Parishad election: ಪರಿಷತ್‌ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ನಾಮಪತ್ರ ಸಲ್ಲಿಕೆ: ತಣ್ಣಗಾದ ಮಲ್ಕಾಪುರೆ

By Sathish Kumar KHFirst Published Dec 20, 2022, 11:49 AM IST
Highlights

ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯ ಬಸವರಾಜ ಹೊರಟ್ಟಿ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಿದರು.

ಬೆಳಗಾವಿ (ಡಿ.20): ರಾಜ್ಯದ ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯ ಬಸವರಾಜ ಹೊರಟ್ಟಿ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಮೂಲಕ ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. 

ಈ ಹಿಂದೆ ಬಸವರಾಜ ಹೊರಟ್ಟಿ ಅವರು ಸಭಾಪತಿ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿಯಿಂದ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿದ್ದರು. ಈ ವೇಳೆ ಅವರನ್ನು ಪುನಃ ವಿಧಾನಪರಿಷತ್‌ ಸಭಾಪತಿಯನ್ನಾಗಿ ಮಾಡುವ ಭರವಸೆಯನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀಡಿದ್ದರು. ಈವರೆಗೆ ಹಂಗಾಮಿ ಪರಿಷತ್‌ ಸಭಾಪತಿಯಾಗಿ ರಘುನಾಥರಾವ್ ಮಲ್ಕಾಪುರೆ ಅವರನ್ನು ನಿಯೋಜನೆ ಮಾಡಲಾಗಿತ್ತು. ನಾಳೆ ಪರಿಷತ್‌ನ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಕೊಟ್ಟ ಮಾತಿನಂತೆ ಬಸವರಾಜ ಹೊರಟ್ಟಿ ಅವರಿಂದ ನಾಮಪತ್ರ ಸಲ್ಲಿಕೆ ಮಾಡಿಸಿದೆ. ಇನ್ನು ಸ್ಪಷ್ಟ ಬಹುಮತ ಇರುವ ಹಿನ್ನೆಲೆಯಲ್ಲಿ ಬಸವರಾಜ ಹೊರಟ್ಟಿ ಪರಿಷತ್ ಸಭಾಪತಿ ಆಗುವುದು ಖಚಿತ ಎಂಬುದು ನಿಚ್ಚಳವಾಗಿ ಕಂಡುಬರುತ್ತಿದೆ.

Politics: ವಿಧಾನ ಪರಿಷತ್ ಸಭಾಪತಿ ಚುನಾವಣೆಗೆ ಭಾರೀ ಟ್ವಿಸ್ಟ್ : ಮಲ್ಕಾಪುರೆ ದೆಹಲಿಗೆ ದೌಡು

ಜೆಡಿಎಸ್‌ ತೊರೆದಿದ್ದ ಹೊರಟ್ಟಿ: ಇನ್ನು ವಿಧಾನ ಪರಿಷತ್‌ ಕಾರ್ಯದರ್ಶಿ ಮಹಾಲಕ್ಷ್ಮೀ ಅವರಿಗೆ ಬಸವರಾಜ ಹೊರಟ್ಟಿ ಅವರು ನಾಮಪತ್ರ ಸಲ್ಲಿಕೆ ಮಾಡಿದರು. ನಾಳೆ ನಡೆಯಲಿರುವ ಸಭಾಪತಿ ಚುನಾವಣೆ ನಡೆಯಲಿದ್ದು, ಬಿಜೆಪಿಗೆ ಬಹುಮತ ಇರುವ ಹಿನ್ನೆಲೆಯಲ್ಲಿ ಹೊರಟ್ಟಿ ಆಯ್ಕೆ ನಿಶ್ಚಿತವಾಗಿದೆ. ಇನ್ನು ಈ ಹಿಂದೆ ಜೆಡಿಎಸ್‌ನಲ್ಲಿ ಹಲವು ವರ್ಷಗಳು ಆಯ್ಕೆಯಾಗಿದ್ದ ಹೊರಟ್ಟಿ ಅವರು ಇತ್ತೀಚೆಗೆ ಜೆಡಿಎಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಗೊಂಡು ಪರಿಷತ್ ಸದಸ್ಯರಾಗಿ ಆಯ್ಕೆ ಆಗಿದ್ದರು. ಇನ್ನು ಕೊಟ್ಟ ಮಾತಿನಂತೆ ಬಿಜೆಪಿ ಸಭಾಪತಿ ಸ್ಥಾನ ನೀಡಲು ಮುಂದಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾದಿಯಾಗಿ, ಸಚಿವರಾದ ಮಾಧುಸ್ವಾಮಿ, ಅಶೋಕ್,  ಕಾರಜೋಳ, ಬಿಜೆಪಿ ಪರಿಷತ್ ಸದಸ್ಯರು ಭಾಗಿಯಾಗಿದ್ದರು.

