ಬಿಜೆಪಿ ವ್ಯಕ್ತಿ ಪೂಜೆಯ ಪಕ್ಷವಲ್ಲ; ದೇಶ ಪೂಜಿಸುವ ಪಕ್ಷ: ರಮೇಶ್ ಕತ್ತಿ

Published : May 06, 2023, 09:02 AM IST
ಬಿಜೆಪಿ ವ್ಯಕ್ತಿ ಪೂಜೆಯ ಪಕ್ಷವಲ್ಲ; ದೇಶ ಪೂಜಿಸುವ ಪಕ್ಷ: ರಮೇಶ್ ಕತ್ತಿ

ಸಾರಾಂಶ

ಭಾರತೀಯ ಜನತಾ ಪಕ್ಷವು ವ್ಯಕ್ತಿ ಪೂಜೆಯ ಪಕ್ಷವಲ್ಲ, ದೇಶ ಪೂಜೆಯ ಪಕ್ಷ. ಇಂದು ದೇಶದ ಸುರಕ್ಷತೆಗೆ ಬಿಜೆಪಿ ಸರ್ಕಾರ ಅವಶ್ಯವಾಗಿದೆ ಎಂದು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

ಯಮಕನಮರಡಿ (ಮೇ.6) : ಭಾರತೀಯ ಜನತಾ ಪಕ್ಷವು ವ್ಯಕ್ತಿ ಪೂಜೆಯ ಪಕ್ಷವಲ್ಲ, ದೇಶ ಪೂಜೆಯ ಪಕ್ಷ. ಇಂದು ದೇಶದ ಸುರಕ್ಷತೆಗೆ ಬಿಜೆಪಿ ಸರ್ಕಾರ ಅವಶ್ಯವಾಗಿದೆ ಎಂದು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

ಹೆಬ್ಬಾಳ ಗ್ರಾಮ(Hebbal village)ದಲ್ಲಿ ಯಮಕನಮರಡಿ ಮತಕ್ಷೇತ್ರ(Yamakanamaradi constituency)ದ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ(Basavaraj Hundri) ಪರ ಮತಯಾಚಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧದ ಪ್ರಸ್ತಾವ ಮಾಡಿದ್ದು, ಇದರಿಂದ ಕಾಂಗ್ರೆಸಿನಲ್ಲಿ ಹಿಂದುತ್ವ ದ್ವೇಷ ಭಾವನೆ ಎದ್ದು ಕಾಣುತ್ತಿದೆ. ಇಂದು ನಮ್ಮ ನಮ್ಮ ಧರ್ಮಗಳ ರಕ್ಷಣೆ ಮಾಡಬೇಕಾಗಿದೆ ಎಂದರು.

Karnataka election 2023: ಸುಳ್ಳಿನ ಕಂತೆ ಹೇಳಿ ದೇಶದ ವ್ಯವಸ್ಥೆ ಹದಗೆಡಿಸಿದ ಬಿಜೆಪಿ: ಚೌವಾಣ್ ವಾಗ್ದಾಳಿ.

ಯಮಕನಮರಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ ಮಾತನಾಡಿ, ಹುಕ್ಕೇರಿ ತಾಲೂಕು ಅಭಿವೃದ್ಧಿಗೆ ಕತ್ತಿ ಕುಟುಂಬದವರು ಅಪಾರ ಕೊಡುಗೆ ನೀಡಿದ್ದು, ದಿ.ಉಮೇಶ ಕತ್ತಿಯವರು ಯಮಕನಮರಡಿಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಆಶಯ ಹೊಂದಿದ್ದರು. ಆದರೆ, ಅವರ ಅಗಲಿಕೆಯಿಂದ ನಮಗೆ ನೋವಾಗಿದ್ದು, ದಿ.ಉಮೇಶ ಕತ್ತಿಯವರ ಆಶಯ ಈಡೇರಿಕೆಯಾಗಬೇಕಾದರೆ ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಾಗಿ ಈ ಚುನಾವಣೆಯಲ್ಲಿ ಶ್ರಮಿಸಿ ನನ್ನನ್ನು ಗೆಲ್ಲಿಸಬೇಕು ಎಂದು ಕೋರಿದರು.

