
ಮುಂಬೈ (ಜುಲೈ 7): ಮಹಾರಾಷ್ಟ್ರ(Maharashtra) ಮುಖ್ಯಮಂತ್ರಿ ಏಕನಾಥ್ ಶಿಂಧೆ (Chief Minister Eknath Shinde) 38 ಸಚಿವರ ಸಂಪುಟವನ್ನು ಹೊಂದುವ ಸಾಧ್ಯತೆಯಿದೆ, ಇದರಲ್ಲಿ ಹೆಚ್ಚಿನ ಸಚಿವ ಸ್ಥಾನ ಬಿಜೆಪಿ ಪಕ್ಷಕ್ಕೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೊಸ ಸಂಪುಟದಲ್ಲಿ (New Cabinet) ಬಿಜೆಪಿಯಿಂದ 25, ಏಕನಾಥ್ ಶಿಂಧೆ ಅವರ ಶಿವಸೇನೆಯಿಂದ 13 ಸಚಿವರು ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಮತ್ತು ಅವರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೊರತುಪಡಿಸಿ, ಸಂಪುಟದಲ್ಲಿ ಹೆಚ್ಚಿನ ಸಚಿವರು ಹೊಸಬರಾಗಿರಲಿದ್ದಾರೆ ಎನ್ನಲಾಗಿದೆ. ಮುಂದಿನ ಮಹಾರಾಷ್ಟ್ರ ಚುನಾವಣೆಗೆ ತಯಾರಿ ನಡೆಸುವ ಮುನ್ನ ಹೊಸ ಮುಖಗಳನ್ನು ಪರೀಕ್ಷಿಸಲು ಬಿಜೆಪಿ ಬಯಸಿದೆ ಎಂದು ಮೂಲಗಳು ತಿಳಿಸಿವೆ.
ದೇವೇಂದ್ರ ಫಡ್ನವಿಸ್ ಹಾಗೂ ಏಕನಾಥ್ ಶಿಂಧೆ ಕಳೆದ ಕೆಲವು ದಿನಗಳಿಂದ ಈ ಕುರಿತಾಗಿ ಚರ್ಚೆ ಮಾಡಿ ಸಂಪುಟ ರಚನೆಯ ಫಾರ್ಮುಲಾ ಸಿದ್ಧ ಮಾಡಿದ್ದಾರೆ ಎನ್ನಲಾಗಿದೆ. ಬಿಜೆಪಿ ಹಾಗಶು ಶಿವಸೇನೆಯೊಂದಿಗೆ ಕೆಲ ಪಕ್ಷೇತರ ಶಾಸಕರು ಕೂಡ ಸರ್ಕಾರದ ಜೊತೆ ಇದ್ದಾರೆ. ಮಹಾರಾಷ್ಟ್ರದಲ್ಲಿ ಇದಕ್ಕೂ ಹಿಂದೆ ಆಡಳಿತ ನಡೆಸಿದ್ದ ಮಹಾ ವಿಕಾಸ್ ಅಘಾಡಿ ಸರ್ಕಾರ ಹಾಗೂ ಅದಕ್ಕೂ ಹಿಂದೆ ಇದ್ದ ಬಿಜೆಪಿ ಸರ್ಕಾರ ಕೂಡ ಸಂಪುಟ ರಚನೆಗಾಗಿ ವಿಶೇಷ ಫಾರ್ಮುಲಾ ಹೊಂದಿತ್ತು.
ಶಿಂಧೆ ಸರ್ಕಾರ ಕೂಡ ಅದೇ ಫಾರ್ಮುಲಾದಲ್ಲಿ ಕೆಲಸ ಮಾಡಿದೆ. ಶಿಂಧೆಯ ಶಿವಸೇನೆ ಬಣದಲ್ಲಿ ಪ್ರತಿ ಮೂರು ಶಾಸಕರಿಗೆ ಒಂದು ಸಚಿವ ಸ್ಥಾನ ನೀಡುವ ನಿರ್ಧಾರ ಮಾಡಲಾಗಿದೆ. ಇನ್ನು ಬಿಜೆಪಿಯಲ್ಲಿ ಪ್ರತಿ ನಾಲ್ವರು ಶಾಸಕರಿಗೆ ಒಂದು ಸಚಿವ ಸ್ಥಾನವನ್ನು ನೀಡುವ ಯೋಜನೆ ರೂಪಿಸಲಾಗಿದೆ. ಮಹಾರಾಷ್ಟ್ರದಲ್ಲಿ ಒಟ್ಟಾರೆ 45 ಕ್ಯಾಬಿನೆಟ್ ದರ್ಜೆ ಸಚಿವರನ್ನು ಆಯ್ಕೆ ಮಾಡಬಹುದು.
