ನನ್ನ ರಾಜಕೀಯ ಜೀವನ ಉತ್ತುಂಗಕ್ಕೆ ಏರಿದ್ದನ್ನು ಕೆಲವರಿಗೆ ಸಹಿಸಲಾಗುತ್ತಿಲ್ಲ: ಸಚಿವ ಸಿ.ಸಿ.ಪಾಟೀಲ್‌

By Kannadaprabha News  |  First Published Mar 29, 2023, 10:23 PM IST

ಬಸವರಾಜ ಬೊಮ್ಮಾಯಿಯವರು ರಾಜ್ಯದ ಮುಖ್ಯಮಂತ್ರಿ ಆದನಂತರ ನನ್ನ ರಾಜಕೀಯ ಜೀವನ ಉತ್ತುಂಗಕ್ಕೆ ಏರಿದೆ. ನನ್ನ ಅಭಿವೃದ್ಧಿ ಕೆಲಸ ಕೆಲವರಿಗೆ ಅರಗಿಸಿಕೊಳ್ಳಲಿಕ್ಕೆ ಆಗುತ್ತಿಲ್ಲವೆಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್‌ ಹೇಳಿದರು. 


ನರಗುಂದ (ಮಾ.29): ಬಸವರಾಜ ಬೊಮ್ಮಾಯಿಯವರು ರಾಜ್ಯದ ಮುಖ್ಯಮಂತ್ರಿ ಆದನಂತರ ನನ್ನ ರಾಜಕೀಯ ಜೀವನ ಉತ್ತುಂಗಕ್ಕೆ ಏರಿದೆ. ನನ್ನ ಅಭಿವೃದ್ಧಿ ಕೆಲಸ ಕೆಲವರಿಗೆ ಅರಗಿಸಿಕೊಳ್ಳಲಿಕ್ಕೆ ಆಗುತ್ತಿಲ್ಲವೆಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್‌ ಹೇಳಿದರು. ತಾಲೂಕಿನ ಭೈರನಹಟ್ಟಿಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದ ಜೀರ್ಣೋದ್ಧಾರಕ್ಕೆ 1 ಕೋಟಿ ಅನುದಾನ, ಭೈರನಹಟ್ಟಿ-ರಡ್ಡೇರನಾಗನೂರ ರಸ್ತೆಗೆ 4.85 ಕೋಟಿ, ಗ್ರಾಮದ ಎಸ್ಸಿ ಕಾಲೋನಿ ಸಿಸಿ ರಸ್ತೆಗೆ 20 ಲಕ್ಷ, ದುರ್ಗಾದೇವಿ ದೇವಸ್ಥಾನಕ್ಕೆ 5 ಲಕ್ಷ ಸೇರಿದಂತೆ 6.10 ಕೋಟಿ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಮಾತನಾಡಿ, 2018-23ರ ವರೆಗೆ ಗ್ರಾಮದ ಅಭಿವೃದ್ಧಿಗಾಗಿ 16.80 ಕೋಟಿ ಅನುದಾನವನ್ನು ನೀಡಿದ್ದೇನೆ ಎಂದರು.

ನನ್ನ ಅಭಿವೃದ್ಧಿ ಕೆಲಸಗಳ ಮಾಹಿತಿಯುಳ್ಳ ಪ್ಲೆಕ್ಸಗಳನ್ನು ಪ್ರತಿ ಗ್ರಾಮದಲ್ಲಿ ಅಳವಡಿಸಲಾಗಿದೆ. ಕಾಂಗ್ರೆಸ್‌ನವರಿಗೆ ಸಹಿಸಿಕೊಳ್ಳಲಿಕ್ಕೆ ಆಗದೇ ಪ್ಲೆಕ್ಸಗಳನ್ನು ಹರಿದು ಹಾಕುತ್ತಿದ್ದಾರೆ. ಇಂಥಹ ಚಟುವಟಿಕೆಯಿಂದ ನಿಮಗೆ ಬರಬಹುದಾದ ಅಲ್ಪಸ್ವಲ್ಪ ಮತಗಳನ್ನು ಕಳೆದುಕೊಳ್ಳುತ್ತೀರಿ. ಪ್ಲೆಕ್ಸನಲ್ಲಿರುವ ಅಭಿವೃದ್ಧಿ ಮಾಹಿತಿಗಳು ಸುಳ್ಳಾಗಿದ್ದರೆ, ನಾನು ಚುನಾವಣೆಯಿಂದ ಹಿಂದೆ ಸರಿಯುತ್ತೇನೆ. ಮತಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲ ಎಂಬ ಆಪಾದನೆ ಮಾಡುತ್ತಿರುವ ನೀವು ಇದರ ಬಗ್ಗೆ ನಿಮ್ಮ ಅಪ್ಪನನ್ನು ಹೋಗಿ ಕೇಳಿ ಎಂದು ಕಾಂಗ್ರೆಸ್‌ ಯುವ ನಾಯಕರಿಗೆ ಟಾಂಗ್‌ ನೀಡಿದರು.