ಅಪ್ಪಾಸಾಹೇಬ್‌ ಸಂಕನ್ನವರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಶಶಿಕಾಂತ ಮಠಪತಿ, ಜಯಪಾಲ ಹೊನ್ನನವರ, ರವಿ ಹಂಜಿ, ಅಜೀತ ಮುನ್ನೂಳಿ, ಚನ್ನಬಸು ಖೋತ, ಹಣಮಂತ ಇನಾಮದಾರ, ಕೃಷ್ಣಾ ಎಂ.ಭಟ್‌, ನ್ಯಾಯವಾದಿ ಆರ್‌.ಎಸ್‌. ಮುತಾಲಿಕ ಮತ್ತು ಗ್ರಾಮದ ಶಿವಾನಂದ ಬಿಲಕಾರಿ, ರವಿ ಬಾಳಿಕಾಯಿ, ವಿಶ್ವನಾಥ ಕಮತೆ, ಸಮಸ್ತ ಬಿಜೆಪಿ ಕಾರ್ಯಕರ್ತರು ಇದ್ದರು. ಉಳ್ಳಾಗಡ್ಡಿ ಖಾನಾಪುರ, ಹಂಚಿನಾಳ, ಯಮಕನಮರಡಿ, ದಡ್ಡಿ, ಇಸ್ಲಾಂಪುರ, ಪಾಶ್ಚಾಪುರ, ಮಾವನೂರ ಗ್ರಾಮಗಳಿಗೆ ರಮೇಶ ಕತ್ತಿ ಭೇಟಿ ನೀಡಿ ಬಸವರಾಜ ಹುಂದ್ರಿ ಪರ ಮತಯಾಚಿಸಿದರು.

ಬೆಳಗಾವಿ: ಇಂದು ಲಕ್ಷ್ಮೀ ಹೆಬ್ಬಾಳಕರ ಪರ ನಟ ಶಿವರಾಜಕುಮಾರ ಪ್ರಚಾರ

ಬಿಜೆಪಿ ಪಕ್ಷವನ್ನು ಸಂಘಟಿಸಿದ ಮಾರುತಿ ಅಷ್ಟಗಿಯವರು ಟಿಕೆಟ್‌ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಜೆಡಿಎಸ್‌ ಪಕ್ಷದಿಂದ ಚುನಾಣೆಗೆ ಸ್ಪರ್ಧಿಸಿದ್ದಾರೆ. ಬಿಜೆಪಿ ಆಂತರಿಕ ಮತಗಳು ಒಡೆದು ಹೋಗದಂತೆ ಬಿಜೆಪಿ ಕಾರ್ಯಕರ್ತರು ನಿಗಾವಹಿಸಿಕೊಂಡು ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿಯವರನ್ನು ಗೆಲ್ಲಿಸಬೇಕು.

ರಮೇಶ ಕತ್ತಿ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷರು.

ಯಮಕನಮರಡಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ. ಇಲ್ಲಿಯ ಶಾಸಕರು ಕ್ಷೇತ್ರದ ಅಭಿವೃದ್ಧಿ ಮಾಡದೇ ತಮ್ಮ ಸ್ವಂತಿಕೆಯನ್ನು ಅಭಿವೃದ್ಧಿ ಮಾಡಿಕೊಳ್ಳುತ್ತಿದ್ದಾರೆ. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಶಾಸಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ.

ಬಸವರಾಜ ಹುಂದ್ರಿ, ಬಿಜೆಪಿ ಅಭ್ಯರ್ಥಿ ಯಮಕನಮರಡಿ ಮತಕ್ಷೇತ್ರ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!