ದೇಶ ಗೆಲ್ಲಿಸುವ ಲೋಕಸಭಾ ಚುನಾವಣೆಗೆ ಸಜ್ಜಾಗಿ: ಶಾಸಕ ಸಿ.ಸಿ.ಪಾಟೀಲ್‌

By Kannadaprabha NewsFirst Published May 20, 2023, 11:04 PM IST
Highlights

ಈಗ ನನ್ನ ಚುನಾವಣೆ ಮುಗಿದಿದೆ. ಮುಂದೆ ಕಾರ್ಯಕರ್ತರ ಚುನಾವಣೆ ಹಾಗೂ ದೇಶ ಗೆಲ್ಲಿಸುವ ಲೋಕಸಭಾ ಚುನಾವಣೆಗೆ ಪಕ್ಷ ಪುನರ್‌ ಸಂಘಟನೆಗೆ ಸಿದ್ಧರಾಗಬೇಕು ಎಂದು ಕಾರ್ಯಕರ್ತರಿಗೆ ಶಾಸಕ ಸಿ.ಸಿ. ಪಾಟೀಲ್‌ ಕರೆ ನೀಡಿದರು. 

ನರಗುಂದ (ಮೇ.20): ಈಗ ನನ್ನ ಚುನಾವಣೆ ಮುಗಿದಿದೆ. ಮುಂದೆ ಕಾರ್ಯಕರ್ತರ ಚುನಾವಣೆ ಹಾಗೂ ದೇಶ ಗೆಲ್ಲಿಸುವ ಲೋಕಸಭಾ ಚುನಾವಣೆಗೆ ಪಕ್ಷ ಪುನರ್‌ ಸಂಘಟನೆಗೆ ಸಿದ್ಧರಾಗಬೇಕು ಎಂದು ಕಾರ್ಯಕರ್ತರಿಗೆ ಶಾಸಕ ಸಿ.ಸಿ. ಪಾಟೀಲ್‌ ಕರೆ ನೀಡಿದರು. ಅವರು ಪಟ್ಟಣದ ತಮ್ಮ ನಿವಾಸದಲ್ಲಿ ಬಿಜೆಪಿ ಮುಖಂಡರಿಗೆ, ಮತದಾರರಿಗೆ ಏರ್ಪಡಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದರು. ನನ್ನನ್ನು ಆಯ್ಕೆ ಮಾಡಿದ ಮತದಾರರಿಗೆ ಎಷ್ಟುಕೃತಜ್ಞತೆ ಸಲ್ಲಿಸಿದರೂ ಕಡಿಮೆ. ಹಿಂದಿನ ಚುನಾವಣೆಗಿಂತಲೂ ಈ ಚುನಾವಣೆಯಲ್ಲಿ ಎಲ್ಲ ರೀತಿಯ ಪ್ರಚಾರ, ಪ್ರಯತ್ನ, ಶ್ರಮ ಹಾಕಿದರೂ ಗೆಲುವಿನ ಅಂತರ ಕಡಿಮೆಯಾಗಿದೆ. ಇದರ ಬಗ್ಗೆ ಎಲ್ಲರೂ ಅವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕೆಲವೇ ದಿನಗಳಲ್ಲಿ ಕಾರ್ಯಕರ್ತರ ಚುನಾವಣೆಯಾದ ಜಿಪಂ ಹಾಗೂ ತಾಪಂ ಚುನಾವಣೆ ಬರುತ್ತದೆ. ಅದಕ್ಕಾಗಿ ಪಕ್ಷವನ್ನು ಕೆಳಹಂತದಿಂದ ಪುನರ್ಸಂಘಟಿಸಬೇಕು. ಇದಕ್ಕಾಗಿ ನನ್ನನ್ನು ಸಂಪೂರ್ಣ ತೊಡಗಿಸಿಕೊಂಡು ಬಿಜೆಪಿ ಜಿಪಃ ಆಡಳಿತಕ್ಕೆ ಬರುವಲ್ಲಿ ಶ್ರಮ ವಹಿಸಲಾಗುವುದು. ಆನಂತರ ಲೋಕಸಭಾ ಚುನಾವಣೆಗೆ ಸಿದ್ಧಗೊಳ್ಳಬೇಕು. ಬಿಜೆಪಿ ರಾಜ್ಯದಲ್ಲಿ ಸೋತಿರಬಹುದು. ಆದರೆ ದೇಶ ಸೋಲಬಾರದು. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಹೆಚ್ಚಿನ ರೀತಿಯಲ್ಲಿ ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಹೇಳಿದರು.

ಬೀದರ್‌ ಜಿಲ್ಲೆಗೆ 2 ಸಚಿವ ಸ್ಥಾನ​ಗಳ ಸಾಧ್ಯ​ತೆ: ಈಶ್ವರ ಖಂಡ್ರೆ, ರಹೀ​ಮ್‌​ಖಾ​ನ್‌ಗೆ ಮಂತ್ರಿ​ಗಿರಿ?

