ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ: ಅಧ್ಯಕ್ಷ ಕಟೀಲ್ ನಡೆಗೆ ಅಪಸ್ವರ

By Suvarna News  |  First Published May 25, 2020, 2:32 PM IST

 ನಳಿನ್ ಕುಮಾರ್ ಕಟೀಲ್ ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಇನ್ನು ಎರಡು ವರ್ಷಗಳು ಆಗಿಲ್ಲ. ಆಗಲೇ ಕಟೀಲ್ ಬಗ್ಗೆ ಪಕ್ಷದಲ್ಲಿಯೇ ಅಪಸ್ವರ ಶುರುವಾಗಿದೆ.


ಬೆಂಗಳೂರು, (ಮೇ.25): ರಾಜ್ಯ ಬಿಜೆಪಿ ಪದಾಧಿಕಾರಿಗಳ ನೇಮಕ ವಿಚಾರದಲ್ಲಿ ಮತ್ತೆ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.

ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ನೇಮಕವಾಗಿ ಇನ್ನು ಎರಡು ತಿಂಗಳು ಕಳೆದರೆ 2 ವರ್ಷವಾಗುತ್ತೆ. ಆದರೂ ಇದುವರೆಗೂ ಯುವ ಮೋರ್ಚಾ, ಮಹಿಳಾ ಮೋರ್ಚಾ, ರೈತ ಮೋರ್ಚಾ ಸೇರಿದಂತೆ ಇತರೆ ಪದಾಧಿಕಾರಿಗಳ ಆಯ್ಕೆಯಾಗಿಲ್ಲ. 

Tap to resize

Latest Videos

ಇದರಿಂದ ರಾಜ್ಯ ಬಜೆಪಿಯಲ್ಲಿ ನಳಿನ್ ಕುಮಾರ್ ಕಟೀಲ್ ಬಗ್ಗೆ ಅಪಸ್ವರುಗಳು ಕೇಳಿಬಂದಿವೆ. ಇನ್ನು ಕಟೀಲ್ ಕಾರ್ಯವೈಖರಿ ಬಗ್ಗೆಯೂ ಅಸಮಾಧಾಗಳು ವ್ಯಕ್ತವಾಗುತ್ತಿವೆ.

ಕೊರೋನಾಗೆ ಕೋಮು ಬಣ್ಣ ಬೇಡ: ಬಿಜೆಪಿಗರಿಗೆ ಕಟೀಲ್‌ ಸೂಚನೆ! 

ಅಧ್ಯಕ್ಷರಾದ ಮೊದಲಿಗೆ ಕಟೀಲ್ ಒಂದು ಸುತ್ತು ಎಲ್ಲಾ ಜಿಲ್ಲಾ ಪ್ರವಾಸ ಮಾಡಿ ಬಂದು ಸುಮ್ಮನೆ ಕುಳಿತಿದ್ದಾರೆ. ಅವರು ಏನೆ ನಿರ್ಣಯ ಕೈಗೊಳ್ಳಬೇಕು ಅಂದ್ರೆ ದೆಹಲಿಯಿಂದ ಕಾಲ್ ಬರಬೇಕು

ಬೆಂಗಳೂರು ಕಡೆ ಹೋಗಿದ್ರಾ ಎಂದು ದೆಹಲಿಯಿಂದ ಕರೆ ಬಂದರೆ,  ಮಾರನೆ ದಿನ ಬೆಂಗಳೂರು ಕಚೇರಿಗೆ ಬಂದು ಒಂದು ರಾತ್ರಿ ಇದ್ದು ಮರುದಿನ ಮತ್ತೆ ಮಂಗಳೂರಿಗೆ ಹೊರಡುತ್ತಾರೆ ಅಂತೆಲ್ಲಾ ಮಾತುಗಳು ಪಕ್ಷದ ಪಡಸಾಲೆಯಲ್ಲಿ ಗುಸು-ಗುಸು ಎದ್ದಿದೆ.

ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ನಂತರ "ನಾಟಕನೋ" ಇನ್ನೊಂದು ಮತ್ತೊಂದು ಏನೊ ಮಾಡ್ತಾ ಸುದ್ದಿಯಲ್ಲಿ ಇದ್ದಾರೆ. ನಮ್ಮ ಅಧ್ಯಕ್ಷರು ಮನೆಯಿಂದ ಹೊರ ಬರಬೇಕು ಅಂದ್ರೆ ದೆಹಲಿಯಿಂದ ಕರೆ ಬರಬೇಕು

"

ಹೀಗಂತ ಬಿಜೆಪಿ ನಾಯಕರೇ ಕಟೀಲ್ ಬಗ್ಗೆ ಅಪಸ್ವರ ಎತ್ತಿರುವುದು ರಾಜ್ಯ ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ ಶುರುವಾಗಿದ್ಯಾ ಎನ್ನುವ ಪ್ರಶ್ನೆಗಳು ಹುಟ್ಟುಹಾಕಿವೆ.

ಈ ಹಿಂದೆ ಕೆಲ ಪದಾಧಿಕಾರಿಗಳ ನೇಮಕ ವಿಚಾರದಲ್ಲೂ ನಳಿನ್ ಕುಮಾರ್ ಕಟೀಲ್ ವಿರುದ್ಧ ಬಿಎಸ್‌ವೈ ಬಣ ಮುನಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

click me!