ರಾಜೀನಾಮೆ ಹಿಂಪಡೆವ ಸುಳಿವು ನೀಡಿದ ಸಿಧು : ಮತ್ತೆ ವಾಪಸ್

By Suvarna NewsFirst Published Oct 15, 2021, 12:36 PM IST
Highlights
  •  ಪಂಜಾಬ್‌ ಕಾಂಗ್ರೆಸ್‌ನಲ್ಲಿ ಉಂಟಾಗಿದ್ದ ಅಸಮಾಧಾನದ ಬಿರುಗಾಳಿ ಕೊಂಚ ಶಮನ
  • ಅಸಮಾಧಾನಗೊಂಡು ರಾಜೀನಾಮೆ ನೀಡಿ ತೆರಳಿದ್ದ ನವಜೋತ್ ಸಿಂಗ್ ಸಿಧು  ಮತ್ತೆ ವಾಪಸ್?

ನವದೆಹಲಿ(ಅ.15): ಪಂಜಾಬ್‌ (Punjab) ಕಾಂಗ್ರೆಸ್‌ನಲ್ಲಿ (Congress) ಉಂಟಾಗಿದ್ದ ಅಸಮಾಧಾನದ ಬಿರುಗಾಳಿ ಕೊಂಚ ಶಮನವಾದ ಲಕ್ಷಣಗಳು ಕಂಡು ಬರುತ್ತಿದೆ. ಅಸಮಾಧಾನಗೊಂಡು ರಾಜೀನಾಮೆ (Resignation) ನೀಡಿ ತೆರಳಿದ್ದ ನವಜೋತ್ ಸಿಂಗ್ ಸಿಧು (Navjoth Singh Sidhu)  ಮತ್ತೆ ವಾಪಸಾಗಿ ಪಂಜಾಬ್ ಕಾಂಗ್ರೆಸ್ (Congress) ಅಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆಗಳಿದೆ. 

ಗುರುವಾರ ಕಾಂಗ್ರೆಸ್ ಹಿರಿಯ ಮುಖಂಡರು ಹಾಗು ಸಿಧು ನಡುವೆ ಸಭೆ ನಡೆದಿದ್ದು ಸಭೆ ಬಳಿಕ ಇಂತಹದ್ದೊಂದು ಸುದ್ದಿ ಹೊರಬಿದ್ದಿದೆ. 

ಸಿಧು ಆಟ, ಕಾಂಗ್ರೆಸ್ ಪರದಾಟ: ಪಂಜಾಬ್ ರಾಜಕೀಯ ವಿಶ್ಲೇಷಣೆ

ಒಂದು ಗಂಟೆಗೂ ಹೆಚ್ಚು ಕಾಲ ಎಐಸಿಸಿ ಕಚೇರಿಯಲ್ಲಿ ನಡೆದ ಸಭೆ ಬಳಿಕ ಮಾತನಾಡಿರುವ ಸಿಧು ಪಕ್ಷದ  ನಾಯಕಿಯಾದ ಸೋನಿಯಾ ಗಾಂಧಿಯವರು (Sonia Gandhi)  ಯಾವುದೇ ನಿರ್ಧಾರ ತೆಗೆದುಕೊಂಡರು ಅದನ್ನು ಸಂಪೂರ್ಣ ನಂಬಿಕೆಯೊಂದಿಗೆ ಸ್ವೀಕಾರ ಮಾಡುವುದಾಗಿ ಭರವಸೆಯನ್ನು ನೀಡಿದ್ದಾರೆ. 

ಸಿಧು ಸೆಪ್ಟೆಂಬರ್ 28 ರಂದು ಪಂಚಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.  ಟ್ವಿಟ್ಟರ್ (Twitter) ಮೂಲಕ ರಾಜೀನಾಮೆ ಪತ್ರ ಪೋಸ್ಟ್  ಮಾಡಿದ್ದರು. ಆದರೆ ಸೋನಿಯಾ ಗಾಂಧೀ ಅವರನ್ನು ಅದನ್ನು ಸ್ವೀಕಾರ ಮಾಡಿರಲಿಲ್ಲ. 

ಕಾಂಗ್ರೆಸ್‌ಗೆ ಒಂದೇ ದಿನ 2 ಪ್ಲಸ್‌, 1 ಮೈನಸ್: ಸಿಧು ರಾಜೀನಾಮೆ ರಹಸ್ಯವೇನು?

