ಚನ್ನಗಿರಿ ವಿಜಯಸಂಕಲ್ಪ ಯಾತ್ರೆಗೆ ಮಾಡಾಳು ಕುಟುಂಬ ನೇತೃತ್ವ ವಹಿಸುವಂತೆ ಬೆಂಬಲಿಗರು ಒತ್ತಾಯ

By Kannadaprabha News  |  First Published Mar 17, 2023, 10:18 AM IST

ಪಟ್ಟಣಕ್ಕೆ ಮಾ.19ರಂದು ಬಿಜೆಪಿ ವಿಜಯಸಂಕಲ್ಪ ಯಾತ್ರೆ ಬರುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಬಿಜೆಪಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.


ಚನ್ನಗಿರಿ (ಮಾ.17) : ಪಟ್ಟಣಕ್ಕೆ ಮಾ.19ರಂದು ಬಿಜೆಪಿ ವಿಜಯಸಂಕಲ್ಪ ಯಾತ್ರೆ ಬರುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಬಿಜೆಪಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಾಂತರಾಜ್‌ ಪಾಟೀಲ್‌ ಮಾತನಾಡಿ, ಯಾತ್ರೆಯು ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಿಂದ ಚನ್ನಗಿರಿ ಪಟ್ಟಣಕ್ಕೆ ಬರಲಿದ್ದು ಕಾರ್ಯಕರ್ತರು ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿಕೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡೋಣ ಎಂದರು.

Tap to resize

Latest Videos

ಇಂದು ಹೊನ್ನಾಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಆಗಮನ

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಲೋಹಿತ್‌ ಕುಮಾರ್‌ ಮಾತನಾಡಿ ಚನ್ನಗಿರಿಯಲ್ಲಿ ನಡೆಯುವ ವಿಜಯಸಂಕಲ್ಪ ಯಾತ್ರೆ(Vijayasankalpa yatre)ಯು ಕ್ಷೇತ್ರದ ಶಾಸಕ ಮಾಡಾಳು ವಿರೂಪಾಕ್ಷಪ್ಪ(MLA Madalu virupakshappa) ಮತ್ತು ಅವರ ಪುತ್ರ ಮಾಡಾಳ್‌ ಮಲ್ಲಿಕಾರ್ಜುನ್‌ ಅವರ ನೇತೃತ್ವದಲ್ಲಿ ನಡೆಯುವುದಾದರೆ ಪಕ್ಷದ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳೆಲ್ಲರು ಸೇರಿ ವಿಜೃಂಭಣೆಯಿಂದ ಆಚರಿಸುತ್ತೇವೆ. ಪಕ್ಷದಲ್ಲಿ ಕಾರ್ಯಕರ್ತನಾಗಿ ದುಡಿಯದೆ ಇರುವಂತಹ ವ್ಯಕ್ತಿಯೊಬ್ಬರು ಫ್ಲೆಕ್ಸ್‌ನಲ್ಲಿ ಫೋಟೋ ಹಾಕಿಸಿಕೊಂಡು ಸ್ವಯಂ ಘೋಷಿತವಾಗಿ ಬೋರ್ಡ್‌ ಹಾಕಿಕೊಂಡು ನನ್ನನ್ನು ಬೆಂಬಲಿಸಿ ಎಂದು ಪ್ರಚಾರ ಪಡಿಸುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.

ತಾಪಂ ಮಾಜಿ ಉಪಾಧ್ಯಕ್ಷ ಹಾಲೇಶ್‌ ನಾಯ್‌್ಕ ಮಾತನಾಡಿ ನಮ್ಮ ನಾಯಕ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಮಾಡಾಳು ಮಲ್ಲಿಕಾರ್ಜುನ್‌ ಆಗಿದ್ದು ವಿಜಯ ಸಂಕಲ್ಪ ಯಾತ್ರೆಯಲ್ಲಿ ಇವರಿಬ್ಬರಲ್ಲಿ ಒಬ್ಬರಾದರೂ ಭಾಗವಹಿಸಬೇಕು. ಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಡಾಳು ಕುಟುಂಬದವರೊಬ್ಬರಿಗೆ ಪಕ್ಷದಿಂದ ಟಿಕೆಟ್‌ ನೀಡಬೇಕು. ಇಲ್ಲವಾದರೆ ಮುಂದಿನ ಪರಿಣಾಮಗಳ ಬಗ್ಗೆ ನಾವೇನು ಹೇಳುವುದಿಲ್ಲ ಎಂದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ದೇವರಹಳ್ಳಿ ಎ.ಎಸ್‌.ಬಸವರಾಜಪ್ಪ ಮಾತನಾಡಿ ಕ್ಷೇತ್ರದಲ್ಲಿ ಮಾಡಾಳು ಕುಟುಂಬದ ಬಗ್ಗೆ ಜನರಲ್ಲಿ ಅಪಾರ ಪ್ರೀತಿ, ವಿಶ್ವಾಸ ಇದ್ದು ಪಕ್ಷ ಟಿಕೆಟ್‌ ನೀಡದೆ ಇದ್ದರೂ ಅವರನ್ನು ಶಾಸಕರನ್ನಾಗಿ ವಿಧಾನಸೌಧಕ್ಕೆ ಚನ್ನಗಿರಿ ಕ್ಷೇತ್ರದ ಜನರು ಕಳಿಸುವರು ಎಂದರು.

