
ಚಿಕ್ಕಮಗಳೂರು, (ಜೂನ್.15): ಮಾಜಿ ಸಚಿವೆ ಮೋಟಮ್ಮ ಅವರು ಮೊದಲ ಬಾರಿಗೆ ತಮ್ಮ ಆತ್ಮಕಥೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಮಹಿಳಾ ಕೋಟದಲ್ಲಿ ನನಗೆ ಸಚಿವ ಸ್ಥಾನ ನೀಡಬಹುದಿತ್ತು. ಆದ್ರೆ ಸಿದ್ದರಾಮಯ್ಯ ನೀಡಿಲ್ಲ, ನಾನು ಸಿದ್ದರಾಮಯ್ಯ ಹಿಂದೆ ಇದ್ದೇ, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗ ನನ್ನನ್ನ ಕಡೆಗಣಿಸಿದರು ಎಂದು ಆತ್ಮಕಥೆಯಲ್ಲಿ ಬರೆದಿದ್ದೇನೆ ಎಂದು ಎಂದಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಸಿದ್ದರಾಮಯ್ಯ ಸಂತೆಯಲ್ಲಿ ಮೆಂತೆ ಕದ್ದವರೆಂದು ಆತ್ಮಕಥೆಯಲ್ಲಿ ಬರೆದಿಲ್ಲ, ಆತ್ಮಕಥನ ಬಿದಿರೆ ನೀನ್ಯಾರಿಗಲ್ಲದವಳು ಅದರಲ್ಲಿ ಮನಸ್ಸಿಗೆ ಹೊಳೆದಿದ್ದನ್ನು ಅಕ್ಷರ ರೂಪಕ್ಕೆ ಇಳಿಸಿದ್ದೇನೆ. ಟೀಕಿಸಿಲ್ಲ, ಅವರು ಪಕ್ಷದ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾಗಿದ್ದಾಗ ಅವರ ಮನೆಗೆ ಹೋಗಿ ಧೈರ್ಯ ತುಂಬಿದ್ದೆ. ಆದರೆ ಪಕ್ಷ ಅಧಿಕಾರಕ್ಕೆ ಬಂದಾಗ ಮೇಲ್ಮನೆ ವಿರೋಧ ಪಕ್ಷದ ನಾಯಕರಾಗಿ, ಸಚಿವೆಯಾಗಿ, ಶಾಸಕರಾಗಿ, ಸಿಡ್ಲ್ಯುಸಿ ಸದಸ್ಯೆಯಾಗಿ ನಿರ್ವಹಿಸಿದ ಕೆಲಸವನ್ನು ಗಮನಿಸಿದ ಮುಖ್ಯಮಂತ್ರಿಯಾಗಿದ್ದಾಗ ಸಚಿವೆ ಸ್ಥಾನ ನೀಡದಿರುವ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದೇನೆ ಅಷ್ಟೇ ಎಂದರು.
ಅವಕಾಶಗಳ ಬಾಗಿಲನ್ನು ಶಾಶ್ವತವಾಗಿ ಮುಚ್ಚಿಬಿಟ್ಟರು, ಆತ್ಮಕತೆಯಲ್ಲಿ ಸಿದ್ದುಗೆ ಶಾಕ್ ಕೊಟ್ಟ ಮೋಟಮ್ಮ
ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ
ಕಳೆದ ಚುನಾವಣೆಯಲ್ಲಿ ಸೋತ ಬಳಿಕ ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದೆ. ಈಗ ಮಗಳಿಗೆ ಟಿಕೆಟ್ ಕೊಡುವಂತೆ ಕೇಳಿಕೊಳ್ಳಲಾಗುವುದು. ಮೂಡಿಗೆರೆ ಕ್ಷೇತ್ರದ ಟಿಕೆಟ್ ಅನ್ನು ಮಗಳು ನಯನಗೆ ನೀಡುವಂತೆ ಪಕ್ಷದ ಮುಖಂಡರನ್ನು ಒತ್ತಾಯಿಸಲಾಗುವುದು. ಒಂದು ವೇಳೆ ಟಿಕೆಟ್ ದೊರೆಯದಿದ್ದರೆ, ಯಾರಿಗೆ ಟಿಕೆಟ್ ನೀಡುತ್ತಾರೋ ಅವರ ಗೆಲುವಿಗೆ ಶ್ರಮಿಸುವೆ ಎಂದು ಹೇಳಿದರು.
