52 ವರ್ಷದ ರಾಹುಲ್ ಗಾಂಧಿ ಈಗಲೂ ಕೂಡ ಭಾರತದ ಮೋಸ್ಟ್ ಎಲಿಜಬೆಲ್ ಬ್ಯಾಚುಲರ್‌ಗಳ ಪಟ್ಟಿಯಲ್ಲಿದ್ದಾರೆ. ಭಾರತ್ ಜೋಡೋಯಾತ್ರೆ ಮುಕ್ತಾಯದ ಸನಿಹದಲ್ಲಿರುವ ವೇಳೆ ರಾಹುಲ್ ಗಾಂಧಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ನವದೆಹಲಿ (ಜ.23): ಭಾರತ್ ಜೋಡೋ ಯಾತ್ರೆ ಮುಕ್ತಾಯದ ಸನಿಹ ಬಂದಿದೆ. ಇದರ ಬೆನ್ನಲ್ಲೇ ಇತ್ತೀಚೆಗೆ ರಾಹುಲ್ ಗಾಂಧಿ, ಯೂಟ್ಯೂಬ್ ಚಾನೆಲ್ ಜೊತೆ ನಡೆಸಿದ ಸಂವಾದದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಆಹಾರ, ಮದುವೆ, ಮೊದಲ ಕೆಲಸ ಹಾಗೂ ಕುಟುಂಬದ ಕುರಿತಾಗಿ ಮುಕ್ತವಾಗಿ ಅವರು ಮಾತನಾಡಿದ್ದು ವೈರಲ್ ಆಗಿದೆ. ಮದುವೆಗೆ ನನ್ನ ಯಾವುದೇ ಅಭ್ಯಂತರವಿಲ್ಲ ಎಂದು ರಾಹುಲ್ ಗಾಂಧಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಸರಿಯಾದ ಹುಡುಗಿ ಸಿಕ್ಕಾಗ ಖಂಡಿತವಾಗಿ ಮದುವೆ ಆಗುತ್ತೇನೆ ಎಂದು ಹೇಳಿದ್ದಾರೆ. ಇದೇ ವೇಳೆ ತಮ್ಮ ಮೊದಲ ಕೆಲಸದ ಬಗ್ಗೆಯೂ ಅವರು ಮಾತನಾಡಿದ್ದಾರೆ. ನಾನು ನನ್ನ ಮೊದಲ ಕೆಲಸವನ್ನು ಮಾಡಿದ್ದು ಲಂಡನ್‌ನಲ್ಲಿ. ಕೆಲಸ ಮಾಡಿದ್ದ ಕಂಪನಿಯ ಹೆಸುರ ಮಾನಿಟರ್ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಅವರು ಯೂಟ್ಯೂಬ್ ಚಾನೆಲ್ 'ಕರ್ಲಿ ಟೇಲ್ಸ್' ನ ಕಾಮ್ಯಾ ಜಾನಿಗೆ ಸಂದರ್ಶನವನ್ನು ನೀಡಿದ್ದಾರೆ ರಾಹುಲ್ ಅವರ ಈ ಸಂದರ್ಶನ ಭಾನುವಾರ ಬಿಡುಗಡೆಯಾಗಿದೆ. ಇದರಲ್ಲಿ ಅವರು ಕೆಲವು ತಮಾಷೆಯ ಕಥೆಗಳನ್ನೂ ಹೇಳಿದ್ದಾರೆ.
