* ಬೂಟ್ ನೆಕ್ಕೋ ಕಲ್ಚರ್ ಇರೋದು ಕಾಂಗ್ರೆಸ್ ನಲ್ಲಿ
* ಬಹುಶಃ, ಬಿ.ವಿ.ಶ್ರೀನಿವಾಸ್ ಗೆ ನನ್ನ ಹಿನ್ನೆಲೆ ಗೊತ್ತಿಲ್ಲ
* ಚಿಕ್ಕಮಗಳೂರಿನಲ್ಲಿ ಬಿ.ವಿ.ಶ್ರೀನಿವಾಸ್ ಗೆ ಸಿ.ಟಿ.ರವಿ ತಿರುಗೇಟು
ಚಿಕ್ಕಮಗಳೂರು, (ಜೂನ್,15): ಬೂಟುಗಾಲು ನೆಕ್ಕುತ್ತಿದ್ದರು ಎನ್ನುವ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ತಿರುಗೇಟು ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊದಿಗೆ ಮಾತನಾಡಿದ ಅವರು, ಬಿ.ವಿ.ಶ್ರೀನಿವಾಸ್ ಗೆ ನನ್ನ ಹಿನ್ನೆಲೆ ಗೊತ್ತಿಲ್ಲ. ಬೂಟ್ ನೆಕ್ಕೋ ಕಲ್ಚರ್ ಇರೋದು ಕಾಂಗ್ರೆಸ್ ನಲ್ಲಿ ಅವರು ಮಾತ್ರ ಸರ್ವೈವ್ ಆಗಿ ಉಳಿಯೋದು. ಗುಲಾಮಗಿರಿ ಮಾನಸೀಕತೆಯಲ್ಲಿರೋರು ಗುಲಾಮಗಿರಿಗೆ ಸೇರಿದವರು, ನಾನು ಗುಲಾಮಗಿರಿಯ ಮಾನಸಿಕತೆಯವನಲ್ಲ ಎಂದು ಬಿವಿ ಶ್ರೀನಿವಾಸ್‌ಗೆ ಟಾಂಗ್ ಕೊಟ್ಟರು.
ರಾಜ್ಯದಲ್ಲಿ ಕೇವಲ ಒಬ್ಬನೇ ಒಬ್ಬ ಬಿಜೆಪಿ ಶಾಸಕ ಇದ್ದಾಗ ನಾನು ಬಿಜೆಪಿ ಸೇರಿದ್ದು. ಜನಸಂಘಟನೆ, ಹೋರಾಟ ಮಾಡಿ ಶಾಸಕನಾಗಿದ್ದೇನೆ. ಯಾರ್ದೋ ಬಕೆಟ್ ಹಿಡಿದು ಚೇಲ ರಾಜಕಾರಣ ಮಾಡಿದವನಲ್ಲ ನಾನಲ್ಲ ಎಂದರು.ಬೂಟು ನೆಕ್ಕೋ ರಾಜಕಾರಣದ ಕಲ್ಚರ್ ಬಿಜೆಪಿಯಲ್ಲಿ ಇಲ್ಲ, ಕಲ್ಚರ್ ಇರೋದು ಕಾಂಗ್ರೆಸ್ ಪಕ್ಷದಲ್ಲಿ, ಬಿಜೆಪಿಯಲ್ಲಿ ಪಕ್ಷ ನಿಷ್ಠೆ, ಪರಿಶ್ರಮ ಯಾವ ಎತ್ತರಕ್ಕೆ ಬೇಕಾದ್ರು ಬೆಳೆಯುತ್ತಾನೆ. ಬೂಟ್ ನೆಕ್ಕೋ ಕಲ್ಚರ್ ಇರೋರು ಮಾತ್ರ ಕಾಂಗ್ರೆಸ್ ನಲ್ಲಿ ಉಳಿದು, ಸರ್ವೈವ್ ಆಗೋದು. ಬಿ.ವಿ.ಶ್ರೀನಿವಾಸ್ ಗೆ ನನ್ನ ಹಿನ್ನೆಲೆ ಗೊತ್ತಿಲ್ಲ ಅನ್ಸತ್ತೆ ಎಂದು ಹೇಳಿದರು.
