ಮುಧೋಳ ಕ್ಷೇತ್ರದ ಜನತೆಯ ಋುಣ ಮರೆಯಲಾರೆ: ಮಾಜಿ ಡಿಸಿಎಂ ಗೋವಿಂದ ಕಾರಜೋಳ

By Kannadaprabha News  |  First Published Jan 26, 2024, 10:03 PM IST

ಜನ್ಮದಿನ ಆಚರಿಸಕೊಳ್ಳಬಾರದೆಂದು ನಿರ್ಧರಿಸಿದ್ದೆ. ಆದರೆ, ಅಭಿಮಾನಿಗಳು, ಕಾರ್ಯಕರ್ತರು ಸರಳವಾಗಿ ಆಚರಿಸುವುದಾಗಿ ಹೇಳಿದ್ದರಿಂದ ಅವರು ನನ್ನ ಮೇಲಿಟ್ಟಿರುವ ಅತಿಯಾದ ಅಭಿಮಾನ ಮತ್ತು ಪ್ರೀತಿಯಿಂದ ಹುಟ್ಟುಹಬ್ಬದ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು. 


ಮುಧೋಳ (ಜ.26): ಜನ್ಮದಿನ ಆಚರಿಸಕೊಳ್ಳಬಾರದೆಂದು ನಿರ್ಧರಿಸಿದ್ದೆ. ಆದರೆ, ಅಭಿಮಾನಿಗಳು, ಕಾರ್ಯಕರ್ತರು ಸರಳವಾಗಿ ಆಚರಿಸುವುದಾಗಿ ಹೇಳಿದ್ದರಿಂದ ಅವರು ನನ್ನ ಮೇಲಿಟ್ಟಿರುವ ಅತಿಯಾದ ಅಭಿಮಾನ ಮತ್ತು ಪ್ರೀತಿಯಿಂದ ಹುಟ್ಟುಹಬ್ಬದ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು. 

ಸ್ಥಳೀಯ ಹೌಸಿಂಗ್ ಕಾಲೋನಿಯ ಉದ್ಯಾನದಲ್ಲಿ ಆಯೋಜಿಸಿದ್ದ ತಮ್ಮ 74ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನನ್ನನ್ನು ಮುಧೋಳ ಮತಕ್ಷೇತ್ರದ ಜನತೆ ಆರ್ಶೀವಾದ ಮಾಡಿ ಶಾಸಕನಾಗಿ, ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ ಸಮಾಜ ಸೇವೆ ಮತ್ತು ಕ್ಷೇತ್ರದ ಜನತೆಯ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಅವರೆಗೆ ಚಿರಋಣಿಯಾಗಿರುತ್ತೇನೆ ಎಂದರು. ನಾನು ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿ ಮಂಟೂರ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದೆ. ಈ ವರ್ಷ ಪ್ರಾಯೋಗಿಕವಾಗಿ ಕಾರ್ಯಾರಂಭಗೊಂಡಿದೆ.  ಏತ ನೀರಾವರಿ ಯೋಜನೆಯ ಮೂಲಕ ಕೃಷಿ ಭೂಮಿಗೆ ಹರಿಯುವ ನೀರನ್ನು ರೈತರು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಬದುಕು ಬಂಗಾರ ಮಾಡಿಕೊಳ್ಳಬೇಕೆಂದು ಶುಭ ಹಾರೈಸಿದರು. 

