* ನೂಪುರ್ ಶರ್ಮ ಹೇಳಿಕೆ ಖಂಡಿಸಿ ಕಾನೂನು ವಿರೋಧಿ ದೊಂಬಿಗೆ ಸಮರ್ಥನೆ ಇಲ್ಲ
* ಉಳ್ಳಾಲಕ್ಕೆ ಸಿಬಿಎಸ್‌ಇ ಸ್ಕೂಲ್ ಮಂಜೂರು
* ರಾಹುಲ್ ಗಾಂಧಿ ಕೇವಲ ವ್ಯಕ್ತಿಯಲ್ಲ, ಶಕ್ತಿ ಎನ್ನುವುದನ್ನು ಸಾಬೀತು
ಮಂಗಳೂರು(ಜೂ.15): ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಮುಂದಿನ ದಿನಗಳಲ್ಲಿ ದೇಶದ ನಾಯಕತ್ವ ವಹಿಸುತ್ತಾರೆ ಎಂಬ ಭಯದಿಂದ ಬಿಜೆಪಿ ಸರ್ಕಾರವು ಇ.ಡಿ. ಮೂಲಕ ಅಪಪ್ರಚಾರದಲ್ಲಿ ತೊಡಗಿದೆ. ಈ ಮೂಲಕ ರಾಹುಲ್ ಗಾಂಧಿ ಕೇವಲ ವ್ಯಕ್ತಿಯಲ್ಲ, ಶಕ್ತಿ ಎನ್ನುವುದನ್ನು ಸಾಬೀತು ಮಾಡಿದೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದಲ್ಲ ಒಂದು ದಿನ ರಾಹುಲ್ ಗಾಂಧಿ ನಾಯಕತ್ವವನ್ನು ದೇಶದ ಜನರು ಸ್ವೀಕಾರ ಮಾಡುವ ಭಯದಿಂದ ಚುನಾವಣೆ ಸಂದರ್ಭ ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ಕೆಲಸಕ್ಕೆ ಮುಂದಾಗಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯವರ ಈ ಹಿಂದಿನ ಅಪಪ್ರಚಾರ ಯಶಸ್ವಿಯಾಗಿಲ್ಲ. ಅದಕ್ಕೆ ಈ ವಿಷಯಕ್ಕೆ ಕೈಹಾಕಿದ್ದಾರೆ. ಇದೆಲ್ಲ ಹೆಚ್ಚು ದಿನ ನಡೆಯಲ್ಲ. ಜನರಿಗೆ ಸತ್ಯ ಗೊತ್ತಾಗಲಿದೆ ಎಂದರು.
Mangaluru: ಶಾಲೆಯಲ್ಲಿ ಶಸ್ತ್ರಾಸ್ತ್ರ ತರಬೇತಿ ತಾಲಿಬಾನ್ ಸಂಸ್ಕೃತಿ: ಖಾದರ್
ಟಾರ್ಗೆಟ್ ಪಾಲಿಟಿಕ್ಸ್: ಬಿಜೆಪಿಯವರು ರಾಜೀವ್ ಗಾಂಧಿ ಅವರನ್ನೂ ಬಿಡದೆ ಬೋಫೋರ್ಸ್ ಆರೋಪ ಹೊರಿಸಿದ್ದರು. ತನಿಖೆಯಲ್ಲಿ ಆರೋಪ ಸುಳ್ಳು ಸಾಬೀತಾಯಿತು ಎಂದು ಹೇಳಿದ ಯು.ಟಿ. ಖಾದರ್, ಈಗ ರಾಹುಲ್ ಗಾಂಧಿ ಮೇಲೂ ಬಿಜೆಪಿಯು ಟಾರ್ಗೆಟ್ ಪಾಲಿಟಿಕ್ಸ್ ಮುಂದುವರಿಸಿದೆ ಎಂದು ಹೇಳಿದರು.
