ರಾಜ್ಯದಲ್ಲಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನಂತರ ವಿಪಕ್ಷಗಳಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಅದಕ್ಕೇ ಇಲ್ಲಸಲ್ಲದ ಆಟ ಹೂಡುತ್ತಿದ್ದಾರೆ, ಅಂತಹ ಯಾವ ಆಟಗಳಿಂದಲೂ ಸರಕಾರಕ್ಕೆ ಧಕ್ಕೆ ಆಗೋದಿಲ್ಲವೆಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದ್ದಾರೆ.
ಕಲಬುರಗಿ (ಆ.13): ರಾಜ್ಯದಲ್ಲಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನಂತರ ವಿಪಕ್ಷಗಳಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಅದಕ್ಕೇ ಇಲ್ಲಸಲ್ಲದ ಆಟ ಹೂಡುತ್ತಿದ್ದಾರೆ, ಅಂತಹ ಯಾವ ಆಟಗಳಿಂದಲೂ ಸರಕಾರಕ್ಕೆ ಧಕ್ಕೆ ಆಗೋದಿಲ್ಲವೆಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ತಮಗೆ 40 ಸೀಟ್ ಬರುತ್ತೆ ಅಂತ ನಂಬಿಕೆ ಇಟ್ಟುಕೊಂಡಿದ್ದರು. ಫಲಿತಾಂಶ ನಂತರ ಯಾರಾದ್ರೂ ಕಾಲ್ ಮಾಡಿ ಕರಿತಾರೆ ಅಂತ ಸಿಂಗಾಪೂರನಲ್ಲಿ ಕೂತಿದ್ರು, ಆದ್ರೆ ಅಂತಹ ಸನ್ನಿವೇಶ ಸೃಷ್ಟಿ ಆಗಲಿಲ್ಲ. ಅವರಿಗೆ ಬರೀ ಅಧಿಕಾರ ಬೇಕು ಅದಕ್ಕಾಗಿ ಜಾತ್ಯಾತೀತ ನಿಲುವು ಪಕ್ಕಕ್ಕೆ ಇಡ್ತಾರೆ.
ಅವರಿಗೆ ಅಧಿಕಾರ ಇಲ್ಲದಿದ್ರೆ ಸಹಿಸಿಕೊಳ್ಳಲು ಕಷ್ಟ ಎಂದು ಟೀಕಿಸಿದರು. ಹಿಂದೆ ಜನ ಅವಕಾಶ ಕೊಟ್ಟಾಗ ಜನಪರ ಕೆಲಸ ಮಾಡಲು ಅವರಿಂದ ಆಗಲಿಲ್ಲ, ಈಗ ನೋಡಿದ್ರೆ ನಮ್ಮನ್ನು ನೋಡಿ ಸಹಿಸಿಕೊಳ್ಳಲು ಆಗ್ತಿಲ್ಲ, ನಮ್ಮ ಸರಕಾರ ಬೀಳುತ್ತೆ ಬೀಳುತ್ತೆ ಅಂತಾನೆ ಇದಾರೆ ಎಂದು ಲೇವಡಿ ಮಾಡಿದರು. ಕೇಂದ್ರ ಸರ್ಕಾರಕ್ಕೆ ಸಡ್ಡು ಹೊಡೆದ ಏಕೈಕ ಸಿಎಂ ಅಂದ್ರೆ ಅದು ಸಿದ್ರಾಮಯ್ಯ. ಏನಾದ್ರೂ ಮಾಡಿ ಅವರಿಗೆ ಬ್ರೇಕ್ ಹಾಕಲು ಯಾವುದೇ ಸಂಬಂಧ ಇಲ್ಲದ ವಿಚಾರ ತೆಗೆಯುತ್ತಿದ್ದಾರೆ. ಸಿದ್ರಾಮಯ್ಯ ರಾಜೀನಾಮೆ ಕೊಡಬೇಕು ಎನ್ನುವುದಾದ್ರೆ ನಿರ್ಮಲಾ ಸಿತಾರಾಮ್ ಸಹ ರಾಜೀನಾಮೆ ಕೊಡಬೇಕಲ್ವಾ ? ಎಂದು ಪ್ರಶ್ನಿಸಿದರು.
