ಲ ಅಂದರೆ ಹೇಗೆ?: ಅನ್ವರ್ ಮಾಣಿಪ್ಪಾಡಿ ಅವರ ವರದಿಯನ್ನು ಸಿಬಿಐ ತನಿಖೆ ಮಾಡಿಸುವಂತೆ ಸೋಮವಾರ ಮುಖ್ಯಮಂತ್ರಿಗೆ ಸದನದಲ್ಲಿ ಸವಾಲು ಹಾಕಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ವಿವಿಧ ಸಂಘಟನೆಗಳ ಅಹವಾಲು ಸ್ವೀಕರಿಸಿದ ನಂತರ ಬೆಳಗಾವಿ ಸುವರ್ಣ ಗಾರ್ಡನ್​ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಅನ್ವರ್ ಮಾಣಿಪ್ಪಾಡಿ ಅವರು ನನ್ನ ವಿಚಾರದಲ್ಲಿ ಏನು ಹೇಳಿದ್ದಾರೆ ಎಂಬುದನ್ನು ಒಪ್ಪುತ್ತೀರಿ. ಆದರೆ ಅನ್ವರ್ ಮಾಣಿಪ್ಪಾಡಿಯವರ ವರದಿ ಒಪ್ಪಲ್ಲ ಅಂದರೆ ಹೇಗೆ? ಡಬಲ್ ಸ್ಟಾಂಡರ್ಡ್ ಯಾಕೆ ಎಂದು ಪ್ರಶ್ನಿಸಿದರು.

ಸಿ ಮತ್ತು ಡಿ ಭೂಮಿ ಹಕ್ಕುಪತ್ರಕ್ಕಾಗಿ ಮಡಿಕೇರಿಯಲ್ಲಿ ಬೀದಿಗಿಳಿದ ಸಾವಿರಾರು ರೈತರು

ನನ್ನ ಮೇಲಿರುವ ಆರೋಪ, ಅನ್ವರ್ ಮಾಣಿಪ್ಪಾಡಿಯವರ ವರದಿ, ಯಾರ್‍ಯಾರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಲ್ಲವೂ ತನಿಖೆಯಾಗಲಿ. ವಕ್ಫ್​ನಲ್ಲಿ ಲೂಟಿ ಹೊಡೆದಿರುವುದು ಕಾಂಗ್ರೆಸ್​ ಮುಖಂಡರು. ಹಾಗಾಗಿ ಸಮಗ್ರ ತನಿಖೆಯಾಗಬೇಕು ಎಂದು ನಾವು ಕೂಡ ಒತ್ತಾಯಿಸಿದ್ದೇವೆ ಎಂದು ಹೇಳಿದರು. ಮಲ್ಲಿಕಾರ್ಜುನ ಖರ್ಗೆ 600 ಎಕರೆ ಕಬಳಿಸಿದ್ದಾರೆ ಎಂಬ ಆರೋಪದ ಕುರಿತು ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರಿಗೆ ಅದರ ಬಗ್ಗೆ ಗೊತ್ತಿದೆ. ಅವರೇ ಮಾತನಾಡಲಿ ಎಂದರು.

click me!