ಸ್ಪೀಕರ್ 50 ಬಿಜೆಪಿ ಶಾಸಕರನ್ನು ಸಸ್ಪೆಂಡ್ ಮಾಡ್ತಾರೆ ಅನ್ಕೊಂಡಿದ್ದೆ, 18 ಮಾಡಿದ್ದಾರೆ: ಶಾಸಕ ಪ್ರದೀಪ್ ಈಶ್ವರ್!

Published : Mar 21, 2025, 05:29 PM ISTUpdated : Mar 21, 2025, 05:32 PM IST
ಸ್ಪೀಕರ್ 50 ಬಿಜೆಪಿ ಶಾಸಕರನ್ನು ಸಸ್ಪೆಂಡ್ ಮಾಡ್ತಾರೆ ಅನ್ಕೊಂಡಿದ್ದೆ, 18 ಮಾಡಿದ್ದಾರೆ: ಶಾಸಕ ಪ್ರದೀಪ್ ಈಶ್ವರ್!

ಸಾರಾಂಶ

ಬೆಂಗಳೂರು: ವಿಧಾನಸಭೆಯಲ್ಲಿ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಶಾಸಕರನ್ನು ಅಮಾನತು ಮಾಡಿರುವುದು ಸ್ವಾಗತಾರ್ಹ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ಕಲಾಪಕ್ಕೆ ಅಡ್ಡಿಪಡಿಸಿದವರನ್ನು ಆರು ತಿಂಗಳವರೆಗೆ ಅಮಾನತು ಮಾಡಿರುವುದು ಸ್ಪೀಕರ್ ಸ್ಥಾನದ ಗೌರವ ಹೆಚ್ಚಿಸಿದೆ ಎಂದಿದ್ದಾರೆ. ಸಚಿವ ಕೆ.ಎಚ್.ಮುನಿಯಪ್ಪ ಸಹ ಸ್ಪೀಕರ್ ನಿರ್ಧಾರವನ್ನು ಬೆಂಬಲಿಸಿ, ಇದು ಸ್ಪೀಕರ್ ಸ್ಥಾನದ ಗೌರವ ಕಾಪಾಡುವ ಕ್ರಮವೆಂದು ಹೇಳಿದ್ದಾರೆ.

ಬೆಂಗಳೂರು (ಮಾ.21): ವಿಧಾನಸಭಾ ಅಧಿವೇಶನದಲ್ಲಿ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಶಾಸಕರನ್ನು ಅಮಾನತು ಮಾಡಿರುವುದು, ಸ್ಪೀಕರ್ ಸ್ಥಾನದ ಗೌರವ ಹೆಚ್ಚಿಸಿದೆ. ಅಧಿವೇಶನದಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ವಿಪಕ್ಷಗದ 50 ಬಿಜೆಪಿ ಶಾಸಕರನ್ನು ಸಸ್ಪೆಂಡ್ ಮಾಡುತ್ತಾರೆ ಎಂದುಕೊಂಡಿದ್ದೆ. ಆದರೆ, 18 ಜನರನ್ನು ಮಾತ್ರ ಮಾಡಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅದನದಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ಶಾಸಕರನ್ನು 6 ತಿಂಗಳವರೆಗೆ ಅಮಾನತು ಮಾಡಿರುವುದು, ಸ್ಪೀಕರ್ ಸ್ಥಾನದ ಗೌರವ ಹೆಚ್ಚಿಸಿದೆ. ಸ್ಪೀಕರ್ ಮೇಲೆ ಪೇಪರ್ ಎಸೆದರೆ ಸುಮ್ಮನಿರಬೇಕಾ? ಬಿಜೆಪಿಯವರಿಗೆ ನಮ್ ಜೊತೆ ಫೈಟ್ ಮಾಡೋಕೆ ಆಗ್ತಿಲ್ಲ. ಯಾವತ್ತಾದರೂ ಬಡವರ ಕಷ್ಟ ಕೇಳಿದೀರಾ? ನಿಮಗೆ ಜನರ ಕಷ್ಟ ಬೇಕಾಗಿಲ್ಲ. ಯಾವ್ಯಾವುದೋ ವಿಷಯ ಇಟ್ಟುಕೊಂಡು ಇಲ್ಲಿಗೆ ಬಂದಿದ್ದಾರೆ. ನಾನು 50 ಜನರನ್ನು ಮಾಡುತ್ತಾರೆ ಎಂದುಕೊಂಡಿದ್ದೆ, ಆದರೆ ಸ್ಪೀಕರ್ ಕೇವಲ 18 ಜನರನ್ನು ಮಾಡಿದ್ದಾರೆ ಎಂದರು.

ವಿಧಾನಸಭೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರು ನನ್ನನ್ನು ಅತೀ ಹೆಚ್ಚು ಬೈದಿದ್ದಾರೆ. ನಾನು ಮಾತನಾಡುವಾಗ ಮದ್ಯದಲ್ಲಿ ಅಡ್ಡಿ ಮಾಡಿದ್ದಾರೆ. ಇಲ್ಲಿ ಗಲಭೆ ಮಾಡಲು ಕಾರಣವಾದ ಬಿಜೆಪಿ ಐಟಿ ಸೆಲ್ ಅನ್ನು ಎತ್ತಿ ಬಿಸಾಕಿದರೆ ಸರಿಯಾಗುತ್ತದೆ. ಆ ದೈತ್ಯಾಕಾರದ ಜೀವಗಳನ್ನು ಹೇಗೆ ಹೊರೋದು? ಯಾರೋ ಒಬ್ರುನ್ನ 12 ಜನ ಮಾರ್ಷಲ್‌ಗಳು ಸೇರಿ ಎತ್ತಿಕೊಂಡು ಬಂದಿದ್ದಾರೆ. ಮಾರ್ಷಲ್ ಗಳಿಗೆ ಕಷ್ಟ ಆಗುತ್ತಿದೆ. ಕರ್ನಾಟಕ ಬಿಜೆಪಿಯವರಿಗೆ ಸೋಮವಾರ ಮಧ್ಯಾಹ್ನ ರಿಪೋರ್ಟ್ ಕಾರ್ಡ್ ತಗೊಂಡು ಬರ್ತೀನಿ, ಆಗ ಇವರಿಗೆ ಕೊಟ್ಟು ಮಾತನಾಡ್ತೀನಿ. ಇಲ್ಲವೆಂದರೆ ನಾನು ಸಂಸದ ಪ್ರಹ್ಲಾದ್ ಜೋಶಿ ಅವರ ಮನೆ ಮುಂದೆ ರಿಪೋರ್ಟ್ ಕಾರ್ಡ್ ಹಿಡಿದುಕೊಂಡು ಹೋಗುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ವಿಧಾನಸಭೆ: ಸ್ಪೀಕರ್ ಪೀಠಕ್ಕೆ ಅಗೌರವ, 18 ಬಿಜೆಪಿ ಶಾಸಕರು ಅಮಾನತು! ಇಲ್ಲಿದೆ ಪಟ್ಟಿ..

ಸಚಿವ ಕೆ.ಎಚ್ ಮುನಿಯಪ್ಪ ಮಾತನಾಡಿ, ಸ್ಪೀಕರ್ ಅವರ ತೀರ್ಮಾನ ವೈಯಕ್ತಿಕ ಅಲ್ಲ. ಸ್ಪೀಕರ್ ಸ್ಥಾನದ ಗೌರವ ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ. ಸಂವಿಧಾನಬದ್ದವಾಗಿ ಕೆಲಸ ಮಾಡಲು ಸ್ವತಂತ್ರ ಇದೆ. ಆದರೆ, ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿಸೋದು ಸರಿಯಲ್ಲ. ಇಂತಹ ಸಂದರ್ಭಗಳಲ್ಲಿ ಸ್ಪೀಕರ್ ಸರಿಯಾದ ನಿರ್ಣಯ ತಗೊಂಡಿದ್ದಾರೆ. ಇದು ನಮಗೆ ಸಮಾಧಾನ ತಂದಿದೆ. ಇಂತಹದ್ದು ಯಾವತ್ತೂ ಆಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