ಬಿಜೆಪಿ- ಜೆಡಿಎಸ್ ಪಕ್ಷದವರು ಪಾದಯಾತ್ರೆ ಮೂಲಕ ಪಾಪ ವಿಮೋಚನೆ ಮಾಡಿಕೊಂಡಿದ್ದಾರೆ: ಎಂ.ಲಕ್ಷ್ಮಣ್
ಸಿಎಂ ಚಾರಿತ್ರ್ಯ ವಧೆ ಮಾಡೋದಕ್ಕಾಗಿ ವಿಪಕ್ಷಗಳ ಮುಖಂಡರು ಎಲ್ಲರೂ ಸೇರಿಕೊಂಡು ಮೊಸರಲ್ಲಿ ಕಲ್ಲು ಗುಡುಕುವ ಕೆಲಸ ಮಾಡುತ್ತಿದ್ದಾರೆ. ಪ್ರಾಸಿಕ್ಯೂಶನ್ ಗೆ ಅನುಮತಿ ಕೇಳಬೇಕಾದವರು ತನಿಖೆ ನಡೆಸುತ್ತಿರುವ ಎಜೆನ್ಸಿಯವರು. ಆದ್ರೆ ಇಲ್ಲಿ ಬೇರಾರೋ ಖಾಸಗಿ ವ್ಯಕ್ತಿ ರಾಜ್ಯಪಾಲರಿಗೆ ಮನವಿ ಕೊಟ್ಟರೆ ಅರ್ಥ ಇರಲ್ಲ. ರಾಜಕೀಯ ದುರುದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ. ನಮ್ಮ ಪಕ್ಷ ಒಗ್ಗಟ್ಟಾಗಿ ಸಿಎಂ ಸಿದ್ರಾಮಯ್ಯ ಅವರ ಬೆನ್ನಿಗೆ ಇದ್ದೇವೆಂದು ಸುಧಾಕರ್ ಹೇಳಿದರು.
ಪ್ರಕರಣ ದಾಖಲಿಸಲು ಸೂಚನೆ: ಕಲಬುರಗಿಯಲ್ಲಿರುವ ಗುಲ್ಬರ್ಗ ವಿವಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಡಿಗ್ರಿ ವ್ಯಾಲ್ಯೂವೇಷನ್ ಮಾಡಿರುವ ವಿಚಾರವಾಗಿ ಪತ್ರಕಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು ಆ ಅಂಗನವಾಡಿ ಕಾರ್ಯಕರ್ತೆಯ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚಿಸಿದ್ದೇನೆಂದರು. ಮಲ್ಲಾ ಬಿ ಅಂಗನವಾಡಿ ಕಾರ್ಯಕರ್ತೆ ಸಂಗೀತಾ ಎನ್ನುವವರು ಡಿಗ್ರಿ ವ್ಯಾಲ್ಯೂವೇಷನ್ ಮಾಡಿರುವ ಸಂಗತಿ ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ವಿಸಿ ಅವರಿಗೆ ಸೂಚಿಸಿದ್ದೇನೆ.
Kalaburagi: ಚಿನ್ನದ ಪದಕ ಪಡೆಯಲು ಬಂದವಳ ಕೈ ಸೇರಿತ್ತು ವಿಷಾದ ಪತ್ರ: ಕಣ್ಣೀರಿಟ್ಟ ವಿದ್ಯಾರ್ಥಿನಿ ರೋಶನಿ!
ಇದರಿಂದ ವಿವಿಯ ಘನತೆ ಗೌರವಕ್ಕೆ ಧಕ್ಕೆ ಆಗುತ್ತದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಬಿಗಿ ಕ್ರಮ ಕೈಗೊಳ್ಳಲಾಗುವುದು. ಇದರಲ್ಲಿ ಯಾರ್ಯಾರು ತಪ್ಪಿತಸ್ಥರೋ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.