Latest Videos

undefined

ಸ್ವಾಗತ, ಅಭಿನಂದನೆ: ವಿಶ್ವಗುರು ಬಸವಣ್ಣನವರನ್ನು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಣೆ ಮಾಡಿರುವುದು ಸ್ವಾಗತಾರ್ಹವಾದದು. ಈ ಒಳ್ಳೆಯ ಕೆಲಸ ಮಾಡಿರುವ ಕಾಂಗ್ರೆಸ್ ಸರ್ಕಾರಕ್ಕೆ ಅಭಿನಂದಿಸುವುದಾಗಿ ತಿಳಿಸಿದರು. ಸರಳತೆ, ಸಾಮಾಜಿಕ ನ್ಯಾಯ ಪ್ರತಿಪಾದಕ, ಹೋರಾಟಗಾರ, ಹಿಂದುಳಿದ ವರ್ಗದ ಜನನಾಯಕ, ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್‌ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುವುದಾಗಿ ಹೇಳಿದ ಅವರು, ದಿ.ದೇವರಾಜ ಅರಸು ಅವರಿಗೆ ಮರಣೋತ್ತರ ನಾಗರೀಕ ಸೇವಾ ಪ್ರಶಸ್ತಿ ಸಿಗಬೇಕೆಂದು ಆಶಿಸಿದರು. ಜನ್ಮದಿನ ನಿಮಿತ್ತ ಗೋವಿಂದ ಕಾರಜೋಳ ಗಣಪತಿ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಗೋಶಾಲೆಗೆ ಭೇಟಿ ನೀಡಿದರು, ಅಭಿಮಾನಿಗಳು ರಕ್ತದಾನ ಶಿಬಿರ ನಡೆಸಿಕೊಟ್ಟರು.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮುಂದಿನ ಕೆಡಿಪಿ ಸಭೆ: ಸಚಿವ ಜಮೀರ್‌ ಅಹ್ಮದ್‌

ಬಿಜೆಪಿ ಮುಖಂಡರಾದ ಕೆ.ಆರ್. ಮಾಚಪ್ಪನವರ, ಹನುಮಂತ ತುಳಸಿಗೇರಿ, ಡಾ.ರವಿ ನಂದಗಾಂವ, ಕುಮಾರ ಹುಲಕುಂದ, ಕಲ್ಲಪ್ಪಣ್ಣ ಸಬರದ, ರಾಜು ಯಡಹಳ್ಳಿ, ಭೀಮನಗೌಡ ಪಾಟೀಲ, ಅರುಣ ಕಾರಜೋಳ, ಶ್ರೀಕಾಂತ ಗುಜ್ಜನ್ನವರ, ಪ್ರಕಾಶ ವಸ್ತ್ರದ, ಲಕ್ಷ್ಮಣ ಚಿನ್ನಣ್ಣವರ, ಸದಾಶಿವ ಇಟಕನ್ನ ವರ, ನಾಗಪ್ಪ ಅಂಬಿ, ಬಸವರಾಜ ಮಳಲಿ, ಸೋನಾಪ್ಪಿ ಕುಲಕರ್ಣಿ, ಎಂ.ಎಸ್. ಹಂಚಿನಾಳ, ಅಶೋಕ ಪಟ್ಟಣಶೆಟ್ಟಿ, ಸಂಗಣ್ಣ ಕಾತರಕಿ, ಸದಾಶಿವ ಚಿಕ್ಕೂರ, ಶಂಕರ ನಾಯಕ, ಈರಯ್ಯ ಗೋವಿಂದಪೂರಮಠ, ಶ್ರೀಶೈಲ ಚಿನ್ನಣ್ಣವರ, ರವಿ ಮಾಚಪ್ಪನವರ, ಮುಕುಂದ ನಿಂಬಾಳಕರ, ವಿ.ಪಿ. ಹುಣಶಿಕಟ್ಟಿ, ಚಿದಾನಂದ ಪಂಚಕಟ್ಟಿಮಠ, ವಿ.ಜಿ.ಲೆಂಕಣ್ಣವರ, ಗಿರೀಶ ಲೆಂಕಣ್ಣವರ ಸೇರಿದಂತೆ ಸಾವಿರಾರು ಸಂಖ್ಯೆಯ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು, ಹಿತೈಷಿಗಳು ಗೋವಿಂದ ಕಾರಜೋಳ ಅವರಿಗೆ ಹುಟ್ಟುಹಬ್ಬ ಶುಭ ಕೋರಿದರು.

click me!