Tap to resize

Latest Videos

undefined

ಸುರಪುರ ಅಭಿವೃದ್ಧಿಗೆ ಬೆಜೆಪಿ ಬೆಂಬಲಿಸಿ: ಶಾಸಕ ರಾಜೂಗೌಡ

ಕಾಂಗ್ರೆಸ್‌ನ ಕೆಲವು ಯುವಕರು ರಾಜಕೀಯಕ್ಕೆ ಬರುವ ಉದ್ದೇಶದಿಂದ ಸುಳ್ಳು ಹೇಳುತ್ತಿದ್ದಾರೆ. ಅಂಥವರ ಮಾತು ಕೇಳಿಕೊಂಡು ಆರೋಪ ಮಾಡುವುದು ಸರಿಯಲ್ಲ. ಮತಕ್ಷೇತ್ರದ ಜನತೆ ಯಾವುದೇ ಆರೋಪಗಳಿಗೆ ಕಿವಿಗೊಡಬಾರದು, 2022ರ ಡಿಸೆಂಬರನಲ್ಲಿ ನಡೆದ ಅಧಿವೇಶನದಲ್ಲಿ ಆಗಿರುವ ಚರ್ಚೆಯಂತೆ ಮೂರು ತಿಂಗಳೊಳಗಾಗಿ ಸುವರ್ಣ ಸೌಧ ಆವರಣದಲ್ಲಿ ಕಿತ್ತೂರ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಡಾ. ಬಿ.ಆರ್‌. ಅಂಬೇಡ್ಕರ್‌ ಹಾಗೂ ಮಹಾತ್ಮಾ ಗಾಂಧೀಜಿ ಪುತ್ಥಳಿ ಅನಾವರಣಗೊಳಿಸುತ್ತೇವೆ ಎಂದು ಹೇಳಿದ್ದೇವು. ಆ ದಿನ ನುಡಿದಂತೆ ನಾವು ಇಂದು ನಡೆದುಕೊಂಡಿದ್ದೇವೆ ಎಂದರು.

ನಂದಗಡದಿಂದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲು ಕೇಂದ್ರದ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಮತ್ತು ನಾನು ನಂದಗಡಕ್ಕೆ ಹೋದಾಗ ಅಲ್ಲಿನ ರಸ್ತೆ ಮಾರ್ಗ ಸರಿಯಾಗಿಲ್ಲದ ಕಾರಣ ನನ್ನ ಇಲಾಖೆಗೆ ಬರದೆ ಇದ್ದರೂ ಆ ರಸ್ತೆ ಅಭಿವೃದ್ಧಿಗೆ ಆವತ್ತಿನ ದಿನವೇ ಅನುದಾನ ನೀಡುವ ಮೂಲಕ ಕಾಮಗಾರಿ ಪ್ರಾರಂಭಿಸಿದ್ದೇನೆ. ಬಿಜೆಪಿ ಅಂದರೆ ಅಭಿವೃದ್ಧಿ, ಅಭಿವೃದ್ಧಿ ಅಂದರೆ ಬಿಜೆಪಿ ಎಂದು ಹೇಳಿದರು. ಶಾಂತಲಿಂಗ ಮಹಾಸ್ವಾಮಿಗಳು ಮಾತನಾಡಿ, ಸಚಿವ ಸಿ.ಸಿ. ಪಾಟೀಲರು ಜೇವರ್ಗಿ ಬಿಸಿಲು ನಾಡಿನ ಮಠವೊಂದಕ್ಕೆ ನಾನು ಸ್ವಾಮೀಜಿಯನ್ನಾಗಿ ಹೋಗುವುದನ್ನು ತಡೆದು ಭೈರನಹಟ್ಟಿಮಠದಲ್ಲಿಯೇ ಉಳಿಯುವಂತೆ ಮಾಡಿದ್ದಾರೆ. ಮತಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳೇ ಸಚಿವರ ಹೆಸರನ್ನು ಹೇಳುತ್ತಿವೆ. ಸಮಾನತೆ ಮನಸ್ಥಿತಿ ಹೊಂದಿದ ಇವರು ಮಠದ ಕಟ್ಟಡ ಉದ್ಘಾಟನೆಗೂ ಬರಬೇಕೆಂದು ಹೇಳಿದರು.

ಇಂದಿನಿಂದಲೇ ನೀತಿ ಸಂಹಿತೆ ಜಾರಿ: ಚಿಕ್ಕಮಗಳೂರು ಜಿಲ್ಲಾಡಳಿತ ಹೈ ಅಲರ್ಟ್

ಬಿ.ಬಿ. ಐನಾಪೂರ ಮಾತನಾಡಿ, ಜೆಜೆಎಮ್‌ ಪೈಪಲೈನ್‌ ಅಳವಡಿಕೆ ಮೊದಲು ನೀರು ಸರಿಯಾಗಿ ಬರುತ್ತಿತ್ತು. ಈಗ ಕುಡಿಯುವ ನೀರು ಬರುತ್ತಿಲ್ಲ. ಸಚಿವರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಮನವಿ ಮಾಡಿದರು. ಚಂದ್ರು ದಂಡಿನ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಕಟ್ಟಿಮನಿ, ಉಪಾಧ್ಯಕ್ಷ ನಾಗಪ್ಪ ಬೆನ್ನೂರ, ಉಮೇಶಗೌಡ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ಅಜ್ಜನಗೌಡ ಪಾಟೀಲ, ಗುರಪ್ಪ ಆದೆಪ್ಪನವರ, ಬಸನಗೌಡ ಪಾಟೀಲ, ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಐನಾಪೂರ, ಬಸನಗೌಡ ಚಿಕ್ಕನಗೌಡ್ರ, ಲಿಂಗನಗೌಡ ಪಾಟೀಲ, ಸತೀಶ ನಾಗನೂರ, ವಿಜಯ ಬೇಲೆರಿ, ನಿಂಗಪ್ಪ ತೆಗ್ಗಿನಮನಿ, ಉಮೇಶ ಮೊರಬದ, ಶರಣಬಸಪ್ಪ ನರಸಾಪೂರ, ಜ್ಞಾನೇಶ ಮನೇನಕೊಪ್ಪ, ಹನುಮಂತ ಐನಾಪೂರ, ಧರ್ಮರಾಜಪ್ಪ ತೆಗ್ಗಿನಮನಿ, ಫಕೀರಗೌಡ ಪಾಟೀಲ, ಪಿಡಿಓ ಶೃತಿ ಸಂಗಳದ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

click me!