* ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಹೊಸ ಬಾಂಬ್
* ಬಿಜೆಪಿ ಭ್ರಷ್ಟರ ಪಕ್ಷ: ಆರೋಪ
* ಬಿಜೆಪಿ ಪಕ್ಷ ಭ್ರಷ್ಟರ ಪಕ್ಷ. ಅದಕ್ಕೆ ಮತ ನೀಡಿ ಮತ್ತೊಮ್ಮೆ ಮೋಸಹೋಗಬೇಡಿ
ಚಿಕ್ಕಬಳ್ಳಾಪುರ(ಅ.29): ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಳಿಸಿದ ಬಿಜೆಪಿ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್-ಜೆಡಿಎಸ್ 17 ಮಂದಿ ಶಾಸಕರನ್ನು ಖರೀದಿಸುವ ಸಂದರ್ಭದಲ್ಲಿ ಬಿಜೆಪಿ ನಾಯಕರು ನನಗೂ 30 ಕೋಟಿ ಕೂಡಲು ಬಂದಿದ್ದರು. ಆದರೆ ನಾನು ಸೇರಲಿಲ್ಲ ಎಂದು ಜಿಲ್ಲೆಯ ಶಿಡ್ಲಘಟ್ಟ(Sidlaghatta) ಕ್ಷೇತ್ರದ ಕಾಂಗ್ರೆಸ್ ಶಾಸಕ ವಿ.ಮುನಿಯಪ್ಪ(V Muniyappa) ಹೊಸ ಬಾಂಬ್ ಸಿಡಿಸಿದ್ದಾರೆ.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ಚಿಂತಾಮಣಿ ತಾಲೂಕಿನ ಕೋರ್ಲಪರ್ತಿ ಪರ್ತಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಾಜೆಕ್ಟ್ ಪ್ರಜಾ ಪ್ರತಿನಿಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ(BJP) ಪಕ್ಷ ಭ್ರಷ್ಟರ ಪಕ್ಷ. ಅದಕ್ಕೆ ಮತ ನೀಡಿ ಮತ್ತೊಮ್ಮೆ ಮೋಸಹೋಗಬೇಡಿ. ಬರುವ ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ(Congress) ಮತ ನೀಡಿ ಕ್ಷೇತ್ರ ಅಭಿವೃದ್ದಿ ಗೆ ಸಹಕರಿಸಿ ಎಂದರು.
ಯುವಕರು ಬಿಜೆಪಿ ಬಿಜೆಪಿ ಎಂದು ಹೋಗಿ ಇಂದು ಲಕ್ಷಾಂತರ ಯುವಜನ ನಿರುದ್ಯೋಗಿಗಲಾಗಿ ಪರದಾಡುತ್ತಿದ್ದಾರೆ. ಯುವಕರಿಗೆ ಉದ್ಯೋಗ(Job) ಕಲ್ಪಿಸುತ್ತೆನೆಂದ ಬಿಜೆಪಿ ಸರ್ಕಾರ ಇಂದು ಲೋಟಿಮಾಡಿಕೊಂಡು ಯುವಜನರನ್ನು ಮರೆತಿದೆ ಇನ್ನದಾದರೂ ಯುವ ಜನತೆ ಎಚ್ಚೆತುಕೊಂಡು ಬಿಜೆಪಿ ಪಕ್ಷವನ್ನು ಕಡೆಗಣಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೆಂದರು.
ನ್ಯೂಸ್ ಅವರ್; ಡಿಕೆಶಿ ಆಪ್ತರಿಗೆ ಐಟಿ ಬಿಸಿ, ಜನರಿಗೆ ಎಲ್‌ಪಿಜಿ ಬಿಸಿ ಬಿಸಿ!