A future vision for India which
1. Transforms the education system
2. Supports the production system
3. Protects the people & enhances their potential
is what has in mind. pic.twitter.com/bmhBB0OLfs
ಹಲಸು ಮತ್ತು ಬಠಾಣಿ ತಿನ್ನೋದಿಲ್ಲ: ನಾನು ಎಲ್ಲವನ್ನೂ ತಿನ್ನುತ್ತೇನೆ. ಆದರೆ, ನನಗೆ ಹಲಸು ಮತ್ತು ಬಟಾಣಿ ಇಷ್ಟವಿಲ್ಲ. ನಾನು ಮನೆಯಲ್ಲಿದ್ದಾಗ, ನಾನು ಏನು ತಿನ್ನುತ್ತೇನೆ ಮತ್ತು ಕುಡಿಯುತ್ತೇನೆ ಎಂಬುದರ ಬಗ್ಗೆ ನಾನು ತುಂಬಾ ಕಟ್ಟುನಿಟ್ಟಾಗಿರುತ್ತೇನೆ. ನನಗೆ ಇಲ್ಲಿ ಯಾವುದೇ ಆಯ್ಕೆ ಇಲ್ಲ. ಪ್ರಯಾಣ ಮಾಡುವಾಗ ಸಿಕ್ಕಿದ್ದನ್ನೆಲ್ಲಾ ತಿನ್ನುತ್ತೇನೆ. ತೆಲಂಗಾಣದ ಜನರು ಆಹಾರದಲ್ಲಿ ಮೆಣಸಿನಕಾಯಿಯನ್ನು ಹೆಚ್ಚು ತಿನ್ನುತ್ತಾರೆ. ಅಲ್ಲಿ ಸ್ವಲ್ಪ ಊಟ-ತಿಂಡಿ ಕಷ್ಟವಾಗಿತ್ತು. ನಾನು ಹುಟ್ಟಿದ್ದು ಉತ್ತರ ಪ್ರದೇಶಕ್ಕೆ ವಲಸೆ ಬಂದ ಕಾಶ್ಮೀರಿ ಪಂಡಿತರ ಮನೆಯಲ್ಲಿ. ಅಪ್ಪನ ತಂದೆ ಪಾರ್ಸಿ. ಆದ್ದರಿಂದ ಮನೆಯಲ್ಲಿ ಸಾಮಾನ್ಯ ಆಹಾರವನ್ನು ಬೇಯಿಸಲಾಗುತ್ತಿತ್ತು. ಮಧ್ಯಾಹ್ನದ ಊಟಕ್ಕೆ ದೇಸಿ ಆಹಾರವನ್ನು ನೀಡಲಾಗುತ್ತಿದ್ದರೆ, ರಾತ್ರಿ ಊಟಕ್ಕೆ ಕಾಂಟಿನೆಂಟಲ್ ಆಹಾರವನ್ನು ತಯಾರಿಸಲಾಗುತ್ತಿತ್ತು. ಐಸ್‌ಕ್ರೀಮ್ ನನಗೆ ಬಹಳ ಇಷ್ಟ ಇನ್ನು ತಂದೂರಿ ಆಹಾರವನ್ನು ಬಹಳ ಇಷ್ಟಪಟ್ಟು ತಿನ್ನುತ್ತೇನೆ. ಚಿಕನ್ ಟಿಕ್ಕಾ, ಸೀಖ್ ಕಬಾಬ್ ಮತ್ತು ಆಮ್ಲೆಟ್ ಫೇವರಿಟ್ ಆಹಾರಗಳು.
ಮೋತಿ ಮಹಲ್ ನನಗೆ ಇಷ್ಟ: ನಾನು ಮೊದಲು ಹಳೆ ದೆಹಲಿಗೆ ಹೋಗುತ್ತಿದ್ದೆ. ಈಗ ಮೋತಿ ಮಹಲ್‌ಗೆ ಹೋಗುತ್ತಿದ್ದೇನೆ. ಕೆಲವೊಮ್ಮೆ ಸಾಗರ್, ಸ್ವಾಗತ ಮತ್ತು ಸರ್ವಣ ಭವನಕ್ಕೂ ಹೋಗುತ್ತೇನೆ. ಈ ಎಲ್ಲಾ ಪ್ರದೇಶಗಳಿಗೆ ಹೋಗುವುದು ನನಗೆ ಬಹಳ ಇಷ್ಟವಾಗುತ್ತದೆ.
ಭದ್ರತೆಯ ಕಾರಣದಿಂದ ಶಾಲೆಗೆ ಹೋಗುತ್ತಿರಲಿಲ್ಲ: ನಾನು ಬೋರ್ಡಿಂಗ್ ಶಾಲೆಯಲ್ಲಿ ಓದಿದ್ದೆ. ಆದರೆ, ಅಜ್ಜಿ ಕೊಲೆಯಾಗುವ ಮುನ್ನ ಬೋರ್ಡಿಂಗ್ ಶಾಲೆಯಿಂದ ನಮ್ಮನ್ನು ಬಿಡಿಸಲಾಗಿತ್ತು. ಆ ಬಳಿಕ ನಮಗೆ ಹೋಮ್ ಸ್ಕೂಲಿಂಗ್ ನಡೆಯುತ್ತಿತ್ತು. ಭದ್ರತೆಯ ದೃಷ್ಟಿಯಿಂದ ನಮಗೆ ಶಾಲೆಗೆ ಹೋಗಲು ಅನುಮತಿ ನೀಡುತ್ತಿರಲಿಲ್ಲ.
