ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಜೆಡಿಎಸ್ ಸಾಧನೆಗಳನ್ನು ಜನರಿಗೆ ತಿಳಿಸಿ ಮತ ಯಾಚಿಸಬೇಕು ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಕೆ.ಆರ್. ನಗರ (ಫೆ.5) : ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಜೆಡಿಎಸ್ ಸಾಧನೆಗಳನ್ನು ಜನರಿಗೆ ತಿಳಿಸಿ ಮತ ಯಾಚಿಸಬೇಕು ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ತಾಲೂಕು ಯುವ ಜೆಡಿಎಸ್ ಕಾರ್ಯದರ್ಶಿಗಳಾಗಿ ನೇಮಕಗೊಂಡ ಹಂಪಾಪುರ ಗ್ರಾಮದ ಯೋಗಾನಂದ ಮತ್ತು ಮನೋಹರ ಅವರಿಂದ ಕೆ.ಆರ್. ನಗರ ಪಟ್ಟಣದ ಮುಸ್ಲಿಂ ಬಡಾವಣೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
undefined
Union Budget: ಕೇಂದ್ರ ಬಜೆಟ್‌ನಲ್ಲಿ ಅಕ್ಷರ, ಆರೋಗ್ಯ, ಅನ್ನ ಕಡೆಗಣನೆ: ಎಚ್. ವಿಶ್ವನಾಥ್ ಕಿಡಿ
ನಾನು ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ನಂಂತರ ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ಇದ್ದು ಮುಂದಿನ ದಿನಗಳಲ್ಲಿ ಮತ್ತಷ್ಟುಅಭಿವೃದ್ಧಿ ಮಾಡಲು ಕಂಕಣ ಬದಲಾಗಿ ಕೆಲಸ ಮಾಡಲಿದ್ದು ಇದಕ್ಕೆ ಎಲ್ಲರೂ ತಮ್ಮ ಸಹಾಯ ಮತ್ತು ಸಹಕಾರ ನೀಡಬೇಕು ಎಂದು ಅವರು ಕೋರಿದರು. ಜನರು ನಮಗೆ ಅಧಿಕಾರ ನೀಡುವುದು ಅವರ ಸೇವೆ ಮಾಡಬೇಕು ಎಂಬ ಸದುದ್ದೇಶದಿಂದ ಹಾಗಾಗಿ ಅದನ್ನು ಅರಿತಿರುವ ನಾನು ಸಮಾಜ ಮುಖಿ ಕೆಲಸ ಮಾಡುತ್ತಿದ್ದು ಮತದಾರರು ನಮ್ಮನ್ನು ನಿರಂತರವಾಗಿ ಬೆಂಬಲಿಸಿ ಆಶೀರ್ವಾದ ಮಾಡಲಿದ್ದಾರೆ ಎಂದವರು ನುಡಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ. ಕುಮಾರ್, ಯುುವ ಜೆಡಿಎಸ್ ಮುಖಂಡ ಎಚ್.ಕೆ. ಕೀರ್ತಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ನಾಗೇಶ್ ಮೊದಲಾದವರು ಇದ್ದರು.
ಸಾ.ರಾ. ಮಹೇಶ್‌ರ ಅಭಿವೃದ್ಧಿ ಕಾರ್ಯವೇ ಅವರನ್ನು ಗೆಲ್ಲಿಸಲಿದೆ:
ಕಳೆದ 15 ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಸಾ.ರಾ. ಮಹೇಶ್ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ನೀಡಿರುವ ಕೊಡುಗೆಗಳು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಗೆಲುವಿನ ದಡ ಸೇರಿಸಲಿದೆ ಎಂದು ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ…. ರಮೇಶ್ ಹೇಳಿದರು.
ಪಟ್ಟಣದ ಮುಸ್ಲಿಂ ಬಡಾವಣೆಯಲ್ಲಿ ಶನಿವಾರ ಸಾ.ರಾ. ಮಹೇಶ್ ಅವರು ವೈಯಕ್ತಿಕವಾಗಿ ಕೊಡಮಾಡುವ ಸಂಕ್ರಾಂತಿ ಹಬ್ಬದ ಕೊಡುಗೆಯ ಕಿಟ್‌ಗಳನ್ನು ಶಾಸಕರ ಪತ್ನಿ ಅನಿತಾ ಸಾ.ರಾ. ಮಹೇಶ್ ಅವರು ನೀಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ತಮ್ಮ ರಾಜಕೀಯ ಜೀವನದುದ್ದಕ್ಕೂ ಜನಸೇವೆ ಮಾಡುವುದನ್ನು ರೂಢಿಸಿಕೊಂಡಿರುವ ಶಾಸಕರು ಸರ್ಕಾರದ ಅನುದಾನದ ಜೊತೆಗೆ ಸ್ವಂತ ಹಣವನ್ನು ವಿನಿಯೋಗ ಮಾಡುತ್ತಿದ್ದು ಇದನ್ನು ಅರಿತಿರುವ ಎಲ್ಲರೂ ಅವರ ಬೆಂಬಲಕ್ಕೆ ನಿಂತಿದ್ದು ಈ ಬಾರಿ ಅವರ ಗೆಲುವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಇಂದಿನ ಕಲುಷಿತ ರಾಜಕಾರಣದಲ್ಲಿ ಭ್ರಷ್ಟಾಚಾರವನ್ನು ಉಸಿರಾಗಿಸಿಕೊಂಡಿರುವ ಜನರ ನಡುವೆ ತಮ್ಮ ವೈಯಕ್ತಿಕ ಜೀವನವನ್ನು ತ್ಯಜಿಸಿ ಸಮಾಜ ಸೇವೆಯಲ್ಲಿ ತೊಡಗಿರುವ ನಮ್ಮ ಶಾಸಕರಂತಹ ವ್ಯಕ್ತಿಗಳು ಸಿಗುವುದು ತುಂಬಾ ವಿರಳ. ಇಡೀ ಸಮಾಜ ಅವರ ಬೆನ್ನಿಗೆ ನಿಲ್ಲಬೇಕು ಎಂದು ಅವರು ಕೋರಿದರು.
ನಾನು ಜಾತ್ಯತೀತ ರಾಜಕಾರಣಿ - ಸಾ.ರಾ.ಮಹೇಶ್
ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷ ಮುಬಾರಕ್, ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರಾಜಲಕ್ಷ್ಮಿ, ತಾಲೂಕು ಯುವ ಜೆಡಿಎಸ್ ಮುಖಂಡ ಎಚ್.ಕೆ. ಕೀರ್ತಿ, ತಾಲೂಕು ಭೂ ನ್ಯಾಯ ಮಂಡಳಿ ಮಾಜಿ ನಿರ್ದೇಶಕ ಎಚ್.ಪಿ. ಶಿವಣ್ಣ ಮೊದಲಾದವರು ಇದ್ದರು.