ಪಕ್ಷದಲ್ಲಿ ಹೆಚ್ಚಿನ ಜವಾಬ್ದಾರಿ ನೀಡುವ ವಿಚಾರಕ್ಕೆ ಕಿರಿಕ್; ನಲಪಾಡ್-ಇಲಿಯಾಸ್ ಮಧ್ಯೆ ಟಾಕ್ ವಾರ್!

By Ravi JanekalFirst Published Jan 23, 2023, 10:41 PM IST
Highlights
  • ಪಕ್ಷದಲ್ಲಿ ಹೆಚ್ಚಿನ ಜವಾಬ್ದಾರಿ ನೀಡುವ ವಿಚಾರದಲ್ಲಿ ಕಿರಿಕ್
  • ನಲಪಾಡ್ ವರ್ಸಸ್ ಇಲಿಯಾಸ್ ನಡುವೆ  ಟಾಕ್ ವಾರ್ 
  • ಮತ್ತೆ ಮತ್ತೆ ಫೋನ್ ಮಾಡಿದ್ರೆ ಮನೆಗೆ ನುಗ್ಗಿಸ್ತಿನಿ ಅಂತಾ ನಲಪಾಡ್ ಅವಾಜ್

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಜ.23) : ಸದಾ ಒಂದಲ್ಲ ಒಂದು ವಿವಾದಗಳಿಂದಲೇ ಸುದ್ದಿಯಲ್ಲಿರುವ ಯೂತ್  ನ ಅಧ್ಯಕ್ಷ  ಮಹಮ್ಮದ್ ನಲಪಾಡ್  ಇದೀಗ ಸ್ವ ಪಕ್ಷ ಕಾರ್ಯಕರ್ತನ ಮೇಲೆ  ಹರಿಹಾಯುವ ಮೂಲಕ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

ಯುವ ಕಾಂಗ್ರೆಸ್  ಅಧ್ಯಕ್ಷ President of Youth Congress) ನಲಪಾಡ್(Mohammad Nalapad) ಹಾಗೂ ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಇಲಿಯಾಸ್ (iliyas) ನಡುವೆ ನಡೆದಿರುವ ಟಾಕ್ ವಾರ್(Talk war) ಇದೀಗ ಸಾಮಾಜಿಕ ಜಾಲತಾಣ(Social media)ದಲ್ಲಿ ವೈರಲ್(Viral) ಆಗಿದ್ದು ಸಾಕಷ್ಟು ಚರ್ಚೆಗೆ ಕಾರವಾಗಿದೆ.

ಬಿಜೆಪಿಯದ್ದು ಪಿಕ್‌ ಪಾಕೆಟ್‌ ಸರ್ಕಾರ: ಮೊಹಮ್ಮದ ನಲಪಾಡ್‌

ನಲಪಾಡ್ ವರ್ಸಸ್ ಇಲಿಯಾಸ್ ನಡುವೆ  ಟಾಕ್ ವಾರ್ 

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನೆಲಪಾಡ್ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ದೂರವಾಣಿ ಕರೆ ಮಾಡಿ ಧಮ್ಕಿ ಹಾಕಿದ್ದಾರೆ ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಳೆದ  ರಾತ್ರಿ ಚಿಕ್ಕಮಗಳೂರು ಯೂತ್ ಕಾಂಗ್ರೆಸ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೃಂಗೇರಿ ಕ್ಷೇತ್ರದ ಖಾಂಡ್ಯ ಹೋಬಳಿ ಗೋರಿಗುಂಡಿ ನಿವಾಸಿ ಇಲಿಯಾಸ್ ಎಂಬುವರಿಗೆ ದೂರವಾಣಿ ಕರೆ ಮಾಡಿ ಪಕ್ಷ ಸಂಘಟನೆ ಸಂಬಂಧ ಇತರೆ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ವೇಳೆ ಧಮ್ಕಿ ಹಾಕಿದ್ದಾರೆ ಎನ್ನುವ ಆರೋಪ‌ ಕೇಳಿಬಂದಿದೆ.

