ನಮ್ಮ ಸರ್ಕಾರ ಬಂದಾಗ ಕಾಂಗ್ರೆಸ್‌ಗೆ ಸಿ.ಟಿ.ರವಿಯವರ ಲೆಕ್ಕವನ್ನು ಚುಪ್ತ ಮಾಡಲಾಗುತ್ತದೆ: ಕೆ.ಜಿ.ಬೋಪಯ್ಯ

Published : Dec 20, 2024, 08:11 PM IST
ನಮ್ಮ ಸರ್ಕಾರ ಬಂದಾಗ ಕಾಂಗ್ರೆಸ್‌ಗೆ ಸಿ.ಟಿ.ರವಿಯವರ ಲೆಕ್ಕವನ್ನು ಚುಪ್ತ ಮಾಡಲಾಗುತ್ತದೆ: ಕೆ.ಜಿ.ಬೋಪಯ್ಯ

ಸಾರಾಂಶ

ಅಧಿವೇಶನದ ವೇಳೆ ಶಾಸಕರನ್ನು ಬಂಧಿಸಬೇಕಾದರೆ ಸ್ಪೀಕರ್ ಅವರ ಅನುಮತಿ ಬೇಕು. ಸ್ಪೀಕರ್ ಅನುಮತಿ ಇಲ್ಲದೆ ಬಂಧಿಸಿದ್ದೇಕೆ? ಇದು ಕಾನೂನು ಬಾಹಿರ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಬಂಧನಕ್ಕೆ ಮಾಜಿ ಸ್ಪೀಕರ್ ಹಾಗೂ ವಿರಾಜಪೇಟೆ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಡಿ.20): ಅಧಿವೇಶನದ ವೇಳೆ ಶಾಸಕರನ್ನು ಬಂಧಿಸಬೇಕಾದರೆ ಸ್ಪೀಕರ್ ಅವರ ಅನುಮತಿ ಬೇಕು. ಸ್ಪೀಕರ್ ಅನುಮತಿ ಇಲ್ಲದೆ ಬಂಧಿಸಿದ್ದೇಕೆ? ಇದು ಕಾನೂನು ಬಾಹಿರ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಬಂಧನಕ್ಕೆ ಮಾಜಿ ಸ್ಪೀಕರ್ ಹಾಗೂ ವಿರಾಜಪೇಟೆ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅವಹೇಳನ ಮಾಡಿದ್ದಾರೆಂದು ಸದನದಲ್ಲಿ ಚರ್ಚೆ ಆಗುತ್ತಿತ್ತು. ಈ ವೇಳೆ ಎರಡು ಪಕ್ಷದವರು ಪರಸ್ಪರ ಪ್ರತಿಭಟಿಸಿದ್ದಾರೆ. ಇದೇ ವೇಳೆ ಸಿ. ಟಿ ರವಿ ಅವರನ್ನು ಕೊಲೆಗಡುಕ ಅಂದ್ರು ಎನ್ನಲಾಗಿದೆ. 

ಇದರಿಂದ ಸಿ ಟಿ. ಅವರು ಮಹಿಳೆಯರಿಗೆ ಅವಮಾನ ಆಗುವ ರೀತಿ ಮಾತನಾಡಿದ್ದಾರೆ ಎನ್ನುತ್ತಿದ್ದಾರೆ. ಅದೇ ಕಾರಣಕ್ಕೆ ಸಿ.ಟಿ. ರವಿ ಅವರನ್ನು ಬಂಧಿಸಬಹುದೇ. ಏನಾದರೂ ಸ್ಪೀಕರ್ ತೆಗೆದುಕೊಳ್ಳುವ ತೀರ್ಮಾನ ಅಂತಿಮ ಅಲ್ಲವೆ.? ನಾನು ಸ್ಪೀಕರ್ ಅವರನ್ನು ಕೇಳಿದೆ. ಸಿ. ಟಿ. ರವಿ ಆ ರೀತಿ ಮಾತನಾಡಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದರು. ಆದರೂ ಸಂಜೆ ಆರು ಗಂಟೆಯ ವೇಳೆ ಬಂಧಿಸಿ, ರಾತ್ರಿ ಇಡೀ ಅವರನ್ನು ನಾಲ್ಕೈದು ಜಿಲ್ಲೆಗಳಿಗೆ ಸುತ್ತಾಡಿಸಲಾಗಿದೆ. ಸಿ. ಟಿ. ರವಿ ಅವರೇನು ದೇಶ ದ್ರೋಹ ಕೆಲಸ ಮಾಡಿದ್ದಾರಾ, ಇಲ್ಲವೆ ಅವರು ರೌಡಿಸಂ ಮಾಡಿದ್ದಾರಾ.? ಮಂತ್ರಿಗಳಾಗಿ ಕೆಲಸ ಮಾಡಿದವರು, ಈಗಲೂ ಶಾಸಕರಾಗಿದ್ದಾರೆ. 