ವಿಧಾನಸಭಾ ಚುನಾವಣೆಯನ್ನು ಆರಂಭದಲ್ಲಿ ಸರಳವೆಂದು ಭಾವಿಸಿದ್ದೆವು. ಆದರೆ ಫಲಿತಾಂಶ ಬಂದ ಮೇಲೆ ಅದರ ಕಠಿಣತೆ ಅರ್ಥವಾಗಿದೆ. ಆಗಿರುವ ನ್ಯೂನತೆ ಸರಿಪಡಿಸಿಕೊಂಡು ಮುನ್ನುಗ್ಗಬೇಕು. ವಿರೋಧ ಪಕ್ಷದಲ್ಲಿ ಇದ್ದರೂ ಆಡಳಿತ ಪಕ್ಷದ ನಾಯಕರೊಂದಿಗೆ, ಸಚಿವರೊಂದಿಗೆ ಇರುವ ಸ್ನೇಹ ಹಾಗೂ ನಾನು ಸಚಿವನಾಗಿದ್ದಾಗ ಅವರ ಕ್ಷೇತ್ರಕ್ಕೆ ನೀಡಿದ ಅನುದಾನದ ಫಲವಾಗಿ ಈ ಸಲವು ಐದುನೂರು ಕೋಟಿ ರು.ನಷ್ಟುಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮ ವಹಿಸುವೆ. ಮತದಾರರ ಋುಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಸಂಬಂಧ ಗಟ್ಟಿಗೊಳ್ಳಲು ನಾನು ಕುರುಡ, ಕಿವುಡ ಹಾಗೂ ಮೂಕನಾಗುವ ಮೂಲಕ ಮತದಾರರ ಸೇವೆ ಮಾಡುವೆ ಎಂದರು.

ಬಿಜೆಪಿ ಮುಖಂಡ ಎಸ್‌.ಆರ್‌. ಪಾಟೀಲ ಮಾತನಾಡಿ, 4ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಸಿ.ಸಿ. ಪಾಟೀಲ ಅವರು ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು. ವಾಸಣ್ಣ ಜೋಗಣ್ಣವರ ಮಾತನಾಡಿ, ಪಾಟೀಲರು .2 ಸಾವಿರ ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದರು. ಆದರು ಜನರು ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳ ಬೆನ್ನು ಹತ್ತಿದ್ದರಿಂದ ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಸಿಗಲಿಲ್ಲ ಎಂದರು. ಮತಕ್ಷೇತ್ರಕ್ಕೆ ವಿಸ್ತಾರಕರಾಗಿ ಆಗಮಿಸಿದ ಉಲ್ಲಾಸ್‌ ಹುಂಡೇಕರ ಅವರನ್ನು 6 ತಿಂಗಳಿಂದ ಪಕ್ಷದ ಸಂಘಟನೆ ಮಾಡಿದ ಕಾರಣಕ್ಕೆ ಸನ್ಮಾನಿಸಲಾಯಿತು.

Tumakuru: ಕಾಂಗ್ರೆಸ್‌ ಗ್ಯಾರಂಟಿಯೇ ಕಮಲದ ಸೋಲಿಗೆ ಕಾರಣ: ಶಾಸಕ ಸುರೇಶ್‌ ಗೌಡ

ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಹವಾಲ್ದಾರ್‌, ಅನ್ನಪೂರ್ಣಾ ಯಲಿಗಾರ, ಅಜ್ಜುಗೌಡ ಪಾಟೀಲ, ಚಂಬಣ್ಣ ವಾಳದ, ಬಿ.ಬಿ. ಐನಾಪುರ, ಅಜ್ಜಪ್ಪ ಹುಡೇದ, ಪಿ.ಪಾಟೀಲ, ಜಿ.ಟಿ. ಗುಡಿಸಾಗರ, ಜಿ.ಬಿ. ಕುಲಕರ್ಣಿ, ಚಂದ್ರು ದಂಡಿನ, ನೇತಾಜಿಗೌಡ ಕೆಂಪನಗೌಡ್ರ, ಸಾಲಿಗೌಡ್ರ, ನಿಂಗಪ್ಪ ಸೋಮಾಪುರ, ಸಂಭಾಜಿ ಕಾಶೀದ, ವಾಸು ಜೋಗಣ್ಣವರ, ಶಿವಾನಂದ ಮುತ್ತವಾಡ, ಎಸ್‌.ಆರ್‌. ಪಾಟೀಲ, ಪ್ರಕಾಶಗೌಡ ತಿರಕನಗೌಡ್ರ, ಶಂಕರ ಪಲ್ಟಣಕರ, ಮುತ್ತು ರಾಯರಡ್ಡಿ ಉಪಸ್ಥಿತರಿದ್ದರು.

click me!