ಸುರಪುರ ಅಭಿವೃದ್ಧಿಗೆ ಬೆಜೆಪಿ ಬೆಂಬಲಿಸಿ: ಶಾಸಕ ರಾಜೂಗೌಡ

By Kannadaprabha News  |  First Published Mar 29, 2023, 10:02 PM IST

ಮತಕ್ಷೇತ್ರದಲ್ಲಿ ಮೂಲಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ಶಾಲೆಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಜರುಗಿದ್ದು, ಹಲವಾರು ಸಮಸ್ಯೆ ಪರಿಹರಿಸಲು ಸಾವಿರಾರು ಕೋಟಿ ಅನುದಾನ ತಂದು ಮತಕ್ಷೇತ್ರವನ್ನು ಅಭಿವೃದ್ಧಿಪಡಿಸಿರುವೆ ಎಂದು ಶಾಸಕ ನರಸಿಂಹನಾಯಕ ರಾಜೂಗೌಡ ಹೇಳಿದರು. 


ಸುರಪುರ (ಮಾ.29): ಮತಕ್ಷೇತ್ರದಲ್ಲಿ ಮೂಲಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ಶಾಲೆಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಜರುಗಿದ್ದು, ಹಲವಾರು ಸಮಸ್ಯೆ ಪರಿಹರಿಸಲು ಸಾವಿರಾರು ಕೋಟಿ ಅನುದಾನ ತಂದು ಮತಕ್ಷೇತ್ರವನ್ನು ಅಭಿವೃದ್ಧಿಪಡಿಸಿರುವೆ ಎಂದು ಶಾಸಕ ನರಸಿಂಹನಾಯಕ ರಾಜೂಗೌಡ ಹೇಳಿದರು. 

ತಾಲೂಕಿನ ಕಕ್ಕೇರಾ ಪಟ್ಟಣದ ಸಮೀಪದ ಗೌಡಗೇರದೊಡ್ಡಿಯಲ್ಲಿ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಬಡವರ, ರೈತರ ಹಾಗೂ ದೀನದಲಿತರಿಗೆ ಸಾಮಾಜಿಕ ನ್ಯಾಯ ನೀಡಿದೆ. ನನ್ನ ಮೇಲೆ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಯಿಟ್ಟು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುವವರಿಗೆ ಸದಾ ಪಕ್ಷದ ಹೃದಯದ ಬಾಗಿಲು ತೆರೆದಿದೆ ಎಂದರು. ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಆಶೀರ್ವದಿಸಿ ಶಾಸಕನನ್ನಾಗಿಸಿದರೆ ತಾಲೂಕನ್ನು ಮತ್ತಷ್ಟು ಅಭಿವೃದ್ಧಿಪಡಿಸುವೆ. ಪಕ್ಷದ ಕಾರ್ಯಕರ್ತರು ನನ್ನ ಜೀವಾಳವಾಗಿದ್ದು, ನನ್ನ ಹಾಗೂ ಪಕ್ಷದ ಮೇಲೆ ವಿಶ್ವಾಸವನ್ನಿಟ್ಟು ಪಕ್ಷ ಸೇರಿದ ಸದಾ ನಾನು ಚಿರರುಣಿಯಾಗಿರುವೆ. 

Tap to resize

Latest Videos

undefined

ಕಾಂಗ್ರೆಸ್‌ಗೆ ರಾಜ್ಯದಲ್ಲಿ ಅಧಿಕಾರ: ಮಾಜಿ ಸಚಿವ ಎಚ್‌.ಆಂಜನೇಯ

ಈ ಸಲ ಚುನಾವಣೆ ಕುತೂಹಲದಿಂದ ಕೂಡಿದ್ದು ಕಾರ್ಯಕರ್ತರು ಎಲ್ಲರೂ ಒಗ್ಗೂಡಿ ಈಗಿನಿಂದಲೇ ಪಕ್ಷದ ಹಾಗೂ ನನ್ನ ಅಭಿವೃದ್ಧಿ ಕೆಲಸಗಳನ್ನು ಪ್ರತಿಮನೆ ಮನೆಗೆ ತಲುಪಿಸಿಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಪುರಸಭೆ ಮಾಜಿ ಅಧ್ಯಕ್ಷ ರಾಜು ಹವಾಲ್ದಾರ್‌ ಮಾತನಾಡಿದರು. ಅಯ್ಯಣ್ಣ ಪೂಜಾರಿ, ಯಲ್ಲಪ್ಪ ಕುರಕುಂದಿ, ಶಾಂತಪ್ಪ ಡೊಳ್ಳಿನ್‌, ಮಲ್ಲಣ್ಣ ಗೋಡಿಹಾಳ, ಪರಮಣ್ಣ ತೇರಿನ್‌, ಪರಮಣ್ಣ ಪೂಜಾರಿ, ಆದಯ್ಯ ಗುರಿಕಾರ, ಮಲ್ಲು ದಂಡಿನ್‌, ಸೋಮು ಪಿರಗಾರ, ಸೋಮಣ್ಣ ಜಂಗ್ಲಿ, ಸೋಮು ಹಿರೇಹಳ್ಳ ಇತರರಿದ್ದರು.

