ದೇವೇಗೌಡ-ಚೆನ್ನಮ್ಮ ದಾಂಪತ್ಯಕ್ಕೆ 66 ವಸಂತಗಳು, ತಾತ ಅಜ್ಜಿಗೆ ಶುಭಕೋರಿದ ಮೊಮ್ಮಗ

Published : May 24, 2020, 04:13 PM IST
ದೇವೇಗೌಡ-ಚೆನ್ನಮ್ಮ ದಾಂಪತ್ಯಕ್ಕೆ 66 ವಸಂತಗಳು, ತಾತ ಅಜ್ಜಿಗೆ ಶುಭಕೋರಿದ ಮೊಮ್ಮಗ

ಸಾರಾಂಶ

ಕೆಲ ದಿನಗಳ ಹಿಂದೆಯಷ್ಟೇ ಎಚ್‌ಡಿ ದೇವೇಗೌಡರು ತಮ್ಮ 87 ವರ್ಷದ ಜನ್ಮದಿನವನ್ನು ಆಚರಿಸಿದ್ದರು. ಇದೀಗ ದೇವೇಗೌಡ ಹಾಗೂ ಚೆನ್ನಮ್ಮ ದಂಪತಿ 66ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.ತಾತ ಹಾಗೂ ಅಜ್ಜಿಯ ವಿವಾಹ ವಾರ್ಷಿಕೋತ್ಸವಕ್ಕೆ ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಶುಭಕೋರಿದ್ದಾರೆ.

ಬೆಂಗಳೂರು, (ಮೇ.24): ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ದಾಂಪತ್ಯಕ್ಕೆ ಇಂದು (ಮೇ.24 ) 66 ವಸಂತಗಳ ಸಂಭ್ರಮ. 

ತಾತ ಹಾಗೂ ಅಜ್ಜಿಯ ವಿವಾಹ ವಾರ್ಷಿಕೋತ್ಸವಕ್ಕೆ ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಶುಭಕೋರಿದ್ದಾರೆ.

ದೊಡ್ಡಗೌಡರಿಗೆ ಬರ್ತ್‌ಡೇ ವಿಶ್ ಮಾಡಿದ D K ಶಿವಕುಮಾರ್‌

ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 66 ವಸಂತಗಳನ್ನು ಪೂರೈಸಿರುವ ನಾಡಿನ ಆದರ್ಶ ದಂಪತಿಗಳಾಗಿರುವ ಪ್ರೀತಿಯ ತಾತ ಎಚ್‌ಡಿ ದೇವೇಗೌಡ ಹಾಗೂ ಅಜ್ಜಿ ಚೆನ್ಮಮ್ಮ ಅವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು ಎಂದು ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. 

ಎಚ್‌ಡಿ ದೇವೇಗೌಡ ಅವರು ಹಾಸನ ತಾಲ್ಲೂಕಿನ ಮುತ್ತಿಗೆ ಹಿರೇಹಳ್ಳಿಯ ಚೆನ್ನಮ್ಮ ಅವರನ್ನು 1954ರಲ್ಲಿ ವಿವಾಹವಾಗಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಎಚ್‌ಡಿ ದೇವೇಗೌಡರು ತಮ್ಮ 87 ವರ್ಷದ ಜನ್ಮದಿನವನ್ನು ಆಚರಿಸಿದ್ದರು. 

ದೇವೇಗೌಡರ ಜನ್ಮದಿನಕ್ಕೆ ಸಾಕಷ್ಟು ಜನರು ಶುಭಹಾರೈಸಿದ್ದರು. ಇದೀಗ ದೇವೇಗೌಡ ಹಾಗೂ ಚೆನ್ನಮ್ಮ ದಂಪತಿ 66ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!