ಈ ಸಂದರ್ಭದಲ್ಲಿ ಚಿಂತಾಮಣಿ ತಾಪಂ ಮಾಜಿ ಉಪಾಧ್ಯಕ್ಷ ನಡಂಪಲ್ಲಿ ಶ್ರೀನಿವಾಸ್ ,ಕೃಷ್ಣಪ್ಪ, ಜಿಪಂ ಮಾಜಿ ಅಧ್ಯಕ್ಷ ಸುಬ್ರಹ್ಮಣಿ, ಹಿರಿಯ ಮುಖಂಡರಾದ ದೇವಗಾನಹಳ್ಳಿ ಮದ್ದಿರೆಡ್ಡಿ, ನಾರಾಯಣ ರೆಡ್ಡಿ ,ಟಿ ಪ್ರಸಾದ್, ವೆಂಕಟನಾರಾಯಣ, ಗ್ರಾಮ ಪಂಚಾಯ್ತಿ ಸದಸ್ಯರಾದ ಕೋನಪ್ಪರೆಡ್ಡಿ , ಮಲ್ಲಿಕಾರ್ಜುನ್ ರೆಡ್ಡಿ , ಗೊಲ್ಲಪಲ್ಲಿ ವೆಂಕಟ್ರೊೖಣಪ್ಪ , ಚಂದ್ರಶೇಖರ, ದೇವರೆಡ್ಡಿ, ವೆಂಕಟಪತಿ, ಶ್ರೀರಾಮಪ್ಪ, ಪ್ರಕಾಶ್, ರವಿ ,ಚಂದ್ರ, ಶ್ರೀರಾಮಪ್ಪ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಬಿಜೆಪಿ ಸೇರುವಾಗ ನನಗೆ ಹಣದ ಆಫರ್
ಈ ಹಿಂದೆ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರುವಾಗ ನನಗೆ ಹಣದ ಆಫರ್ ಬಂದಿತ್ತು. ಆದರೆ ಯಾವುದೇ ಹಣದ ಬೇಡಿಕೆ ಇಡದೆ ಕ್ಷೇತ್ರದ ಹಾಗೂ ಜನತೆಯ ಸೇವೆ ಮಾಡಲು ನನಗೆ ಒಳ್ಳೆಯ ಸ್ಥಾನಮಾನ ನೀಡುವಂತೆ ಕೇಳಿಕೊಂಡಿದ್ದೆ ಎಂದು ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ ಸ್ಫೋಟಕ ಹೇಳಿಕೆ ನೀಡಿದ್ದರು.
ಇದಾದ ಬಳಿಕ ಉಲ್ಟಾ ಹೊಡೆದಿದ್ದ ಶ್ರೀಮಂತ ಪಾಟೀಲ್, ಆಪರೇಷನ್ ಕಮಲದ ವೇಳೆ ಯಾರೂ ನನಗೆ ಹಣದ ಆಮಿಷ ನೀಡಿರಲಿಲ್ಲ. ನಾನು ಬಿಜೆಪಿಯ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೆ. ಏನು ಅಪೇಕ್ಷೆ ಇಟ್ಟುಕೊಂಡು ಬಿಜೆಪಿಗೆ ಬರುತ್ತೀರಿ ಎಂದು ಕೇಳಿದ್ದರು. ನನ್ನದು ಯಾವುದೇ ಅಪೇಕ್ಷೆ ಇಲ್ಲವೆಂದು ಅವರಿಗೆ ತಿಳಿಸಿದ್ದೆ ಎಂದರು.
ಒಳ್ಳೆಯ ಸ್ಥಾನಮಾನ ನೀಡುವಂತೆ ಮಾತ್ರ ಕೇಳಿಕೊಂಡಿದ್ದೆ. ಪ್ರಧಾನಿ ಮೋದಿಯವರ ಕೆಲಸ ಮತ್ತು ಬಿಜೆಪಿಯ ವಿಚಾರಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದೆ ಎಂದು ಹೇಳುವ ಮೂಲಕ ಬಿಜೆಪಿಯ ಹಣದ ಆಫರ್ ಹೇಳಿಕೆ ಬಗ್ಗೆ ಶ್ರೀಮಂತ ಪಾಟೀಲ್ ಯೂಟರ್ನ್ ಹೊಡೆದಿದ್ದರು.