
ಬೆಂಗಳೂರು [ನ.13]: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಮೇಲೆ ಮುನಿಸಿಕೊಂಡಿದ್ದ ಪಕ್ಷದ ಮೇಲ್ಮನೆ ಸದಸ್ಯರ ಮನವೊಲಿಕೆ ಮಾಡುವಲ್ಲಿ ಜೆಡಿಎಸ್ ವರಿಷ್ಠರು ಸಫಲರಾಗಿದ್ದು, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಡೆದ ತಪ್ಪನ್ನು ಸರಿಪಡಿಸಿಕೊಳ್ಳುವ ಆಶ್ವಾಸನೆ ನೀಡಿದ್ದಾರೆ.
ನಮ್ಮಿಂದ ತಪ್ಪಾಗಿದೆ. ಆ ತಪ್ಪನ್ನು ಮತ್ತೆಪುನರಾವರ್ತಿಸುವುದಿಲ್ಲ. ಅದನ್ನೆಲ್ಲ ಮರೆತು ಪಕ್ಷ ಮುನ್ನಡೆಸೋಣ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ಮನವಿ ಮಾಡಿ ದ್ದಾರೆ ಎಂದು ತಿಳಿದು ಬಂದಿದೆ. ಮಂಗಳವಾರ ಸತತ 5 ತಾಸು ನಡೆದ ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಟಿ.ಎ. ಶರವಣ ಸೇರಿದಂತೆ ಬಹುತೇಕ ಎಲ್ಲರೂ ಪಾಲ್ಗೊಂಡಿದ್ದರು.
ಬಿ.ಎಂ.ಫಾರೂಕ್ ಮತ್ತು ರಮೇಶ್‌ಗೌಡ ಮಾತ್ರ ಸಭೆಗೆಗೈರಾಗಿದ್ದರು. ಸಭೆಯಲ್ಲಿ ಶಾಸಕರ ಅಹವಾಲು ಆಲಿಸಿದ ನಂತರ ದೇವೇಗೌಡರೇ ತಪ್ಪಾಗಿರುವ ಬಗ್ಗೆ ಪ್ರಸ್ತಾಪಿಸಿ ದರು. ನಂತರ ಕುಮಾರಸ್ವಾಮಿ ಮುಂದು ವರೆಸಿ ತಮ್ಮ ತಪ್ಪಿನ ಬಗ್ಗೆ ವಿವರಣೆ ನೀಡಿದರು. ಮೈತ್ರಿ ಸರ್ಕಾರದಲ್ಲಿ ವಿಪರೀತ ಒತ್ತಡ ಇದ್ದ ಕಾರಣ ಎಂಎಲ್‌ಸಿಗಳ ಬಗ್ಗೆ ನಿಷ್ಕಾಳಜಿ ವಹಿಸಬೇಕಾಯಿತು.
ನಮ್ಮಿಂದ ತಪ್ಪಾಗಿದ್ದು, ಮುಂದಿನ ದಿನದಲ್ಲಿ ಅದನ್ನು ಸರಿಪಡಿಸಿಕೊಳ್ಳಲಾಗುವುದು. ದಯವಿಟ್ಟು ಪಕ್ಷವನ್ನು ಸಂಘಟಿಸುವಲ್ಲಿ ಸಹಕರಿಸುವಂತೆ ಮನವಿ ಮಾಡಿದರು. ಸಭೆಯಲ್ಲಿ ಸಕರಾತ್ಮಕವಾಗಿ ಮಾತ ನಾಡಿ ಸದಸ್ಯರ ಮನವೊಲಿಕೆ ಮಾಡಿದರು ಎನ್ನಲಾಗಿದೆ. ಸಭೆಯಲ್ಲಿ ಪ್ರತಿಯೊಬ್ಬರಿಗೂ ಅವಕಾಶ ನೀಡಲಾಗಿತ್ತು.
ಅವರವರ ಸಮಸ್ಯೆಗಳನ್ನು ದೇವೇಗೌಡರ ಬಳಿ ಹೇಳಿಕೊಂಡರು. ಬಸವರಾಜ ಹೊರಟ್ಟಿ ಅವರು ತಮ್ಮನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸಿರುವ ಬಗ್ಗೆ ಮತ್ತು ಸಚಿವ ಸ್ಥಾನ ನೀಡದಿರುವ ಕುರಿತು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರ ಸ್ವಾಮಿ, ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ನ ಒತ್ತಡ ಹೆಚ್ಚಿತ್ತು. ಹೀಗಾಗಿ ಪಕ್ಷದ ನಾಯಕರ ಪರ ಸಮರ್ಪಕವಾದ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿಲ್ಲ. ಮುಂದಿನ ದಿನದಲ್ಲಿ ತಮಗೆ ಬೇಸರ ವಾಗದಂತೆ ನಡೆದುಕೊಳ್ಳುವ ಆಶ್ವಾಸನೆ ನೀಡಿದರು ಎನ್ನಲಾಗಿದೆ.
ಅತ್ತ ಕಾಂಗ್ರೆಸ್-ಬಿಜೆಪಿ ಟಾರ್ ವಾರ್: ಇತ್ತ ಕುಮಾರಸ್ವಾಮಿಗೆ ಕೋರ್ಟ್ ಬುಲಾವ್...
ಇತರೆ ಸದಸ್ಯರು ಪ್ರಾಧಿಕಾರ, ನಿಗಮ-ಮಂಡಳಿಯಲ್ಲಿ ಸ್ಥಾನ -ಮಾನ ಸಿಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಯೊಬ್ಬರ ಸಮಸ್ಯೆಯನ್ನು ಆಲಿಸಿದ ಬಳಿಕ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ, ಸದಸ್ಯರ ನೋವು ಅರ್ಥ ವಾಗಿದೆ. ಉಪಚುನಾವಣೆ ನಡೆದರೆ ಒಗ್ಗೂಡಿ ಎದುರಿಸಬೇಕಾಗಿದೆ.
ಈ ಹಿಂದೆ ನಡೆದ ಘಟನೆಗಳನ್ನು ಮರೆತು ಮುಂದಿನ ಹಾದಿಯ ಬಗ್ಗೆ ಯೋಚನೆ ಮಾಡುವಂತೆ ಸಲಹೆ ನೀಡಿದರು. ದೇವೇಗೌಡ ಮತ್ತು ಕುಮಾರಸ್ವಾಮಿ ಸದಸ್ಯರ ಮನವೊಲಿಕೆ ಮಾಡುವಲ್ಲಿ ಯಶಸ್ವಿಯಾದರು. ಅಲ್ಲದೆ, ಸಮ್ಮಿಶ್ರ ಸರ್ಕಾರದಅವಧಿಯಲ್ಲಿ ಅನುಭವಿಸಿದ ಕಹಿ ಘಟನೆಗಳನ್ನು ಕುಮಾರಸ್ವಾಮಿ ಸಭೆಯ ಮುಂದಿಟ್ಟರು. ಮೇಲ್ಮನೆ ಸದಸ್ಯರು ಸಹ ಮುಂದಿನದಿನದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಪಕ್ಷದ ವರಿಷ್ಠ ದೇವೇಗೌಡ ಅವರಲ್ಲಿ ಮನವಿ ಮಾಡಿಕೊಂಡರು. ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.