ಪೊಲೀಸ್‌ ದೌರ್ಜನ್ಯ ಹಿಂದಿನ ಶಕ್ತಿ ಪತ್ತೆಯಾಗುವ ತನಕ ಶ್ರೀರಾಮಸೇನೆ ಪ್ರತಿಭಟನೆ: ಮುತಾಲಿಕ್‌

By Kannadaprabha News  |  First Published May 21, 2023, 1:00 AM IST

ಯುವಕರ ಮೇಲೆ ನಡೆದಿರುವ ಅಮಾನುಷ ಹಲ್ಲೆ ಖಂಡನೀಯವಾಗಿದೆ. ಘಟನೆಯ ಪ್ರಮುಖ ವ್ಯಕ್ತಿ ಡಿವೈಎಸ್‌ಪಿಯನ್ನು ಅಮಾನತುಗೊಳಿಸಬೇಕು ಹಾಗೂ ಈ ಘಟನೆಯ ಹಿಂದಿರುವ ಪ್ರೇರಣಾ ಕೈಗಳನ್ನು ಪತ್ತೆ ಹಚ್ಚಬೇಕು. ಅಲ್ಲಿಯ ತನಕ ಶ್ರೀರಾಮ ಸೇನೆಯು ಪ್ರತಿಭಟನೆ ನಡೆಸಲಿದೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್‌ ಮುತಾಲಿಕ್‌ ಎಚ್ಚರಿಕೆ ನೀಡಿದ್ದಾರೆ. 


ಪುತ್ತೂರು (ಮೇ.21): ಯುವಕರ ಮೇಲೆ ನಡೆದಿರುವ ಅಮಾನುಷ ಹಲ್ಲೆ ಖಂಡನೀಯವಾಗಿದೆ. ಘಟನೆಯ ಪ್ರಮುಖ ವ್ಯಕ್ತಿ ಡಿವೈಎಸ್‌ಪಿಯನ್ನು ಅಮಾನತುಗೊಳಿಸಬೇಕು ಹಾಗೂ ಈ ಘಟನೆಯ ಹಿಂದಿರುವ ಪ್ರೇರಣಾ ಕೈಗಳನ್ನು ಪತ್ತೆ ಹಚ್ಚಬೇಕು. ಅಲ್ಲಿಯ ತನಕ ಶ್ರೀರಾಮ ಸೇನೆಯು ಪ್ರತಿಭಟನೆ ನಡೆಸಲಿದೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್‌ ಮುತಾಲಿಕ್‌ ಎಚ್ಚರಿಕೆ ನೀಡಿದ್ದಾರೆ. 

ಬ್ಯಾನರ್‌ ಪ್ರಕರಣದಲ್ಲಿ ವಶದಲ್ಲಿದ್ದ ವೇಳೆ ಪೊಲೀಸರಿಂದ ಹಲ್ಲೆಗೆ ಒಳಗಾಗಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಅಭಿ ಯಾನೆ ಅವಿನಾಶ್‌ ಮತ್ತು ಗುರುಪ್ರಸಾದ್‌ ಅವರನ್ನು ಶನಿವಾರ ಆಸ್ಪತ್ರೆಯಲ್ಲಿ ಭೇಟಿಯಾಗಿ ಅವರು ಆರೋಗ್ಯ ವಿಚಾರಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಮುತಾಲಿಕ್‌, ಸಾರ್ವಜನಿಕ ಜೀವನದಲ್ಲಿ ಪ್ರವೇಶಿಸಿದ ಮೇಲೆ ಹೂವಿನ ಹಾರ ಮಾತ್ರವಲ್ಲ ಚಪ್ಪಲಿ ಹಾರಕ್ಕೂ ಸಿದ್ಧರಿರಬೇಕು. ಮಾನ ಅಪಮಾನ, ಸನ್ಮಾನ ಸಮಾನವಾಗಿ ಸ್ವೀರಿಸಬೇಕು. ಘಟನೆ ಬಗ್ಗೆ ಅವಲೋಕನ ಮಾಡುವುದು ಬಿಟ್ಟು ಈ ರೀತಿ ದೌರ್ಜನ್ಯ ನಡೆಸಿರುವುದು ಸರಿಯಲ್ಲ ಎಂದರು. 

