17 ಶಾಸಕರ ಅನರ್ಹತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ : ಕೊಂಚ ರಿಲೀಫ್

By Web Desk  |  First Published Nov 13, 2019, 10:44 AM IST

ತಮ್ಮನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ 17 ಶಾಸಕರು ಸುಪ್ರೀಂ ಕೋರ್ಟ್ ಸಲ್ಲಿಸಿರುವ ಅರ್ಜಿ ಬಗೆಗಿನ ತೀರ್ಪು ಪ್ರಕಟವಾಗಿದೆ.  ಇದರೊಂದಿಗೆ ಕಳೆದ ನಾಲ್ಕೂವರೆ ತಿಂಗಳ ರಾಜ್ಯ ರಾಜಕೀಯದ ನಾಟಕೀಯ ಬೆಳವಣಿಗೆಗಳಿಗೆ ತೆರೆ ಬಿದ್ದಿದೆ.


ನವದೆಹಲಿ [ನ.13] :  ರಾಜ್ಯ ವಿಧಾನಸಭೆಯಿಂದ ಅಂದಿನ ಸ್ಪೀಕರ್ ರಮೇಶ್ ಕುಮಾರ್ ತಮ್ಮನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ 17 ಶಾಸಕರು ಸುಪ್ರೀಂ ಕೋರ್ಟ್ ಸಲ್ಲಿಸಿರುವ ಅರ್ಜಿ ಬಗೆಗಿನ ತೀರ್ಪು ಪ್ರಕಟವಾಗಿದೆ.  ಇದರೊಂದಿಗೆ ಕಳೆದ ನಾಲ್ಕೂವರೆ ತಿಂಗಳ ರಾಜ್ಯ ರಾಜಕೀಯದ ನಾಟಕೀಯ ಬೆಳವಣಿಗೆಗಳಿಗೆ ತೆರೆ ಬಿದ್ದಂತಾಗಿದೆ. ಅನರ್ಹತೆಯನ್ನು ಅಂಗೀಕಾರ ಮಾಡಿ, ಸ್ಪೀಕರ್ ಆದೇಶ ಎತ್ತಿ ಹಿಡಿದೆ.

ನ್ಯಾ. ವಿ.ರಮಣ ನೇತೃತ್ವದ ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ಅವರನ್ನು ಒಳಗೊಂಡ ಪೀಠ ಸ್ಪೀಕರ್ ಆದೇಶ ಎತ್ತಿ ಹಿಡಿದಿದೆ. 17 ಶಾಸಕರನ್ನು ಅನರ್ಹರೆಂದು ತೀರ್ಪು ನೀಡಿದೆ.  ಆದರೆ ಡಿಸೆಂಬರ್ 5 ರಂದು ನಡೆಯುವ ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ನೀಡಿದೆ. 

Latest Videos

undefined

ಆದರೆ ಅವರಿಗೆ ಮಂತ್ರಿ ಆಗುವ ಅವಕಾಶ ಇಲ್ಲವೆಂದು ಹೇಳಿದ್ದು, ಅನರ್ಹತೆಗೆ ಸ್ಪೀಕರ್ ವಿಧಿಸಿದ್ದ ಅವಧಿಯನ್ನು ರದ್ದು ಮಾಡಿದೆ.  ಈ ಮೂಲಕ ಅವಧಿ ನಿರ್ಧರಿಸುವ ಹಕ್ಕು ಸ್ಪೀಕರ್‌ ಗೆ ಇಲ್ಲವೆಂದಿದೆ. ಶೆಡ್ಯೂಲ್ 2ಎ ಅಡಿಯಲ್ಲಿ ಅನರ್ಹತೆ ತೀರ್ಪು ತಿರಸ್ಕರಿಸಿದೆ. 

ಅನರ್ಹರ ಕ್ಷೇತ್ರಗಳಿಗೆ ಉಪ ಕದನ ಶುರು...

ಜುಲೈನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಸೇರಿದ ಒಟ್ಟು 15 ಶಾಸಕರು ಆಗಿನ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದರು.

ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ 15 ಶಾಸಕರು ಹಾಗೂ ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ಮತ ಯಾಚಿಸುವ ವೇಳೆ ಸದನದಲ್ಲಿ ಅನಾರೋಗ್ಯದ ನೆಪವೊಡ್ಡಿ ಹಾಜರಿರದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಹಾಗೂ ರಾಣೆಬೆನ್ನೂರು ಶಾಸಕ ಕೆಪಿಜೆಪಿಯ ಶಂಕರ್ ಅವರನ್ನೂ ಅನರ್ಹಗೊಳಿಸಿ ಆಗಿನ ಸ್ಪೀಕರ್ ರಮೇಶ್ ಕುಮಾರ್ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಜುಲೈ 28ಕ್ಕೆ ಮೊದಲ ಅರ್ಜಿ ಮತ್ತು ಆ. 3 ರಂದು 9ನೇ ಹಾಗೂ ಕೊನೆಯ ಅರ್ಜಿ ಸುಪ್ರೀಂ ಕೋರ್ಟಿನಲ್ಲಿ ದಾಖಲಾಗಿವೆ.

ಆದರೆ ಈ ಶಾಸಕರ ಮೇಲೆ ಆಯಾ ಪಕ್ಷಗಳ ನಾಯಕರು ನೀಡಿದ ಅನರ್ಹತೆಯ ದೂರನ್ನು ಪರಿಗಣಿಸಿದ ಸ್ಪೀಕರ್ ಇವರನ್ನು ಪ್ರಸಕ್ತ ವಿಧಾನಸಭಾ ಅವಧಿ ಅಂದರೆ 2023ರವರೆಗೆ ವಿಧಾನಸಭೆಯಿಂದ ಅನರ್ಹಗೊಳಿಸಿದ್ದರು.

ನೀವು ಹಾಕಿದ್ದೇನು, ಚಾಕುನಾ, ಚೂರಿನಾ? ಸಿದ್ದು ವಿರುದ್ಧ ಅನರ್ಹ ಶಾಸಕ ಬಾಂಬ್!...

ರಮೇಶ್ ಜಾರಕಿಹೊಳಿ, ಗೋಕಾಕ್ - ಕಾಂಗ್ರೆಸ್
ಮಹೇಶ್ ಕುಮಟಳ್ಳಿ, ಅಥಣಿ - ಕಾಂಗ್ರೆಸ್
ಶಂಕರ್, ರಾಣೆಬೆನ್ನೂರು - ಕೆಪಿಜೆಪಿ
ಆನಂದ್ ಸಿಂಗ್, ಹೊಸಪೇಟೆ - ಕಾಂಗ್ರೆಸ್
ವಿಶ್ವನಾಥ್, ಹುಣಸೂರು - ಜೆಡಿಎಸ್
ಪ್ರತಾಪ್ ಗೌಡ ಪಾಟೀಲ್, ಮಸ್ಕಿ - ಕಾಂಗ್ರೆಸ್ 
ಬಿ.ಸಿ. ಪಾಟೀಲ್, ಹಿರೆಕೇರೂರು - ಕಾಂಗ್ರೆಸ್
ಶಿವರಾಂ ಹೆಬ್ಬಾರ್, ಯಲ್ಲಾಪುರ - ಕಾಂಗ್ರೆಸ್
ನಾರಾಯಣಗೌಡ, ಕೆಆರ್.ಪೇಟೆ - ಜೆಡಿಎಸ್
ಎಸ್.ಟಿ. ಸೋಮಶೇಖರ್, ಯಶವಂತಪುರ - ಕಾಂಗ್ರೆಸ್
ಗೋಪಾಲಯ್ಯ, ಮಹಾಲಕ್ಷ್ಮಿ ಲೇಔಟ್ - ಜೆಡಿಎಸ್
ಭೈರತಿ ಬಸವರಾಜ್, ಕೆ.ಆರ್.ಪುರಂ - ಕಾಂಗ್ರೆಸ್
ಮುನಿರತ್ನ, ಆರ್.ಆರ್.ನಗರ - ಕಾಂಗ್ರೆಸ್
ರೋಷನ್ ಬೇಗ್, ಶಿವಾಜಿನಗರ - ಕಾಂಗ್ರೆಸ್
ಎಂಟಿಬಿ ನಾಗರಾಜ್, ಹೊಸಕೋಟೆ - ಕಾಂಗ್ರೆಸ್
ಸುಧಾಕರ್, ಚಿಕ್ಕಬಳ್ಳಾಪುರ - ಕಾಂಗ್ರೆಸ್ 
ಶ್ರೀಮಂತ್ ಪಾಟೀಲ್, ಕಾಗವಾಡ - ಜೆಡಿಎಸ್

