ಚುನಾವಣೆಗೆ ಮತ್ತೆ ಸ್ಪರ್ಧಿಸಲು ವಿಪ ಸಭಾಪತಿ ಹೊರಟ್ಟಿ ನಿರ್ಧಾರ

By Kannadaprabha News  |  First Published Oct 14, 2021, 11:21 AM IST

*  ಅವಿರೋಧ ಆಯ್ಕೆ ಮಾಡುವಂತೆ ರಾಷ್ಟ್ರೀಯ ಪಕ್ಷಗಳಿಗೆ ಶಿಕ್ಷಕ ಸಂಘಟನೆಗಳ ಮನವಿ
*  ಶಿಕ್ಷಕರ ಬೆಂಬಲ, ಆಶೀರ್ವಾದದಿಂದ ಏಳು ಬಾರಿ ಆಯ್ಕೆಯಾದ ಹೊರಟ್ಟಿ
*  ಶಿಕ್ಷಕರ ಋುಣ ತೀರಿಸುವದಕ್ಕಾಗಿ ಮತ್ತೊಮ್ಮೆ ಸ್ಪರ್ಧಿಸಲು ನಿರ್ಧಾರ 


ಹುಬ್ಬಳ್ಳಿ(ಅ.14):  ‘ಕರ್ನಾಟಕ ಪಶ್ಚಿಮ ಶಿಕ್ಷಕರ ಮತದಾರ ಕ್ಷೇತ್ರದಿಂದ ಏಳು ಬಾರಿ ಗೆಲುವು ಸಾಧಿಸಿದ್ದೇನೆ. ಇನ್ನು ಚುನಾವಣೆ ಸಾಕು’ ಎನ್ನುತ್ತಿದ್ದ ಮಾಜಿ ಸಚಿವ, ಹಾಲಿ ಸಭಾಪತಿ(Speaker) ಬಸವರಾಜ ಹೊರಟ್ಟಿ(Basavaraj Horatti) ತಮ್ಮ ಮನಸು ಬದಲಿಸಿ ಇದೀಗ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ.

ಬುಧವಾರ ಇಲ್ಲಿನ(Hubballi) ಲ್ಯಾಮಿಂಗ್ಟನ್‌ ಪ್ರೌಢಶಾಲೆಯಲ್ಲಿ ನಡೆದ ‘ಕರ್ನಾಟಕ(Karnataka) ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ’ದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ವೈಯಕ್ತಿಕವಾಗಿ ನನಗೆ ಈ ಬಾರಿ ಚುನಾವಣೆ(Election) ಬೇಡವೆನಿಸಿದರೂ ಶಿಕ್ಷಕರ ಒತ್ತಾಯದ ಮೇರೆಗೆ ಹಾಗೂ ಸ್ವಾತಂತ್ರ್ಯ ಯೋಧರು, ಶಿಕ್ಷಣ ತಜ್ಞರು ನನಗೆ ಇನ್ನೊಮ್ಮೆ ಸ್ಪರ್ಧಿಸಲು ಒತ್ತಾಯಿಸುತ್ತಿದ್ದಾರೆ. ಅಷ್ಟೇ ಏಕೆ ವಿರೋಧ ಪಕ್ಷಗಳ ಒತ್ತಾಯವೂ ಇದೆ. ಹಾಗಾಗಿ ಶಿಕ್ಷಕರ ಋುಣ ತೀರಿಸುವದಕ್ಕಾಗಿ ಮತ್ತೊಮ್ಮೆ ಸ್ಪರ್ಧಿಸಲು ನಿರ್ಧರಿಸಿರುವುದಾಗಿ ತಮ್ಮ ಮನದಾಳದ ಮಾತುಗಳನ್ನು ಹೇಳಿದರು.

Tap to resize

Latest Videos

undefined

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ಸ್ಪೀಕರ್‌ ಹೊರಟ್ಟಿ

ಶಿಕ್ಷಕರ ಬೆಂಬಲ ಆಶೀರ್ವಾದದಿಂದ ಏಳು ಬಾರಿ ಆಯ್ಕೆಯಾಗಿ ಶಿಕ್ಷಣ ಸಚಿವರಾಗಿ, ಎರಡು ಬಾರಿ ಸಭಾಪತಿಯಾಗಿರುವ ದೇಶದ ಇತಿಹಾಸದಲ್ಲಿ ಇಂತಹ ದಾಖಲೆ ಬರೆದಿರುವೆ. ಈ ಎಲ್ಲ ಶ್ರೇಯಸ್ಸು ಮತದಾರ ಕ್ಷೇತ್ರದ ಶಿಕ್ಷಕರಿಗೆ ಸಲ್ಲುತ್ತದೆ. ನನಗೆ ಏನೆಲ್ಲ ಗೌರವ ಆದರಗಳು ಬಂದರೂ ಅದಕ್ಕೆ ಶಿಕ್ಷಕರೇ ಕಾರಣ ಎಂದು ಹೊರಟ್ಟಿ ಸ್ಮರಿಸಿದರು.

ಅವಿರೋಧ ಆಯ್ಕೆ ಮಾಡಿ:

ಇದೇ ಸಂದರ್ಭದಲ್ಲಿ ಶಿಕ್ಷಕ(Teachers) ಸಂಘಟನೆಗಳ ಮುಖಂಡರು ನಾಲ್ಕು ದಶಕಗಳಿಂದ ದಣಿವರಿಯದ ಹೋರಾಟಗಾರ ಬಸವರಾಜ ಹೊರಟ್ಟಿ ಅವರನ್ನು ಮುಂಬರುವ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಮಾಡುವ ಮೂಲಕ ಸಮಸ್ತ ಶಿಕ್ಷಕ ಬಂಧುಗಳಿಗೆ ಗೌರವ ನೀಡಬೇಕೆಂದು ಕಾಂಗ್ರೆಸ್‌ ಮತ್ತು ಬಿಜೆಪಿ ರಾಷ್ಟ್ರೀಯ ಪಕ್ಷಗಳಿಗೆ ಮನವಿ ಮಾಡಿದರು. ಡಾ. ಬಸವರಾಜ ಧಾರವಾಡ, ಜಿ.ಆರ್‌.ಭಚ್‌, ಶಾಮ ಮಲ್ಲನಗೌಡರ, ಪ್ರಭಾಕರ ಬಂಚ್‌, ಮಹೇಶ ದ್ಯಾವಪ್ಪನವರ, ನಾರಾಯಣ ದೈಮಣೆ, ಡಾ. ಸಂಗಾಪೂರ, ಡಾ. ಶ್ರೀಶೈಲ ಹುದ್ದಾರ ಮುಂತಾದವರು ವೇದಿಕೆಯ ಮೇಲಿದ್ದರು.
 

click me!