* ಹಾನಗಲ್, ಸಿಂದಗಿಗಳಲ್ಲಿ ಮತ ಪ್ರಚಾರಕ್ಕೆ ಅಂತಿಮ ಹಂತದ ಕಸರತ್ತು
* ನಾಳೆ ಹಾನಗಲ್, ಸಿಂದಗಿ ಉಪಚುನಾವಣೆ ಮತದಾನ
* 463 ಅಂಚೆ ಮತಪತ್ರಗಳು ಸ್ವೀಕೃತ
ಹಾನಗಲ್ಲ/ಸಿಂದಗಿ(ಅ.29): ಉಪಚುನಾವಣೆ ನಡೆಯಲಿರುವ ಹಾನಗಲ್ಲ, ಸಿಂದಗಿ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಬುಧವಾರ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಗುರುವಾರದಂದು ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ(HD Devegowda), ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಸಚಿವರು, ಶಾಸಕರು ಬುಧವಾರ ಸಂಜೆ ವೇಳೆಗೇ ಕ್ಷೇತ್ರ ತೊರೆದಿದ್ದಾರೆ. ಜೊತೆಗೆ ಹೊರಗಿನಿಂದ ಬಂದ ಕಾರ್ಯಕರ್ತರ ಪಡೆ ಕೂಡ ನಿರ್ಗಮಿಸಿದೆ.
ಗುರುವಾರದಂದು ಹಾನಗಲ್‌ನಲ್ಲಿ(Hanagal) ಬಿಜೆಪಿ(BJP) ಅಭ್ಯರ್ಥಿ ಶಿವರಾಜ ಸಜ್ಜನರ(Shivaraj Sajjanar) ತಮ್ಮ ಕೆಲವು ಬೆಂಬಲಿಗರ ಜತೆಗೂಡಿ ನಾಲ್ಕೈದು ಗ್ರಾಮಗಳಲ್ಲಿ ಮನೆಮನೆ ಪ್ರಚಾರ(Campaign0 ಕೈಗೊಂಡರು. ಪಕ್ಷದ ಪ್ರಣಾಳಿಕೆ(Manifesto) ಮತದಾರರ(Voters) ಮತಗ ಟ್ಟೆವಿವರದ ಚೀಟಿಯನ್ನು ನೀಡಿದರು. ಜತೆಗೆ ಪಕ್ಷದ ಮುಖಂಡರ ಮನೆ, ಗ್ರಾಮದಲ್ಲಿನ ದೇವಸ್ಥಾನಗಳಿಗೆ(Temples) ಭೇಟಿ ನೀಡಿದರು. ಸಂಜೆ 5 ಗಂಟೆವರೆಗೆ ಪ್ರಚಾರ ಕೈಗೊಂಡ ಸಜ್ಜನರ ಅವರು, ಬಳಿಕ ಕಾರ್ಯಕರ್ತರ ಜತೆಗೆ ಅನೌಪಚಾರಿಕ ಸಭೆ ನಡೆಸಿ ಸದ್ಯದ ಸ್ಥಿತಿಗತಿ, ಮತದಾರರ ಒಲವಿನ ಕುರಿತು ಮಾಹಿತಿಯನ್ನು ಪಡೆದರು. ಕಾಂಗ್ರೆಸ್(Congress0 ಅಭ್ಯರ್ಥಿ ಶ್ರೀನಿವಾಸ ಮಾನೆ(Shrinivas Mane) ಆಡೂರು ಗ್ರಾಮದಲ್ಲಿ ಮನೆಗೆ ತೆರಳಿ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.
ತನಿಖೆ ನಡೆಯುತ್ತಿದೆ, ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ: ಸಿದ್ದು ಆರೋಪಕ್ಕೆ ಬೊಮ್ಮಾಯಿ ಪ್ರತಿಕ್ರಿಯೆ!