ಆರೋಗ್ಯ ಸಮಸ್ಯೆ ಇದೆ. ಕ್ಷೇತ್ರದಾದ್ಯಂತ ಓಡಾಡಲು ಸಾಧ್ಯವಿಲ್ಲ, ಚುನಾವಣೆ ದುಸ್ಥರ ಎನಿಸಿದೆ. ಕಳೆದ ದ ಚುನಾವಣೆಯಲ್ಲಿ ನೊಂದಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಡಾಲರ್ಸ್ಕಾಲನಿಯಲ್ಲಿರುವ ಮನೆಯನ್ನು ಲೀಸ್ಗೆ ನೀಡಿ ಮೂರು ಕೊಠಡಿಹೊಂದಿರುವ ಪ್ಲಾಟ್ನಲ್ಲಿ ವಾಸಿಸುತ್ತಿದ್ದೇನೆಂದು ನೊಂದು ನುಡಿದರು.ಇದನ್ನೆಲ್ಲ ಗಮನಿಸಿದೆ ನೋವು, ಸಂಕಟವಾಗುತ್ತದೆ. ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರುವಂತೆ ದುಡಿಯುತ್ತೇನೆ. ನಾನು ಮಹಿಳಾ ಮತ್ತು ಮಕ್ಕಳ ಸಚಿವೆಯಾದಾಗ ಹೆಣ್ಣು ಮಕ್ಕಳು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗುವಂತೆ ಮಾಡಿದ್ದೇನೆ. ಅದನ್ನೆಲ್ಲ ಮಹಿಳಾ ಮತದಾರರಿಗೆ ಮನವರಿಕೆ ಮಾಡಿಕೊಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತನೀಡುವಂತೆ ಕೋರುತ್ತೇನೆ ಎಂದರು.
ಎಂ.ಪಿ ಕುಮಾರಸ್ವಾಮಿ ಸೇರ್ಪಡೆಗೆ ವಿರೋಧ
ಶಾಸಕ ಎಂ.ಪಿ.ಕುಮಾರಸ್ವಾಮಿ ಕಾಂಗ್ರೇಸ್ ಪಕ್ಷಕ್ಕೆ ಬರುವುದನ್ನು ವಿರೋಧಿಸುತ್ತೇನೆ. ಬೂತ್ ಮಟ್ಟದಲ್ಲಿ ಕೆಲಸ ಮಾಡಿದವರಿಗೆ ಕೊಡಿ ಎಂದು ಹೇಳುತ್ತೇನೆ. ಶಾಸಕರ ಕಾರ್ಯವೈಖರಿ ಸಿದ್ಧರಾಮಯ್ಯನವರಿಗೆ ತಿಳಿದಿದೆ. ತಕ್ಷಣ ಅವರು ಒಪ್ಪಿಕೊಳ್ಳಲಾರರು ಎಂಬ ನಂಬಿಕೆ ಇದೆ ಎಂದು ತಿಳಿಸಿ, ಮೂಡಿಗೆರೆ ಕ್ಷೇತ್ರದಲ್ಲಿ ಎರಡನೇ ಹಂತದ ನಾಯಕರನ್ನು ಬೆಳೆಸಲಿಲ್ಲವಲ್ಲ ಎಂದಾಗ, ಅದಕ್ಕೇನು ಗೊಬ್ಬರ ನೀರು ಹಾಕಿ ಬೆಳೆಸಬೇಕೆ? ಜನರ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ನಡೆಸಿ ಮುಂದೆ ಬಂದಾಗ ನಾಯಕರಾಗಲು ಸಾಧ್ಯವೆಂದ ಎಂದು ಸ್ಪಷ್ಟಪಡಿಸಿದರು.
ಸರ್ಕಾರ ಜಾತ್ರೆ,ಯಾತ್ರೆ, ಮಸೀದಿಯೊಳಗೆ ದೇಗುಲ ಹುಡುಕುವ ಕೆಲಸದಲ್ಲಿ ನಿರತವಾಗಿದೆಯೇ ಹೊರಟು ಬಡವರಗೋಳು ಕೇಳುತ್ತಿಲ್ಲವೆಂದು ಟೀಕಿಸಿದರು. ಸರ್ಕಾರದ ವೈಫಲ್ಯ ಎತ್ತಿಹಿಡಿದರೆ ದೇಶದ್ರೋಹದ ಪಟ್ಟಕಟ್ಟಿ ಪ್ರಕರಣ ದಾಖಲಿಸಲು ಸರ್ಕಾರಗಳು ಮುಂದಾಗುತ್ತಿವೆ. ಇದನ್ನು ಗಮನಿಸಿದರೆ ಬಹಳ ನೋವಾಗುತ್ತಿದೆ. ಅನ್ಯಾಯ ವಿರುದ್ಧ ಪ್ರತಿಭಟಿಸುವ ಹಕ್ಕು ನಮಗಿಲ್ಲವೆ ಎಂದು ಕೇಳಿದರು.ಪಠ್ಯ ಮರು ಪರಿಷ್ಕರಣೆ ಸರಿಯಾಗಿ ಆಗಿಲ್ಲ, ಸಂವಿಧಾನ ಬರೆದವರ ಹೆಸರನ್ನು ಮಕ್ಕಳಿಗೆ ತಿಳಿಸುವ ಕೆಲಸ ಸರ್ಕಾರದಿಂದ ಆಗುತ್ತಿಲ್ಲವೆಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.