ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ : ಪ್ರಲ್ಹಾದ್ ಜೋಶಿ ವಿಶ್ವಾಸ

By Kannadaprabha News  |  First Published Apr 30, 2023, 7:55 AM IST

: ಸೂರ್ಯ-ಚಂದ್ರರು ಇರುವುದು ಎಷ್ಟುಸತ್ಯವೋ ಪೂರ್ವ ಕ್ಷೇತ್ರದಲ್ಲಿ ಕಮಲ ಅರಳುವುದು ಅಷ್ಟೇ ಸತ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.


ಹುಬ್ಬಳ್ಳಿ (ಏ.29) : ಸೂರ್ಯ-ಚಂದ್ರರು ಇರುವುದು ಎಷ್ಟುಸತ್ಯವೋ ಪೂರ್ವ ಕ್ಷೇತ್ರದಲ್ಲಿ ಕಮಲ ಅರಳುವುದು ಅಷ್ಟೇ ಸತ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ(Pralhad joshi) ವಿಶ್ವಾಸ ವ್ಯಕ್ತಪಡಿಸಿದರು.

ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕ್ರಾಂತಿಕಿರಣ(Dr Krantikiran BJP Candidate) ಪರವಾಗಿ ಶನಿವಾರ ವಾರ್ಡ್‌ ನಂ. 73ರ ಕೃಷ್ಣಾಪುರ ಓಣಿಯಲ್ಲಿ ಆಯೋಜಿಸಿದ್ದ ಬಹಿರಂಗ ಸಭೆ ಹಾಗೂ ನೇಕಾರ ನಗರದಿಂದ ಜಂಗ್ಲಿಪೇಟೆ ವೃತ್ತದ ವರೆಗೆ ಹಮ್ಮಿಕೊಂಡಿದ್ದ ಬೃಹತ್‌ ರೋಡ್‌ ಶೋದಲ್ಲಿ ಪಾಲ್ಗೊಂಡು ಮಾತನಾಡಿದರು.

Tap to resize

Latest Videos

undefined

ಈ ಚುನಾವಣೆ ಶೆಟ್ಟರ್‌ ವರ್ಸಸ್‌ ಜೋಶಿ ಎಂಬಂತಾಗಿ : ಶೆಟ್ಟರ್ ವಿಶ್ಲೇಷಣೆ

ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಅಭಿವೃದ್ಧಿಗೆ ಒತ್ತು ನೀಡಿ ಸಾಕಷ್ಟುಜನಪರ ಕಾರ್ಯಗಳನ್ನು ಕೈಗೊಂಡಿವೆ. ಪ್ರಧಾನಿ ನರೇಂದ್ರ ಮೋದಿ(Narendra Modi) ನೇತೃತ್ವದಲ್ಲಿ ಭಾರತ ದೇಶ ಅತ್ಯಂತ ಸುರಕ್ಷಿತವಾಗಿದ್ದು, ಆರ್ಥಿಕತೆಯಲ್ಲಿ ಬಲಿಷ್ಠ ರಾಷ್ಟ್ರವಾಗಿ ಬೆಳೆದಿದೆ. ಉಜ್ವಲ ಯೋಜನೆಯ ಅಡಿ 8 ಕೋಟಿ ಫಲಾನುಭವಿಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ. ಜಗತ್ತಿನಲ್ಲೇ ಅತಿ ಹೆಚ್ಚು 250 ಕೋಟಿ ಜನಕ್ಕೆ ಉಚಿತ ವ್ಯಾಕ್ಸಿನ್‌ ನೀಡಿದ ರಾಷ್ಟ್ರ ಭಾರತವಾಗಿದ್ದು, ಆಯುಷ್ಮಾನ ಭಾರತ ಯೋಜನೆಯಿಂದ ಅನೇಕ ಬಡ ಕುಟುಂಬಗಳಿಗೆ ಅನುಕೂಲವಾಗಿದೆ ಎಂದರು.

ಬಿಜೆಪಿ ಅಭ್ಯರ್ಥಿ ಡಾ. ಕ್ರಾಂತಿಕಿರಣ ಅವರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಹೊಸ ಕಲ್ಪನೆ, ಜನಪರ ಚಿಂತನೆ ಇಟ್ಟುಕೊಂಡು ರಾಜಕೀಯ ರಂಗಕ್ಕೆ ಪ್ರವೇಶ ಮಾಡಿದ್ದು, ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಕಮಲದ ಗುರುತಿಗೆ ಮತ ನೀಡಿ ಗೆಲುವಿನಲ್ಲೂ ನಂ. 1ಸ್ಥಾನಕ್ಕೆ ತರುವಂತೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಮನವಿ ಮಾಡಿದರು.

 

ಪ್ರಧಾನಿ ಮೋದಿಯ ಆದೇಶ ಪಾಲಿಸುವ ಸಿಎಂ ಬೇಕು: ಪ್ರಹ್ಲಾದ್‌ ಜೋಶಿ

ಬಿಜೆಪಿ ಪೂರ್ವ ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂದಮಠ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಶಾಂತಾ ಹಿರೇಮಠ, ಶೀಲಾ ಕಾಟ್ಕರ್‌, ಮಾಜಿ ಸದಸ್ಯರಾದ ಮಂಜುನಾಥ ಚಿಂತಗಿಂಜಲ, ಶಿವಾನಂದ ಮುತ್ತಣ್ಣವರ, ಮುಖಂಡರಾದ ಶಿವಯ್ಯ ಹಿರೇಮಠ, ಮಂಜುನಾಥ ಕಾಟ್ಕರ್‌, ವಿನಯ ಸಜ್ಜನ, ಸಂತೋಷ ಅರಕೇರಿ, ಗಂಗಾಧರ ಟಿಕಾರೆ ಸೇರಿ ಹಲವರಿದ್ದರು.

click me!