ನಗರ ಘಟಕದ ಅಧ್ಯಕ್ಷ ಕೆ.ಆರ್‌.ಗೋಪಿ ಮಾತನಾಡಿ ನಾನು ಅಭ್ಯರ್ಥಿ ಎಂದು ಹೇಳಿಕೊಳ್ಳುವವರು ಏಕೆ ಸಭೆಗೆ ಬಂದಿಲ್ಲ. ಇಂಥವರಿಂದ ಪಕ್ಷಕ್ಕೆ ಮುಜುಗರವಾಗುತ್ತಿದ್ದು ಪಕ್ಷದ ಜಿಲ್ಲಾ ನಾಯಕರು ಇಂಥವರಿಗೆ ಸೂಕ್ತ ಕ್ರಮ ಜರುಗಿಸಲು ಮುಂದಾಗಬೇಕು ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಶ್ರೀನಿವಾಸ್‌, ಮಹಿಳಾ ಘಟಕದ ಅಧ್ಯಕ್ಷೆ ಕೆ.ಪಿ.ಎಂ.ಲತಾ, ನಗರ ಘಟಕದ ಅಧ್ಯಕ್ಷ ಕೆ.ಆರ್‌.ಗೋಪಿ, ಪ್ರಧಾನ ಕಾರ್ಯದರ್ಶಿ ತಿಪ್ಪಗೊಂಡನಹಳ್ಳಿ ಮಲ್ಲಿಕಾರ್ಜುನ್‌, ಯುವಮೋರ್ಚಾ ಅಧ್ಯಕ್ಷ ಹರೋನಹಳ್ಳಿ ಮಲ್ಲಿಕಾರ್ಜುನ್‌, ನಲ್ಲೂರು ರುದ್ರೇಗೌಡ ಚಂದನ್‌ ಶೆಟ್ಟಿ, ಪಟ್ಲಿನಾಗರಾಜ್‌, ಕಮಲಾ ಹರೀಶ್‌, ಸವಿತಾ ರಾಘವೇಂದ್ರ ಶೆಟ್ಟಿ, ಬಿ.ಎಂ.ಕುಬೇಂದ್ರೋಜಿರಾವ್‌, ಜಿ.ಎಸ್‌. ಸಂಗಮೇಶ್‌ ಸೇರಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಜರಿದ್ದರು.

Vijayasankalpa yatre: ‘ಕೈ’ಯಿಂದ ಸೋಲೋ ಗ್ಯಾರಂಟಿ ಕಾರ್ಡ್‌ ಹಂಚಿಕೆ: ಡಿವಿ ಸದಾನಂದಗೌಡ

ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಬಗ್ಗೆ ತುಂಬಾ ಅಭಿಮಾನ ಇದ್ದು ಪಕ್ಷವು ಕೂಡ ಕ್ಷೇತ್ರದ ಜನತೆಗೆ ಸಿಹಿ ಸುದ್ದಿಯನ್ನೇ ನೀಡಲಿದೆ. ಈ ಬಗ್ಗೆ ಕಾರ್ಯಕರ್ತರು ಒಗ್ಗಟ್ಟಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಮತ್ತು ಚನ್ನಗಿರಿಗೆ ಬರಲಿರುವ ವಿಜಯಸಂಕಲ್ಪ ಯಾತ್ರೆಯನ್ನು ಯಶಸ್ವಿಗೊಳಿಸಬೇಕು.

ಧನಂಜಯ ಕಡ್ಲೆಬಾಳ್‌, ಚುನಾವಣಾ ಉಸ್ತುವಾರಿ

click me!