
ಬೆಂಗಳೂರು (ಅ.15): ಇಂದು ಕಾಂಗ್ರೆಸ್ (Congress) ನಾಯಕರ ಮಹತ್ವದ ಸಭೆ ನಡೆಯಲಿದ್ದು, ಈ ವೇಳೆ ನಡೆದ ಅನೇಕ ರೀತಿಯ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗ್ತಾರಾ ಕಾಂಗ್ರೆಸ್ ನಾಯಕರು ಎನ್ನುವ ಕುತೂಹಲ ಮೂಡಿದೆ.
ರಾಜ್ಯದಲ್ಲಿ ಶೀಘ್ರದಲ್ಲೇ ಉಪಚುನಾವಣೆ (By election) ನಡೆಯಲಿದ್ದು ಹಾಗು ಪರಿಷತ್ ಚುನಾವಣೆಯು ಇದ್ದು ಇದೇ ವಿಚಾರವಾಗಿ ಇಂದು ಮಧ್ಯಾಹ್ನ 3 ಗಂಟೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK shivakumar) ಸಭೆ ಕರೆದಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸೇರಿದಂತೆ ಪಕ್ಷದ ವಿವಿಧ ಹಿರಿಯ ನಾಯಕರು. ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಉಪಚುನಾವಣೆ ಸಂದರ್ಭದಲ್ಲೇ ಕಾಂಗ್ರೆಸ್ ಗೆ ತಲೆನೋವಾಗಿರುವ ಪರ್ಸಂಟೇಜ್ ರಾಜಕಾರಣದ ಆರೋಪದ ಬಗ್ಗೆಯೂ ಈ ವೇಳೆ.
'ಡಿಕೆಶಿ ಒಬ್ಬ ಹೋಲ್ ಸೇಲ್ ವ್ಯಾಪಾರಿ' . ಆರದ 'ಕೈ' ಬಿಸಿ
ನೀರಾವರಿ ಯೋಜನೆಗಳಲ್ಲಿ ಡಿಕೆಶಿ ಕೂಡ ಪರ್ಸಂಟೇಜ್ ರಾಜಕಾರಣ ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಸಲಿಂ (Saleem), ಉಗ್ರಪ್ಪ (Ugrappa) ಮಾತನಾಡಿದ್ದು ಎಲ್ಲೆಡೆ ವೈರಲ್ ಆಗಿತ್ತು. ಡಿಕೆಶಿ ಅಡ್ಜಸ್ಟ್ ಮೆಂಟ್ ರಾಜಕಾರಣ ಮಾಡುತ್ತಾರೆ ಎನ್ನುವ ಬಗ್ಗೆಯೂ ಇಬ್ಬರ ಮಾತುಕತೆಯಲ್ಲಿ ಪ್ರಸ್ತಾಪವಾಗಿತ್ತು. ಈ ವಿಚಾರ ರಾಜಕೀಯ ವಲಯದಲ್ಲಿ ಸಾಕಷ್ಟು ಸಂಚಲನವನ್ನೆ ಮೂಡಿಸಿತ್ತು.
ಸಲಿಂ ಉಗ್ರಪ್ಪ ಮಾತುಗಳಿಂದ ಪಕ್ಷಕ್ಕಾಗಿರುವ ಮುಜುಗುರ ಸರಿಪಡಿಸುವ ನಿಟ್ಟಿನಲ್ಲಿ ಇಂದಿನ ಕೆಪಿಸಿಸಿ (KPCC) ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ಇನ್ನು ಈ ಚರ್ಚೆ ಬಳಿಕ ಸಿದ್ದರಾಮಯ್ಯ ಹಾಗು ಡಿಕೆಶಿ ಬಣಗಳೆನ್ನುವ ಚರ್ಚೆ ಇನ್ನಷ್ಟು ಜೋರಾಗಿದ್ದು ಈ ವಿಚಾರದಲ್ಲಿ ಸಿದ್ದರಾಮಯ್ಯ ಹೆಸರು ತರಬೇಡಿ ಎಂದು ಸಿದ್ದರಾಮಯ್ಯ ಆಪ್ತರು ಹೇಳುತ್ತಿದ್ದಾರೆ.
ತಮ್ಮ ವಿರುದ್ಧ ಉಗ್ರಪ್ಪ-ಸಲೀಂ ಹಗರಣದ ಮಾತುಗಳಿಗೆ ಡಿಕೆಶಿ ಪ್ರತಿಕ್ರಿಯೆ
ಉಗ್ರಪ್ಪ, ಸಲಿಂ ಮಾತುಕತೆಯನ್ನ, ಸಿದ್ದು ವರ್ಸಸ್ ಡಿಕೆಶಿ ಬಣ ಎಂದು ಬಿಂಬಿಸಿ ಇದನ್ನ ಸಿದ್ದರಾಮಯ್ಯ ಅವರೇ ಮಾಡಿಸಿದ್ದು ಎಂದು ಎಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ದಾರಿ ತಪ್ಪಿಸುವ ಕೆಲಸಕ್ಕೆ ಎದುರಾಳಿಗಳು ಕೈಹಾಕಿದ್ದಾರೆ. ಈ ಘಟನೆಗೂ ಸಿದ್ದರಾಮಯ್ಯಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳಿಂದ ಕೈ ಪಾಳಯ ಸಭೆ ಕರೆದಿದ್ದು ಒಗ್ಗಟ್ಟು ಪ್ರದರ್ಶಿಸುತ್ತಾ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಅಲ್ಲದೇ ಬಡ ರಾಜಕೀಯದಿಂದ ಈ ಘಟನೆ ನಡೆದಿಲ್ಲ ಎಂಬ ಸ್ಪಷ್ಟ ಸಂದೇಶವನ್ನ ಇವತ್ತಿನ ಸಭೆಯಲ್ಲಿ ಕೈ ನಾಯಕರು ನೀಡ್ತಾರಾ ಎನ್ನುವುದು ಪ್ರಶ್ನೆಯಾಗಿದೆ. ಒಟ್ಟಿನಲ್ಲಿ ಇಂದು ನಡೆಯುವ ಕಾಂಗ್ರೆಸ್ ಸಭೆಯು ಸಾಕಷ್ಟು ಕುತೂಹಲ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.