* ಸಿದ್ದರಾಮಯ್ಯ ಭೇಟಿಯಾದ ಬಂಗಾರಪ್ಪ ಸಹೋದರರು
* ಮಗಳ ಮದುವೆ ಆಮಂತ್ರಣ ನೀಡಲು ಬಂದಿದ್ದ ಕುಮಾರ ಬಂಗಾರಪ್ಪ
* ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರ ಮಾಡಿದ್ದಾರೋ ಇಲ್ವೋ ಗೊತ್ತಿಲ್ಲ?
ಬೆಂಗಳೂರು(ಅ.15): ಕಾಂಗ್ರೆಸ್ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಅವರನ್ನ ಬಂಗಾರಪ್ಪ ಸಹೋದರರು(Bangarappa Brothers) ಇಂದು(ಶುಕ್ರವಾರ) ಭೇಟಿಯಾಗಿದ್ದಾರೆ. ಶಿವಮೊಗ್ಗ(Shivamogga) ಜಿಲ್ಲೆಯ ಸೊರಬ(Soraba) ಕ್ಷೇತ್ರದ ಬಿಜೆಪಿ ಶಾಸಕ ಕುಮಾರ ಬಂಗಾರಪ್ಪ ಅವರು ಸಿದ್ದರಾಮಯ್ಯ ಭೇಟಿಯಾಗಲು ಸಿದ್ದು ನಿವಾಸಕ್ಕೆ ಆಗಮಿಸಿದ್ದರು. ಕುಮಾರ ಬಂಗಾರಪ್ಪ ಆಗಮನಕ್ಕೂ ಮೊದಲೇ ಸಿದ್ದರಾಮಯ್ಯ ನಿವಾಸಕ್ಕೆ ಇತ್ತೀಚೆಗಷ್ಟೇ ಜೆಡಿಎಸ್(JDS) ತೊರೆದು ಕಾಂಗ್ರೆಸ್ ಸೇರಿದ ಮಧು ಬಂಗಾರಪ್ಪ ಅವರು ಬಂದಿದ್ದರು.
ಕುಮಾರ ಬಂಗಾರಪ್ಪ(Kumar Bangarappa) ಆಗಮನಕ್ಕೂ ಅರ್ಧ ಗಂಟೆ ಮೊದಲೇ ಸಿದ್ದರಾಮಯ್ಯ ಭೇಟಿಗೆ ಮಧು ಬಂಗಾರಪ್ಪ(Madhu Bangarappa) ಆಗಮಿಸಿದ್ದರು. ಸಿದ್ದರಾಮಯ್ಯ ನಿವಾಸಕ್ಕೆ ಕುಮಾರ್ ಬಂಗಾರಪ್ಪ ಎಂಟ್ರಿ ಆಗ್ತಿದ್ದಂತೆ, ಸಿದ್ದು ನಿವಾಸದಿಂದ ಮಧು ಬಂಗಾರಪ್ಪ ತೆರಳಿದ್ದಾರೆ.
undefined
ರಾಜ್ಯ ಸರ್ಕಾರ ಆರ್‌ಎಸ್‌ಎಸ್‌ಮಯ ಎಂಬ ಹೇಳಿಕೆ ಸರಿಯಲ್ಲ: ಕುಮಾರ ಬಂಗಾರಪ್ಪ
ಸಿದ್ದರಾಮಯ್ಯ ಭೇಟಿಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ(BJP) ಶಾಸಕ ಕುಮಾರ ಬಂಗಾರಪ್ಪ, ಮಗಳ ಮದುವೆ ಆಮಂತ್ರಣ(Wedding Invitation) ನೀಡಲು ಸಿದ್ದರಾಮಯ್ಯ ಅವರ ನಿವಾಸಕ್ಕೆ ಬಂದಿದ್ದೆ, ರಾಜಕಾರಣದ(Politics) ಬಗ್ಗೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಂಗಾರಪ್ಪನವರ ಮೊಮ್ಮಗಳ ಮದುವೆಯನ್ನ ಎಲ್ಲರೂ ಸೇರಿ ಮಾಡೊಣ ಎಂದು ಸಿದ್ದರಾಮಯ್ಯ ಅವರು ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನಾನು ಕಾಂಗ್ರೆಸ್(Congress) ಹೋಗುವ ಸುದ್ದಿ ಸುಳ್ಳು, ಮುಂದಿನ ಚುನಾವಣೆಯಲ್ಲಿ(Election) ಬಿಜೆಪಿಯಿಂದಲೇ ನಾನು ಸ್ಪರ್ಧಿಸುತ್ತೇನೆ. ಈ ಬಗ್ಗೆ ನನಗೆ ಸ್ಪಷ್ಟತೆ ಇದೆ. ನಾನು ಬಿಜೆಪಿಯಲ್ಲಿದ್ದೇನೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇನೆ. ನನ್ನನ್ನ ಯಾರೂ ಕಾಂಗ್ರೆಸ್‌ಗೆ ಕರೆದಿಲ್ಲ. ಸಿದ್ದರಾಮಯ್ಯ ಭೇಟಿಯಾಗಲು ಬಂದಾಗ ನನ್ನ ತಮ್ಮ ಸಿಕ್ಕರು. ತಮ್ಮನನ್ನ ನೋಡಿ ಸಂತೋಷ ಆಯ್ತು ಎಂದಷ್ಟೇ ಹೇಳಿದ್ದಾರೆ.
ಡಿಕೆಶಿ(DK Shivakumar) ವಿರುದ್ಧ ಸ್ವಪಕ್ಷೀಯರ ಭ್ರಷ್ಟಾಚಾರ(Corruption) ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರ ಬಂಗಾರಪ್, ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರ ಮಾಡಿದ್ದಾರೋ ಇಲ್ವೋ ಗೊತ್ತಿಲ್ಲ. ಕಾಂಗ್ರೆಸ್ ಮುಖಂಡರು ಹಾಗೇ ಮಾತನಾಡಬಾರದಿತ್ತು. ವೇದಿಕೆಗಳಲ್ಲಿ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಹೇಳುವ ಮೂಲಕ ಡಿಕೆಶಿ ಪರ ಕುಮಾರ್ ಬಂಗಾರಪ್ಪ ಸಾಫ್ಟ್ ಕಾರ್ನರ್ ತೋರಿದ್ದಾರೆ. ಕಾಂಗ್ರೆಸ್ ನಾಯಕರ ನಮಗೆ ಬಾಣ ಕೊಟ್ಟಿದ್ದಾರೆ. ಅದು ನಮ್ಮ ಬಳಿ ಇದೆ ಅಂತ ತಿಳಿಸಿದ್ದಾರೆ.