ಕೆಂಬ್ರಿಜ್ ವಿವಿ ಪದವೀಧರ: ನಾನು ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಹಲವು ವರ್ಷಗಳ ಕಾಲ ಇದ್ದೆ. ಅಲ್ಲಿ ನಾನು ಇತಿಹಾಸವನ್ನು ಅಧ್ಯಯನ ಮಾಡಿದೆ. ಇದರ ನಂತರ ನಾನು ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ಹೋದೆ, ಅಲ್ಲಿ ನಾನು ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ರಾಜಕೀಯವನ್ನು ಓದಿದೆ. ಆಗ ತಂದೆ ತೀರಿಕೊಂಡರು. ಇದರ ನಂತರ ನಾನು ಅಮೆರಿಕದ ರೋಲಿನ್ಸ್ ಕಾಲೇಜಿಗೆ ಹೋದೆ, ಅಲ್ಲಿ ನಾನು ಅಂತರರಾಷ್ಟ್ರೀಯ ಸಂಬಂಧಗಳು, ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ್ದೇನೆ. ನಾನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಲಂಡನ್‌ನಲ್ಲಿ ಮೊದಲ ಕೆಲಸ: ನಾನು ಲಂಡನ್‌ನಲ್ಲಿ ನನ್ನ ಮೊದಲ ಕೆಲಸ ಮಾಡಿದೆ. ಕಂಪನಿಯ ಹೆಸರು 'ಮಾನಿಟರ್', ಇದು ಕಾರ್ಯತಂತ್ರದ ಸಲಹಾ ಕಂಪನಿಯಾಗಿತ್ತು. ಆಗ ನನಗೆ ಸಿಗುತ್ತಿದ್ದ ಸಂಬಳ ಆ ಕಾಲಕ್ಕೆ ತಕ್ಕಂತೆ ಜಾಸ್ತಿ ಇತ್ತು. ಆ ಹಣವೆಲ್ಲ ಮನೆ ಬಾಡಿಗೆ ಮತ್ತಿತರ ಕೆಲಸಗಳಿಗೆ ಖರ್ಚಾಗುತ್ತಿತ್ತು. ಆ ಸಮಯದಲ್ಲಿ ನನಗೆ 2500 ರಿಂದ 3 ಸಾವಿರ ಪೌಂಡ್‌ಗಳ ಸಂಬಳ ಸಿಗುತ್ತಿತ್ತು. ಆಗ ನನಗೆ 25 ವರ್ಷ.
ಅಜ್ಜಿಯ ಸಾವು ಪ್ರಭಾವ ಬೀರಿತು: ನಾನು ರಾಜಕೀಯ ಕುಟುಂಬದಿಂದ ಬಂದವನು. ನಾವು ಚಿಕ್ಕವರಿದ್ದಾಗ, ಡೈನಿಂಗ್ ಟೇಬಲ್‌ನಲ್ಲಿ ರಾಜಕೀಯ, ಭಾರತ ಮತ್ತು ಆ ಸಮಯದಲ್ಲಿ ನಡೆಯುತ್ತಿರುವ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತಿತ್ತು. ಅಜ್ಜಿಯ ಸಾವಿನ ನಂತರವೂ ಎಲ್ಲವೂ ಬದಲಾಯಿತು. ತಂದೆಯ ಮರಣವೂ ರಾಜಕೀಯಕ್ಕೆ ಸೇರಲು ಸ್ವಲ್ಪ ಪ್ರಭಾವ ಬೀರಿತು.
ಭಾರತ್ ಜೋಡೋ ಯಾತ್ರೆಯ ವೇಳೆ ಕಾಂಗ್ರೆಸ್ ಸಂಸದ ಸಂತೋಕ್ ಸಿಂಗ್ ನಿಧನ!
ಸರಿಯಾದ ಹುಡುಗಿ ಸಿಕ್ಕರೆ ಮದುವೆ: ನನಗೆ ಸರಿಯಾದ ಹುಡುಗಿ ಸಿಕ್ಕಾಗ ನಾನು ಮದುವೆಯಾಗುತ್ತೇನೆ. ಅಪಾರ ಪ್ರೀತಿ ಹಾಗೂ ಬುದ್ಧಿವಂತಿಕೆ ಹೊಂದಿರುವ ವ್ಯಕ್ತಿ ಆಗಿರಬೇಕು ಎನ್ನುವುದೊಂದೇ ನನ್ನ ಷರತ್ತು. ನನ್ನ ಪೋಷಕರ ವಿವಾಹ ಅತ್ಯದ್ಬುತವಾಗಿತ್ತು. ಅದಕ್ಕಾಗಿಯೇ ನನಗೆ ಮದುವೆಯ ಬಗ್ಗೆ ಹೆಚ್ಚಿನ ಆಲೋಚನೆಗಳಿವೆ. ನಾನು ಕೂಡ ಅಂತಹ ಜೀವನ ಸಂಗಾತಿಯನ್ನು ಹುಡುಕುತ್ತಿದ್ದೇನೆ.