ಬೆಳಗಾವಿ ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ನಾರಾಯಣಸ್ವಾಮಿ

ಒಬ್ಬ ಶಾಸಕನ ಮೇಲೆ ಈ ರೀತಿ ದುಂಡಾವರ್ತನೆ ಮಾಡಿದರೆ, ಇನ್ನು ರಾಜ್ಯದಲ್ಲಿ ಯಾರಿಗೆ ರಕ್ಷಣೆ ಕೊಡುತ್ತಾರೆ ಎಂದು ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ನವರು ಬಹುಮತ ಇದೆ ಅಂತ ಆಡಿದ್ದೇ ಆಟ ಎಂದುಕೊಂಡಿದ್ದಾರೆ. ಆದರೆ ಕಾಲಚಕ್ರ ಇದೇ ರೀತಿ ಇರುವುದಿಲ್ಲ, ಇವರಿಗೆ ಇದು ತಿರುಗು ಬಾಣ ಆಗುತ್ತದೆ. ನಾವು ಸಿ. ಟಿ. ರವಿ ಅವರೊಂದಿಗೆ ಇದ್ದೇವೆ ಎಂದರು.  ಇನ್ನು ಬಿಜೆಪಿ ಎಂಎಲ್ಸಿ ಸುಜಾ ಕುಶಾಲಪ್ಪ ಮಾತನಾಡಿ ಮೊದಲು ಬಿಹಾರದಲ್ಲಿ ಗೂಂಡಾರಾಜ್ಯ ಇದೆ ಎನ್ನುತ್ತಿದ್ದೆವು. ಆದರೆ ಕಳೆದ ಒಂದುವರೆ ವರ್ಷಗಳಿಂದ ರಾಜ್ಯದಲ್ಲಿ ಗೂಂಡಾಗಿರಿ ಸಂಸ್ಕೃತಿ ಶುರುವಾಗಿದೆ. 

ಬಿಜೆಪಿಯವರನ್ನು ಈ ರೀತಿ ಕೇಸ್ ಹಾಕಿ ಮಟ್ಟ ಹಾಕುತ್ತೇವೆ ಎಂದುಕೊಂಡಿದ್ದರೆ ಅದು ಸಾಧ್ಯವಿಲ್ಲ. ವಾಜಪೇಯಿ ಅವರು ಒಬ್ಬರೇ ಎಂಪಿ ಇರುವಾಗಲೂ ಬಿಜೆಪಿ ಹೋರಾಟ ಮಾಡಿಕೊಂಡು ಬಂದ ಪಕ್ಷ. ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿ ಈಗ ರಾಷ್ಟ್ರದಲ್ಲಿ ಮೋದಿಯವರ ಸರ್ಕಾರ ಇದೆ. ಮುಂದೆ ರಾಜ್ಯದಲ್ಲೂ ನಮ್ಮ ಸರ್ಕಾರ ಆಡಳಿತಕ್ಕೆ ಬರುತ್ತದೆ. ಆಗ ಸಿ. ಟಿ. ರವಿ ಅವರಿಗೆ ಮಾಡಿರುವುದನ್ನು ನಮ್ಮ ಸರ್ಕಾರ ಕಾಂಗ್ರೆಸ್ ಗೆ ಲೆಕ್ಕ ಚುಪ್ತಾ ಮಾಡುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಎಂಎಲ್ ಸಿ ಸುಜಾ ಕುಶಾಲಪ್ಪ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಶಾಸಕ ಅಪ್ಪಚ್ಚು ರಂಜನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮಾತನಾಡಿ ಸಿ. ಟಿ ರವಿ ಅವರ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾರೆ. 

ಈಗೀಗ ಮಧ್ಯರಾತ್ರಿ ಗುಡ್‌ನೈಟ್ ಮೆಸೇಜ್ ಬಂದರೂ ಬೆಚ್ಚಿ ಬೀಳ್ತೀನಿ: ಕಿಚ್ಚ ಸುದೀಪ್ ಮನದಾಳದ ಮಾತು

ವಿಧಾನಸೌಧದಲ್ಲಿ ಮಾತನಾಡುವುದಕ್ಕೆಲ್ಲಾ ಗೂಂಡಾಗಿರಿ ಮಾಡಿದರೆ, ಹೊಡೆದಾಟ ಮಾಡಿದರೆ ಅದನ್ನು ಸಹಿಸಲಾಗಲ್ಲ. ಸುವರ್ಣ ಸೌಧದಲ್ಲಿ ಶಾಸಕರಿಗೆ ರಕ್ಷಣೆ ಇಲ್ಲ, ಅಂದ ಮೇಲೆ ರಾಜ್ಯದಲ್ಲಿ ಜನರಿಗೆ ರಕ್ಷಣೆ ಇದೆಯಾ. ರವಿ ಅವರನ್ನು ಕೊಂದು ಬಿಡ್ತಿದ್ದರು ಎಂದು ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಹೇಳುತ್ತಾರೆ. ಹಾಗಾದರೆ ಸಿ. ಟಿ. ರವಿ ಅವರನ್ನು ಕೊಲೆ ಮಾಡಲು ಅವರು ಪ್ಲಾನ್ ಮಾಡಿದ್ರಾ.? ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮಾಜಿ ಶಾಸಕ ಅಪ್ಪಚ್ಚು ರಂಜನ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಗೂಂಡಾಗಳ ರೀತಿಯಲ್ಲಿ ಕಾನೂನನ್ನು ಕೈಗೆತ್ತಿಕೊಂಡಿದ್ದಾರೆ. ಇದಕ್ಕೆಲ್ಲಾ ಕಾಂಗ್ರೆಸ್ ನ ಕುಮ್ಮಕ್ಕು ಇದೆ. ಅದರಲ್ಲೂ ಲಕ್ಷ್ಮಿ ಹೆಬ್ಬಾಳ್ಕರ್ ಕಡೆ ಬಹಳ ಗೂಂಡಾಗಳಿದ್ದಾರೆ ಎಂದು ಅಪ್ಪಚ್ಚು ರಂಜನ್ ಆಕ್ರೋಶ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಎಚ್‌ಡಿಕೆ ಮನುವಾದಿ ಆಗಿದ್ದಾರೆ ಎಂದ ಸಿದ್ದು: ಸಿದ್ದರಾಮಯ್ಯ ಮಜಾವಾದಿ ಎಂದ ಎಚ್‌ಡಿಕೆ
ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