ಜೆಡಿಎಸ್‌ ಬಗ್ಗೆ ವಿವೇಚನೆಯಿಂದ ಮಾತನಾಡಿ: ಎಚ್ಡಿ ದೇವೇಗೌಡ ಎಚ್ಚರಿಕೆ!

By Kannadaprabha News  |  First Published May 6, 2023, 9:28 AM IST

ಜೆಡಿಎಸ್‌ ಪಕ್ಷ ಕುರಿತು ಕಾಂಗ್ರೆಸ್‌,ಬಿಜೆಪಿಯವರು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಜೆಡಿಎಸ್‌ನ್ನು ಯಾರು ಅಷ್ಟುಹಗುರವಾಗಿ ಪರಿಗಣಿಸುವುದು ಬೇಡ. ವಿವೇಚನೆಯಿಂದ ಮಾತನಾಡಬೇಕು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.


ಶೃಂಗೇರಿ (ಮೇ.6) : ಜೆಡಿಎಸ್‌ ಪಕ್ಷ ಕುರಿತು ಕಾಂಗ್ರೆಸ್‌,ಬಿಜೆಪಿಯವರು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಜೆಡಿಎಸ್‌ನ್ನು ಯಾರು ಅಷ್ಟುಹಗುರವಾಗಿ ಪರಿಗಣಿಸುವುದು ಬೇಡ. ವಿವೇಚನೆಯಿಂದ ಮಾತನಾಡಬೇಕು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.

ಪಟ್ಟಣದ ಗೌರೀಶಂಕರ ಸಭಾಂಗಣದಲ್ಲಿ ಕ್ಷೇತ್ರದ ಜೆಡಿಎಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ರೈತರು, ಕಾರ್ಮಿಕರು, ಜನಸಾಮಾನ್ಯರ ಪಕ್ಷ. ಸದಾ ಜನರ ಆಶೀರ್ವಾದ ಜೆಡಿಎಸ್‌ ಮೇಲಿದೆ. ರಾಜ್ಯದಲ್ಲಿ ರೈತರ ಸಾಲಮನ್ನಾ ಮಾಡಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ(HD Kumaraswamy)ಗೆ ಸಲ್ಲುತ್ತದೆ. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂಬ ಭರವಸೆಯಂತೆ ಸಾಲ ಮನ್ನಾ ಮಾಡಲಾಯಿತು. ಅಲ್ಪ ಅವಧಿಯ ಸರ್ಕಾರದಲ್ಲಿ ಒತ್ತಡದ ನಡುವೆ ಕುಮಾರಸ್ವಾಮಿ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಿದರು. ಅವರು ನುಡಿದಂತೆ ನಡೆದಿದ್ದಾರೆ ಎಂದರು.

Tap to resize

Latest Videos

undefined

 

ನಾನು ದೇವೇಗೌಡರ ನಿಯತ್ತಿನ ನಾಯಿ ಎಂದ ಶಾಸಕ: ಕಣ್ಣೀರಿಟ್ಟ ಮಾಜಿ ಪಿಎಂ

ಸಂಪೂರ್ಣ ಅಧಿಕಾರ ನೀಡಿದ್ದರೆ ನಾಡಿನ ಸರ್ವತೋಮುಖ ಅಭಿವೃದ್ಧಿ ಮಾಡಲಾಗುತ್ತಿತ್ತು. ಜನಸಾಮಾನ್ಯರ ನಾಡಿಮಿಡಿತವನ್ನು ಅಥ್ರ್ಯೆಸಿಕೊಂಡು ಅವರ ಶ್ರೇಯಸ್ಸಿಗಾಗಿ ಕುಮಾರಸ್ವಾಮಿ ಈಗಲೂ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಜನರು ಈ ಬಾರಿ ಬದಲಾವಣೆ ಬಯಸಿದ್ದು ಜೆಡಿಎಸ್‌ ಬಗ್ಗೆ ಉತ್ತಮ ಅಲೆಯಿದೆ. ಮತದಾರರು ಈ ಬಾರಿ ಜೆಡಿಎಸ್‌ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸವಿದೆ ಎಂ ನುಡಿದರು.

ಶೃಂಗೇರಿ ಕ್ಷೇತ್ರದ (Shringeri assembly constituency)ಅಭಿವೃದ್ಧಿಗೆ ಮಾಜಿ ಸಚಿವ ಎಚ್‌.ಡಿ.ರೇವಣ್ಣ(HD Revanna) ಅವರ ಕೊಡುಗೆ ಅನನ್ಯ. ಮಲೆನಾಡಿನ ಗಾಂಧಿ ಎಂದು ಪ್ರಸಿದ್ಧರಾದ ಗೋವಿಂದೇಗೌಡರು ಕ್ಷೇತ್ರದಲ್ಲಿ ಮಾಡಿದ ಸೇವೆ ಚಿರಸ್ಥಾಯಿಯಾಗಿದೆ. ಮಲೆನಾಡಿನಲ್ಲಿ ರೈತರ ಪರವಾಗಿ ಕೆಲಸ ಮಾಡಬೇಕಾದರೆ ಜೆಡಿಎಸ್‌ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿ ಕುಮಾರಸ್ವಾಮಿ ಅವರ ಕೈಬಲಪಡಿಸಲು ಕ್ಷೇತ್ರದಲ್ಲಿ ಬಹುಮತದಿಂದ ಮತದಾರರು ಗೆಲ್ಲಿಸಬೇಕು. ಜೆಡಿಎಸ್‌ ಪಕ್ಷಕ್ಕೆ ಮತ್ತೊಮ್ಮೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಹಳೇ ಮೈಸೂರು ಭಾಗದ ಮೇಲೆ 3 ಪಕ್ಷಗಳ ಕಣ್ಣು: ಮೋದಿಗಿಂತ ಮೊದಲೇ ಅಖಾಡಕ್ಕಿಳಿಯಲಿರುವ ದೇವೇಗೌಡರು

 

ಸಮಾರಂಭದಲ್ಲಿ ಜೆಡಿಎಸ್‌ ಅಭ್ಯರ್ಥಿ ಸುಧಾಕರ್‌ ಶೆಟ್ಟಿ, ಟಿ.ಟಿ.ಕಳಸಪ್ಪ, ಜೆಡಿಎಸ್‌ಎಚ್‌.ಜಿ.ವೆಂಕಟೇಶ್‌, ದಿವಾಕರ್‌ಭಟ್‌, ವಿವೇಕಾನಂದ, ಜಿ.ಜಿ.ಮಂಜುನಾಥ್‌, ಭರತ್‌ ಮತ್ತಿತರರು ಇದ್ದರು.

click me!