ಅಮರೀಂದರ್ ಸಿಂಗ್ ರಾಜೀನಾಮೆ ನೀಡುತ್ತಲೇ ಸಿಧು ರಾಜೀನಾಮೆ ನೀಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು. ಅಲ್ಲದೇ ಸಿಎಂ ಅಗಿ ಚರಣ್ ಜಿತ್ ಸಿಂಗ್ ಚನ್ನಿ ನೇಮಕ ಹಾಗೂ ಸಂಪುಟ ವಿಸ್ತರಣೆ ಬಳಿಕವೂ ಸಾಕಷ್ಟು ಅಸಮಾಧಾನಗೊಂಡಿದ್ದರು. 

ಅಲ್ಲದೇ ಕಾಂಗ್ರೆಸ್ ನಾಯಕರೆಲ್ಲರೂ ಹಾಜರಾಗಿದ್ದ ಚರಣ್ ಜಿತ್ ಸಿಂಗ್ ಅವರ ಮಗನ ಮದುವೆಯಲ್ಲಿಯು ಪಾಲ್ಗೊಂಡಿರಲಿಲ್ಲ. ಏಕಾಏಕಿ ಇಬ್ಬರು ಪ್ರಭಾವಿ ಮುಖಂಡರ ರಾಜೀನಾಮೆಯಿಂದ ಕಾಂಗ್ರೆಸ್‌ಗೆ ಬಿಗ್ ಶಾಕ್ ಎದುರಾಗಿತ್ತು. 

ರಾಹುಲ್ ಪ್ರಿಯಾಂಕಾಗೆ ಸಪೋರ್ಟ್

ಪಂಜಾಬ್ ಕಾಂಗ್ರೆಸ್‌ನಲ್ಲಿ(Punjab Congress) ನಡೆಯುತ್ತಿರುವ ಗದ್ದಲದ ನಡುವೆ ನವಜೋತ್ ಸಿಂಗ್ ಸಿಧು(Navjot Singh Sidhu) ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಹೌದು ತಾನು ಹುದ್ದೆಯಲ್ಲಿರಲಿ, ಇಲ್ಲದಿರಲಿ ಆದರೆ ಯಾವತ್ತೂ ರಾಹುಲ್(Rahul gandhi) ಹಾಗೂ ಪ್ರಿಯಾಂಕಾ ಗಾಂಧಿ(Priyanka Gandhi) ಜೊತೆಗಿರುತ್ತೇನೆ ಎಂದಿದ್ದಾರೆ. ಚನ್ನಿ ಸರ್ಕಾರದ ರಚನೆಯಾದ ಬಳಿಕ, ಸಿಎಂ ತೆಗೆದುಕೊಂಡ ಕೆಲವು ನಿರ್ಧಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸಿಧು, ಕೆಲ ದಿನಗಳ ಹಿಂದೆ ಅಧ್ಯಕ್ಷ ಸ್ಥಾನ ತೊರೆದಿದ್ದರು. 

ಸಿಧು ಬೌನ್ಸರ್

ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ(Punjab Congress Prresident) ಹುದ್ದೆಗೆ ರಾಜೀನಾಮೆ ನೀಡಿದ ಮರುದಿನವೇ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು(Navjot Singh Sidhu) ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ತಮ್ಮ ಆಪ್ತ ಚರಣಜಿತ್‌ ಸಿಂಗ್‌ ಚನ್ನಿ(Charanjit Singh Channi) ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧವೇ ವಾಗ್ದಾಳಿ ನಡೆಸಿದ್ದರು.

ಕಳಂಕಿತ ನಾಯಕರು ಹಾಗೂ ಅಧಿಕಾರಿಗಳನ್ನು ವ್ಯವಸ್ಥೆಯಿಂದ ದೂರ ಇಡಲು ಹೋರಾಡಿದ್ದೆವು. ಆದರೆ ಅವರೆಲ್ಲರೂ ಮರಳಿದ್ದಾರೆ. ಅದಕ್ಕೆ ನಾನು ಅವಕಾಶ ನೀಡುವುದಿಲ್ಲ ಎಂದು ಗುಡುಗಿದ್ದರು.

ಯಾವುದೇ ಹುದ್ದೆ ಬಿಡುವ ಪರಿಸ್ಥಿತಿ ಬಂದರೆ ಅದನ್ನು ಬಿಟ್ಟುಬಿಡುತ್ತೇನೆ. ಆದರೆ ಸಿದ್ಧಾಂತಗಳ ವಿಷಯದಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದು ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ಬುಧವಾರ ವಿಡಿಯೋ ಹೇಳಿಕೆ ಬಿತ್ತರಿಸಿದ್ದರು.

click me!