ಈ ರಾಜೀನಾಮೆಯೇ ಏಟಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿತ್ತು. ತಮ್ಮ ರಾಜೀನಾಮೆಯನ್ನು ಪರಿಗಣಿಸದೇ ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ್ದಾರೆ ಎಂದು 15 ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಈ ಶಾಸಕರನ್ನು ಅನರ್ಹಗೊಳಿಸುವ ಸಂದರ್ಭದಲ್ಲಿ ಸ್ಪೀಕರ್ ಸಹಜ ನ್ಯಾಯಾ ಪರಿಕಲ್ಪನೆಯನ್ನು ಪಾಲಿಸಿಲ್ಲ. ವಿಶ್ವಾಸಮತ ಯಾಚಿಸುವ ಅಧಿವೇಶನದಲ್ಲಿ ಪಾಲ್ಗೊಳ್ಳುವ ಅಥವಾ ಗೈರಾಗುವ ಸಂಬಂಧ ಸುಪ್ರೀಂ ಕೋರ್ಟ್ ಅನರ್ಹಗೊಂಡ ಶಾಸಕರ ವಿವೇಚನೆಗೆ ಬಿಟ್ಟಿತ್ತು. ರಾಜೀನಾಮೆ ಮೂಲಭೂತ ಹಕ್ಕು, ಈ ಕಾರಣಕ್ಕೆ ಶಾಸಕರನ್ನು ಅನರ್ಹಗೊಳಿಸುವ ಹಕ್ಕು ಸ್ಪೀಕರ್‌ಗಿಲ್ಲವೆಂದು ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ವಾದಿಸಿದ್ದರು.

ಆದರೆ, ಬಿಜೆಪಿ ಸರಕಾರಕ್ಕೆ ಬೆಂಬಲಿಸುವ ಉದ್ದೇಶದಿಂದ ಹಾಗೂ ಪೂರ್ವ ತಯಾರಿಯೊಂದಿಗೆ ಶಾಸಕರು ರಾಜೀನಾಮೆ ನೀಡಿದ್ದರು. ಇದು ದುರುದ್ದೇಶದಿಂದ ಕೂಡಿತ್ತು. ಆದ್ದರಿಂದ ಏಳು ದಿನಗಳ ನೋಟಿಸ್ ನೀಡದೇ ಸ್ಪೀಕರ್‌ಗೆ ಈ ಶಾಸಕರನ್ನು ಅನರ್ಹಗೊಳಿಸುವ ಸಾಂವಿಧಾನಿಕ ಅಧಿಕಾರ ಸ್ಪೀಕರ್‌ಗಿದೆ ಎಂದು ಕಾಂಗ್ರೆಸ್ ಪರ ವಾದಿಸಿದ್ದ ವಕೀಲ ಕಪಿಲ್ ಸಿಬಲ್ ವಾದಿಸಿದ್ದರು.

ಶಂಕರ್ ಮತ್ತು ಶ್ರೀಮಂತ್ ಪಾಟೀಲ್ ನಮ್ಮನ್ನು ಸ್ಪೀಕರ್ ದುರುದ್ದೇಶದಿಂದ ಅನರ್ಹಗೊಳಿಸಿದ್ದಾರೆ ಎಂದು ಸುಪ್ರೀಂ ಕೋರ್ಟಿನಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ಬಗ್ಗೆ ಸುಮಾರು 20 ಗಂಟೆಗಳ ಕಾಲ ಸುಪ್ರೀಂ ಕೋರ್ಟಿನ ತ್ರಿಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ, ಈ ತೀರ್ಪು ನೀಡಿದೆ.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.

ಕೋರ್ಟ್ ಹೇಳಿದ್ದಿಷ್ಟು...
"

click me!