Tap to resize

Latest Videos

ದೇಶ ಗೆಲ್ಲಿಸುವ ಲೋಕಸಭಾ ಚುನಾವಣೆಗೆ ಸಜ್ಜಾಗಿ: ಶಾಸಕ ಸಿ.ಸಿ.ಪಾಟೀಲ್‌

ಹಿಂದೂಗಳ ನಡುವಿನ ಈ ಕಚ್ಚಾಟದಿಂದಾಗಿ ಮೂರನೆಯವರಿಗೆ ಲಾಭವಾಗುತ್ತಿದೆ. ಇದು ಕಾಂಗ್ರೆಸಿಗರು ಮಾಡಿದ್ದಲ್ಲ. ಮುಚ್ಚಿ ಹಾಕುವ ತಂತ್ರಗಾರಿಕೆ ಬೇಡ. ಇನ್ನೊಬ್ಬರ ಮೇಲೆ ತಪ್ಪುಹೊರಿಸಿ ಅಪಹಾಸ್ಯಕ್ಕೆ ಒಳಗಾಗಬೇಡಿ. ಲಕ್ಷಾಂತರ ಜನತೆಗೆ ಸತ್ಯ ಏನು ಎಂಬುವುದು ಗೊತ್ತಿದೆ ಎಂದು ಹೇಳಿದ ಮುತಾಲಿಕ್‌, ಹೊಸ ಸರ್ಕಾರದ ಗೃಹ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು. ಮುತಾಲಿಕ್‌ ಪರ ವಕೀಲ ಹರೀಶ್‌ ಅಧಿಕಾರಿ, ಚಿತ್ತರಂಜನ್‌ ದಾಸ್‌, ಸುಭಾಶ್‌ ಹೆಗ್ಡೆ, ದಿವ್ಯಾ ನಾೖಕ್‌, ರೂಪಾ ಶೆಟ್ಟಿ, ಸುಧೀರ್‌ ಆಚಾರ್‌, ಸಂತೋಷ್‌ ಮತ್ತಿತರರು ಇದ್ದರು.

ಶಾಸಕ ಸುನಿಲ್‌ ವಿರುದ್ಧ ಮಾನಹಾನಿ ದೂರು: ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ವಿರುದ್ಧ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಕಾರ್ಕಳ ಪೊಲೀಸ್‌ ಠಾಣೆಯಲ್ಲಿ ಶನಿವಾರ ಮಾನಹಾನಿ ದೂರು ದಾಖಲಿಸಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸುನಿಲ್‌ ಕುಮಾರ್‌ ವಿರುದ್ಧ ಮುತಾಲಿಕ್‌ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದರು. ಗೆದ್ದ ಬಿಜೆಪಿಯ ಸುನಿಲ್‌ ಕುಮಾರ್‌ ಅವರು ವಿಜಯೋತ್ಸವ ಸಭೆಯಲ್ಲಿ ಮುತಾಲಿಕ್‌ ಒಬ್ಬ ಡೀಲ್‌ ಮಾಸ್ಟರ್‌, ತಮ್ಮ ವಿರೋಧಿಗಳಿಂದ ಹಣ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಎಂದು ಆರೋಪಿಸಿದ್ದರು. ಈ ಹೇಳಿಕೆ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರಮೋದ್‌ ಮುತಾಲಿಕ್‌ ಶನಿವಾರ ತನ್ನ ಸಂಗಡಿಗರೊಂದಿಗೆ ಕಾರ್ಕಳ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಬೀದರ್‌ ಜಿಲ್ಲೆಗೆ 2 ಸಚಿವ ಸ್ಥಾನ​ಗಳ ಸಾಧ್ಯ​ತೆ: ಈಶ್ವರ ಖಂಡ್ರೆ, ರಹೀ​ಮ್‌​ಖಾ​ನ್‌ಗೆ ಮಂತ್ರಿ​ಗಿರಿ?

ಹಿಂದೂ ವಿರೋಧಿ ಕೃತ್ಯದಿಂದ ‘ಕೈ’ಗೆ ಜಯ: ಬಿಜೆಪಿಯ ಅತಿಯಾದ ಭ್ರಷ್ಟಾಚಾರ, ಹಿಂದುತ್ವ ವಿರೋಧಿ ನಡೆಯಿಂದ ಕಾಂಗ್ರೆಸ್‌ಗೆ ಹೆಚ್ಚಿನ ಮತಗಳು ಬಿದ್ದಿವೆ ಎಂದು ಶ್ರೀರಾಮ ಸೇನೆಯ ಸ್ಥಾಪಕಾಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಆರೋಪಿಸಿದ್ದಾರೆ. ಸುದ್ದಿಗಾರರ ಜತೆಗೆ ಮಾತನಾಡಿ, ರಾಜ್ಯದ ಜನ ಕಾಂಗ್ರೆಸ್‌ ಬೇಕು ಎಂದು ಮತ ಹಾಕಿಲ್ಲ. ಬಿಜೆಪಿಯವರು ದುಷ್ಟರು, ಭ್ರಷ್ಟರು, ಹಿಂದೂ ದ್ರೋಹಿಗಳಾದರು ಎನ್ನುವ ಕಾರಣಕ್ಕೆ ಪಕ್ಷದ ವಿರುದ್ಧ ಮತ ಹಾಕಿದ್ದಾರೆ. ಹೀಗೇ ಆದರೆ ಲೋಕಸಭೆ ಚುನಾವಣೆಯಲ್ಲೂ ಪಕ್ಷಕ್ಕೆ ಹಿನ್ನಡೆಯಾಗುವುದು ಶತಃಸಿದ್ಧ ಎನ್ನುವ ಎಚ್ಚರಿಕೆ ನೀಡಿದರು.

click me!