ಅಕ್ಕಪಕ್ಕದಲ್ಲೇ ಕುಳಿತುಕೊಂಡು ಪರಸ್ಪರ ಟಾಂಗ್ ಕೊಟ್ಟುಕೊಂಡ ಶ್ರೀರಾಮುಲು, ಶಾಸಕ ಗಣೇಶ

By Suvarna NewsFirst Published Sep 1, 2022, 2:50 PM IST
Highlights

ಕಾರ್ಯಕ್ರಮವೊಂದರಲ್ಲಿ ಅಕ್ಕಪಕ್ಕದಲ್ಲಿ ಕುಳಿತುಕೊಂಡೇ ಪರಸ್ಪರ ಟಾಂಗ್ ಕೊಟ್ಟಿಕೊಂಡಿದ್ದಾರೆ ಸಚಿವ‌ ಶ್ರೀರಾಮುಲು‌ ಮತ್ತು ಶಾಸಕ ಗಣೇಶ.

ವರದಿ : ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ, (ಸೆಪ್ಟೆಂಬರ್.01): ಎಸ್ಟಿ ಮೀಸಲಾತಿಗೆ ಸಂಬಂಧಿಸಿದಂತೆ ಸಚಿವ ಶ್ರೀರಾಮುಲು ಹಾಗೂ ಕಾಂಗ್ರೆಸ್ ಶಾಸಕ ಗಣೇಶ್ ಪರಸ್ಪರ ಕಾಲೆಳೆದುಕೊಂಡಿರುವ ಪ್ರಸಂಗ ನಡೆದಿದೆ. ಕೋಳೂರು ಏತ ನೀರಾವರಿ ಕಾಮಗಾರಿ ಉದ್ಘಾಟನೆ  ವೇಳೆ ಇಬ್ಬರು ನಾಯಕರು ಜನರ ಮನವೊಲೈಕೆ ಮಾಡೋ ವಿಚಾರ ದಲ್ಲಿ ಪರಸ್ಪರ ಅಕ್ಕಪಕ್ಕದಲ್ಲಿ ಇದ್ದುಕೊಂಡು ಆರೋಪ-ಪ್ರತ್ಯಾರೋಪ ಮಾಡಿದ್ದಾರೆ. 

ಹೌದು, ಮೊನ್ನೆ ಎಸ್ಟಿ ಮೀಸಲಾತಿ ವಿಚಾರದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶ್ರೀರಾಮುಲು ವಿರುದ್ಧ ಖಾರವಾಗಿ ಟ್ವಿಟ್ ಮಾಡಿದ್ರು. ಅಧಿಕಾರಕ್ಕೆ ಬಂದ ಕೂಡಲೇ ಮೀಸಲಾತಿ ಕೊಡ್ತೇವೆ ಎಂದಿದ್ರಿ. ಆದರೀಗ ಏನು ಮಾಡುತ್ತಿದ್ದೀರಿ  ಎಂದು ಶ್ರೀರಾಮುಲು ಅವರಿಗೆ ವ್ಯಂಗ್ಯ ಮಾಡಿದ್ರು. ಅದೇ ವಿಚಾರವಾಗಿ ಮಾತನಾಡಿದ ಶ್ರೀರಾಮುಲು ಎಸ್ಟಿ ಮೀಸಲಾತಿ ವಿಚಾರದಲ್ಲಿ ಯಾರು ಏನೇ ಮಾತನಾಡಿದ್ರು ನಮ್ಮ ಸರ್ಕಾರ ಮೀಸಲಾತಿ ನೀಡುತ್ತದೆ. ಯಾರಿಂದ ನಾವು ಏನು ಹೇಳಿಸಿಕೊಳ್ಳುವ ಅಗತ್ಯತೆ ಇಲ್ಲವೆಂದು ತಿರುಗೇಟು ನೀಡಿದ್ದಾರೆ.