16 ವಾರ್ಡ್‌ಗಳಿಗೆ ಶಾಶ್ವತ ಕುಡಿವ ನೀರಿನ ಸರಬರಾಜು: ಪಟ್ಟಣಕ್ಕೆ ದುರದೃಷ್ಠಿಯಿಂದ ನೀರಿನ ಸಮಸ್ಯೆ ಎದುರಾಗದಂತೆ ತಾಲೂಕಿನ ನಾರಾಯಣಪೂರ ಜಲಾಶಯದಿಂದ ಜಲಧಾರೆ ನೀರಿನ ಮೂಲದಿಂದ ಪಟ್ಟಣದ 16 ವಾರ್ಡ್‌ಗಳಿಗೆ ಶಾಶ್ವತ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ ಎಂದು ಶಾಸಕ ರಾಜೂಗೌಡ ಹೇಳಿದರು. 

ಪಟ್ಟಣದ ವೀರಕ್ತ ಮಠದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಣಸಗಿ ಪಟ್ಟಣದ 16 ವಾರ್ಡ್‌ಗಳ ಪ್ರದೇಶದಲ್ಲಿ 2025 ನೇ ಸಾಲಿನಲ್ಲಿ ಇರಬಹುದಾದ 23 ಸಾವಿರ ಜನಸಂಖ್ಯೆಗೆ 135 ಲೀ. ಪ್ರತಿದಿನ ಪ್ರತಿಯೊಬ್ಬರಿಗೆ ಸರಬರಾಜು ಮಾಡಲು ಹಾಗೂ 2040ನೇ ಸಾಲಿನಲ್ಲಿ ಇರಬಹುದಾದ 34 ಸಾವಿರ ಜನಸಂಖ್ಯೆಗೆ 135 ಲೀ. ಪ್ರತಿದಿನ ಪ್ರತಿಯೊಬ್ಬರಿಗೆ ಸರಬರಾಜು ಮಾಡಲು ಮತ್ತು 2055ನೇ ಸಾಲಿನಲ್ಲಿ ಇರಬಹುದಾದ 47 ಸಾವಿರ ಜನಸಂಖ್ಯೆಗೆ 135 ಲೀ. ಪ್ರತಿ ದಿನ ನೀರು ಸರಬರಾಜು ಮಾಡಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಅನುಷ್ಠಾನಗೊಳಿಸಿ 48.62 ಕೋಟಿ ರು.ಗಳ ಅನುದಾನದಲ್ಲಿ ಈ ಯೋಜನೆಯನ್ನು ರೂಪಿಸಿ ಕಾಮಗಾರಿಗೆ ಅಡಿಗಲ್ಲು ನೆರವೇರಿಸಲಾಗಿದೆ ಎಂದರು.

ಹಳೇ ಮೈಸೂರು ಭಾಗದಲ್ಲಿ ಹೊಂದಾಣಿಕೆ ಇಲ್ಲ: ಸಿ.ಪಿ.ಯೋಗೇಶ್ವರ್‌

ಈ ಯೋಜನೆಯಿಂದ ಮಧ್ಯಂತರ ಅವಧಿ 2040ನೇ ಸಾಲಿನಲ್ಲಿ ದಿನಂ ಪ್ರತಿ 5.50 ದಶಲಕ್ಷ ಲೀಟರ್‌ ನೀರನ್ನು ಜಲಧಾರೆ ಯೋಜನೆಯಿಂದ ಶುದ್ಧಿಕರಿಸಿ, ವ್ಯವಸ್ಥಿತವಾಗಿ ಜಲಸಂಗ್ರಹ, ಆಂತರಿಕ ಕೊಳವೆ ಮಾರ್ಗ ಅಳವಡಿಸಿ ಪ್ರತಿ ಮನೆಗೆ ಪ್ರತ್ಯೇಕ ನಳದ ಕನೇಕ್ಷನ್‌ ಜೊತೆಯಲ್ಲಿ ವಾಟರ್‌ ಮೀಟರ್‌ ಅಳವಡಿಸಿ ನೀರು ಸರಬರಾಜು ಮಾಡಿ ಶಾಶ್ವತವಾಗಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ ಎಂದರು. ಪಟ್ಟಣಕ್ಕೆ ಹತ್ತಿರುವಿರುವ ಶ್ರೀನಿವಾಸಪೂರಗುಡ್ಡದಲ್ಲಿ 5 ಲಕ್ಷ ಲೀಟರ್‌ ಸಾಮರ್ಥ್ಯದ ನೆಲಮಟ್ಟದ ಜಲಸಂಗ್ರಹದಿಂದ ಹುಣಸಗಿ ಪಟ್ಟಣದ ಭಾಗ್ಯನಗರ ತಾಂಡಾ, ಹಳೆ ಹುಣಸಗಿ ಏರಿಯಾ ಮತ್ತು ಕೆಂಭಾವಿ ರಸ್ತೆ ಏರಿಯಾದಲ್ಲಿ 10 ಲಕ್ಷ ಲೀಟರ್‌ ಸಾಮರ್ಥ್ಯದ 15 ಮೀಟರ್‌ಎತ್ತರದ ಮೇಲ್ಮಟ್ಟದ ಜನಸಂಗ್ರಹ ನಿರ್ಮಾಣ ಮಾಡಲಾಗುವುದು ಎಂದರು.

click me!