ಇವೆಲ್ಲದರ ನಡುವೆ ಪಕ್ಷೇತರ ಶಾಸಕರಿಗೆ ಎಷ್ಟು ಸಚಿವ ಸ್ಥಾನ ಸಿಗಲಿದೆ ಎನ್ನುವ ಕುತೂಹಲ ಇನ್ನೂ ಉಳಿದಿದೆ. ಯಾಕೆಂದರೆ, ಇಡೀ ಸರ್ಕಾರಕ್ಕೆ ದೊಡ್ಡ ಮಟ್ಟದ ಬೆಂಬಲ ನೀಡಿದ್ದ ಪಕ್ಷೇತರ ಶಾಸಕರು. ಶಿಂಧೆ ಗ್ರೂಪ್‌ಗೆ ಬಂಡಾಯ ಶಾಸಕರು ಸೇರುವ ಮುನ್ನವೇ ಪಕ್ಷೇತರ ಶಾಸಕರು ಇವರಿಗೆ ಬಲ ನೀಡಿದ್ದರು. ಬಿಜೆಪಿಯ 106 ಶಾಸಕರೊಂದಗೆ 20 ಪಕ್ಷೇತರ ಶಾಸಕರು ಶಿಂಧೆ ಸರ್ಕಾರಕ್ಕೆ ಬಲ ನೀಡಿದ್ದರು. ಕಳೆದ ಬಿಜೆಪಿ ಮಹಾರಾಷ್ಟ್ರದಲ್ಲಿ ಹಿಂದಿನ ಸರ್ಕಾರ ಮಾಡಿದ್ದಾಗಲೂ ಪಕ್ಷೇತರ ಶಾಸಕರು ಬೆಂಬಲ ನೀಡಿದ್ದರು. ಆ ಕಾರಣಕ್ಕಾಗಿ ಎಷ್ಟು ಮಂದಿ ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ ನೀಡುತ್ತಾರೆ ಎನ್ನುವ ಕುತೂಹಲ ಉಳಿದುಕೊಂಡಿದೆ.
ಶಾಸಕರು ಮಲಗಿದ್ದಾಗ ಫಡ್ನವೀಸ್ ರಹಸ್ಯ ಭೇಟಿ: ಸಿಎಂ ಶಿಂಧೆ!
ಗೃಹ ಸಚಿವ ಸ್ಥಾನಕ್ಕೆ ಬಿಜೆಪಿ ಬೇಡಿಕೆ: ಮೈತ್ರಿ ಸರ್ಕಾರದಲ್ಲಿ ಬಿಜೆಪಿ ಸಾಮಾನ್ಯವಾಗಿ ಗೃಹ ಇಲಾಖೆಗೆ ಬೇಡಿಕೆ ನೀಡುತ್ತದೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿರುವ ದೇವೇಂದ್ರ ಫಡ್ನವಿಸ್ ಈ ಬಾರಿ ಗೃಹ ಸಚಿವ ಸ್ಥಾನವನ್ನು ತಾವೇ ಉಳಿಸಿಕೊಳ್ಳಲಿದ್ದಾರೆಯೇ ಎನ್ನುವ ಕುತೂಹಲವೂ ಇದೆ. ಹಿಂದಿನ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸಿದ 48 ವರ್ಷದ ಏಕನಾಥ್ ಶಿಂಧೆ ಕಳೆದ ವಾರ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತ ಘೋಷಿಸಿದ ಸಿಎಂ ಶಿಂಧೆ, ಮಹಾರಾಷ್ಟ್ರದಲ್ಲಿ ಇಂಧನ ಅಗ್ಗ!
ಶಿಂಧೆ ಸೇರಿದಂತೆ 16 ಶಾಸಕರನ್ನು ಅನರ್ಹಗೊಳಿಸುವ ಕುರಿತು ಜುಲೈ 11 ರಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ನಂತರವೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಸರ್ಕಾರದ ಮೂಲಗಳು ಹೇಳಿವೆ. ಬಂಡಾಯ ಪಾಳಯದಿಂದ 16 ಮಂದಿಗೆ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಕಳುಹಿಸಿರುವ ಸಿಂಧುತ್ವ ಅನರ್ಹತೆಯ ನೋಟಿಸ್‌ಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆಯು ನಿರ್ಧರಿಸುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.