ಬಳ್ಳಾರಿ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಾರಿಂದ ಬುದ್ಧಿಕಲಿಯೋ ಅಗತ್ಯತೆ ಇಲ್ಲ
ಇನ್ನೂ ತಾವು ಮೂವತ್ತು ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ ನನಗೆ ಯಾರು ಬುದ್ದಿ ಕಲಿಸೋದು ಬೇಕಿಲ್ಲ. ಸಿದ್ದರಾಮಯ್ಯ ಅವರಿಗೆ ಉತ್ತರ ಕೊಡೋ ಸಮಯವಿದಲ್ಲ ಯಾಕಂದ್ರೇ, ಪಕ್ಕದಲ್ಲಿ ಅವರ ( ಕಾಂಗ್ರೆಸ್ ಶಾಸಕ ಗಣೇಶ ) ಶಾಸಕರಿದ್ದಾರೆ ಅವರಿಗೆ ಮುಜುಗರ ಮಾಡಲ್ಲ.ಎಸ್ಟಿ ಮೀಸಲಾತಿ ವಿಚಾರದಲ್ಲಿ ನನ್ನ  ಮಾತಿಗೆ ನಾನು ಬದ್ಧವಾಗಿದ್ದೇನೆ.ಅವರೇನು‌ ಮುಖ್ಯಮಂತ್ರಿ ( ಸಿದ್ದರಾಮಯ್ಯ) ಇದ್ದಾಗ ಮೀಸಲಾತಿ ಮಾಡಿಲ್ಲವೋ ಅದನ್ನು ನಾವು ಮಾಡ್ತೇವೆಂದ ಭರ್ಜರಿ ವಾಗ್ದಾಳಿ ನಡೆಸಿದ್ರು. ಇನ್ನೂ ಅಭಿವೃದ್ಧಿ ಪರವಾಗಿರೋ ನಮ್ಮ ಸರ್ಕಾರದಲ್ಲಿ ಇದೊಂದೇ ಏತ ನೀರಾವರಿ ಕಾಮಗಾರಿ ಅಲ್ಲ ಯಾವೇಲ್ಲ ಕಾಮಗಾರಿ ಹಾಗೇಯೇ ಉಳಿದಿವೆ ಅದನ್ನೆಲ್ಲವನ್ನು ಪೂರ್ಣಗೊಳಿಸುತ್ತೇವೆ ಎಂದರು.

ಮುರುಗಾ ಶರಣ ವಿಚಾರದಲ್ಲಿ ಪ್ರತಿಕ್ರಿಯೆ ನೀಡಲ್ಲ
ಇನ್ನೂ ಮುರುಗಾ ಶರಣರ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅದನ್ನು ಪೊಲೀಸರು ಸೇರಿದಂತೆ ಹಲವು ತನಿಖಾ ಸಂಸ್ಥೆಗಳು ತನಿಖೆ ಮಾಡುತ್ತೀವೆ ಈಗಲೇ ಈ ಬಗ್ಗೆ ಏನನ್ನು ಹೇಳಲಾಗೋದಿಲ್ಲ.  ಅದೆಲ್ಲವೂ ಕಾನೂನಿನ ವ್ಯಾಪ್ತಿಯಲ್ಲಿ ಇರೋದ್ರಿಂದ ಈಗ ಆ ಬಗ್ಗೆ ಏನು ಮಾತನಾಡೋದಿಲ್ಲವೆಂದ್ರು.

 ಶ್ರೀರಾಮುಲು ವಿರುದ್ಧ ಶಾಸಕ ಗಣೇಶ ವಾಗ್ದಾಳಿ
ಇನ್ನೂ ಶ್ರೀರಾಮುಲು ಮಾತು ಮುಗಿಯುತ್ತಿ ದ್ದಂತೆಯೇ ಮಾತಿಗಳಿದ ಶಾಸಕ ಗಣೇಶ ಅವರು ಶ್ರೀರಾಮುಲು ವಿರುದ್ಧ ಭರ್ಜರಿ ವಾಗ್ದಾಳಿ ನಡೆಸಿದ್ರು.ರಾಜಕಾರಣಿಯಾದವರು ಒಮ್ಮೆ ಯಾದ್ರೂ ಸತ್ಯ ಹೇಳಬೇಕು. ಕಳೆದ ಹತ್ತು ವರ್ಷದಿಂದ ಮೀಸಲಾತಿ ವಿಚಾರದಲ್ಲಿ ಇದನ್ನೇ ಮಾಡ್ತಿದ್ದಾರೆ. ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಮೀಸಲಾತಿ ಕೊಡ್ತೇವೆ. ರಕ್ತದಲ್ಲಿ ಬರೆದುಕೊಡ್ತೇವೆ ಕೊನೆಗೆ ರಾಜೀನಾಮೆ ನೀಡ್ತೇನೆ ಎಂದ್ರು ಶ್ರೀರಾಮುಲು..ಆದ್ರೇ, ಏನು ಮಾಡುತ್ತಿದ್ದಾರೆ ಕೇವಲ ಭರವಸೆಗಳೊಂದಿಗೆ ಕಾಲಕಳೆಯುತ್ತಿದ್ದಾರೆ. ಇನ್ನೂ ಮೀಸಲಾತಿ ಕೋಡ್ತೇವೆ ಎನ್ನೋ ಕಾರಣಕ್ಕೆ ವಾಲ್ಮೀಕಿ ‌ಜನಾಂಗದವರು ಬಿಜೆಪಿಗೆ  ಮತ ಹಾಕಿದ್ದಾರೆ. ಇನ್ನೂ ಬಿಜೆಪಿ 105 ಕ್ಷೇತ್ರದಲ್ಲಿ ಗೆಲ್ಲಲು ಪರೋಕ್ಷವಾಗಿ ವಾಲ್ಮೀಕಿ ಸ್ವಾಮೀಜಿ ಸಪೋರ್ಟ್ ಮಾಡಿದ್ದಾರೆ.. ಆದ್ರೇ ಇವರು ಮಾಡ್ತಿರೋದೇನು ಸಮಾಜಕ್ಕೆ ಸುಳ್ಳು ಹೇಳಿ ಮತ ಪಡೆದ ಶ್ರೀರಾಮುಲು ಮತ್ತು ಬಿಜೆಪಿ ತಕ್ಕ ಪಾಠ ಕಲಿಸುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದ್ರು.

