ನಾಳೆ ವಿಶ್ವ ಜಲ ದಿನವಾಗಿದ್ದು, ಅದರ ಅಂಗವಾಗಿ ಕಾವೇರಿ ಆರತಿ ಮಾಡುತ್ತಿದ್ದೇವೆ. ತಲಕಾವೇರಿಯಿಂದ ಕಾವೇರಿ ತೀರ್ಥ ಕೊಂಡೊಯ್ದು ಆರತಿ ಮಾಡಲಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮಾ.21): ನಾಳೆ ವಿಶ್ವ ಜಲ ದಿನವಾಗಿದ್ದು, ಅದರ ಅಂಗವಾಗಿ ಕಾವೇರಿ ಆರತಿ ಮಾಡುತ್ತಿದ್ದೇವೆ. ತಲಕಾವೇರಿಯಿಂದ ಕಾವೇರಿ ತೀರ್ಥ ಕೊಂಡೊಯ್ದು ಆರತಿ ಮಾಡಲಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕೊಡಗಿನ ಕಾವೇರಿ ಉಗಮ ಸ್ಥಾನ ತಲಕಾವೇರಿಗೆ ಭೇಟಿ ನೀಡಿದ ಸಂದರ್ಭ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಬೆಂಗಳೂರಿನ ಋಷಭಾವತಿ ನದಿ ತೀರದಲ್ಲಿ ಆರತಿ ಮಾಡುತ್ತಿದ್ದೇವೆ. ಸ್ಯಾಂಕಿ ಟ್ಯಾಂಕಿಯಲ್ಲಿ ಇವತ್ತು ಪೂಜೆ ಮಾಡಲಿದ್ದೇವೆ. ಬೆಂಗಳೂರಿಗೆ ನೀರು ಕೊಟ್ಟು ಅಲ್ಲಿ ಜನರ ಬದುಕನ್ನು ಹಸನು ಮಾಡುತ್ತಿರುವ ಕೊಡಗಿನ ಬದುಕು ಹಸನಗೊಳ್ಳಲಿ. ಕೊಡಗೆ ನಮಗೆ, ರಾಜ್ಯಕ್ಕೆ ಜೀವಾಳ.
ಹೀಗಾಗಿ ಇಲ್ಲಿ ನಮನ ಸಲ್ಲಿಸಿದ್ದೇವೆ. ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಾಳೆಯಿಂದ ಒಂದು ವಾರಗಳ ಜಾಗೃತಿ ನಡೆಯಲಿದೆ. ನೀರನ್ನು ಉಳಿಸುವಂತೆ ರಾಜ್ಯದ ಜನತೆ ಪ್ರತಿಜ್ಞೆ ಮಾಡಬೇಕು. ಪ್ರತಿಜ್ಞೆ ಮಾಡಿ ಆನ್ಲೈನ್ ನಲ್ಲಿ ಅದನ್ನು ಪೋಸ್ಟ್ ಮಾಡಬಹುದು. ನಾನು ನೀರನ್ನು ಮಿತವಾಗಿ ಬಳಸಿ ಉಳಿಸುವುದಾಗಿ ಪ್ರತಿಜ್ಞೆ ಮಾಡಬೇಕು. ಇದರಲ್ಲಿ ರಾಜಕೀಯ ಇಲ್ಲ, ಎಲ್ಲಾ ಪಕ್ಷಗಳಿಗೂ ಕೇಳುತ್ತೇನೆ ಎಂದರು. ಕಾಡು ಮಲ್ಲೇಶ್ವರ ದೇವಸ್ಥಾನದಿಂದ ಕಳಸ ಹೊತ್ತ ಮಹಿಳೆಯರಿಂದ ಮೆರವಣಿಗೆ ನಡೆಯಲಿದ್ದು, ಬಳಿಕ ಸ್ಯಾಂಕಿ ಟ್ಯಾಂಕಿಯಲ್ಲಿ ಆರತಿ ನಡೆಯಲಿದೆ ಎಂದಿದ್ದಾರೆ. ಇದಕ್ಕೂ ಮೊದಲು ಭಾಗಮಂಡಲದ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿದ ಡಿಸಿಎಂ ಭಗಂಡೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಒಬ್ಬರೇ ಇದ್ದರೆ ಹನಿಟ್ರ್ಯಾಪ್ ಆಗುತ್ತಾ ಸಚಿವ ಕೆ.ಎನ್ ರಾಜಣ್ಣ ತಪ್ಪು ಮಾಡಿದ್ದಾರೆ: ಡಿ.ಕೆ.ಶಿವಕುಮಾರ್