National Herald Case ಮೋದಿ ಸರ್ಕಾರ, ದೆಹಲಿ ಪೊಲೀಸರ ವಿರುದ್ಧ ಕಾಂಗ್ರೆಸ್ ಕೆಂಡ
ಅಕ್ರಮ ಗೋ ಹತ್ಯೆ ಕೇಂದ್ರಗಳ ಮೇಲೆ ಚಿಕ್ಕಮಗಳೂರು ನಗರಸಭೆಯಿಂದ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಬುಲ್ಡೋಜರ್ ಪ್ರಯೋಗವನ್ನು ಜಾರಿ ತರಲು ಮುಂದಾಗಿದೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ,.ಟಿ ರವಿ ಡಿ ಕೆ ಶಿವಕುಮಾರ್ ಗೆ ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್ ಕ್ರಿಮಿನಲ್ ಪರನಾ?
ಬುಲ್ಡೋಜರ್ ಹತ್ತಿಸಿದರೆ ನಾನೇ ಹೋಗಿ ಮಲಗ್ತೀನಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆಗೆ ಟಾಂಗ್ ಕೊಟ್ಟಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಕಾಂಗ್ರೆಸ್ ಕ್ರಿಮಿನಲ್ ಪರನಾ ಎಂದು ಪ್ರಶ್ನಿಸಿದ್ದಾರೆ.
ಮತಾಂತರಿಗಳ ಪರವಾಗಿ ನಿಲ್ಲುವುದು, ಕಾಂಗ್ರೆಸ್ ನೀತಿ ಅಕ್ರಮ ಗೋಹತ್ಯೆ ಮಾಡುವವರ ಪರ ನಿಲ್ಲುವುದು, ಇದೇ ನಮ್ಮ ನೀತಿ ಅನ್ನೋದನ್ನ ಕಾಂಗ್ರೆಸ್ ಹೇಳಲಿ, ಆಗ ಬುಲ್ಡೋಜರ್ ಎದುರುಗಡೆ ಬಂದು ಡಿಕೆಶಿ ನಿಂತುಕೊಳ್ಳಲಿ ಎಂದು ಹೇಳಿದರು.
ಯುಪಿಯಲ್ಲಿ ಹೇಗೆ ಡಿಪಾಸಿಟ್ ಕಳೆದುಕೊಂಡ್ರೋ ಇಲ್ಲಿಯೂ ಹಾಗೆ ಆಗುತ್ತೆ. ಇವತ್ತಿನ ಕಾಂಗ್ರೆಸ್ ಅಕ್ರಮ ಗೋಹತ್ಯೆ ಪರವಾಗಿದೆ. ಅವರು ಅಕ್ರಮ ಗೋಹತ್ಯೆಯನ್ನ ಸಮರ್ಥನೆ ಮಾಡಿಕೊಳ್ಳಲಿ, ಕಾನೂನು ತನ್ನ ಕೆಲಸವನ್ನು ಮಾಡುತ್ತೆ ಎಂದರು.ಸ್ವಾತಂತ್ರ್ಯ ಪೂರ್ವದ ಯಾವುದೇ ಮೌಲ್ಯವನ್ನು ಕಾಂಗ್ರೆಸ್ ಪಕ್ಷ ಉಳಿಸಿಕೊಂಡಿಲ್ಲ, ಮಹಾತ್ಮಗಾಂಧಿ ಗೋಹತ್ಯೆಯ ವಿರುದ್ಧವಾಗಿದ್ದರು, ಇವತ್ತಿನ ಕಾಂಗ್ರೆಸ್ ಅಕ್ರಮ ಗೋ ಹತ್ಯೆ ಪರ. ಅಕ್ರಮ ಗೋಹತ್ಯೆ ಸಮರ್ಥನೆ ಮಾಡಿಕೊಳ್ಳಲಿ, ಅವರು ಇಲ್ಲಿಗೆ ಬರಲಿ, ಕಾನೂನು ತನ್ನ ಕೆಲಸವನ್ನು ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.ಇಂದು ಅಕ್ರಮ ಗೋಹತ್ಯೆ ಬೆಂಬಲಿಸುತ್ತಾರೆ. ನಾಳೆ ದೇಶವನ್ನು ಮಾರಲು ಹಿಂದೆ ಮುಂದೆ ನೋಡೋದಿಲ್ಲ, ಮತಾಂತರವನ್ನು ಬೆಂಬಲಿಸುತ್ತಾರೆ. ಕಾಂಗ್ರೆಸ್, ಕ್ರಿಮಿನಲ್ಗಳ ಪರ, ಭ್ರಷ್ಟಚಾರಿಗಳ ಪರ ಎಂದು ತನ್ನ ರಾಜ್ಯಾಧ್ಯಕ್ಷರಿಂದ ಹೇಳುತ್ತಿದೆ ಎಂದರು.