ಪಕ್ಷದಲ್ಲಿ ಹೆಚ್ಚಿನ ಜವಾಬ್ದಾರಿ ನೀಡುವ ವಿಚಾರದಲ್ಲಿ ಕಿರಿಕ್

ಚಿಕ್ಕಮಗಳೂರು ನಗರದ ಪ್ರಜಾಧ್ವನಿ(Prajadhwani) ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಹಮ್ಮದ್ ನಲಪಾಡ್ ಶನಿವಾರ ರಾತ್ರಿ ಮೂಡಿಗೆರೆಯಲ್ಲಿ ವಾಸ್ತವ್ಯ ಹೂಡಿದ್ದರು. ಈ ಹಿನ್ನೆಲೆ ನಿನ್ನೆ ರಾತ್ರಿ ನಲಪಾಡ್​ಗೆ ಇಲಿಯಾಸ್ ಕರೆ ಮಾಡಿ ಪಕ್ಷ ಸಂಘಟನೆ, ರಾಜ್ಯ ಕಮಿಟಿಗೆ ಆಯ್ಕೆ ಬಗ್ಗೆ ಮಾತನಾಡಿದ್ರಂತೆ. ಈ ವೇಳೆ ಮನೆಗೆ ನುಗ್ಗಿ ಥಳಿಸುವುದಾಗಿ ನಲಪಾಡ್ ಧಮ್ಕಿ ಹಾಕಿದ್ರಂತೆ. ಆಗ ಇಲಿಯಾಸ್ ನಲಪಾಡ್​ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನಲಪಾಡ್ ಮತ್ತು ಇಲಿಯಾಸ್ ನಡುವಿನ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಏಷ್ಯಾ ನೆಟ್ ಸುವರ್ಣ ನ್ಯೂಸ್ ನೊಂದಿಗೆ ಮಾತಾಡಿದ  ಚಿಕ್ಕಮಗಳೂರು ಜಿಲ್ಲಾ ಯೂಥ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಲಿಯಾಸ್ ಇಲ್ಲೂ ಮಹಮ್ಮದ್ ನಲಪಾಡ್ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.  ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಮಾನದ ವೇಳೆಯಲ್ಲಿ ಹೆಚ್ಚಿನ ಮೆಂಬರ್ ಶಿಪ್ ಮಾಡಿ ಪಕ್ಷದಲ್ಲಿ ಉನ್ನತ ಹುದ್ದೆ ನೀಡುವ ಆಫರ್ ರನ್ನು ನಲಪಾಡ್  ನೀಡಿದ್ದರು.

ಡಿಕೆಶಿ ಪುಡಿ ರೌಡಿ, ನಲಪಾಡ್‌ ಮರಿ ರೌಡಿ: ಕಾಂಗ್ರೆಸ್‌ ವಿರುದ್ಧ ಬಿಜೆಪಿ ಕಿಡಿ

ಈ ಹಿನ್ನೆಲೆಯಲ್ಲಿ ನಲಪಾಡ್ ನೀಡಿದ್ದ ಆಫರ್ ಗಾಗಿ ಮೆಂಬರ್ ಶಿಪ್  ಮಾಡಿಸಲಾಗಿತ್ತು. ಹೆಚ್ಚಿನ ಸದಸ್ಯತ್ವ ಮಾಡಿರುವ  ಹಿನ್ನೆಲೆಯಲ್ಲಿ ಜವಾಬ್ದಾರಿ ನೀಡುವಂತೆ ನಲಪಾಡಿಗೆ  ಫೋನ್ ಮಾಡಿದ್ರೆ ಅವಾಜ್ ಹಾಕಿದ್ದರು ಎಂದು ಆರೋಪಿಸಿದರು.ಇದೇ ರೀತಿ ಪದೇ ಪದೇ ಫೋನ್ ಮಾಡಿದ್ರೆ ಮನೆಗೆ ನುಗ್ಗಿಸ್ತೀನಿ ಅಂತಾ ಏರುಧ್ವನಿ  ನಲಪಾಡ್ ಮಾತಾಡಿದ್ರು ಎಂದು ನಲಪಾಡ್ ವಿರುದ್ದ ಗಂಭೀರವಾದ ಆರೋಪ ಮಾಡಿದರು.

click me!