ಇನ್ನು ಸಿಂದಗಿ(Sindagi) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ(Ramesh Bhusanur) ಅಲಮೇಲದ ಗಲ್ಲಿಗಲ್ಲಿಗಳಲ್ಲಿ ಸಂಚರಿಸಿ ಪ್ರಚಾರ ನಡೆಸಿದರು. ಈ ವೇಳೆ ಅವರು ವಿದ್ಯುನ್ಮಾನ ಮತಯಂತ್ರದ ಮಾದರಿಯನ್ನು ಮತದಾರರಿಗೆ ವಿವರಿಸಿ ಮತಯಾಚಿಸಿದರು. ಜೆಡಿಎಸ್(JDS) ಅಭ್ಯರ್ಥಿ ನಾಜಿಯಾ ಅಂಗಡಿ ಗೋಲಗೇರಿ(Naziya Angadi Golageri), ನಾಕಾ, ಗೌಡರವರ ಓಣಿ ಬಡಾವಣೆಗಳಲ್ಲಿ ಮನೆ ಮನೆಗೆ ಭಿತ್ತಿಪತ್ರ ನೀಡಿ ಪ್ರಚಾರ ನಡೆಸಿದರು.
ನಾಳೆ ಹಾನಗಲ್, ಸಿಂದಗಿ ಉಪಚುನಾವಣೆ ಮತದಾನ
ಹಾನಗಲ್ ಮತ್ತು ಸಿಂದಗಿ ಮತಕ್ಷೇತ್ರದ ಉಪಚುನಾವಣೆ ಮತದಾನವು(Voting) ಅ.30ರಂದು ನಡೆಯಲಿದೆ. ಮತದಾನವು ಬೆಳಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ನಡೆಯಲಿದೆ.
ಸಿಂದಗಿಯಲ್ಲಿ ಅಂತಿಮವಾಗಿ ಚುನಾವಣಾ ಕಣದಲ್ಲಿ ಒಟ್ಟು ಆರು ಅಭ್ಯರ್ಥಿಗಳು ಉಳಿದಿದ್ದಾರೆ. ಇದಕ್ಕಾಗಿ ಜಿಲ್ಲಾಡಳಿತವು ಕ್ಷೇತ್ರದಲ್ಲಿ ಒಟ್ಟು 271 ಮತದಾನ ಕೇಂದ್ರಗಳನ್ನು ಹಾಗೂ 26 ಆಕ್ಸಿಲರಿ ಮತದಾನ ಕೇಂದ್ರಗಳು ಸೇರಿದಂತೆ ಒಟ್ಟು 297 ಮತದಾನ ಕೇಂದ್ರಗಳನ್ನು ಸ್ಥಾಪಿಸಿದೆ. ಈ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 234584 ಮತದಾರರು ಮತ ಚಲಾಯಿಸಲಿದ್ದು, ಈ ಪೈಕಿ 120844 ಪುರುಷ ಮತದಾರರು, 113561 ಮಹಿಳಾ ಮತದಾರರು, 32 ಇತರೆ, 147 ಸರ್ವಿಸ್ ವೋಟರ್‌ಗಳು ಮತ ಚಲಾಯಿಸಲಿದ್ದಾರೆ.
ಇನ್ನು ಹಾನಗಲ್‌ನಲ್ಲಿ ಕ್ಷೇತ್ರದಲ್ಲಿ ಹಾನಗಲ್ಲದಲ್ಲಿ ಕಾಂಗ್ರೆಸ್‌ನಿಂದ ಶ್ರೀನಿವಾಸ ಮಾನೆ, ಬಿಜೆಪಿಯಿಂದ ಶಿವರಾಜ ಸಜ್ಜನರ, ಜೆಡಿಎಸ್‌ನಿಂದ ನಿಯಾಜ್ ಶೇಖ್ ಸೇರಿದಂತೆ 13 ಜನರು ಕಣದಲ್ಲಿದ್ದಾರೆ. ಇಲ್ಲಿ 1,05,525 ಪುರುಷ, 98,953 ಮಹಿಳೆ ಹಾಗೂ 3 ಇತರ ಮತದಾರರು ಸೇರಿದಂತೆ 2,04,481 ಮತದಾರರಿದ್ದಾರೆ. ಈಗಾಗಲೇ ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಸೇರಿದಂತೆ 463 ಅಂಚೆ ಮತಪತ್ರಗಳು ಸ್ವೀಕೃತವಾಗಿವೆ.