ಜನವರಿ 30 ರಂದು ಶ್ರೀನಗರದಲ್ಲಿ ಭಾರತ್ ಜೋಡೋ ಸಮಾರೋಪ: 21 ಪಕ್ಷಕ್ಕೆ ಆಹ್ವಾನ
ಸಿಟ್ಟು ಬಂದಾಗ ಮೌನವಾಗುತ್ತೇನೆ: ನನಗೆ ತುಂಬಾ ಕೋಪ ಬಂದಾಗ, ನಾನು ಸಂಪೂರ್ಣವಾಗಿ ಮೌನವಾಗುತ್ತೇನೆ ಅಥವಾ ಹಾಗೆ ಮಾಡಬೇಡ ಎಂದು ಹೇಳುತ್ತೇನೆ. ಮೊದಲು ನಾನು ಮತ್ತು ಸಹೋದರಿ ತುಂಬಾ ಜಗಳವಾಡುತ್ತಿದ್ದೆವು, ಆದರೆ ತಂದೆಯ ಮರಣದ ನಂತರ ನಾವು ಜಗಳವಾಡುವುದನ್ನು ನಿಲ್ಲಿಸಿದ್ದೇವೆ.
ವಾಟ್ಸಾಪ್ ಬಳಕೆ ಜಾಸ್ತಿ ಮಾಡ್ತೇನೆ: ಪಾಸ್‌ಪೋರ್ಟ್, ಐಡಿ, ರುದ್ರಾಕ್ಷಿ, ಶಿವ ಮತ್ತು ಬುದ್ಧನ ಚಿತ್ರಗಳನ್ನು ಹಾಸಿಗೆಯ ಪಕ್ಕದ ಡ್ರಾಯರ್‌ನಲ್ಲಿ ಇರಿಸಿಕೊಳ್ಳುತ್ತೇನೆ ಇದರೊಂದಿಗೆ ಪರ್ಸ್ ಮತ್ತು ಫೋನ್ ಕೂಡ ಇರುತ್ತದೆ. ರಾತ್ರಿ ಮಲಗುವಾಗ ನಾನು ನನ್ನ ಫೋನ್ ಅನ್ನು ಪಕ್ಕಕ್ಕೆ ಇಡುತ್ತೇನೆ. ನಾನು ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಸುವುದಿಲ್ಲ. ನಾನು ವಾಟ್ಸಾಪ್ ಅನ್ನು ಮಾತ್ರ ಬಳಸುತ್ತೇನೆ ಮತ್ತು ಕೆಲವು ಯುವಕರಿಗೆ ಸಲಹೆ ನೀಡುತ್ತೇನೆ.
ಪ್ರಧಾನಿಯಾದರೆ ಶಿಕ್ಷಣ ವ್ಯವಸ್ಥೆ ಬದಲಿಸುತ್ತೇನೆ: ನಾನು ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಲು ಬಯಸುತ್ತೇನೆ. ಸಣ್ಣ ವ್ಯಾಪಾರದಲ್ಲಿ ತೊಡಗಿರುವ ಜನರಿಗೆ ಸಹಾಯ ಮಾಡಲು ನಾನು ಬಯಸುತ್ತೇನೆ. ಈ ಸಮಯದಲ್ಲಿ ಈ ಜನರನ್ನು ದೊಡ್ಡ ಉದ್ಯಮಕ್ಕೆ ಕರೆದೊಯ್ಯುವ ಅವಶ್ಯಕತೆಯಿದೆ. ರೈತರು, ಕಾರ್ಮಿಕರು ಮತ್ತು ನಿರುದ್ಯೋಗಿ ಯುವಕರಂತಹ ಕೆಟ್ಟ ಕಾಲವನ್ನು ಎದುರಿಸುತ್ತಿರುವವರಿಗೆ ನಾನು ಭದ್ರತೆಯನ್ನು ನೀಡಲು ಬಯಸುತ್ತೇನೆ.