ಕಾಮಗಾರಿ ಕ್ರೆಡಿಟ್ ವಾರ್
ಇನ್ನೂ ಏತ ನೀರಾವರಿ ಕಾಮಗಾರಿ ವಿಚಾರದಲ್ಲಿ ಇದು ನಮ್ಮ ಸರ್ಕಾರದ್ದು ಎಂದು ಶ್ರೀರಾಮುಲು ಹೇಳಿದ್ರೇ.. ನೀರಾವರಿ ಕಾಮಗಾರಿ ಸಮ್ಮಿಶ್ರ ಸರ್ಕಾರದ್ದು ಎಂದು ಗಣೇಶ ಹೇಳೋ ಮೂಲಕ ಕಾಮಗಾರಿ ಕ್ರೆಡಿಟ್ ತೆಗೆದುಕೊಳ್ಳುವ ವಿಚಾರದಲ್ಲಿ ಜನರೆದುರು ನಾಮುಂದು ತಾಮುಂದು ಎನ್ನುವಂತೆ ಮಾತನಾಡಿದ್ರು.

ಕುಂಟುತ್ತಾ  ಹೋದ ಶ್ರೀರಾಮುಲು  
ಕೋಳೊರು ಏತ ನೀರಾವರಿ ಪುನಶ್ಚೇತನ ಕಾಮಗಾರಿ ವೇಳೆ ಜನರ ನೂಕುನುಗ್ಗಿನಲ್ಲಿ ಸಚಿವ ಶ್ರೀರಾಮುಲು ಕಾಲ್ತುಳಿತಕ್ಕೊಳಗಾದ್ರು. ಜನರ ನೂಕು ನುಗ್ಗಲಿಂದಾಗಿ ಮತ್ತು ಗಣೇಶ ಬೆಂಬಲಿಗರ ಜೈಕಾರಕ್ಕೆ ಸಚಿವ ಶ್ರೀರಾಮುಲು ಅಕ್ಷರಷಃ  ಹೈರಾಣಾಗಿ ಹೋದ್ರು. ಕಾಮಗಾರಿ ಕ್ರೆಡಿಟ್ ತೆಗೆದುಕೊಳ್ಳುವ ಭರಾಟೆಯಲ್ಲಿ ಎರಡು ಬಣದವರಿಂದ ಜಯಕಾರ ನೂಕುನುಗ್ಗಲು ಉಂಟಾಯಿತು. ಕಿರಿದಾದ ಸ್ಥಳದಲ್ಲಿ ಜಾಕ್ವೇಲ್ ಮೇಲಿಂದ ಕೆಳಗೆ ಇಳಿಯೋ ವೇಳೆ ಒಂದಷ್ಟು ಜನರು ಶ್ರೀರಾಮುಲು ಕಾಲು ತುಳಿದ್ರು. ಕಾಲು ನೋವಿನಿಂದ ಬಳಲಿದ ಶ್ರೀರಾಮುಲು ಉದ್ಘಾಟನೆ ಮುಗಿಯೋವರೆಗೂ ಕುಂಟುತ್ತಲೇ ನಡೆದ್ರು.

click me!