ನಂತರ ತಲಕಾವೇರಿಗೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರು ತಲಕಾವೇರಿಯಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು. ಕಾವೇರಿ, ಅಗಸ್ತ್ಯಮುನಿ ಹಾಗೂ ಗಣಪತಿಗೆ ಪೂಜೆ ಸಲ್ಲಿಸಿದರು. ಕಾವೇರಿ ತೀರ್ಥ ಕುಂಡಿಕೆ ಬಳಿ ಕುಳಿತು ಸ್ವತಃ ತಾವೇ ಕಾವೇರಿ ಮಾತೆಗೆ ಕುಂಕುಮಾರ್ಚನೆ, ಮಾಡಿದರು. ಕಾವೆರಿ ಮಾತೆಗೆ ಹಸಿರ ಸೀರೆ ಹೊದಿಸಿದರು. ಬಳಿಕ ತೀರ್ಥ ಕುಂಡಿಕೆಯಿಂದ ತೀರ್ಥ ಸಂಗ್ರಹಿಸಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ನೀಡದರು. ಅಧಿಕಾರಿಗಳೊಂದಿಗೆ ಸ್ವತಃ ತಾವೂ ಕೂಡ ಕಾವೇರಿ ತೀರ್ಥವನ್ನು ಹಿಡಿದು ಬೆಂಗಳೂರಿಗೆ ಕೊಂಡೊಯ್ದರು. ಡಿ.ಕೆ ಶಿವಕುಮಾರ್ ಅವರಿಗೆ ಕೊಡಗಿನ ಶಾಸಕದ್ವಯರು, ಜಿಲ್ಲಾಧಿಕಾರಿ, ಸಿಇಓ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳು ಸಾಥ್ ನೀಡಿದರು.
ಇನ್ನು ಹೊಸ ವಿವಿಗಳನ್ನು ಹಳೇ ವಿಶ್ವ ವಿದ್ಯಾಲಯಗಳೊಂದಿಗೆ ವಿಲೀನ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಈ ಇಚ್ಛೆ ನಮ್ಮದಲ್ಲ. ಆದರೆ ವಿಶ್ವ ವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಅಭಿಪ್ರಾಯ ಸಂಗ್ರಹಿಸಿ, ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಕೊಡಗಿನ ಭಾಗಮಂಡಲದಲ್ಲಿ ಮಾತನಾಡಿದ ಅವರು ಕೊಡಗು ವಿಶ್ವ ವಿದ್ಯಾಲಯ ಉಳಿಸಿಕೊಳ್ಳುವುದನ್ನು ವಿದ್ಯಾರ್ಥಿಗಳು, ಅಧ್ಯಾಪಕರಿಗೆ ಕೊಡಗು ವಿವಿ ಇಷ್ಟ ಇಲ್ಲ.
ಸರ್ಕಾರ ಖಜಾನೆಯಿಂದ ಒಂದು ಪೈಸೆ ಕೊಡಬೇಕಿಲ್ಲ, ಸರ್ಟಿಫಿಕೇಟ್ ಕೊಟ್ಟರೆ ಸಾಕು: ಸಂಸದ ಯದುವೀರ್
ಮೈಸೂರು ವಿವಿಗೆ ಕೊಡಗು ವಿವಿ ಕಂಪೇರ್ ಮಾಡಿ ನೀವೇ ಹೇಳಿ, ದೊಡ್ಡ ದೊಡ್ಡ ವಿವಿಗಳ ಸರ್ಟಿಫಿಕೇಟ್ ಬೇಕು ಅನ್ನೋದು ಸಾಕಷ್ಟು ವಿದ್ಯಾರ್ಥಿಗಳ ಅಭಿಪ್ರಾಯ ಇದೆ. ಕೊಡಗು ವಿಶ್ವ ವಿದ್ಯಾಲಯಕ್ಕೆ ಏನು ಹೆಸರಿದೆ?, ಇದರ ಸರ್ಟಿಫಿಕೇಟ್‌ಗೆ ಮಹತ್ವ ಎಷ್ಟಿದೆ. ? ಹೀಗಾಗಿ ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹಿಸಲು ಹೇಳಿದ್ದೇವೆ. ಆ ಅಭಿಪ್ರಾಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಬಿಜೆಪಿ ಕಾಲದಲ್ಲಿ ವಿವಿಗಳನ್ನು ಮಾಡಿದ್ರು, ಅವರ ಹೆಸರಿಗಾಗಿ ಅವರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ರಾಜಕಾರಣಕ್ಕಿಂತ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ ಕೊಡಗಿನ ಭಾಗಮಂಡಲದಲ್ಲಿ ಡಿಸಿಎಂ ಡಿಕೆಶಿ ಹೇಳಿದ್ದಾರೆ.