ನನ್ನ ಜೀವನದಲ್ಲಿ ಅವಿಸ್ಮರಣೀಯ ದಿನ:  ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಹೊರಟ್ಟಿ ಅವರು, ನಾಮಪತ್ರ ಸಲ್ಲಿಕೆ ವೇಳೆ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರು ಸೇರಿ ಹಲವು ಸಚಿವರು ಬಂದಿದ್ದರು. ಇದು ನನ್ನ ಜೀವನದಲ್ಲಿ ಅವಿಸ್ಮರಣೀಯ ದಿನವಾಗಿದೆ. ಎಲ್ಲಾ ಬಿಜೆಪಿ ನಾಯಕರು, ಪಕ್ಷದ ಮುಖ್ಯಸ್ಥರು ಬಂದಿದ್ದು ಖುಷಿಯಾಗಿದೆ. ಪಕ್ಷ, ಪಕ್ಷದ ನಾಯಕರು ಪ್ರೀತಿ ವಿಶ್ವಾಸ ಇಟ್ಟು ಸ್ಥಾನ ಕೊಟ್ಟಿದ್ದಾರೆ. ನನಗೆ ಕೊಟ್ಟ ಜವಾಬ್ದಾರಿ, ನಂಬಿಕೆ,ವಿಶ್ವಾಸ ಉಳಿಸುಕೊಳ್ಳುತ್ತೇನೆ. ಪಕ್ಷ ಮತ್ತು ಸಭಾಪತಿ ಸ್ಥಾನಕ್ಕೆ ನ್ಯಾಯ ಕೊಡುವ ಕೆಲಸ ಮಾಡುತ್ತೇನೆ. ಕೊಟ್ಟ ಮಾತಿನಂತೆ ಪಕ್ಷ ನನಗೆ ಸ್ಥಾನ ನೀಡಿದೆ. ಆದರೆ, ಕೆಲ ತಾಂತ್ರಿಕ ಕಾರಣದಿಂದ ತಡ ಆಗಿರಬಹುದು. ನನಗೆ ಯಾವತ್ತು ಅತೃಪ್ತಿ ಆಗಿಲ್ಲ. ಎಲ್ಲಾ ಸಮಸ್ಯೆ ಪರಿಹಾರ ಆಗಿ ಪಕ್ಷ ಸ್ಥಾನ ಕೊಟ್ಟಿದೆ‌. ನನ್ನ ಸ್ಥಾನಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುವುದಾಗಿ ತಿಳಿಸಿದರು.

Karnataka Politics: ಮಲ್ಕಾಪುರೆ ಪ್ರಭಾರ ಸಭಾಪತಿ: ಹೊರಟ್ಟಿ ತ್ಯಾಗಪತ್ರ ಅಂಗೀಕಾರ

ದೆಹಲಿಗೆ ಹೋಗಿ ತಣ್ಣಗಾಗಿ ಬಂದ ಮಲ್ಕಾಪುರೆ: ರಾಜ್ಯದಲ್ಲಿ ವಿಧಾನ ಪರಿಷತ್ ಸಭಾಪತಿ ಚುನಾವಣೆಯ ಬೆನ್ನಲ್ಲೇ ಹಂಗಾಮಿ ಸಭಾಪತಿಯಾಗಿದ್ದ ರಘುನಾಥ್‌ರಾವ್‌ ಮುಲ್ಕಾಪುರೆ ಅವರನ್ನು ಕೆಳಗಿಳಿಸದಂತೆ ಬಿಜೆಪಿಯ ಮೂಲ ನಾಯಕರು ಮತ್ತು ಕುರುಬ ಸಮಾಜದ ಮುಖಂಡರು ಒತ್ತಡ ಹೇರಿದ್ದರು. ಈ ಘಟನೆಯ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್‌ ರಘುನಾಥ್‌ರಾವ್‌ ಮಲ್ಕಾಪುರೆ ಅವರನ್ನು ದೆಹಲಿಗೆ ಕರೆಸಿಕೊಂಡು ಚರ್ಚೆ ಮಾಡಿದ್ದರು. ಆದರೆ, ಎಲ್ಲ ಅಸಮಾಧಾನವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ದೆಹಲಿಯಲ್ಲಿ ಚರ್ಚೆ ಮಾಡಲಾಗಿದೆ. ಈಗ ಬಸವರಾಜ ಹೊರಟ್ಟಿ ಅವರು ನಾಮಪತ್ರ ಸಲ್ಲಿಕೆ ಮಾಡಿದರೂ ಅಸಮಾಧಾನ ಹೊರ ಹಾಕದಂತೆ ಮಲ್ಕಾಪುರೆ ಅವರನ್ನು ಆಕ್ರೋಶ ತಣಿಸಲಾಗಿದೆ.

click me!