
ನವದೆಹಲಿ, (ಮಾ.19): ಒಂದು ಕಡೆ ಮಾಹಾಮಾರಿ ಕೊರೋನಾ ವೈರಸ್ ಭೀತಿ ಶುರುವಾಗಿದ್ರೆ, ಮತ್ತೊಂದೆಡೆ ಮಧ್ಯಪ್ರದೇಶದಲ್ಲಿ ರಜಕೀಯ ಹೈಡ್ರಾಮಾ ನಡೆಯುತ್ತಿದೆ. ಇದೀಗ ಈ ಹೈಡ್ರಾಮಕ್ಕೆ ತೆರೆ ಎಳೆಯಲು ಸುಪ್ರೀಂಕೋರ್ಟ್ ಮಹತ್ವದ ಆದೇಶವನ್ನ ನೀಡಿದೆ.
ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟಿಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ನಾಳೆ ಅಂದ್ರೆ ಶುಕ್ರವಾರ ಸಂಜೆ 5 ಗಂಟೆಯೊಳಗೆ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಹುಮತ ಸಾಬೀತುಪಡಿಸಬೇಕೆಂದು ಆದೇಶ ಹೊರಡಿಸಿದೆ. ಅಲ್ಲದೇ ಕಲಾಪದಲ್ಲಿ ಶಾಸಕರುಗಳು ಕೈ ಎತ್ತುವ ಮೂಲಕ ಎಣಿಕೆ ನಡೆಯಬೇಕೆಂದು ಸಹ ಸುಪ್ರೀಂ ತನ್ನ ಆದೇಶದಲ್ಲಿ ಸೂಚಿಸಿದೆ.
ಮಧ್ಯಪ್ರದೇಶ, ಕಮಲ್ ನಾಥ್ ಸರ್ಕಾರ ಉಳಿಸಲು ಮುಂದಾದ ಈ 13ರ ಪೋರ ಯಾರು?
ಈ ಹಿನ್ನೆಲೆಯಲ್ಲಿ ಕೊರೋನಾ ನೆಪವೊಡ್ಡಿ ಕಲಾಪವನ್ನ ಸ್ಪೀಕರ್ ಮುಂದೂಡಿದ್ದರು. ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ್ವಿ ಅನ್ನೋ ಕೈ ನಾಯಕರ ಕನವರಿಕೆಗೂ ಸುಪ್ರೀಂಕೋರ್ಟ್ ಕೊಳ್ಳಿ ಇಟ್ಟಿದೆ.
ಇನ್ನೇನಿದ್ರೂ ಮಧ್ಯಪ್ರದೇಶ ರಾಜಕೀಯ ಹೈಡ್ರಾಮಾ ನಾಳೆಯೇ (ಶುಕ್ರವಾರ) ಅಂತ್ಯವಾಗಲಿದೆ. ಇದು ಸಿಎಂ ಕಮಲ್ನಾಥ್ಗೆ ಒಂದ್ ರೀತಿ ಕೈ ಕಾಲು ಕಟ್ಟಿದಂತೆ ಆಗಿದ್ದು, ಸರ್ಕಾರ ಉಳಿವಿಗಾಗಿ ಕಸರತ್ತು ಮುಂದುವರೆದಿದೆ.
ಮಧ್ಯಪ್ರದೇಶ ವಿಧಾನಸಭೆಯ ಬಲ
ಮಧ್ಯಪ್ರದೇಶ ವಿಧಾನಸಭೆಯ ಸದಸ್ಯ ಬಲ ಈ ಮೊದಲು 230 ಇತ್ತು. ಆದ್ರೆ ಇಬ್ಬರು ಶಾಸಕರ ನಿಧನದಿಂದ ಎರಡು ಸ್ಥಾನ ತೆರವಾಗಿದೆ.ಈ ಹಿನ್ನೆಲಯಲ್ಲಿ ಮ್ಯಾಜಿಕ್ ನಂ - 115 ಆಗಿದೆ.
ಮಧ್ಯಪ್ರದೇಶ ಸರ್ಕಾರ ಮತ್ತೆ ಸಡ್ಡು: ರಾಜ್ಯಪಾಲ, ಸಿಎಂ ನಡುವೆ ಲೆಟರ್ ವಾರ್!
ಸದ್ಯ ಬಿಜೆಪಿಗೆ 107 ಶಾಸಕರ ಬಲವಿದ್ರೆ, ಕಾಂಗ್ರೆಸ್ಗೆ ಶಾಸಕರ ಬಲ 92 ಕ್ಕೆ ಕುಸಿದಿದೆ. ಯಾಕಂದ್ರೆ 22 ಶಾಸಕರು ರಾಜೀನಾಮೆ ಕೊಟ್ಟಿದ್ದು, ಕಾಂಗ್ರೆಸ್ ಕುತ್ತಿಗೆಗೆ ಬಂದಂತಾಗಿದೆ. ಇದ್ರ ಜೊತೆಗೆ ಬಿಎಸ್ಪಿಯಿಂದ 02, ಎಸ್ಪಿಯಿಂದ 1, ಇತರೆ 04 ಶಾಸಕರ ಬೆಂಬದೊಂದಿಗೆ ಸರ್ಕಾರ ರಚನೆ ಮಾಡಿದ್ದ, ಕಾಂಗ್ರೆಸ್ ಈಗ ಸಂಖ್ಯಾ ಬಲವಿಲ್ಲದೇ ಪರದಾಡ್ತಿದೆ.
ಒಟ್ಟಿನಲ್ಲಿ ಕಳೆದ 15ದಿನಗಳಿಂದ ನಡೆಯುತ್ತಿರುವ ಹೈಡ್ರಾಮ ಶುಕ್ರವಾರ ಅಂತ್ಯ ಕಾಣುವುದಂತೂ ಸತ್ಯ. ಆದ್ರೆ, ಶುಭ ಶಕ್ರವಾರ ಕಾಂಗ್ರೆಸ್‌ಗೋ ಅಥವಾ ಬಿಜೆಪಿಗೋ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.