ಆಜಾನ್ ನಿಯಮಕ್ಕೆ ಕಾಂಗ್ರೆಸ್ ಮುಸ್ಲಿಮರ ಆಗ್ರಹ: ಅಲ್ಪಸಂಖ್ಯಾತರ ನಿಯೋಗದಿಂದ ಸಿಎಂ ಭೇಟಿ
ಪಠ್ಯ ಬದಲಿಸಿ:
ಪರಿಷ್ಕೃತ ಪಠ್ಯ ಪುಸ್ತಕದಲ್ಲಿ ಬಸವಣ್ಣ, ನಾರಾಯಣ ಗುರುಗಳ ಸಂದೇಶ ತೆಗೆದಿದ್ದಾರೆ. ಕುವೆಂಪು, ಅಂಬೇಡ್ಕರ್‌ಗೆ ಅವಮಾನ ಮಾಡಿದ್ದಾರೆ. ಸಂವಿಧಾನಕ್ಕೆ ಮಾನ್ಯತೆ ನೀಡಿಲ್ಲ. ಇಂಥ ಪಾಠವನ್ನು ನಮ್ಮ ಮಕ್ಕಳು ಕಲಿಯಬೇಕಾ? ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಹಿಂ.ವರ್ಗ, ದಲಿತರು, ಅಲ್ಪಸಂಖ್ಯಾತರು ಇಲ್ಲದೆ ಪಠ್ಯ ರಚನೆ ಮಾಡಿದ ಉದ್ದೇಶ ಏನು? ಕೂಡಲೆ ಈ ಪಠ್ಯವನ್ನು ತಿರಸ್ಕರಿಸಿ ಹೊಸ ಪಠ್ಯಪುಸ್ತಕ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಭಾರತ ಏಕೆ ತಲೆ ತಗ್ಗಿಸಬೇಕು: ನೂಪುರ್ ಶರ್ಮ ಎಂಬ ಒಬ್ಬ ವ್ಯಕ್ತಿ ಹೇಳಿಕೆ ನೀಡಿದ ಮಾತ್ರಕ್ಕೆ ಇಡೀ ಭಾರತವು ವಿದೇಶಗಳ ಮುಂದೆ ಏಕೆ ತಲೆ ತಗ್ಗಿಸಬೇಕು? ಭಾರತ ಏಕೆ ವಿದೇಶಗಳೆದುರು ಕ್ಷಮೆ ಕೋರಬೇಕು? ಇದೆಲ್ಲ ಅವಾಂತರಕ್ಕೆ ಕಾರಣರಾದ ನೂಪುರ್ ಶರ್ಮ ಅವರನ್ನು ಬಂಧಿಸಿದರೆ ಎಲ್ಲ ಸರಿಯಾಗಲಿದೆ. ಹಾಗಂತ ಈ ಪ್ರಕರಣ ಖಂಡಿಸಿ ಗಲಾಟೆ ಎಬ್ಬಿಸುವುದು ಕೂಡ ಸಮರ್ಥನೀಯವಲ್ಲ. ಇಂಥ ಕಾನೂನು ವಿರೋಧಿ ದೊಂಬಿಯನ್ನು ಸಮರ್ಥಿಸಲ್ಲ ಎಂದು ಖಾದರ್ ಹೇಳಿದರು. ಕಾಂಗ್ರೆಸ್ ಮುಖಂಡರಾದ ಮಮತಾ ಗಟ್ಟಿ, ಮುಹಮ್ಮದ್ ಮೋನು, ಸಂತೋಷ್ ಶೆಟ್ಟಿ ಇದ್ದರು.
ಉಳ್ಳಾಲಕ್ಕೆ ಸಿಬಿಎಸ್‌ಇ ಸ್ಕೂಲ್ ಮಂಜೂರು
ಉಳ್ಳಾಲ ವಿಧಾನಸಭಾ ಕ್ಷೇತ್ರಕ್ಕೆ ನೂತನ ಸಿಬಿಎಸ್‌ಇ ಸ್ಕೂಲ್ ಮಂಜೂರಾಗಿದ್ದು, ಕೊಣಾಜೆಯಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ಆರಂಭವಾಗಲಿದೆ. 6ನೇ ತರಗತಿಯಿಂದ ದ್ವಿತೀಯ ಪಿಯುವರೆಗೆ ಕಲಿಕೆಗೆ ಇಲ್ಲಿ ಅವಕಾಶವಿದ್ದು, ರೆಸಿಡೆನ್ಶಿಯಲ್ ಸ್ಕೂಲ್ ಆಗಲಿದೆ. ಶಾಲಾರಂಭಕ್ಕೆ ಎಲ್ಲ ಮೂಲಸೌಕರ್ಯ ವ್ಯವಸ್ಥೆಯಿದೆ. 6ನೇ ತರಗತಿಗೆ 88 ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಕಾಶವಿದ್ದು, ಈಗಾಗಲೇ 60 ಅರ್ಜಿಗಳು ಬಂದಿವೆ ಎಂದು ಯು.ಟಿ. ಖಾದರ್ ತಿಳಿಸಿದರು.